ಸಾಧಕರ ಪ್ರಶ್ನೆ ಮತ್ತು ಪ.ಪೂ. ಡಾಕ್ಟರರ ಉತ್ತರ

೧. ಸೇವೆಯಲ್ಲಿ ಏಕಾಗ್ರತೆ ಸಾಧ್ಯವಾಗುವುದು ಪ್ರಗತಿಯ ಲಕ್ಷಣವಾಗಿದೆ
ಸೌ. ಸುಜಾತ ಶೆಣೈ, ಬಂಟ್ವಾಳ : ಗಣಕಯಂತ್ರದಲ್ಲಿ ಸೇವೆ ಮಾಡುತ್ತಿರುವಾಗ ಮನಸ್ಸು ಏಕಾಗ್ರವಾಗುತ್ತದೆ ಮತ್ತು ೨ ರಿಂದ ೩ ಗಂಟೆ ಹಾಗೆಯೇ ಹೋಗುತ್ತದೆ. ಪ್ರಾರ್ಥನೆ ಮತ್ತು ಕೃತಜ್ಞತೆಗಳು ನೆನಪಾಗುವುದಿಲ್ಲ. ಮನಸ್ಸು ಸೇವೆಯಲ್ಲಿಯೇ ಏಕಾಗ್ರತೆಯಿಂದ ಇರುತ್ತದೆ. ಇದರ ಕಾರಣವೇನು ?
ಪ.ಪೂ. ಡಾಕ್ಟರರು : ಇದು ಒಳ್ಳೆಯದಿದೆ. ಮನಸ್ಸು ಏಕಾಗ್ರವಾಗಬೇಕೆಂದು ನಾವು ನಾಮಜಪ, ಪ್ರಾರ್ಥನೆ ಮಾಡುತ್ತೇವೆ. ಅದುವೇ ಸಾಧ್ಯವಾದರೆ ಪುನಃ ಆ ಸ್ಥಿತಿ ಯಿಂದ ಹೊರಗೆ ಬರುವುದು ಅಪೇಕ್ಷಿತವಿಲ್ಲ. ಇದುವೇ ಪ್ರಗತಿಯ ಲಕ್ಷಣವಾಗಿದೆ.
೨. ನೌಕರಿ ಮಾಡುವಾಗ ‘ಸೇವೆ ಮಾಡುತ್ತಿದ್ದೇನೆ’ ಎಂಬ ಭಾವವಿಟ್ಟರೆ ಸಾಧನೆಯಾಗುವುದು
ಶ್ರೀ. ಲಕ್ಷಿ  ನಾರಾಯಣ, ಉಡುಪಿ : ನಾನು ಬ್ಯಾಂಕ್‌ನಲ್ಲಿ ನೌಕರಿಯಲ್ಲಿದ್ದೇನೆ. ಪ್ರತಿದಿನ ೧ ರಿಂದ ೧.೩೦ ಗಂಟೆ ಪ್ರಯಾಣ ಮಾಡಿ ದಿನವಿಡಿ ಕೆಲಸ ಮುಗಿಸಿ ಪುನಃ ಮನೆಗೆ ಬಂದಾಗ ವ್ಯಷ್ಟಿ ಸಾಧನೆಯೆಡೆಗೆ ಗಮನ ಕೊಡಲು ಸಮಯ ಸಿಗುವುದಿಲ್ಲ. ಆದ್ದರಿಂದ ಏನು ಮಾಡಲಿ ?
ಪ.ಪೂ. ಡಾಕ್ಟರರು : ಬ್ಯಾಂಕ್‌ನಲ್ಲಿ ಕೆಲಸ ಮಾಡುವಾಗ ನೌಕರಿಯೆಂದು ಮಾಡದೆ ‘ಸೇವೆ ಮಾಡುತ್ತಿದ್ದೇನೆ’ ಎಂಬ ಭಾವವನಿಟ್ಟು ನೌಕರಿ ಮಾಡಿ. ಭಾವದಂತೆ ಅನುಭವವಾಗುತ್ತದೆ. ಅದರಂತೆ ಪ್ರಯತ್ನ ಮಾಡಿದರೆ ನಿಮ್ಮ ಸಾಧನೆಯಾಗುತ್ತದೆ.
೩. ಅದ್ವೈತದ ಅನುಭೂತಿ ಬರುವುದು
ಶ್ರೀ. ನಂದಕುಮಾರ ಕೈಮಲ, ಕೇರಳ : ಮಾರ್ಗಶಿರ ಶುಕ್ಲ ತ್ರಯೋದಶಿ, ಕಲಿಯುಗ ವರ್ಷ ೫೧೧೨ (೧೯.೧೨.೨೦೧೦) ಈ ದಿನದಂದು ಪೋನಕುಂನಮ್‌ನ ಧರ್ಮಸಭೆ ಯಲ್ಲಿ ಸಮಿತಿಯ ವಿಷಯ ಬಗ್ಗೆ ಪ್ರವಚನ ಮಾಡುವಾಗ ಮಧ್ಯಮಧ್ಯದಲ್ಲಿ ಮಂಡಿಸು ವವನು ಮತ್ತು ಕೇಳುವವನು ನಾನೇ ಆಗಿದ್ದೇನೆ, ಎಲ್ಲವೂ ಏಕರೂಪ ಆದಂತೆ ಅನಿಸುತ್ತಿತ್ತು. ಆ ಸಮಯದಲ್ಲಿ ‘ಸಮಯ ನಿಂತಿದೆ’ ಎಂದು ಅನಿಸುತ್ತಿತ್ತು. ಇದರ ಕಾರಣವೇನು ?
ಪ.ಪೂ. ಡಾಕ್ಟರರು : ಇದುವೇ ಅದ್ವೈತದ ಅನುಭೂತಿಯಾಗಿದೆ ಮತ್ತು ಇದು ಸನಾತನ ಸಂಸ್ಥೆಯ ಮೊದಲನೇ ಅದ್ವೈತದ ಅನುಭೂತಿಯಾಗಿದೆ ಮತ್ತು ಅದು ನಿಮಗೆ ಬಂದಿದೆ. (ಪುಷ್ಯ ಶುಕ್ಲ ಪಾಡ್ಯ, ಕಲಿಯುಗ ವರ್ಷ ೫೧೧೨ (೫.೧.೨೦೧೧))

No comments:

Post a Comment