ಹಿಂದೂ ಧರ್ಮಜಾಗೃತಿ ಸಭೆಯ ಕಾಲಾವಧಿಯಲ್ಲಿ ಹಾಗೂ ಪ್ರತ್ಯಕ್ಷವಾಗಿ ನಡೆಯಲಿದ್ದ ಸಭೆಯ ದಿನದಂದು ತುಂಬ ಸೇವೆಯ ಆಯೋಜನೆಯಿದ್ದರೂ ವ್ಯಷ್ಟಿ ಸಾಧನೆಗಾಗಿ ಪ್ರಯತ್ನಗಳಾಗುವುದು
ಹಿಂದೆ ನಮ್ಮದೇನಾದರೂ ಕಾರ್ಯಕ್ರಮ ಅಥವಾ ಹಿಂದೂ ಧರ್ಮಜಾಗೃತಿ ಸಭೆಯಿದ್ದರೆ ಸಾಧಕರಿಂದ ವ್ಯಷ್ಟಿ ಸಾಧನೆಯ ಕಡೆ ಸಂಪೂರ್ಣವಾಗಿ ನಿರ್ಲಕ್ಷವಾಗುತ್ತಿತ್ತು. ಹಾಗೆಯೇ ಸಾಧಕರ ವ್ಯಷ್ಟಿ ಸಾಧನೆಯ ಬಗ್ಗೆ ವಿಚಾರಿಸಿದರೆ, ಅವರು ‘ಸೇವೆ ತುಂಬಾ ಇದ್ದ ಕಾರಣ ಸಮಯ ಸಿಗಲಿಲ್ಲ’, ಎಂದು ಹೇಳುತ್ತಿದ್ದರು. ಆದರೆ ಪೂ. ರಾಜೇಂದ್ರ ದಾದಾರವರು ಶೇಕಡಾ ೬೦ ರಷ್ಟು ಮಟ್ಟ ವನ್ನು ತಲುಪುವುದಕ್ಕಾಗಿ ವ್ಯಷ್ಟಿಯ ಮಹತ್ವವನ್ನು ಎಲ್ಲರಿಗೂ ಹೇಳಿದರು. ಅಂದಿನಿಂದ ಸಾಧಕರಲ್ಲಿ ತಮ್ಮ ವ್ಯಷ್ಟಿ ಸಾಧನೆಯಲ್ಲಿ ಗಾಂಭೀರ್ಯತೆ ತುಂಬ ಹೆಚ್ಚಾಗಿದೆ.
ಹುಬ್ಬಳ್ಳಿ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಪೂ. ರಾಜೇಂದ್ರದಾದಾ ವ್ಯಷ್ಟಿ ಸಾಧನೆಯ ಸಭೆಯನ್ನು ತೆಗೆದುಕೊಂಡರು. ಆಗ ಸಾಧಕರು ಧರ್ಮಜಾಗೃತಿ ಸಭೆಯ ಆರಂಭದಲ್ಲಿ ನಿರ್ಧರಿಸಿದಂತೆ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಂಡರು. ಹಾಗೆಯೇ ಧರ್ಮಜಾಗೃತಿಯ ಸಭೆಯಂದು ಕೂಡ ಅವರಿಂದ ವ್ಯಷ್ಟಿ ಸಾಧನೆಗಾಗಿ ಯಾವ ರೀತಿಯ ಪ್ರಯತ್ನಗಳಾದವು ಎಂಬುದನ್ನು ಈ ಮುಂದೆ ನೀಡಲಾಗಿದೆ.
೧. ಭಾವಜಾಗೃತಿಗಾಗಿ ಪ್ರಯತ್ನಗಳಾದವು.
೨. ಎಂದಿನಂತೆ ಸ್ವಭಾವದೋಷ ತಖ್ತೆಯನ್ನು ಬರೆಯಲಾಯಿತು.
೩. ಸೇವೆ ತುಂಬ ಇದ್ದರೂ ಸ್ವಯಂ ಸೂಚನೆಗಳು ಪೂರ್ಣಗೊಂಡವು.
೪. ಕಲಿಯಲು ಸಿಕ್ಕಿದ ಅಂಶಗಳನ್ನು ಕೂಡ ಬರೆದರು. ಪ್ರಾಮಾಣಿಕವಾಗಿ ಹೇಳಿದರು ಹಾಗೂ ‘ಇನ್ನು ಮುಂದೆ ನಿರ್ಧರಿಸಿದ ಹಾಗೆ ಎಲ್ಲವನ್ನೂ ಮಾಡುತ್ತೇವೆ’, ಎಂದು ಕೂಡ ಹೇಳಿದರು. ಇದರಿಂದ ಅವರ ವ್ಯಷ್ಟಿ ಸಾಧನೆಯ ಬಗೆಗಿನ ಪ್ರಯತ್ನವು ಚೆನ್ನಾಗಿ ಆಗುತ್ತಿದೆ ಎಂದು ತಿಳಿದು ಬಂದಿತು.
ವ್ಯಷ್ಟಿ ಸಾಧನೆಯ ಮಹತ್ವವು ತಿಳಿದ ಕಾರಣ ಸಾಧಕರ ಸಂಖ್ಯೆ ಕಡಿಮೆಯಿದ್ದರೂ ಎಲ್ಲಾ ಸಾಧಕರು ಸೇವೆಯನ್ನು ಭಾವಪೂರ್ಣ ಹಾಗೂ ಪರಿಪೂರ್ಣವಾಗಿ ಮಾಡಲು ಪ್ರಯತ್ನಿಸಿದ್ದರಿಂದ ತುಂಬಾ ಆನಂದ ಸಿಗುವುದು ಹಾಗೂ ಸಾಧಕರ ಫಲನಿಷ್ಪತ್ತಿ ಹೆಚ್ಚಾಗುವುದು
ಪೂ. ರಾಜೇಂದ್ರದಾದಾರವರು ಈ ಸಾಧಕರನ್ನು ‘ಇಲ್ಲಿಯ ವರೆಗೂ ಬಹಳ ಸೇವೆ ಇದ್ದುದರಿಂದ ಸಭೆಯ ಕಾಲಾವಧಿಯಲ್ಲಿ ನಿಮ್ಮಿಂದ ಯಾವುದೇ ಪ್ರಯತ್ನಗಳು ಆಗುತ್ತಿರಲಿಲ್ಲ, ಈಗ ಅದು ಹೇಗಾಯಿತು ?’ ಎಂದು ಪ್ರಶ್ನಿಸಿದರು. ಆಗ ಅಲ್ಲಿದ್ದ ಓರ್ವ ಸಾಧಕಿಯು ‘ಹಿಂದೆ ಸಮಯವಿರುತ್ತಿರಲಿಲ್ಲ ಎಂದಲ್ಲ, ಆದರೆ ನಮ್ಮಲ್ಲಿ ಅದನ್ನು ಮಾಡಬೇಕು ಎಂಬ ತಳಮಳ ಕಡಿಮೆಯಿತ್ತು; ಆದುದರಿಂದ ಅದು ಆಗುತ್ತಿರಲಿಲ್ಲ’ ಎಂದರು. ವ್ಯಷ್ಟಿ ಸಾಧನೆಯ ಮಹತ್ವ ಅರಿವಾಗಿರುವುದರಿಂದ ಸಾಧಕರ ಸಂಖ್ಯೆ ಕಡಿಮೆಯಿದ್ದರೂ ಎಲ್ಲ ಸಾಧಕರು ಸೇವೆಯನ್ನು ಭಾವಪೂರ್ಣ ಹಾಗೂ ಪರಿಪೂರ್ಣವಾಗಿ ಮಾಡಲು ಪ್ರಯತ್ನಿಸಿದ್ದಾರೆ. ಇದರಿಂದ ಅವರಿಗೆ ತುಂಬಾ ಆನಂದ ಸಿಕ್ಕಿತು ಹಾಗೂ ಸಾಧಕರ ಫಲನಿಷ್ಪತ್ತಿಯೂ ಹೆಚ್ಚಾಗಿದೆ. ಹಾಗೆಯೇ ನಾವು ೧ ಹೆಜ್ಜೆ ಮುಂದಿಟ್ಟ ನಂತರ ದೇವರು ೧೦ ಹೆಜ್ಜೆ ಮುಂದೆ ಹೇಗೆ ಕರೆದೊಯ್ಯುತ್ತಾನೆ ಎಂಬ ಅನುಭೂತಿಯು ಎಲ್ಲ ಸಾಧಕರಿಗೆ ಬಂದಿತು.’ - ಕು. ಪ್ರಿಯಾಂಕಾ ಸ್ವಾಮಿ, ಮಂಗಳೂರು
No comments:
Post a Comment