ಧರ್ಮಸತ್ಸಂಗ

ಧಾರ್ಮಿಕ ಕೃತಿಗಳ ಶಾಸ್ತ್ರ

 ದೇವರಪೂಜೆಯ ಉಪಕರಣ (ಶಾಸ್ತ್ರೀಯ ಮಹತ್ವ ಮತ್ತು ಸಂರಚನೆ)
ದೇವತಾಪೂಜೆಯು ನಮ್ಮೆಲ್ಲರಿಗೂ ಒಂದು ಶ್ರದ್ಧೆಯ ವಿಷಯವಾಗಿದೆ. ನಮ್ಮ ವಾಸ್ತುವಿನಲ್ಲಿ  ಪೂಜೆಯ ಮಂಟಪ ಮಾಡುತ್ತೇವೆ, ಅದನ್ನು ಅಲಂಕರಿಸುತ್ತೇವೆ. ಅದರಲ್ಲಿ ನಮ್ಮ ಇಚ್ಛಾನುಸಾರ ದೇವತೆಗಳ ಪ್ರತಿಮೆಯನ್ನಿಟ್ಟು ಪೂಜೆಯನ್ನು ಮಾಡುತ್ತೇವೆ. ಯಾವ ವಸ್ತುಗಳ ಸಹಾಯದಿಂದ ನಾವು ನಮ್ಮ ಆರಾಧ್ಯ ದೇವತೆಯ ಪೂಜೆ-ಅರ್ಚನೆ ಮಾಡುತ್ತೇವೆಯೋ ಅವುಗಳಿಗೆ ಉಪಕರಣ ಎನ್ನುತ್ತಾರೆ. ಪೂಜೆಗಾಗಿ ನಮ್ಮ ನಮ್ಮ ಕ್ಷಮತೆಗನುಸಾರ ಪೂಜೆಯ ಉಪಕರಣಗಳನ್ನು ತರುತ್ತೇವೆ.
ದೇವತಾಪೂಜೆಯ   ಉಪಕರಣಗಳ ಮಹತ್ವ
ವಾತಾವರಣದಲ್ಲಿ ದೇವತೆಗಳ ಸೂಕ್ಷ  ತರಂಗಗಳು ಇರುತ್ತವೆ. ಪೂಜಾ ಉಪಕರಣ ಗಳು ಇಂತಹ ತರಂಗಗಳನ್ನು ಗ್ರಹಣ ಮಾಡಿ ಅವನ್ನು ಪೂಜಕನಿಗೆ ತಲುಪಿಸುವ ಉತ್ತಮ ಮಾಧ್ಯಮವಾಗಿವೆ. ಇದುವೇ ಶಾಸ್ತ್ರೀಯ ದೃಷ್ಟಿಕೋನದಿಂದ ದೇವತಾ ಪೂಜೆಯ ಉಪಕರಣಗಳ ಮಹತ್ವವಾಗಿದೆ.
 ಹಾಗೆ ನೋಡಿದರೆ, ದೇವರಪೂಜೆ ಯಲ್ಲಿ ಉಪಯೋಗಿಸಲ್ಪಡುವ ವಿವಿಧ ಉಪಕರಣಗಳು ನಮಗೆಲ್ಲರಿಗೂ ಪರಿಚಿತ ವಿದೆ, ಉದಾ. ಕಲಶ, ತಾಮ್ರದ ಪಾತ್ರೆ, ಆಚಮನೀಯ, ಪಂಚಪಾತ್ರೆ, ಅಭಿಷೇಕದ ಪಾತ್ರೆ, ತಿಲಕ, ನೈವೇದ್ಯ ಮತ್ತು ಪಂಚಾ ಮೃತದ ಬಟ್ಟಲುಗಳು, ತಟ್ಟೆ, ಊದು ಬತ್ತಿಯ ಸ್ಟಾ ಂಡ್, ಪಂಚಾರತಿ, ಘಂಟೆ, ಹೂವಿನ ಬುಟ್ಟಿ ಇತ್ಯಾದಿ. ಈ ಉಪಕರಣ ಗಳನ್ನು ಮುಖ್ಯವಾಗಿ ಚಿನ್ನ, ಬೆಳ್ಳಿ, ಕಂಚು, ತಾಮ್ರ ಅಥವಾ ಹಿತ್ತಾಳೆಯಂತಹ  ಲೋಹ ಗಳಿಂದ ತಯಾರಿಸಿರುತ್ತಾರೆ. ಈ ಎಲ್ಲ ಲೋಹಗಳ ತುಲನೆಯಲ್ಲಿ ತಾಮ್ರವು ಎಲ್ಲ ಕ್ಕಿಂತ ಅಧಿಕ ಮಹತ್ವಪೂರ್ಣವಾಗಿದೆ.
ತಾಮ್ರದ ವೈಶಿಷ್ಟ
ಅಧ್ಯಾತ್ಮಶಾಸ್ತ್ರದ ದೃಷ್ಟಿಯಲ್ಲಿ ತಾಮ್ರ ದಿಂದ ಮಾಡಿದ ಉಪಕರಣಗಳಿಗೆ ದೇವತಾ ಪೂಜೆಯಲ್ಲಿ ವಿಶೇಷ ಮಹತ್ವವಿದೆ. ಏಕೆಂದರೆ ಇತರ ಲೋಹಗಳ ತುಲನೆಯಲ್ಲಿ ಸಾತ್ತ್ವಿಕತೆ ಯನ್ನು ಗ್ರಹಣ ಮಾಡುವ ಕ್ಷಮತೆಯು ತಾಮ್ರ ದಲ್ಲಿ ಶೇ. ೩೦ ರಷ್ಟಿರುತ್ತದೆ. ಅಲ್ಲದೇ ಇದರಲ್ಲಿ ರಜ-ತಮಗಳನ್ನು ನಾಶಗೊಳಿಸುವ ಕ್ಷಮತೆ ಶೇ. ೭೦ ರಷ್ಟಿದೆ. ತಾಮ್ರದಲ್ಲಿ ದೇವತಾ ತತ್ತ್ವದ ಸಾತ್ತ್ವಿಕ ತರಂಗಗಳನ್ನು ಹೇಗೆ ಆಕರ್ಷಿ ಸುವ ಕ್ಷಮತೆ ಇರುವುದೋ, ಹಾಗೆಯೇ ಅವುಗಳನ್ನು ಪ್ರಕ್ಷೇಪಿಸುವ ಕ್ಷಮತೆಯೂ ಬಹಳವಿದೆ. ಆದುದರಿಂದ ತಾಮ್ರದಲ್ಲಿ ಕಡಿಮೆ ಸಮಯದಲ್ಲಿ ದೈವತ್ವವು ಉತ್ಪನ್ನವಾಗುತ್ತದೆ. ದೇವತಾತತ್ತ್ವದ ಸಾತ್ತ್ವಿಕ ತರಂಗಗಳು ತಾಮ್ರದ ಮೂಲಕ ಪೂಜೆಯ ಇತರ ಘಟಕಗಳಲ್ಲಿ  ಸಂಚರಿತವಾಗುತ್ತವೆ. ಆದುದರಿಂದ ತಾಮ್ರ ವನ್ನು ಶುಭಲೋಹ ಎನ್ನಲಾಗಿದೆ.
ಹಿಂದೂ ಜನಜಾಗೃತಿ ಸಮಿತಿಯು ಅಲ್ಲಲ್ಲಿ ಧರ್ಮಸತ್ಸಂಗ ವರ್ಗಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲದೇ ಹಿಂದೂಗಳಿಗೆ ಧರ್ಮದ ಕುರಿತು ಮಾಹಿತಿ ನೀಡಲು ಅನುಕೂಲವಾಗಲೆಂದು ಈ ಲೇಖನಮಾಲೆಯ ಪ್ರತಿಯನ್ನು ಸಂಗ್ರಹಿಸಿಟ್ಟುಕೊಳ್ಳಿ. ಹಿಂದೂಗಳೇ, ಈ ಮಾಹಿತಿಯನ್ನು ಹೆಚ್ಚೆಚ್ಚು ಹಿಂದೂಗಳ ವರೆಗೆ ತಲುಪಿಸಿ ಧರ್ಮಶಿಕ್ಷಣ ನೀಡಲು ಮುಂದಾಗಿ !

No comments:

Post a Comment