ಸಾಧಕರೇ, ದಿನವಿಡಿ ಸಾಕಷ್ಟು ನೀರು ಕುಡಿಯಿರಿ !
ಕೆಟ್ಟ ಶಕ್ತಿಗಳ ತೊಂದರೆಯಿಂದ ಬಾಯಿ ಒಣಗುತ್ತದೆ. ಇದರಿಂದ ಬಾಯಿಯಲ್ಲಿ ಕೀಟಾಣುಗಳು ನಿರ್ಮಾಣವಾಗುತ್ತವೆ ಮತ್ತು ಅವು ಹಲ್ಲುಗಳಲ್ಲಿ ಹೋಗಿ ಹಲ್ಲುಗಳು ಹಾಳಾಗಲು ಪ್ರಾರಂಭವಾಗುತ್ತವೆ. ಆದುದ ರಿಂದ ಬಾಯಿ ಹಸಿಯಾಗಿರಲು ನಡು- ನಡುವೆ ನೀರು ಕುಡಿಯುವುದು, ಬಾಯಿ ಮುಕ್ಕಳಿಸುವುದು ಇತ್ಯಾದಿ ಮಾಡಬೇಕು. ಯಾವ ರೀತಿ ಕೆಟ್ಟ ಶಕ್ತಿಗಳು ಹಲ್ಲುಗಳ ಮೇಲೆ ಪರಿಣಾಮ ಮಾಡುತ್ತವೆಯೋ, ಅದರಂತೆ ಅವು ಶರೀರದ ಮೇಲೆಯೂ ಪರಿಣಾಮ ಮಾಡುತ್ತವೆ. ಆದುದರಿಂದ ಸಾಧಕರು ದಿನವಿಡಿ ಕನಿಷ್ಠಪಕ್ಷ ೩ ಲೀಟರ್ ನಷ್ಟು ನೀರು ಕುಡಿಯಬೇಕು.
ಕೂದಲಿಗೆ ಶ್ಯಾಂಪೂ ಬಳಸದೆ ಸನಾತನದ ಉಟಣೆ ಮತ್ತು ಕರ್ಪೂರದ ಮಿಶ್ರಣದ ಚೂರ್ಣವನ್ನು ಬಳಸಿ !ಕೂದಲಿಗೆ ಆದಷ್ಟು ಮಾರುಕಟ್ಟೆಯಲ್ಲಿ ದೊರೆಯುವ ಶ್ಯಾಂಪೂವನ್ನು ಬಳಸದೇ ‘ಸನಾತನದ ಉಟಣೆ ಮತ್ತು ಕರ್ಪೂರ’ವನ್ನು ಬೆರೆಸಿ ಹಚ್ಚಬೇಕು. ಅದರಿಂದ ಕೂದಲಿನ ಬುಡದಲ್ಲಿರುವ ಕೆಟ್ಟ ಶಕ್ತಿಗಳ ಸ್ಥಾನಗಳು ನಾಶವಾಗಿ ಕೂದಲಿನೊಳಗಿನ ತೊಂದರೆ ದಾಯಕ ಸ್ಪಂದನಗಳು ನಾಶವಾಗುತ್ತವೆ ಮತ್ತು ತಲೆನೋವು, ತಲೆಯಲ್ಲಿ ಹೊಟ್ಟಾಗು ವುದು, ಕೂದಲು ಉದುರುವುದು, ಬಿಳಿ ಯಾಗುವುದು ಮುಂತಾದ ವಿಕಾರಗಳು ಹಾಗೂ ಕಣ್ಣಿನ ತೊಂದರೆಗಳು ಕಡಿಮೆ ಯಾಗಲು ಸಹಾಯವಾಗುತ್ತವೆ.
ಕರ್ಪೂರವನ್ನು ಮೊದಲೇ ಪುಡಿ ಮಾಡಿಡದೇ ಆಯಾ ಸಮಯಕ್ಕೆ ಮಾಡಿರಿ !
ಕರ್ಪೂರವನ್ನು ಪುಡಿ ಮಾಡಿಡದೇ ಬೇಕಾದಾಗಲೇ ಅಂಗೈಯಲ್ಲಿ ಸ್ವಲ್ಪ ಕರ್ಪೂರ ಹಾಕಿಕೊಂಡು ನಾಮಜಪ ಮಾಡುತ್ತ ಚೂರ್ಣ ತಯಾರಿಸಿಕೊಳ್ಳಬೇಕು. ಮೊದಲೇ ಪುಡಿ ಮಾಡಿಟ್ಟರೆ ಕರ್ಪೂರದಲ್ಲಿರುವ ಗಂಧ ರೂಪಿ ವಾಯುವು ಹವೆಯಲ್ಲಿ ಹೋಗುತ್ತದೆ ಮತ್ತು ಅದರ ಪರಿಮಳವು ಕಡಿಮೆಯಾಗಿ ಕಾರ್ಯ ಮಾಡುವ ಕ್ಷಮತೆ ಕಡಿಮೆಯಾಗು ತ್ತದೆ. ಆದುದರಿಂದ ಶರೀರಕ್ಕೆ ಕರ್ಪೂರದ ಎಣ್ಣೆಯನ್ನು ಹಚ್ಚುವಾಗ ಅಥವಾ ತಲೆಗೆ ಕರ್ಪೂರದೆಣ್ಣೆ ಹಚ್ಚುವಾಗ ಅಂಗೈಯಲ್ಲಿ ಕರ್ಪೂರವನ್ನು ಪುಡಿ ಮಾಡಿ ಅದರಲ್ಲಿ ಎಣ್ಣ್ಣೆ ಹಾಕಿ ಮತ್ತು ನಂತರವೇ ಅದನ್ನು ಶರೀರಕ್ಕೆ ಹಾಗೂ ತಲೆಗೆ ಹಚ್ಚಿ ಮಾಲೀಶ ಮಾಡ ಬೇಕು.
ಇದರಿಂದ ಕರ್ಪೂರದ ಶಿವತತ್ತ್ವರೂಪಿ ಗಂಧದಿಂದ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಲಾಭ ಪಡೆಯಲು ಸಹಾಯವಾಗುತ್ತದೆ. - ಸೌ. ಅಂಜಲಿ ಗಾಡ ಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಕಾರ್ತಿಕ ಕೃಷ್ಣ ೧೦/೧೧, ಕಲಿಯುಗ ವರ್ಷ ೫೧೧೨ (೧.೧೨.೨೦೧೦))
No comments:
Post a Comment