ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ....

ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ ಉಪಚಾರಗಳಲ್ಲಿ ೯. ಗಂಧವನ್ನು ಹಚ್ಚುವುದು, ೧೦. ಹೂವುಗಳನ್ನು ಅರ್ಪಿಸುವುದು, ೧೧. ಧೂಪವನ್ನು ತೋರಿಸುವುದು, ೧೨. ದೀಪವನ್ನು ಬೆಳಗುವುದು, ೧೩. ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ. (ಮುಂದುವರಿದ ಭಾಗ)
ಅ ೧. ಯಾವ ದೇವತೆಗೆ ಯಾವ ಹೂವುಗಳನ್ನು ಅರ್ಪಿಸಬೇಕು ? : ಇದರ ಕೆಲವು ಉದಾಹರಣೆಗಳನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.
೨ ಆ ೨ ಆ. ದೇವತೆಗಳಿಗೆ ಹೂವುಗಳನ್ನು ವಿಶಿಷ್ಟ ಸಂಖ್ಯೆಯಲ್ಲಿ ಮತ್ತು ವಿಶಿಷ್ಟ ರಚನೆಯಲ್ಲಿ ಏಕೆ ಅರ್ಪಿಸ ಬೇಕು ? : ದೇವತೆಯಿಂದ ಪ್ರಕ್ಷೇಪಿತವಾ ಗುವ ಲಹರಿಗಳು ದೇವತೆಯ ತತ್ತ್ವವನ್ನು ದರ್ಶಿಸುವ ಹೂವುಗಳ ಸಂಖ್ಯೆ ಮತ್ತು ಆ ತತ್ತ್ವಕ್ಕೆ ಸಂಬಂಧಿಸಿದ ಹೂವುಗಳ ವಿಶಿಷ್ಟ ರಚನೆಯಿಂದ ದೇವತೆಯ ಕಾರ್ಯನಿರತ ಲಹರಿಗಳನ್ನು ಆ ಹೂವುಗಳ ಆಕೃತಿಬಂಧ ದಲ್ಲಿ ಹಿಡಿದಿಟ್ಟುಕೊಂಡು ಅವಶ್ಯಕತೆಗನು ಸಾರ ಹೂವುಗಳ ಪರಿಮಳದ ಕಣಗಳಿಂದ ಪ್ರಕ್ಷೇಪಿಸಲು ಸಹಾಯವಾಗುತ್ತದೆ. ಆಯಾಯ ಹೂವುಗಳ ವಿಶಿಷ್ಟ ಸಂಖ್ಯೆಯ ಕಡೆಗೆ ಆಯಾಯ ದೇವತೆಯ ತತ್ತ್ವವು ಬೇಗನೇ ಆಕರ್ಷಿತವಾಗುತ್ತದೆ.
- ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೧. ೨೦೦೫, ಮಧ್ಯಾಹ್ನ ೩.೪೪)
೨ ಆ ೨ ಇ. ದೇವತೆಗಳಿಗೆ ಹೂವು ಗಳನ್ನು ಅರ್ಪಿಸುವಾಗ ಅವುಗಳ ತೊಟ್ಟು ದೇವತೆಗಳ ಕಡೆಗೆ ಏಕೆ ಇರಬೇಕು ? : ದೇವತೆಗಳಿಗೆ ಹೂವುಗಳನ್ನು ಅರ್ಪಿಸುವಾಗ ಹೂವಿನ ತೊಟ್ಟು ದೇವತೆಗಳ ಕಡೆಗೆ ಮತ್ತು ಎಸಳುಗಳು ನಮ್ಮ ಕಡೆಗೆ ಬರುವಂತೆ ಅರ್ಪಿಸ ಬೇಕು. ಹೂವುಗಳ ತೊಟ್ಟು   ತನ್ನಲ್ಲಿ ಆಕರ್ಷಿಸಿದ ದೇವತೆಗಳ ಲಹರಿಗಳಲ್ಲಿ ನಿರ್ಗುಣ ಲಹರಿ ಗಳು ಹೆಚ್ಚು ಪ್ರಮಾಣದಲ್ಲಿರುತ್ತದೆ. ಈ ನಿರ್ಗುಣ ಲಹರಿಗಳು ಹೂವು ಗಳ ಮೊಳಕೆ ಮತ್ತು ಎಸಳುಗಳಲ್ಲಿ ಪ್ರವೇಶ ಮಾಡುವಾಗ ಅವುಗಳ ಲ್ಲಿರುವ (ಮೊಳಕೆ ಮತ್ತು ಎಸಳು ಗಳಲ್ಲಿರುವ) ಸುಗಂಧದ ಮತ್ತು ಬಣ್ಣದ ಕಣಗಳ ಚಲನವಲನ ಗಳಿಂದ ಹಾಗೂ ಪೃಥ್ವಿ ಮತ್ತು ಆಪತತ್ತ್ವಗಳ ಸಹಾಯದಿಂದಾಗಿ ಸಗುಣ ಲಹರಿಗಳಲ್ಲಿ ರೂಪಾಂತರವಾಗುತ್ತವೆ. ಈ ಸಗುಣ ಲಹರಿ ಗಳು ಮೊಳಕೆ ಮತ್ತು ಎಸಳುಗಳಲ್ಲಿರುವ ಸುಗಂಧದ ಮತ್ತು ಬಣ್ಣದ ಕಣಗಳ ಮಾಧ್ಯಮದಿಂದ ಜೀವದೆಡೆಗೆ ಪ್ರಕ್ಷೇಪಿಸಲ್ಪ ಡುತ್ತವೆ. ಜೀವದ ಸ್ಥೂಲ ದೇಹವು ಪೃಥ್ವಿ ಮತ್ತು ಆಪತತ್ತ್ವಗಳ ಸಹಾಯದಿಂದ ನಿರ್ಮಾಣವಾಗಿರುವುದರಿಂದ ಬಣ್ಣದ ಮತ್ತು ಸುಗಂಧದ ಕಣಗಳ ಮಾಧ್ಯಮದಿಂದ ಪ್ರಕ್ಷೇಪಿತವಾಗುವ ಲಹರಿಗಳನ್ನು ಜೀವವು ಬೇಗನೇ ಗ್ರಹಿಸಬಲ್ಲದು. ಈ ಲಹರಿಗಳು ಪೃಥ್ವಿ ಮತ್ತು ಆಪ ತತ್ತ್ವಗಳಿಗೆ ಸಂಬಂಧಿ ಸಿರುವುದರಿಂದ ಜೀವಕ್ಕೆ ಯಾವುದೇ ತೊಂದ ರೆಯಾಗುವುದಿಲ್ಲ. ಜೀವವು ಆಯಾ ದೇವತೆಗಳ ಸಗುಣ ಚೈತನ್ಯವನ್ನು ಈ ಲಹರಿಗಳ ಮಾಧ್ಯಮದಿಂದ ಸಂಪೂರ್ಣ ಗ್ರಹಿಸಬಲ್ಲದು.
ಹೂವುಗಳಲ್ಲಿ ವಿವಿಧ ತತ್ತ್ವಗಳು ಒಟ್ಟಾಗಿ ರುವುದು ಏಕತ್ರೀಕರಣವಾಗಿರುವುದು ಕಂಡು ಬರುತ್ತದೆ. ಹೂವುಗಳಲ್ಲಿ ಪೃಥ್ವಿತತ್ತ್ವವಿರುವು ದರಿಂದ ಅದಕ್ಕೆ ಪರಿಮಳವಿರುತ್ತದೆ, ಹೂವುಗಳಲ್ಲಿ ತೇಜತತ್ತ್ವವಿರುವುದರಿಂದ ಅವು ಸ್ಥೂಲದಲ್ಲಿ ಕಾಣಿಸುತ್ತವೆ, ಹೂವುಗ ಳಲ್ಲಿ ವಾಯುತತ್ತ್ವವಿರುವುದರಿಂದ ಅದನ್ನು ಕೈಗಳಿಂದ ಸ್ಪರ್ಶಿಸಬಹುದು. ಈ ರೀತಿ ಯಲ್ಲಿ ದೇವತೆಯ ತತ್ತ್ವ, ಅವಳ ಸಾತ್ತ್ವಿಕ ಲಹರಿ ಮತ್ತು ಚೈತನ್ಯವು ಹೂವು ಮತ್ತು ಹೂವುಗಳ ಹಾರದಲ್ಲಿರುವ ಸುಗಂಧದ ಮೂಲಕ, ಸ್ಪರ್ಶದ ಮೂಲಕ ಮತ್ತು ಕೇವಲ ನೋಡುವುದರಿಂದಲೂ ನಮಗೆ ಸಿಗುತ್ತವೆ.
ದೇವತೆಯ ಮೂರ್ತಿಗೆ ಅಥವಾ ದೇವ ತೆಯ ಚಿತ್ರಕ್ಕೆ ಹಾರವನ್ನು ಹಾಕಿ ಪೂಜೆ ಯನ್ನು ಮಾಡಿದಾಗ ಅದರಲ್ಲಿ ಆ ದೇವ ತೆಯ ತತ್ತ್ವವು ಆಕರ್ಷಿತವಾಗುತ್ತದೆ. ಆ ಹಾರದಲ್ಲಿರುವ ದೇವತೆಯ ತತ್ತ್ವ ಮತ್ತು ಚೈತನ್ಯವು ಸಾಮಾನ್ಯವಾಗಿ ೩ ದಿನಗಳ ಕಾಲ ಉಳಿದುಕೊಳ್ಳುತ್ತದೆ. ಅನಂತರ ಅದನ್ನು ನಿರ್ಮಾಲ್ಯವೆಂದು ನೀರಿನಲ್ಲಿ ವಿಸರ್ಜನೆ ಮಾಡಬೇಕು. - ಈಶ್ವರ (ಕು. ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೬.೧.೨೦೦೫)
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ’)

No comments:

Post a Comment