ಸದ್ಯದ ರಾಜಕಾರಣಿಗಳ ಅಸ್ತಿತ್ವರಹಿತ ಆಡಳಿತದಿಂದಾಗಿ ಜನರನ್ನು ಅಂಗವಿಕಲರನ್ನಾಗಿಸುವುದು, ಅದರಿಂದ ಜನರಿಗೆ ತಮ್ಮನ್ನು ತಾವು ಸಂಭಾಳಿಸಿಕೊಳ್ಳಲು ಕಠಿಣವಾಗಿ ಅವರ ಕೈಯಿಂದ ರಾಷ್ಟ್ರ ಹಾಗೂ ಧರ್ಮದ ಉತ್ಥಾಪನೆಯ ಕಾರ್ಯವು ಮಹಾಕಠಿಣಕರ್ಮವಾಗಿರುತ್ತದೆ ಎಂಬುದನ್ನು ನಿಖರವಾಗಿ ತೋರಿಸುವಂತಹ ಪ.ಪೂ. ಡಾಕ್ಟರರ ಉದ್ಗಾರ !
೧. ಡಾ. ಆಠವಲೆ : ಭಾರತದ ಪ್ರಧಾನಮಂತ್ರಿಗಳ ಇತಿಹಾಸ
೨. ಓರ್ವ ವಿದ್ವಾಂಸರು೨ ಅ. ಸಂಪತ್ಕಾಲದಲ್ಲಿನ ಪೀಳಿಗೆಯು ಕರ್ಮಯೋಗ ಪ್ರಧಾನವಾಗಿರುವುದ ರಿಂದ ಆಯಾ ಕಾಲದಲ್ಲಿನ ಪ್ರಧಾನ ಮಂತ್ರಿಗಳ ಆಡಳಿತ ಯಶಸ್ವಿಯಾಗಿರು ವುದು, ಆದರೆ ಆಪತ್ಕಾಲದಲ್ಲಿ ಮಾತ್ರ ಚಿತ್ರಣವು ಬದಲಾಗಿರುತ್ತದೆ; ಆದರೆ ಈ ಕಾಲದ ಪ್ರಧಾನಮಂತ್ರಿಗಳ ಆಡಳಿತ ರಜ-ತಮದ ಮೇಲಾಧಾರಿತವಾಗಿರು ವುದರಿಂದ ಅಪಯಶಸ್ವಿಯಾಗಿರುವುದು
೨ ಅ ೧ ಅ. ಪ್ರತಿಯೊಂದು ವಿಷಯದಲ್ಲಿ ಯಶಸ್ಸು ಸಿಗುವುದು : ಸಂಪತ್ಕಾಲ ದಲ್ಲಿ ಆಡಳಿತವು ಯಶಸ್ವಿಯಾಗುತ್ತದೆ. ಏಕೆಂದರೆ ಪ್ರತಿಯೊಂದು ವಿಷಯಕ್ಕೆ ಕಾಲದ ಅನುಕೂಲತೆ ಪ್ರಾಪ್ತವಾದುದರಿಂದ ಪ್ರತಿ ಯೊಂದು ವಿಷಯದಲ್ಲಿ ಯಶಸ್ಸು ಸಿಗುತ್ತದೆ.
೨ ಅ ೧ ಆ. ಲಾಲಬಹಾದ್ದೂರ ಶಾಸ್ತ್ರೀಯವರು ಕರ್ಮಯೋಗಿ ಆಗಿ ದ್ದರಿಂದ ಅವರಿಗಿದ್ದ ಜನಕಲ್ಯಾಣದ ತಳಮಳ ದಿಂದಾಗಿ ಅವರ ಆಡಳಿತವು ಯಶಸ್ವಿ ಯಾಗಿರುವುದು : ಈ ಕಾಲದಲ್ಲಿ ಜನಿಸಿದ ಪೀಳಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರ್ಮಯೋಗಧಾರಣೆಯಿದ್ದುದರಿಂದ ಅವರಿಗೆ ಸಮಾಜಕಾರ್ಯದ ಬಗ್ಗೆ ಒಳಗಿ ನಿಂದಲೇ ಆಸಕ್ತಿಯು ಅನಿಸುತ್ತಿದ್ದುದರಿಂದ ಅವರು ರಾಷ್ಟ್ರದ ಬಗ್ಗೆ ಕಲ್ಯಾಣಕಾರಿ ಕಾರ್ಯ ಮಾಡಬಲ್ಲರು. ಲಾಲಬಹಾದ್ದೂರ ಶಾಸ್ತ್ರೀಯ ವರದ್ದೂ ಅದೇ ರೀತಿಯಾಯಿತು. ಅವರು ಕರ್ಮಯೋಗಿಯಾಗಿದ್ದರು. ಅವರಲ್ಲಿ ಜನ ಕಲ್ಯಾಣದ ತಳಮಳವಿತ್ತು. ಹಾಗೆಯೇ ಅವರು ಆಚಾರನಿಷ್ಠರಾಗಿದ್ದುದರಿಂದ ಅವರಿಗೆ ತಮ್ಮ ಕಾರ್ಯದಲ್ಲಿ ಯಶಸ್ಸು ಪ್ರಾಪ್ತವಾಯಿತು.
೨ ಅ ೧ ಈ. ಇಂದಿರಾ ಗಾಂಧಿಯ ವರ ವೈಶಿಷ್ಟ್ಯವೇನೆಂದರೆ ನೇತೃತ್ವಗುಣ : ಇಂದಿರಾ ಗಾಂಧಿಯವರ ಕಾರ್ಯದಲ್ಲಿ ಆಚಾರನಿಷ್ಠೆಯ ಭಾಗವು ಕಡಿಮೆಯಿದ್ದರೂ ಅವರಲ್ಲಿ ನೇತೃತ್ವಗುಣವು ಪ್ರಬಲವಾಗಿತ್ತು. ಹಾಗಾಗಿ ಯಾವುದಾರೊಂದು ವಿಳಂಬ ಗೊಂಡಿರುವ ಕಾರ್ಯದಲ್ಲಿ ತಕ್ಷಣ ನಿರ್ಣಯ ತೆಗೆದುಕೊಳ್ಳುವ ಕ್ಷಮತೆಯಿದ್ದುದರಿಂದ ಇವರ ಆಡಳಿತದಲ್ಲಿ ರಾಷ್ಟ್ರದ ಅನೇಕ ಸಮಸ್ಯೆ ಗಳು ಪರಿಹಾರಗೊಂಡವು ಮತ್ತು ಅವರು ಆಯಾ ಸ್ತರದಲ್ಲಿ ಮುಂದಿನ ರಾಷ್ಟ್ರೋತ್ಕರ್ಷದ ಪ್ರಕ್ರಿಯೆಯು ಪ್ರಾರಂಭವಾಯಿತು.
ಅ ೧ ಈ. ನಿಷ್ಕರ್ಷ
ಹಾಗಾಗಿಯೇ ಈ ಕಾಲದಲ್ಲಿ ಕರ್ಮ ಯೋಗವನ್ನು ಪುರಸ್ಕರಿಸುವ ಪ್ರಧಾನ ಮಂತ್ರಿಗಳ ಆಡಳಿತ ಯಶಸ್ವಿಯೆನಿಸಿತು.
೨ ಆ. ಸಂಪತ್ಕಾಲದ ಅಂತ್ಯ ಮತ್ತು ಆಪತ್ಕಾಲ ಆರಂಭವಾದುದರಿಂದ ಪ್ರತಿಯೊಂದು ವಿಷಯದಲ್ಲಿ ಯಶಸ್ಸು ಸಿಗುವ ಪ್ರಮಾಣ ಕಡಿಮೆಯಾಯಿತು ಹಾಗೂ ಈ ಕಾಲದಲ್ಲಿ ರಜ-ತಮದ ಧಾರಣೆ ಯಿಂದ ತುಂಬಿದ ಪ್ರಧಾನಮಂತ್ರಿಗಳು ರಾಷ್ಟ್ರಕ್ಕೆ ಲಭಿಸಿದುದರಿಂದ ರಾಷ್ಟ್ರಕ್ಕೆ ಹಾನಿ ಆಯಿತು.
೨ ಆ ೧. ವಿದೇಶಿ ಭೋಗವಾದವನ್ನು ಪುರಸ್ಕರಿಸುವ ಪೀಳಿಗೆಯು ನಿರ್ಮಾಣ ವಾದವು : ಕಾಲವು ಬದಲಾದಂತೆ ವಾತಾವರಣದಲ್ಲಿನ ರಜ-ತಮ ಹೆಚ್ಚಾಯಿತು ಮತ್ತು ಎಲ್ಲೆಡೆಗಳಲ್ಲಿ ಸಂಪತ್ಕಾಲ ಮುಗಿ ಯುತ್ತಿರುವುದರ ಸೂಚನೆಗಳು ಕಾಣಿಸ ತೊಡಗಿದವು. ಈ ಕಾಲದಲ್ಲಿ ಜನಿಸಿದ ಪೀಳಿಗೆಯು ಕರ್ಮಧಾರಣೆಗಿಂತ ವಿದೇಶಿ ಭೋಗವಾದವನ್ನು ಪುರಸ್ಕರಿಸುವಂತಹ ದ್ದಾಯಿತು.
೨ ಆ ೨. ವಿಜ್ಞಾನವಾದವು ಉದಯಿ ಸಿದುದರಿಂದ ಧರ್ಮವಾದವು ಹಿಂದೆ ಬೀಳುವುದು, ಇದರಿಂದ ಈ ಕಾಲದ ರಜ- ತಮಯುಕ್ತ ಧಾರಣೆಯಿಂದ ತುಂಬಿದ ಪ್ರಧಾನಮಂತ್ರಿಗಳ ಆಡಳಿತ ಅಪಯಶಸ್ವಿ ಯಾಯಿತು : ಈ ಕಾಲದಲ್ಲಿ ವಿಜ್ಞಾನ ವಾದವು ಉದಯಿಸಿ ಧರ್ಮವಾದವು ಹಿಂದೆ ಉಳಿಯಿತು ಮತ್ತು ಸಮಾಜದ ಸಾತ್ತ್ವಿಕತೆಯ ಸ್ತರವು ಹಿಂದೆ ಉಳಿಯಿತು. ಈ ಕಾಲದಲ್ಲಿ ರಜ-ತಮ ಧಾರಣೆಯಿಂದ ಯುಕ್ತವಾಗಿರುವ ಪ್ರಧಾನಮಂತ್ರಿಗಳು ನೇಮಿಸಲ್ಪಟ್ಟು ರಾಜ್ಯಾಧಿಕಾರವು ನೈತಿಕ ಮೌಲ್ಯ ರಹಿತವಾಗಿ ಅದು ಅಪಯಶಸ್ವಿ ಆಡಳಿತವೆನ್ನಲು ಅರ್ಹವಾಯಿತು.
೨ ಆ ೩. ಅಸುರೀ ರಾಜ್ಯದ ಅಡಿ ಪಾಯ ರಚಿಸಲ್ಪಡುವುದು : ಇದೇ ಕಾಲ ದಲ್ಲಿ ಆಸುರೀ ರಾಜ್ಯದ ಅಡಿಪಾಯ ಹಾಕ ಲ್ಪಟ್ಟಿತು. ಅಪಯಶಸ್ವಿ ಆಡಳಿತದಲ್ಲಿ ರಾಷ್ಟ್ರ ಹಾಗೂ ಸಮಾಜವು ಕೆಟ್ಟ ಶಕ್ತಿಗಳ ಪ್ರಕೋಪಕ್ಕೆ ಬಲಿಯಾಗುತ್ತದೆ. ಕೆಟ್ಟ ಶಕ್ತಿಗಳ ಹಿಡಿತಕ್ಕೆ ಸಿಕ್ಕಿದ ಸಾಮಾನ್ಯ ಜನರು ದುರ್ಜನರಂತೆ ವ್ಯವಹರಿಸತೊಡಗುತ್ತಾರೆ. ಈ ಕಾಲದಲ್ಲಿ ಹಾಗೆಯೇ ಘಟಿಸುತ್ತಾ ಹೋಯಿತು.
೨ ಆ ೪. ರಾಜ್ಯಾಡಳಿತದಲ್ಲಿಯೂ ಅರಾಜಕತೆಯು ಪ್ರಾರಂಭವಾಗುವುದು : ಕಾಲ ಕಳೆದಂತೆ ರಾಜ್ಯಾಡಳಿತದಲ್ಲಿಯೂ ಅರಾಜಕತೆಯು ಪ್ರಾರಂಭವಾಯಿತು ಮತ್ತು ಸಂಪೂರ್ಣ ರಾಜ್ಯದಲ್ಲಿ ರಜತಮಾತ್ಮಕ ಪದ್ಧತಿಯಿಂದ ಕಾರ್ಯ ನಡೆಯ ತೊಡಗಿದುದರಿಂದ ಪ್ರಜಾಪ್ರಭುತ್ವದ ಮೇಲೆ ಅದರ ಪರಿಣಾಮವಾಗಿ ಅದರಿಂದ ರಾಷ್ಟ್ರ ಮತ್ತು ಧರ್ಮವು ರಸಾತಳಕ್ಕೆ ಹೋಗತೊಡಗಿತು.
೨ ಇ. ಘೋರ ಆಪತ್ಕಾಲದಲ್ಲಿ ಪ್ರಧಾನ ಮಂತ್ರಿಗಳ ಅಸ್ತಿತ್ವರಹಿತ ಆಡಳಿತದಿಂದಾಗಿ ಜನ ತೆಯು ಪೂರ್ಣವಾಗಿ ಅಂಗವಿಕಲವಾಗುವುದು ಮತ್ತು ಅದರ ಕಾರಣಗಳು೨ ಇ ೧. ರಾಷ್ಟ್ರದ ಮೇಲೆ ಕೆಟ್ಟ ಶಕ್ತಿಗಳ ಅಧಿಪತ್ಯ ಪ್ರಾರಂಭ ವಾಗುವುದು : ಘೋರ ಆಪತ್ಕಾಲದಲ್ಲಿ ಧರ್ಮವು ಅಲ್ಪವಾಗುತ್ತಾ ಬರುತ್ತದೆ ಮತ್ತು ಅರಾಜಕತೆಯು ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ಸಮಾಜದಲ್ಲಿ ಹಾಗೂ ರಾಷ್ಟ್ರದಲ್ಲಿ ಕೆಟ್ಟ ಶಕ್ತಿಗಳ ಅಧಿಪತ್ಯವು ಪ್ರಾರಂಭ ವಾಗುತ್ತದೆ.
೨ ಇ ೨. ಪ್ರಧಾನ ಮಂತ್ರಿಗಳು ಕೆಟ್ಟ ಶಕ್ತಿ ಗಳ ಕೈಗೊಂಬೆಯಾಗುವುದು : ಕೆಟ್ಟ ಶಕ್ತಿಗಳ ಕೈಗೊಂಬೆಯಾಗಿ ರಾಜ್ಯಾಡಳಿತ ಪ್ರಾರಂಭವಾದುದರಿಂದ ಸದ್ಯದ ಪ್ರಧಾನ ಮಂತ್ರಿಗಳ ಹಾಗೂ ಇತರ ಶಾಸಕರ, ನಗರ ಸೇವಕರ ಆಡಳಿತ ಅಸ್ತಿತ್ವರಹಿತವಾಗಿದೆ.
೨ ಇ ೩. ಅಸ್ತಿತ್ವರಹಿತ ಆಡಳಿತದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವೀ ಸಾಮ್ರಾಜ್ಯ ಶಾಹಿಯು ಉದಯಿಸುವುದು : ಅಸ್ತಿತ್ವ ರಹಿತ ಆಡಳಿತದಲ್ಲಿ ಯಾರಿಗೂ ಏನೂ ಮಾಡಲಾಗುವುದಿಲ್ಲ. ಇಂತಹ ನಿಷ್ಕಿ ಯ ಕಾರ್ಯದಿಂದ ರಾಜ್ಯಾಡಳಿತದಲ್ಲಿರುವ ನೈತಿ ಕತೆಯು ಲೋಪವಾಗುತ್ತದೆ ಮತ್ತು ಇಲ್ಲಿಯೇ ಕೆಟ್ಟ ಶಕ್ತಿಗಳ ಪ್ರಭಾವೀ ಸಾಮ್ರಾಜ್ಯ ಶಾಹಿಯು ಉದಯಿಸುತ್ತದೆ. ಈ ಪ್ರಕ್ರಿ ಯೆಯು ಸಮಾಜಕಲ್ಯಾಣಕ್ಕೆ ಅತ್ಯಂತ ಅಪಾಯಕಾರಿಯಾಗಿರುತ್ತದೆ.
೨ ಇ ೪. ಧರ್ಮಕ್ಕೆ ಗ್ಲಾನಿಯುಂಟಾಗು ವುದು : ಅಸ್ತಿತ್ವರಹಿತ ರಾಜ್ಯಾಡಳಿತದಲ್ಲಿ ರಾಷ್ಟ್ರವು ಎಲ್ಲ ಸ್ತರಗಳಲ್ಲಿ ಉದಾಸೀನವಾಗು ತ್ತದೆ. ಉದಾಸೀನ ಆಡಳಿತದಿಂದ ಪ್ರಜೆ ಗಳೂ ನಿಷ್ಕಿ ಯರಾಗಿರುವುದರಿಂದ ಕೆಟ್ಟ ಶಕ್ತಿಗಳಿಗೆ ತುಂಬಾ ಒಳ್ಳೆಯದಾಗುತ್ತದೆ. ಮತ್ತು ಎಲ್ಲೆಡೆಗಳಲ್ಲಿ ಅವರ ರಾಜ್ಯಾಡಳಿತ ನಡೆದು ಧರ್ಮಕ್ಕೆ ಗ್ಲಾನಿ ಬರತೊಡಗುತ್ತದೆ.
೨ ಇ ೫. ವಿಚಾರಗಳಲ್ಲಿರುವ ಜಾಜ್ವಲ್ಯತೆಯು ಮುಗಿದು ಹೋಗಿರುವುದ ರಿಂದ ಮನುಷ್ಯರಲ್ಲಿರುವ ಕ್ಷಾತ್ರತೇಜ, ಪರಿಣಾಮವಾಗಿ ಧರ್ಮತೇಜವು ಲೋಪ ವಾಗುತ್ತದೆ ಮತ್ತು ಮನುಷ್ಯರ ಮನುಷ್ಯ ತ್ವವೇ ಇಲ್ಲವಾಗಿ ಮನುಷ್ಯನು ಪಶುವಾ ಗುವುದು : ಧರ್ಮಕ್ಕೆ ಗ್ಲಾನಿ ಬಂದುದರ ಪರಿ ಣಾಮವೆಂದು ರಾಷ್ಟ್ರವು ವಿನಾಶದ ಅಂಚಿಗೆ ಹೋಗುತ್ತದೆ. ಹಿಂದೂ ಗಳಲ್ಲಿರುವ ಹಿಂದುತ್ವವು ಮುಗಿದು ಹೋಗುತ್ತದೆ. ಹಿಂದೂ ಧರ್ಮಾ ಭಿಮಾನ ಮುಗಿದು ಹೋಗಿರುವುದರಿಂದ ವಿಚಾರಗಳಲ್ಲಿರುವ ಜಾಜ್ವಲ್ಯತೆಯು ಮುಗಿ ಯುತ್ತದೆ. ವಿಚಾರ ಗಳಲ್ಲಿರುವ ಜಾಜ್ವಲ್ಯ ತೆಯು ಮುಗಿದಾಗ ಮನುಷ್ಯನಲ್ಲಿರುವ ಕ್ಷಾತ್ರತೇಜ ಪರಿಣಾಮ ವಾಗಿ ಧರ್ಮತೇಜ ಲೋಪವಾಗಿ ಮನುಷ್ಯನ ಮನುಷ್ಯತ್ವ ಮುಗಿಯು ತ್ತದೆ ಮತ್ತು ಮನುಷ್ಯನು ಪಶುವಾಗುತ್ತಾನೆ.
೨ ಇ ೬. ಅಸ್ತಿತ್ವ ರಹಿತ ಎಂದರೆ ಯಾವುದಾದರೊಂದು ಜೀವವನ್ನು ಕೆಟ್ಟ ಶಕ್ತಿ ಗಳು ಸಂಪೂರ್ಣವಾಗಿ ವಶ ಪಡಿಸಿಕೊಂಡಿ ರುವುದರಿಂದ ಅದರ ಅಸ್ತಿತ್ವವು ಮುಕ್ತಾಯವಾಗುವುದು : ಸದ್ಯದ ಕಾಂಗ್ರೆಸ್ ಕಾರ್ಯಕರ್ತರ ಅಸ್ತಿತ್ವರಹಿತ ಆಡಳಿತದಿಂದ ಮನುಷ್ಯನು ಪಶುವಿನಂತೆ ವರ್ತಿಸತೊಡಗಿದನು. ಅಸ್ತಿತ್ವರಹಿತ ಅಂದರೆ ಆ ಜೀವವನ್ನು ಕೆಟ್ಟ ಶಕ್ತಿಗಳು ಸಂಪೂರ್ಣ ವಾಗಿ ವಶಪಡಿಸಿಕೊಂಡಿರುವುದರಿಂದ ಆ ಜೀವದ ಅಸ್ತಿತ್ವವೇ ಮುಕ್ತಾಯವಾಗುವುದು.
೨ ಇ ೭. ಸದ್ಯದ ರಾಜಕಾರಣವು ಅಸ್ತಿತ್ವರಹಿತ ಜನರಿಂದ ತುಂಬಿದೆ ಮತ್ತು ಭಾರವಾಗಿರುವುದರಿಂದ ಭಾರತದಲ್ಲಿ ಧರ್ಮದ ವರ್ಚಸ್ಸು ಲೋಪವಾಗುವುದು : ಸದ್ಯದ ರಾಜಕಾರಣವು ಇಂತಹದ್ದೇ ಅಸ್ತಿತ್ವ ರಹಿತ ಜನರಿಂದ ತುಂಬಿದೆ ಮತ್ತು ಭಾರ ವಾಗಿದೆ. ಇದರ ಪ್ರಭಾವವು ಎಷ್ಟು ಪ್ರಚಂಡ ವಾಗಿದೆ ಎಂದರೆ ಹಿಂದುತ್ವವನ್ನು ಪುರಸ್ಕರಿ ಸುವ ಸಾಮಾನ್ಯವರ್ಗವೂ ಅವರ ಎಂಜಲು ನೆಕ್ಕುವ ಬೆಕ್ಕಿನಂತಾಗಿವೆ. ಇದರಿಂದ ಭಾರತ ದಲ್ಲಿ ಧರ್ಮದ ವರ್ಚಸ್ಸು ಲೋಪವಾಗಿ ಬಿಟ್ಟಿದೆ.
೨ ಇ ೮. ಅಸ್ತಿತ್ವರಹಿತ ಆಡಳಿತದಲ್ಲಿ ಸಾಮಾನ್ಯ ಜನರ ಸ್ಥಿತಿ ತ್ರಿಶಂಕು ವಿನಂತಾಗುವುದು : ಅಸ್ತಿತ್ವರಹಿತ ಆಡಳಿತ ದಲ್ಲಿ ಸಾಮಾನ್ಯ ಜನರ ಸ್ಥಿತಿಯು ತ್ರಿಶಂಕು ವಿನಂತಾಗುತ್ತದೆ. ಈ ಅವಸ್ಥೆಯು ಜಯ- ಅಪಜಯಗಳಂತಹ ನಿರ್ಣಾಯಕ ಫಲಿತಾಂಶ ವನ್ನು ಯಾವುದೇ ವಿಷಯದಲ್ಲಿ ನೀಡದೇ ಅತೀಭಯಂಕರವಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಮನಸ್ಸು ನಿಸ್ತೇಜಗೊಂಡು ಮನುಷ್ಯನಲ್ಲಿರುವ ಚೇತನಾಶಕ್ತಿಯ ಅಪಹಾಸ್ಯವಾಗಿ ಮನುಷ್ಯನಿಗೆ ಜೀವನದಲ್ಲಿ ಏನೂ ಮಾಡಲು ಸಾಧ್ಯವಾಗುವುದಿಲ್ಲ.
೨ ಇ ೯. ಇಂದಿನ ರಾಜಕಾರಣಿಗಳು ಅಸ್ತಿತ್ವರಹಿತ ಆಡಳಿತದಿಂದ ಮನುಷ್ಯರನ್ನು ಅಂಗವಿಕಲರನ್ನಾಗಿಸುವುದು : ಸದ್ಯದ ರಾಜಕಾರಣಿಗಳು ಅಸ್ತಿತ್ವರಹಿತ ಆಡಳಿತ ದಿಂದಾಗಿ ಮನುಷ್ಯನನ್ನು ಅಂಗವಿಕಲರ ನ್ನಾಗಿಸಿ ಬಿಟ್ಟಿದ್ದಾರೆ. ಅಂಗವೈಕಲ್ಯದಿಂದ ಈಗ ಅವನಿಗೆ ತನ್ನನ್ನು ಸಂಭಾಳಿಸಲು ಕಠಿಣ ವಾಗಿರುವುದರಿಂದ ಅವನಿಂದ ರಾಷ್ಟ್ರದ ಹಾಗೂ ಧರ್ಮದ ಪುನರುತ್ಥಾನದ ಕಾರ್ಯ ವಾಗುವುದು ಮಹಾಕಠಿಣವಾಗಿರುತ್ತದೆ ಮತ್ತು ನಿರ್ಧಿಷ್ಟವಾಗಿ ಇದನ್ನೇ ಪ.ಪೂ. ಡಾಕ್ಟರರಿಗೆ ಇದರಿಂದ ತೋರಿಸಬೇಕಾಗಿದೆ. (ಸೌ. ಅಂಜಲಿ ಗಾಡಗೀಳರ ಮಾಧ್ಯಮ ದಿಂದ, ಮಾರ್ಗಶಿರ ಶುಕ್ಲ ನವಮಿ, ಕಲಿ ಯುಗ ವರ್ಷ ೫೧೧೨ (೧೫.೧೨. ೨೦೧೦) ರಾತ್ರಿ ೮.೨೮)


No comments:
Post a Comment