ಧರ್ಮಸತ್ಸಂಗ

ಧಾರ್ಮಿಕ ಕೃತಿಗಳ ಶಾಸ್ತ್ರ : ಕೆಲವು ಧಾರ್ಮಿಕ ಕೃತಿಗಳು ಅನ್ಯ ಘಟಕಗಳ ಸಹಾಯವಿಲ್ಲದೆ ಪೂರ್ಣವಾಗಲು ಸಾಧ್ಯವಿಲ್ಲ. ಉದಾಹರಣೆಗೆ ದೇವತಾಪೂಜೆಯಲ್ಲಿ ಪೂಜಾ ಸಾಮಗ್ರಿಗಳು ಅವಶ್ಯಕವೇ ಆಗಿವೆ. ಧಾರ್ಮಿಕ ಕೃತಿಗಳಲ್ಲಿ  ಸಹಾಯ ಮಾಡುವ ಈ ಘಟಕಗಳು ಧಾರ್ಮಿಕ ಕೃತಿಗಳ ಮಾಧ್ಯಮದಿಂದ ಈಶ್ವರೀ ಕೃಪೆಯು ಪ್ರಾಪ್ತವಾಗಲು ಮಹತ್ವಪೂರ್ಣ ಕೊಂಡಿಯಾಗಿದೆ. ಇದರಿಂದ ಪೂಜಕನಿಗೆ ಆಧ್ಯಾತ್ಮಿಕ ಸ್ತರದ ಲಾಭವಾಗುತ್ತದೆ. ಈ ವಾರದ ಅಂಕಣದಲ್ಲಿ ನಾವು ಅರಿಶಿಣ, ಕುಂಕುಮ, ಈ ಪೂಜಾಸಾಮಗ್ರಿಯ ಘಟಕಗಳ ಅಧ್ಯಾತ್ಮಶಾಸ್ತ್ರೀಯ ಮಹತ್ವ ಹಾಗೂ ಅವುಗಳ ವೈಶಿಷ್ಟ ಗಳ ಬಗ್ಗೆ ಮಾಹಿತಿ ಪಡೆಯೋಣ.
ಅರಿಶಿಣ

ಅರಿಶಿಣಕ್ಕೆ ತನ್ನದೇ ಆದ ಒಂದು ವಿಶೇಷ ಸುಗಂಧವಿದೆ. ಒಣಗಿದ ಅರಿಶಿಣದ ಚೂರ್ಣವನ್ನು ಪೂಜೆಯಲ್ಲಿ ಉಪಯೋಗಿಸುತ್ತಾರೆ. ಅರಿಶಿಣದಿಂದ ಸೂಕ್ಷ ಸ್ತರದಲ್ಲಾಗುವ ಪರಿಣಾಮಗಳನ್ನು ನಾವು ತಿಳಿದುಕೊಂಡರೆ ಪೂಜೆಯಲ್ಲಿ ಅದನ್ನು ಉಪಯೋಗಿಸುವುದರ ಮಹತ್ವ ವನ್ನು ಹೆಚ್ಚು ಸ್ಪಷ್ಟವಾಗಿ ತಿಳಿಯಬಹುದು. ಇದನ್ನು ತಿಳಿದುಕೊಳ್ಳಲು ಅರಿಶಿಣದ ಚೂರ್ಣದ  ಒಂದು ಸೂಕ್ಷ ಚಿತ್ರವನ್ನು ಮುಂದೆ ನೋಡೋಣ.
೧. ವಾಯುಮಂಡಲದಲ್ಲಿರುವ ದೇವತೆಗಳ ತತ್ತ್ವವು ಅರಶಿಣದಲ್ಲಿ ಆಕರ್ಷಿತವಾಗುತ್ತದೆ.
೨. ಇದರಿಂದ ಅರಿಶಿಣದಲ್ಲಿರುವ  ರಜ-ಸತ್ತ್ವಗುಣಿ ಶಕ್ತಿಯು ವಲಯಗಳ ರೂಪದಲ್ಲಿ ಕಾರ್ಯನಿರತವಾಗುತ್ತದೆ.
೩. ವಾತಾವರಣದಲ್ಲಿ ಈ ಶಕ್ತಿಯ ಪ್ರಕ್ಷೇಪಣೆಯಾಗುತ್ತದೆ.
೪. ಅರಿಶಿಣದಲ್ಲಿ ಪೃಥ್ವಿತತ್ತ್ವದ ಪ್ರಮಾ ಣವು ಅಧಿಕವಿರುವುದರಿಂದ ಅರಿಶಿಣದ ಸುಗಂಧದ ಮೂಲಕ ಈ ಶಕ್ತಿಯ ಕಣಗಳೂ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತವೆ.
ಕುಂಕುಮ
ಕುಂಕುಮವನ್ನು ‘ರೋಲೀ’ ಎಂದೂ ಹೇಳುತ್ತಾರೆ. ಶುದ್ಧ ಕುಂಕುಮವನ್ನು ಅರಿಶಿಣದಿಂದಲೇ ಮಾಡುತ್ತಾರೆ. ಶುದ್ಧ ಅರಿಶಿಣಕ್ಕೆ  ಸುಣ್ಣದ ತಿಳಿನೀರು ಹಾಗೂ ಸ್ವಲ್ಪ ಶುದ್ಧ ಕರ್ಪೂರವನ್ನು ಉಪಯೋಗಿಸಿ ಕುಂಕುಮವನ್ನು ತಯಾರಿಸಲಾಗುತ್ತದೆ. ಅರಿಶಿಣವನ್ನು ಆಘ್ರಾಣಿಸುವುದರಿಂದ ಅದರ ಸುಗಂಧದ ಅರಿವಾಗುತ್ತದೆ. ಆದರೆ ಕುಂಕುಮವು ತಯಾರಾದ ನಂತರ ಅರಿಶಿಣದ ಸುಗಂಧವು ಸಂಪೂರ್ಣವಾಗಿ  ಇಲ್ಲವಾಗುತ್ತದೆ. ಅದರ ಸ್ಥಾನದಲ್ಲಿ ಕುಂಕುಮದ ತನ್ನದೇ ಆದ ಒಂದು ಬೇರೆಯೇ ದೈವೀ ಸುಗಂಧವು ನಿರ್ಮಾಣವಾಗು ತ್ತದೆ ಮತ್ತು ಅದು ನಿರ್ದಿಷ್ಟ ದೂರದ ವರೆಗೆ ಹರಡುತ್ತದೆ.

No comments:

Post a Comment