ಧಾರ್ಮಿಕ ಕೃತಿಗಳ ಶಾಸ್ತ್ರ
ಪೂಜಾ ಉಪಕರಣ : ಪೂಜಾ ಉಪಕರಣಗಳ ಜೋಡಣೆ
ಕೆಲವು ಧಾರ್ಮಿಕ ಕೃತಿಗಳು ಇತರ ಘಟಕಗಳ ಸಹಾಯವಿಲ್ಲದೆ ಪೂರ್ಣವಾಗಲು ಸಾಧ್ಯವಿಲ್ಲ. ಉದಾಹರಣೆಗೆ ದೇವತಾಪೂಜೆಯಲ್ಲಿ ಪೂಜಾ ಸಾಮಗ್ರಿಗಳು ಅವಶ್ಯಕವೇ ಆಗಿವೆ. ಧಾರ್ಮಿಕ ಕೃತಿಗಳಲ್ಲಿ ಸಹಾಯ ಮಾಡುವ ಈ ಘಟಕಗಳು ಧಾರ್ಮಿಕ ಕೃತಿಗಳ ಮಾಧ್ಯಮದಿಂದ ಈಶ್ವರೀ ಕೃಪೆಯು ಪ್ರಾಪ್ತವಾಗಲು ಮಹತ್ವಪೂರ್ಣ ಕೊಂಡಿಯಾಗಿದೆ. ಇದರಿಂದ ಪೂಜಕನಿಗೆ ಆಧ್ಯಾತ್ಮಿಕ ಸ್ತರದ ಲಾಭವಾಗುತ್ತದೆ. ಈ ವಾರದ ಅಂಕಣದಲ್ಲಿ ನಾವು ಗುಲಾಲು, ಚಂದನ ಈ ಪೂಜಾಸಾಮಗ್ರಿಯ ಘಟಕಗಳ ಅಧ್ಯಾತ್ಮಶಾಸ್ತ್ರೀಯ ಮಹತ್ವ ಹಾಗೂ ಅವುಗಳ ವೈಶಿಷ್ಟಗಳ ಬಗ್ಗೆ ಮಾಹಿತಿ ಪಡೆಯೋಣ.
ಗುಲಾಲು
ಗುಲಾಲು ನಮಗೆಲ್ಲಾ ಪರಿಚಿತವಿದೆ. ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಗುಲಾಲಿನಿಂದ ನಿರ್ಮಾಣವಾಗುವ ಗಂಧ ತರಂಗಗಳೆಡೆಗೆ ಬ್ರಹ್ಮಾಂಡದಿಂದ ಶಕ್ತಿತತ್ತ್ವವು ಆಕರ್ಷಿತವಾಗುತ್ತದೆ. ಗುಲಾಲಿನಿಂದ ವಾಯುಮಂಡಲದ ಚೈತನ್ಯಯುಕ್ತ ಸುಪ್ತತರಂಗಗಳು ಪ್ರವಹಿಸಿ ಅದರಿಂದ ಪೂಜಕನಿಗೆ ಲಾಭವಾಗುತ್ತದೆ.
ಚಂದನ
ಚಂದನವನ್ನು ಹಚ್ಚುವ ಉಪಚಾರವು ದೇವತಾ ಪೂಜೆಯ ಐದು ಪ್ರಮುಖ ಉಪಚಾರಗಳಲ್ಲಿ ಒಂದು. ದೇವತೆಗೆ ತಿಲಕವನ್ನು ಹಚ್ಚಲು ಚಂದನವನ್ನು ತೇಯುತ್ತಾರೆ. ಇದನ್ನು ತೇಯುವ ಪದ್ಧತಿಯು ಯೋಗ್ಯವಾಗಿದ್ದರೆ ಆಧ್ಯಾತ್ಮಿಕ ದೃಷ್ಟಿಯಿಂದ ಅಧಿಕ ಲಾಭದಾಯಕವಾಗಲಿದೆ.
ಚಂದನವನ್ನು ತೇಯುವ ಯೋಗ್ಯ ಪದ್ಧತಿ !
ಚಂದನದ ಕೊರಡನ್ನು ಎರಡೂ ಕೈಗಳಿಂದ ತೇಯಬೇಕು. ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಇದಕ್ಕೆ ಮೂರು ಮಹತ್ವದ ಕಾರಣಗಳಿವೆ.
೧. ಮೊದಲನೆಯ ಕಾರಣವೇನೆಂದರೆ ಯಾವುದೇ ಕರ್ಮವು ಸಂಪೂರ್ಣ ಸಫಲವಾಗಲು ಅದಕ್ಕೆ ಶಿವ ಹಾಗೂ ಶಕ್ತಿಯ ಜೊತೆ ನೀಡುವುದು ಅವಶ್ಯಕವಾಗಿದೆ. ಎಡಗೈಯನ್ನು ಶಿವನ ಹಾಗೂ ಬಲಗೈಯನ್ನು ಶಕ್ತಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ.
೨. ಎರಡನೆಯ ಕಾರಣವೇನೆಂದರೆ ಎರಡೂ ಕೈಗಳಿಂದ ಚಂದನವನ್ನು ತೇಯುವುದು ದ್ವೈತದ ಸಕಾಮ ಭಕ್ತಿಯ ಪ್ರತೀಕ. ಸಕಾಮ ಭಕ್ತಿಯ ಅರ್ಥವೆಂದರೆ ಜೀವನದಲ್ಲಿನ ಮನೋಕಾಮನೆಗಳು ಪೂರ್ಣವಾಗಲು ಈಶ್ವರನ ಉಪಾಸನೆಯನ್ನು ಮಾಡುವುದು.
೩. ಮೂರನೆಯ ಕಾರಣವೇನೆಂದರೆ ಎರಡೂ ಕೈಗಳಿಂದ ಚಂದನವನ್ನು ತೇಯುವಾಗ ಶರೀರದ ಒಂದು ವಿಶಿಷ್ಟವಾದ ಮುದ್ರೆಯುಂಟಾಗುತ್ತದೆ. ಈ ಮುದ್ರೆಯ ಕಾರಣದಿಂದ ಶರೀರದ ಮೂರು ನಾಡಿಗಳಲ್ಲಿನ ಸುಷುಮ್ನಾ ನಾಡಿಯು ಕಾರ್ಯ ನಿರತವಾಗುತ್ತದೆ. ಈ ನಾಡಿಯು ಮನುಷ್ಯನ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿದೆ. ತೇಯ್ದ ಚಂದನವನ್ನು ಚಿಕ್ಕ ತಟ್ಟೆಯಲ್ಲಿ ಡುತ್ತಾರೆ. ಇದನ್ನು ಕೈಮೇಲೆ ಎಂದಿಗೂ ಇಡುವುದಿಲ್ಲ. ತೇಯ್ದ ಚಂದನವು ಒಣಗಿದರೂ ಅದರ ಸುಗಂಧವು ಹಾಗೆಯೇ ಇರುತ್ತದೆ. ಈ ಕಾರಣದಿಂದ ದೇವರ ಪ್ರತಿಮೆಗೆ ಹಚ್ಚಲಾಗಿರುವ ಚಂದನವು ಒಣಗಿದರೂ ದೇವರ ತತ್ತ್ವವು ಪ್ರತಿಮೆಯಲ್ಲಿ ಅಧಿಕ ಸಮಯದ ವರೆಗೆ ಇರುತ್ತದೆ.
ಚಂದನವನ್ನು ತೇಯುವಾಗ ಅದಕ್ಕೆ ಅರಿಶಿಣ-ಕುಂಕುಮ ಸೇರಿಸಬೇಕೆ ?
ಅರಿಶಿಣ ಮತ್ತು ಕುಂಕುಮದಿಂದ ರಜೋಗುಣಿ ತರಂಗಗಳು ಪ್ರಕ್ಷೇಪಿತವಾಗುತ್ತವೆ. ಚಂದನವನ್ನು ತೇಯುವಾಗ ಅದರಲ್ಲಿ ಅರಿಶಿಣ - ಕುಂಕುಮವನ್ನು ಸೇರಿಸಿದರೆ ಚಂದನದಲ್ಲಿರುವ ಸತ್ತ್ವಕಣಗಳು ಪರಸ್ಪರ ದೂರವಾಗ ತೊಡಗುತ್ತವೆ. ಈ ಕಾರಣ ದಿಂದ ಚಂದನದ ಸಾತ್ತ್ವಿಕತೆಯು ನಾಶವಾಗುತ್ತದೆ ಹಾಗೂ ಅರಿಶಿಣ ಮತ್ತು ಕುಂಕುಮದ ಕಾರಣದಿಂದಾಗಿ ಚಂದನವು ರಜೋಗುಣಿಯಾಗುತ್ತದೆ. ದೇವತಾತತ್ತ್ವಗಳ ತರಂಗಗಳನ್ನು ಆಕರ್ಷಿಸುವ ಚಂದನದ ಕ್ಷಮತೆಯು ಕಡಿಮೆಯಾಗುತ್ತದೆ. ಇದರಿಂದ ಪೂಜಕನಿಗೆ ಪೂಜೆಯ ಪೂರ್ಣ ಪ್ರಮಾಣದ ಲಾಭವು ದೊರಕುವುದಿಲ್ಲ. ಈ ಕಾರಣದಿಂದ ಚಂದನವನ್ನು ತೇಯುವಾಗ ಅದರಲ್ಲಿ ಅರಿಶಿಣ-ಕುಂಕುಮವನ್ನು ಸೇರಿಸಬಾರದು.

No comments:
Post a Comment