ಪೂಜಾ ಉಪಕರಣ : ಶಂಖ ಮತ್ತು ಘಂಟೆ
ವಾತಾವರಣದಲ್ಲಿ ದೇವತೆಗಳ ಸೂಕ್ಷ ತರಂಗಗಳು ಇರುತ್ತವೆ. ಪೂಜಾ ಉಪಕರಣಗಳು ಇಂತಹ ತರಂಗಗಳನಗ್ನು ಗ್ರಹಣ ಮಾಡಿ ಅವನ್ನು ಪೂಜಕನಿಗೆ ತಲುಪಿಸುವ ಉತ್ತಮ ಮಾದ್ಯಮವಾಗಿವೆ. ಈ ಸತ್ಸಂಗದಲ್ಲಿ ನಾವು ಪೂಜಾ ಉಪಕರಣ ‘ಶಂಖ ಮತ್ತು ಘಂಟೆ’ಯ ವಿಷಯದಲ್ಲಿ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನವನ್ನು ತಿಳಿದುಕೊಳ್ಳೋಣ.
ಶಂಖ
ಶಂಖದ ಮಹತ್ವ : ಪುರಾಣಕ್ಕನುಸಾರ ದೇವತೆಗಳು ನಡೆಸಿದ ಸಮುದ್ರ ಮಥನದಲ್ಲಿ ಶಂಖದ ಉತ್ಪತ್ತಿಯಾಯಿತು ಮತ್ತು ಭಗವಾನ ಶ್ರೀವಿಷ್ಣುವು ಇದನ್ನು ಆಯುಧರೂಪದಲ್ಲಿ ಧಾರಣೆ ಮಾಡಿದನು.
ಪೂಜಾವಿಧಿಯಲ್ಲಿ ಉಚ್ಚರಿಸಲ್ಪಡುವ ಒಂದು ಮಂತ್ರಕ್ಕನುಸಾರ ಭಗವಾನ ಶ್ರೀವಿಷ್ಣುವಿನ ಆಜ್ಞೆಯಂತೆ ಈ ಶಂಖದ ಮೂಲಭಾಗದಲ್ಲಿ ಚಂದ್ರ, ಸೂರ್ಯ ಮತ್ತು ವರುಣರು, ಪೃಷ್ಠಭಾಗದಲ್ಲಿ ಪ್ರಜಾಪತಿ ಹಾಗೂ ಅಗ್ರಭಾಗದಲ್ಲಿ ಗಂಗಾ, ಸರಸ್ವತಿ ಮುಂತಾದ ಪೃಥ್ವಿಯಲ್ಲಿರುವ ಸರ್ವ ತೀರ್ಥಗಳ ವಾಸ್ತವ್ಯವಿದೆ.ವಾತಾವರಣದಲ್ಲಿ ದೇವತೆಗಳ ಸೂಕ್ಷ ತರಂಗಗಳು ಇರುತ್ತವೆ. ಪೂಜಾ ಉಪಕರಣಗಳು ಇಂತಹ ತರಂಗಗಳನಗ್ನು ಗ್ರಹಣ ಮಾಡಿ ಅವನ್ನು ಪೂಜಕನಿಗೆ ತಲುಪಿಸುವ ಉತ್ತಮ ಮಾದ್ಯಮವಾಗಿವೆ. ಈ ಸತ್ಸಂಗದಲ್ಲಿ ನಾವು ಪೂಜಾ ಉಪಕರಣ ‘ಶಂಖ ಮತ್ತು ಘಂಟೆ’ಯ ವಿಷಯದಲ್ಲಿ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನವನ್ನು ತಿಳಿದುಕೊಳ್ಳೋಣ.
ಶಂಖ
ಶಂಖದ ಮಹತ್ವ : ಪುರಾಣಕ್ಕನುಸಾರ ದೇವತೆಗಳು ನಡೆಸಿದ ಸಮುದ್ರ ಮಥನದಲ್ಲಿ ಶಂಖದ ಉತ್ಪತ್ತಿಯಾಯಿತು ಮತ್ತು ಭಗವಾನ ಶ್ರೀವಿಷ್ಣುವು ಇದನ್ನು ಆಯುಧರೂಪದಲ್ಲಿ ಧಾರಣೆ ಮಾಡಿದನು.
ಶಂಖದ ಇನ್ನೊಂದು ವೈಶಿಷ್ಟ ವೇನೆಂದರೆ ಶಂಖನಾದಿಂದ ರೋಗಾಣು ಗಳು ನಾಶವಾಗುತ್ತವೆ. ಹಾಗಾಗಿ ಶಂಖಕ್ಕೆ ಚಿಕಿತ್ಸಾಶಾಸ್ತ್ರದಲ್ಲಿ ಹಾಗೂ ಆಯುರ್ವೇದ ದಲ್ಲಿ ವಿಶೇಷ ಮಹತ್ವವಿದೆ.
ಶಂಖದ ವಿಧ : ಶಂಖದ ಮೇಲಿರುವ ಮುರಿಕೆಗಳಿಗನುಸಾರ ಶಂಖವು ಎರಡು ವಿಧಗಳದ್ದಾಗಿರುತ್ತದೆ. ಬಲ ಮತ್ತು ಎಡ ಅರ್ಥಾತ್ ದಕ್ಷಿಣಾವರ್ತ ಮತ್ತು ವಾಮಾವರ್ತ. ಬಲ ಅಂದರೆ ದಕ್ಷಿಣಾವರ್ತ ಶಂಖದಲ್ಲಿ ಸಂಕೀರ್ಣವಾಗುತ್ತಾ ಹೋಗುವ ಖಾಲಿ ಸ್ಥಾನವು ಬಲಬದಿಗೆ ಬರುತ್ತದೆ ಮತ್ತು ಎಡ ಅರ್ಥಾತ್ ವಾಮಾವರ್ತ ಶಂಖದಲ್ಲಿ ಈ ಖಾಲಿ ಸ್ಥಾನವು ಎಡಬದಿಗೆ ಸಾಗುತ್ತದೆ. ಸಾಮಾನ್ಯವಾಗಿ ಪೂಜೆಯಲ್ಲಿ ವಾಮಾವರ್ತ ಶಂಖವು ಪ್ರಚಲಿತವಾಗಿದೆ.
ನಿಜವಾದ ಶಂಖವನ್ನು ಹೇಗೆ ಗುರುತಿ ಸುವುದು ? : ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿವಿಧ ಆಕಾರದ ಶಂಖಗಳು ಉಪಲಬ್ಧ ವಿವೆ. ಅವುಗಳ ಸಂಕೀರ್ಣ ಭಾಗದ ಮೇಲೆ ಕೆಲವು ವಿನ್ಯಾಸಗಳೂ ಇರುತ್ತವೆ. ಹೀಗಿರು ವಾಗ ನಿಜವಾದ ಶಂಖವನ್ನು ಹೇಗೆ ಗುರು ತಿಸುವುದು ಎಂದು ಪ್ರಶ್ನೆಯು ಮೂಡ ಬಹುದು. ಶಂಖವನ್ನು ಊದದೇ, ಅದನ್ನು ಕಿವಿಯಲ್ಲಿ ಆಲಿಸಿದಾಗ ಅದರಿಂದ ಮಧುರ ವಾದ ಧ್ವನಿಯು ಕೇಳುತ್ತಿದ್ದಲ್ಲಿ ಆ ಶಂಖವು ನಿಜವಾದ ಶಂಖವಾಗಿರುತ್ತದೆ.
ಶಂಖನಾದ
ಪೂಜಾವಿಧಿಯಲ್ಲಿ ಶಂಖವನ್ನು ಎರಡು ವಿಧದಲ್ಲಿ ಉಪಯೋಗಿಸಲಾಗುತ್ತದೆ. ಒಂದು, ಪೂಜೆಯ ಮೊದಲು ಶಂಖನಾದ ಕ್ಕಾಗಿ ಮತ್ತು ಇನ್ನೊಂದು ಪೂಜೆಗಾಗಿ. ಆದರೆ ಪೂಜೆಯ ಮೊದಲು ಶಂಖನಾದ ಮಾಡಲು ಉಪಯೋಗಿಸುವ ಶಂಖವನ್ನು ಪೂಜೆಯಲ್ಲಿ ಇಡುವುದಿಲ್ಲ. ಶಂಖನಾದಕ್ಕೆ ಪೂಜೆಯಲ್ಲಿ ವಿಶೇಷವಾದ ಮಹತ್ವವಿದೆ. ವರಾಹ ಪುರಾಣದಲ್ಲಿ ‘ಶಂಖಧ್ವನಿ ಮಾಡದೇ ದೇವತೆಗಳ ದ್ವಾರವನ್ನು ತೆರೆಯಬಾರದು’ ಎಂಬ ಉಲ್ಲೇಖವಿದೆ.
ಘಂಟೆ
ಘಂಟೆಯನ್ನು ಮುಖ್ಯವಾಗಿ ಎರಡು ಸ್ಥಾನಗಳಲ್ಲಿ ಉಪಯೋಗಿಸಲಾಗುತ್ತದೆ. ಮನೆಯಲ್ಲಿ ಪೂಜೆಯಲ್ಲಿ ಉಪಯೋಗಿಸುವ ಘಂಟೆ ಮತ್ತು ದೇವಸ್ಥಾನದಲ್ಲಿ ಹಾಕಿರುವ ಘಂಟೆ. ನಾವು ಮನೆಯಲ್ಲಿ ಪೂಜೆಯ ಪ್ರಯುಕ್ತ ತರಲಾಗುವ ಘಂಟೆಯ ಬಗ್ಗೆ ಮಾಹಿತಿ ಪಡೆಯೋಣ.
ಇತ್ತೀಚೆಗೆ ಪೂಜೆಯ ಉಪಕರಣಗಳು ವಿವಿಧ ಲೋಹಗಳಿಂದ ತಯಾರಿಸಲ್ಪಡುತ್ತವೆ. ಅವುಗಳ ಮೇಲೆ ವಿವಿಧ ಕಲಾತ್ಮಕ ಪ್ರತಿಮೆ ಗಳನ್ನಿಟ್ಟು ಅಲಂಕರಿಸಿರುತ್ತಾರೆ. ಶಾಸ್ತ್ರಕ್ಕನು ಸಾರ, ಪೂಜೆಯಲ್ಲಿ ನಾವು ಉಪಯೋಗಿ ಸುವ ಘಂಟೆಯು ಹಿತ್ತಾಳೆ ಅಥವಾ ತಾಮ್ರ ದಿಂದ ತಯಾರಿಸಿದ್ದಾಗಿರಬೇಕು ಮತ್ತು ಘಂಟೆಯ ಮೇಲೆ ಗರುಡ ಅಥವಾ ನಂದಿ ಯಂತಹ ಪ್ರತಿಮೆ ಇರುವುದು ಶಾಸ್ತ್ರ ಸಮ್ಮತವಾಗಿದೆ.

No comments:
Post a Comment