ಸಾಧಕರೇ, ಆಯಾ ಸಮಯದಲ್ಲಿ ಆಯಾ ಕೃತಿಯನ್ನು ಮಾಡಿ ಮತ್ತು ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಯ.

ಸಾಧಕರೇ, ಆಯಾ ಸಮಯದಲ್ಲಿ ಆಯಾ ಕೃತಿಯನ್ನು ಮಾಡಿ 
ಮತ್ತು  ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಯ ಯೋಗ್ಯ ಹೊಂದಾಣಿಕೆ ಮಾಡಿ !

೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ತಖ್ತೆಯನ್ನು ಅದೇ ಸಮಯದಲ್ಲಿ ಬರೆಯದೇ ಒಮ್ಮೆಲೇ ರಾತ್ರಿ ಸಮಯದಲ್ಲಿ ಬರೆಯುವುದರಿಂದಾಗುವ ದುಷ್ಪರಿಣಾಮ
೧ ಅ. ತಪ್ಪಾದ ಕೂಡಲೇ ತಖ್ತೆಯನ್ನು ಬರೆಯದಿದ್ದರೆ ಸಾಧನೆಯ ಸಮಯದಲ್ಲಿ ಆ ತಪ್ಪಿನ ನೆನಪಾಗಿ ಅದರಲ್ಲಿನ ರಜ-ತಮದ ಪರಿಣಾಮ ಸಾತ್ತ್ವಿಕ ವಾತಾವರಣದ ಮೇಲಾಗಿ ಮನಸ್ಸು ವಿಚಲಿತವಾಗುವುದು : ಬಹಳಷ್ಟು ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ತಖ್ತೆಯನ್ನು ಬರೆಯುವಾಗ ರಾತ್ರಿ ಅಥವಾ ದಿನದ ಎಂದಾದರೊಮ್ಮೆ ಬರೆಯುತ್ತಾರೆ. ಹೀಗೆ ಮಾಡಿದರೆ ಮುಂದಿನಂತೆ ಹಾನಿಯಾಗುತ್ತದೆ. ತಪ್ಪುಗಳು ರಜ- ತಮಪ್ರಧಾನವಾಗಿರುತ್ತವೆ. ತಪ್ಪಾದ ತಕ್ಷಣ ಅದನ್ನು ತಖ್ತೆಯಲ್ಲಿ ಬರೆದರೆ ನಮ್ಮ ಮನಸ್ಸಿನಿಂದ ಅದು ಅಳಿಸಿ ಹೋಗುತ್ತದೆ ಮತ್ತು ಮನಸ್ಸು ಹಗುರವಾಗಿ ಪುನಃ ಅದರ ನೆನಪಾಗುವುದಿಲ್ಲ.
ಹಾಗೆ ಮಾಡದೇ ಕೆಲವು ಗಂಟೆಗಳ ನಂತರ ತಪ್ಪನ್ನು ತಖ್ತೆಯಲ್ಲಿ ಬರೆದರೆ ಆಯಾ ತಪ್ಪುಗಳನ್ನು ನೆನಪಿಸಿಕೊಳ್ಳುವಾಗ ನಮ್ಮ ಮನಸ್ಸಿನ ಮೇಲೆ ತಪ್ಪಿನಲ್ಲಿರುವ ರಜ-ತಮವು ಸ್ವಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಬಹುದು. ಉದಾ. ತಖ್ತೆ ಬರೆದ ನಂತರ ನಾವು ನಾಮಜಪ ಅಥವಾ ಇತರ ಯಾವುದೇ ಸಾಧನೆ ಮಾಡುತ್ತಿರುವಾಗ ಆ ತಪ್ಪುಗಳ ಬಗ್ಗೆ ಪುನಃ ನೆನಪಾಗಿ ಅದರಲ್ಲಿರುವ ರಜ-ತಮದ ಪರಿಣಾಮವು ಆ ಸಾತ್ತ್ವಿಕ ವಾತಾವರಣದ ಮೇಲಾಗುತ್ತದೆ ಮತ್ತು ಗಮನವು ವಿಚಲಿತವಾಗುತ್ತದೆ.
೧ ಆ. ತಪ್ಪಾದ ತಕ್ಷಣ ಅದನ್ನು ತಖ್ತೆಯಲ್ಲಿ ಬರೆಯದೇ ಕೆಲವು ಸಮಯದ ನಂತರ ಬರೆಯಲು ನಿರ್ಧರಿಸಿದರೆ ತಪ್ಪುಗಳ ಅಧ್ಯಯನ ಮಾಡಲು ಅಡಚಣೆಯಾಗುವುದು : ಕೆಲವೊಮ್ಮೆ ಯಾವುದಾದರೂ ಪ್ರಸಂಗ ನಡೆದಿರುತ್ತದೆ. ಅದರ ಸ್ವಲ್ಪ ಹೊತ್ತಿನ ನಂತರ ಆ ಪ್ರಸಂಗಕ್ಕನುಸಾರ ಹೊಸ ಹೊಸ ವಿಚಾರಗಳು ಮನಸ್ಸಿನಲ್ಲಿ ಬರುತ್ತವೆ ಮತ್ತು ನಮ್ಮ ಮೂಲ ದೋಷದಿಂದ ನಾವು ದೂರ ಹೋಗುತ್ತೇವೆ, ಉದಾ. ಯಾರಾದರೊಬ್ಬರ ಮೇಲೆ ಸಿಟ್ಟು ಬಂದಾಗ ನಮಗೆ, ‘ಅದರ ಮೂಲ ಕಾರಣ ‘ಅಪೇಕ್ಷೆ’ ಎಂದಿರುತ್ತದೆ; ಆದರೆ ಆ ತಪ್ಪನ್ನು ನಾವು ತಖ್ತೆಯಲ್ಲಿ ಅದೇ ಸಮಯದಲ್ಲಿ ಬರೆಯದೇ ಸ್ವಲ್ಪ ಸಮಯದ ನಂತರ ಬರೆಯಲು ನಿರ್ಧರಿಸಿ ದಾಗ ಆ ನಡುವಿನ ಕಾಲದಲ್ಲಿ ನಮಗೆ, ‘ಕೆಲವು ದಿನಗಳ ಹಿಂದೆ ಇದೇ ರೀತಿಯ ಪ್ರಸಂಗ ನಡೆದಿತ್ತು ಮತ್ತು ಆಗ ಅವನು ಅದೇ ರೀತಿ ವರ್ತಿಸಿದ್ದನು; ಆದುದರಿಂದ ನಮಗೆ ಆ ವ್ಯಕ್ತಿಯ ಬಗ್ಗೆ ಸಿಟ್ಟು ಬರುವುದು ನಮ್ಮ ‘ಪೂರ್ವಗ್ರಹ’ ಎಂಬ ದೋಷವಿರಬಹುದು.’ ನಂತರ ಸ್ವಲ್ಪ ಸಮಯದ ನಂತರ ‘ಇಲ್ಲ, ಇದರ ಹಿಂದೆ ಮತ್ತೇನೋ ಇದೆ’ ಎಂದು ಅನಿಸುತ್ತದೆ. ಅಂದರೆ ನಾವು ಆ ಪ್ರಸಂಗದ ಬಗ್ಗೆ ಸರಿಯಾಗಿ ಅಧ್ಯಯನ ಮಾಡಲು ಸಾಧ್ಯವಾಗಲಾರದು.
೧ ಇ. ತಪ್ಪುಗಳ ಚಿಂತನೆಯನ್ನು ಅದೇ ಸಮಯಕ್ಕೆ ಮಾಡದಿದ್ದರೆ ಅದು ಪರಿಣಾಮಕಾರಿಯಾಗಲಾರದು : ನನ್ನಿಂದ ಯಾವುದಾದರೊಂದು ತಪ್ಪಾದ ನಂತರ ಅದರ ಬಗ್ಗೆ ಚಿಂತನೆ ಮಾಡಲು ನಾವು ತಕ್ಷಣ ಅಂತರ್ಮುಖರಾಗಬಹುದು. ಅದರಿಂದ ನಮ್ಮ ನ್ಯೂನತೆಯು ನಮಗೆ ತಕ್ಷಣ ಅರಿವಾಗಿ ಅದನ್ನು ಸುಧಾರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಸ್ವಲ್ಪ ಸಮಯದ ನಂತರ ಆ ತಪ್ಪನ್ನು ಬರೆಯುವಾಗ ನಮಗೆ ಆ ಪ್ರಸಂಗವು ಸರಿಯಾಗಿ ನೆನಪಾಗದಿರುವುದರಿಂದ ನಾವು ಆ ಸಮಯದಲ್ಲಿ ಅಂತ ರ್ಮುಖರಾಗಲು ಸಾಧ್ಯವಿಲ್ಲ. ಆದುದರಿಂದ ಆ ತಪ್ಪಿನ ಅಧ್ಯಯನ ಸರಿಯಾಗಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ಆ ತಪ್ಪಿನ ಮೇಲಿನ ಯೋಗ್ಯ ಉಪಾಯ ನಮ್ಮ ಮನಸ್ಸಿನ ಮೇಲೆ ಸರಿಯಾಗಿ ಬಿಂಬಿತವಾಗುವುದಿಲ್ಲ.
೨. ಅಂತರ್ಮುಖವೆಂದರೇನು?
ನಾವು ಅಂತರ್ಮುಖರಾಗಬೇಕು ಎಂದು ಹೇಳುತ್ತೇವೆ. ಅದಕ್ಕಾಗಿ ಕೆಲವು ಸಾಧಕರು ಮಾತನಾಡುವುದನ್ನು ಕಡಿಮೆ ಮಾಡುತ್ತಾರೆ. ಕೆಲವು ಸಾಧಕರು ಮೇಲಿನಂತೆ ವ್ಯಷ್ಟಿಗಾಗಿ ಬೇರೆಯೇ ಸಮಯ ಇಟ್ಟುಕೊಳ್ಳುತ್ತಾರೆ. ಅಂತರ್ಮುಖತೆ ಎಂದರೆ ಸತತವಾಗಿ ಒಳಗಿರುವುದು ಎಂಬುದನ್ನು ಗಮನದಲ್ಲಿಡಿ. ಅಂದರೆ ಪ್ರತಿಯೊಂದು ಕೃತಿಗಳನ್ನು ಮಾಡುವಾಗ ನಾವು ಸತತವಾಗಿ ವಿಚಾರ ಮಾಡಬೇಕು. ‘ಮಾಡಿದ ಕೃತಿಯು ಶ್ರೀಕೃಷ್ಣನಿಗೆ ಅಪೇಕ್ಷಿತವಾಯಿತೇ ? ನಾನು ಊಟ ಮಾಡುತ್ತಿರುವಾಗ ಅವನಿಗೆ ಅಪೇಕ್ಷಿತವಾಗಿರುವಂತೆ ಊಟ ಮಾಡುತ್ತಿದ್ದೇನೆಯೇ ? ಅಂದರೆ ಊಟವನ್ನು ಪ್ರಸಾದವೆಂದು ತಿಳಿದು ನಾಮಜಪ ಮಾಡುತ್ತ ಸ್ವೀಕರಿಸುತ್ತೀದ್ದೇನೆಯೇ? ನಾವು ಸೇವೆಗೆ ನೀಡುವ ಪ್ರತಿಯೊಂದು ಸಮಯವು ಶ್ರೀಕೃಷ್ಣನಿಗೆ ಅಪೇಕ್ಷಿತವಿದೆಯೇ ?’ ಹೀಗೆ ಅಂತರ್ಮುಖತೆ ಸಾಧಿಸಬೇಕಾದರೆ ಕ್ಷಣಕ್ಷಣಕ್ಕೂ ಪದೇ ಪದೇ ನಮ್ಮ ಗಮನವು ನಮ್ಮ ಮೇಲೆಯೇ ಇರಬೇಕು.
೩. ಸತತ ವರ್ತಮಾನಕಾಲದಲ್ಲಿರುವುದು ಆವಶ್ಯಕ : ನಾವು ಸತತ ವರ್ತಮಾನಕಾಲದಲ್ಲಿರಬೇಕು. ನಾವು ನಡೆದ ಪ್ರಸಂಗದಲ್ಲಿ ಸಿಲುಕದೇ, ಅಂದರೆ ಆ ಭೂತಕಾಲದಲ್ಲಿ ಸಿಲುಕದೇ ಮುಂದೆ ಹೋಗಬೇಕು. ಈ ಪ್ರಸಂಗದಿಂದ ಕಲಿತರೆ ಮಾತ್ರ ನಾವು ಮುಂದೆ ಹೋಗಲು ಸಾಧ್ಯವಿದೆ. ಭೂತಕಾಲದಿಂದ ಕಲಿಯುವುದು ಭೂತಕಾಲರೂಪಿ ವರ್ತಮಾನವಾಗಿದೆ.
೪. ನಾವು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಒಂದುಗೂಡಿಸಲು ಕಲಿಯಬೇಕು ! : ಸಂಪತ್ಕಾಲದಲ್ಲಿ ನಾವು ವ್ಯಷ್ಟಿ ಯೆಂದು ನಾಮಜಪ ಮಾಡುತ್ತಿದ್ದೆವು ಹಾಗೂ ಸತ್ಸಂಗ ಮತ್ತು ಭಾವಸತ್ಸಂಗ ತೆಗೆದುಕೊಳ್ಳುತ್ತಿದ್ದೆವು. ಆದರೆ ಈಗ ಆಪ ತ್ಕಾಲವಿರುವುದರಿಂದ ನಾವು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಜೊತೆಗೂಡಿಸಿ ಮಾಡಲು ಕಲಿಯಬೇಕು ಮತ್ತು ಆಯಾ ಸಮಯದಲ್ಲಿ ಆಯಾ ವಿಷಯವನ್ನು ಮಾಡಬೇಕು. ಅದೇ ಈಗಿನ ಕಾಲಕ್ಕೆ ಆವಶ್ಯಕತೆಯಿದೆ. ಇಲ್ಲದಿದ್ದರೆ ಕಾಲವು ಮುಂದೆ ಆದರೆ ನಾವು ಹಿಂದಿನಂತೆ ಸಾಧನೆ ಮಾಡುತ್ತ ಕುಳಿತು ಕೊಂಡರೆ ನಮ್ಮ ಸಾಧನೆ ಒಂದು ರೀತಿ ನಿಂತು ಬಿಡುತ್ತದೆ ಎಂದು ಹೇಳಬಹುದು. ಹನುಮಂತನು ಯುದ್ಧ ನಡೆಯುತ್ತಿರುವಾಗಲೂ ನಾಮಜಪ ಮಾಡುವಾಗ ಬಾಲವನ್ನು ಗಧೆಯ ಮೇಲೆ ಇಡುತ್ತಿದ್ದನು. ಅದರಂತೆ ನಾವು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಎರಡನ್ನೂ ಜೊತೆಗೂಡಿಸಿ ಮಾಡಬೇಕು.’ - ಶ್ರೀ. ಪ್ರಶಾಂತ ಹರಿಹರ, ಮಂಗಳೂರು (ಮಾರ್ಗಶಿರ ಹುಣ್ಣಿಮೆ, ಕಲಿಯುಗ ವರ್ಷ ೫೧೧೨ (೨೧.೧೨.೨೦೧೦))

No comments:

Post a Comment