ಹಾಲು ಹಾಗೂ ಬಾಳೆಹಣ್ಣು ಹಾಗೆಯೇ ಹಣ್ಣಿನಂತಹ ಇತರ ಘಟಕಗಳನ್ನು

ಹಾಲು ಹಾಗೂ ಬಾಳೆಹಣ್ಣು ಹಾಗೆಯೇ ಹಣ್ಣಿನಂತಹ ಇತರ ಘಟಕಗಳನ್ನು ಹಾಲಿನೊಂದಿಗೆ ಬೆರೆಸುವುದು ಅಯೋಗ್ಯವಾಗಿರುವುದರ ಕಾರಣಗಳು
೧. ಆಯುರ್ವೇದದ ದೃಷ್ಟಿಕೋನ
ಅ. ಹಾಲು ಹಾಗೂ ಬಾಳೆಹಣ್ಣನ್ನು ಒಟ್ಟಿಗೆ ಸೇವಿಸುವುದು ಅಥವಾ ಅದರ ಸೀಕರಣೆ ಮಾಡಿ ತಿನ್ನುವುದು ಆಯುರ್ವೇದ ದೃಷ್ಟಿಯಿಂದ ಅಯೋಗ್ಯವಾಗಿದೆ.
ಆ. ಅದಕ್ಕೆ ಉಪಾಯವೆಂದು ಸೀಕರಣೆ ಮಾಡಲು ತೆಂಗಿನಕಾಯಿಯ ಹಾಲನ್ನು ಬಳಸಬಹುದು.
ಇ. ಉಪವಾಸ ಸಹಿತ ಇತರ ಸಮಯ ದಲ್ಲಿಯೂ ಬಾಳೆಹಣ್ಣನ್ನು ತಿಂದು ಹಾಲು ಕುಡಿಯಲು ೨ ತಾಸುಗಳ ಅಂತರವಿರಬೇಕು.
೨. ಅಧ್ಯಾತ್ಮಿಕ ದೃಷ್ಟಿಕೋನ
೨ ಅ. ಹಾಲಿನ ಸತ್ತ್ವಗುಣದ ಕಾರ್ಯಕ್ಕೆ ಅಡ್ಡಿಯಾಗುವುದು : ಹಾಲು ಹಾಗೂ ಬಾಳೆಹಣ್ಣನ್ನು ಸೇರಿಸಬಾರದು, ಅದೇ ರೀತಿ ಹಾಲಿನೊಳಗೆ ಇತರ ಹಣ್ಣುಗಳನ್ನು ಹಾಕುವುದೂ ಅಯೋಗ್ಯವಾಗಿದೆ; ಏಕೆಂದರೆ ಹಾಲು ನಮ್ಮ ಆಹಾರದಲ್ಲಿನ ಒಂದು ಸತ್ತ್ವಗುಣ ಸಂಪನ್ನ ಮೂಲಸ್ಥಾನವಾಗಿದೆ. ಹಾಲಿಗೆ ಬಾಳೆಹಣ್ಣು ಅಥವಾ ಇತರ ಹಣ್ಣು ಗಳಂತಹ ಇತರ ಘಟಕಗಳನ್ನು ಹಾಕಿದರೆ ಅದರಲ್ಲಿನ ರಸಮಯವಾದ ಮಧುರೂಪೀ ರಜೋಗುಣದ ಸಂಪರ್ಕದಿಂದ ಹಾಲಿನ ಲ್ಲಿನ ಸತ್ತ್ವ ಗುಣದ ಕಾರ್ಯಕ್ಕೆ ಅಡ್ಡಿಯಾಗ ಬಹುದು.
೨ ಆ. ಪಾನೀಯದಲ್ಲಿ ತೊಂದರೆ ದಾಯಕ ಘರ್ಷಣಾತ್ಮಕ ಸ್ಪಂದನಗಳು ನಿರ್ಮಾಣವಾಗುವುದು : ಹಾಲಿನಲ್ಲಿನ ಸತ್ತ್ವ ಹಾಗೂ ಹಣ್ಣುಗಳಲ್ಲಿನ ರಜ-ಸತ್ತ್ವ ಅಥವಾ ಅದರಲ್ಲಿ ಪ್ರಧಾನವಾಗಿರುವ ರಜದ ಅಯೋಗ್ಯ ಮಿಶ್ರಣದಿಂದ ತೊಂದರೆದಾಯಕ ಘರ್ಷಣಾತ್ಮಕ ಸ್ಪಂದನಗಳ ಸಂಚಾರ ಪ್ರಾರಂಭವಾಗಿ ಆ ಪಾನೀಯವು ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ.
೨ ಇ. ಜಠರಾಗ್ನಿಯು ಪ್ರಜ್ವಲಿತ ವಾಗುವ ಪ್ರಕ್ರಿಯೆಯಲ್ಲಿ ಅಡಚಣೆ ಯುಂಟಾಗಿ ಜೀರ್ಣ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಜೀವಕೋಶಗಳ ಮೇಲೆ ಒತ್ತಡ ಬರುವುದು : ಇಂತಹ ಮಿಶ್ರಣದ ಸೇವನೆಯಿಂದ ದೇಹದ ಟೊಳ್ಳಿನಲ್ಲಿ ಜಠರಾಗ್ನಿಯು ಪ್ರಜ್ವಲಿತವಾಗುವ ಪ್ರಕ್ರಿಯೆಯಲ್ಲಿ ಅಡಚಣೆಗಳು ನಿರ್ಮಾಣವಾ ಗುವುದರಿಂದ ಪಚನಕ್ರಿಯೆಯಲ್ಲಿ ಪಾಲ್ಗೊ ಳ್ಳುವ ಜೀವಕೋಶಗಳ ಮೇಲೆ ಹೆಚ್ಚುವರಿ ಒತ್ತಡ ಬರಬಹುದು. ಈ ಪ್ರಕ್ರಿಯೆಯಿಂದ ಅನೇಕ ರೀತಿಗಳ ನಿರುಪಯುಕ್ತ ವಾಯುವು ನಿರ್ಮಾಣವಾಗುವುದರಿಂದ ಪಿಂಡದ ಟೊಳ್ಳು ಕಲುಷಿತಗೊಂಡು ಅನೇಕ ರೋಗಗಳು ಬರಬಹುದು.
ಈ. ಉಪವಾಸದ ಸಮಯದಲ್ಲಿ ಹಾಲು ಹಾಗೂ ಬಾಳೆಹಣ್ಣಿನ ಪ್ರತ್ಯೇಕ ಸೇವನೆ ಆರೋಗ್ಯಕ್ಕೆ ಯೋಗ್ಯ : ಉಪವಾಸದ ಸಮಯದಲ್ಲಿ ಹಾಲು ಹಾಗೂ ಬಾಳೆಹಣ್ಣಿನ ಮಿಶ್ರಣವನ್ನು ಯೋಗ್ಯವೆಂದು ತಿಳಿಯದೇ ಅವುಗಳನ್ನು ಪ್ರತ್ಯೇಕವಾಗಿ ಸೇವಿಸುವುದಕ್ಕೆ ಹೆಚ್ಚು ಮಹತ್ವ ನೀಡಲಾಗು ತ್ತದೆ, ಈ ಅರ್ಥದಲ್ಲಿ ಉಪವಾಸಕ್ಕೆ ಇವೆರಡೂ ಒಳ್ಳೆಯದೆಂದು ಹೇಳಲಾಗಿದೆ.
೨ ಉ. ಆಹಾರಶಾಸ್ತ್ರದಲ್ಲಿ ಹಾಲಿನ ಸತ್ತ್ವಗುಣೀ ಕಾರ್ಯ : ಹಾಲಿನ ಸೇವನೆ ಯಿಂದ ಪಿಂಡದ ಟೊಳ್ಳಿನಲ್ಲಿನ ನಿರುಪ ಯುಕ್ತ ವಾಯುವಿನ ಶಮನವಾಗಿ ಅದು ಶುದ್ಧವಾಗುತ್ತದೆ.
೨ ಊ. ಫಲಾದಿ ಆಹಾರದ ಮಹತ್ವ : ಹಣ್ಣಿನಂತಹ ಆಹಾರವನ್ನು ಸೇವಿಸುವುದ ರಿಂದ ಜೀರ್ಣದಂತಹ ಪ್ರಕ್ರಿಯೆಗೆ ರಜೋಗುಣದ ಸಹಾಯದಿಂದ ವೇಗವು ದೊರಕಿ  ನಿರಾತಂಕವಾಗಿ ಈ ಪ್ರಕ್ರಿಯೆ ಯಾಗುತ್ತದೆ. ಹಣ್ಣಿನಂತಹ ಆಹಾರದ ಲ್ಲಿರುವ ರಜೋಗುಣವು ದೇಹದ ಚೇತನ ವನ್ನು ಜಾಗೃತಗೊಳಿಸುತ್ತದೆ. ಚೇತನದ ಜಾಗೃತಿಯಿಂದ ಸತ್ತ್ವ ಮುಂತಾದ ಘಟಕ ಗಳಿಂದ ದೊರಕುವ ಪೋಷಕ ಹಾಗೂ ಪೂರಕವಾದ ಚೈತನ್ಯರೂಪಿ ರಸಗಳ ಸಾನಿಧ್ಯದಿಂದ ದೇಹವು ಆಧ್ಯಾತ್ಮಿಕ ದೃಷ್ಟಿಯಿಂದಲೂ ಬಲಶಾಲಿಯಾಗುತ್ತದೆ. - ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ಭಾದ್ರಪದ ಕೃ. ಸಪ್ತಮಿ, ಕಲಿಯುಗ ವರ್ಷ ೫೧೧೨ (೩೦.೯.೨೦೧೦), ಬೆಳಗ್ಗೆ ೧೧.೪೧)

No comments:

Post a Comment