ರಾಜ್ಯದ ದೇವಸ್ಥಾನ ಮತ್ತು ಧಾರ್ಮಿಕ ಕೇಂದ್ರಗಳ ರಕ್ಷಣೆಗಾಗಿ ಸ್ಥಾಪನೆಯಾದ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’
ಧಾರ್ಮಿಕ ವಿಷಯದಲ್ಲಿ ಧರ್ಮಗುರುಗಳ ನಿರ್ಣಯ ಅಂತಿಮ! -ಬ್ರಹ್ಮಶ್ರೀ ರವೀಶ ತಂತ್ರಿ
ಮಂಗಳೂರು: ಕೇವಲ ಕಾನೂನು ವಿಚಾರ ತಿಳಿದ ನಾಸ್ತಿಕ ನ್ಯಾಯಾಧೀಶರು ದೇವಾಲಯದ ಬಗ್ಗೆ ಮಾತನಾಡಿದರೆ ಅದನ್ನು ಒಪ್ಪಿಕೊಳ್ಳಲು ನಾವು ಸಾಧ್ಯವಿಲ್ಲ. ಬದಲಾಗಿ ನಮ್ಮೆಲ್ಲ ಹಿಂದೂ ಧರ್ಮದರ್ಶಿ, ಧರ್ಮಗುರುಗಳ ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ಗಮನಕ್ಕೆ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳಬೇಕು.
ಇದರ ಬಗ್ಗೆ ಧರ್ಮಗುರುಗಳು ಮಾತ್ರ ಯೋಗ್ಯ ನಿರ್ಣಯ ಕೊಡಲು ಸಾಧ್ಯ. ದೇವಸ್ಥಾನಗಳನ್ನು ವಿರೋಧಿಸುವವರ ವಿರುದ್ಧ ಹೋರಾಡಬೇಕು. ಇನ್ನು ಮುಂದೆ ಯಾರಾದರೂ ದೇವಸ್ಥಾನಗಳಿಗೆ ಕೈ ಹಾಕಿದರೆ ಕೊನೆಗೆ ಶಸ್ತ್ರವನ್ನೇ ಹಿಡಿಯುವೆವು, ಎಂಬ ಎಚ್ಚರಿಕೆ ನೀಡಿದಾಗಲೇ ಅದನ್ನು ಯಾರೂ ಮುಟ್ಟಲಾರರು’ ಎಂದು ಕೇರಳ ರಾಜ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯ ಕಾಸರಗೋಡು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಬ್ರಹ್ಮಶ್ರೀ ರವೀಶ ತಂತ್ರಿಯವರು ಹೇಳಿದ್ದಾರೆ. ಅವರು ಜನವರಿ ೨೩ ರಂದು ಮಂಗಳೂರಿ ನಲ್ಲಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ದ ಸ್ಥಾಪನೆಯ ಸಮಯದಲ್ಲಿ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ದೇವಸ್ಥಾನಗಳ ಕಳ್ಳತನ ಮತ್ತು ಮೂರ್ತಿ ಭಗ್ನ ಹಾಗೂ ಸರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶ ಎಂದು ತಾನೇ ಹೇಳಿಕೊಂಡು ದೇವಸ್ಥಾನಗಳನ್ನು ಕೆಡಹುವ ಕೃತ್ಯಗಳನ್ನು ಸಂಘಟಿತವಾಗಿ ವಿರೋಧಿಸಲು ಮಂಗಳೂರಿನಲ್ಲಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ದ ಸ್ಥಾಪನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ, ವೇದಮೂರ್ತಿ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಶ್ರೀ. ಲಕ್ಷ್ಮಿ ನಾರಾಯಣ ಅಸ್ರಣ್ಣನವರ ಹಸ್ತದಿಂದ ಫಲಕವನ್ನು ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ವೆಂಕಟರಮಣ ಮಹಾಮ್ಮಾಯಿ ದೇವಸ್ಥಾನ ಹಾಗೂ ಮಹಾ ಸಂಘದ ಅಧ್ಯಕ್ಷರಾದ ಶ್ರೀ. ಮಾಧವ ಕಾಮತ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ಮೋಹನ ಗೌಡ, ಮಹಾಸಂಘದ ಉಪಾಧ್ಯಕ್ಷರಾದ ಶ್ರೀ. ಲಕ್ಷ್ಮಿಶ ಗಬ್ಲಡ್ಕ, ಪ್ರಸಿದ್ದ ಉದ್ಯಮಿ ಹಾಗೂ ಮಹಾ ಸಂಘದ ಕೋಶಾಧಿಕಾರಿ ಶ್ರೀ. ಅನಂತ ಕಾಮತ, ಮಹಾಸಂಘದ ಕಾರ್ಯದರ್ಶಿ ಶ್ರೀ. ರಮಾನಂದ ಗೌಡ ಸೇರಿದಂತೆ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನದ ವಿಶ್ವಸ್ಥರು, ಭಜನಾ ಮಂದಿರಗಳ ಪದಾಧಿಕಾರಿಗಳು ಹೀಗೆ ೧೯೦ ಜನರು ಭಾಗವಹಿಸಿದ್ದರು. ಮಹಾರಾಷ್ಟ್ರ, ಗೋವಾದ ನಂತರ ಕರ್ನಾಟಕವು ದೇವಸ್ಥಾನಗಳ ಮಹಾಸಂಘ ಸ್ಥಾಪಿಸಿದ ೩ನೇ ರಾಜ್ಯವಾಗಿದೆ.
‘ಇಂದು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ನಾವು ಅದರಿಂದ ಹಿಂದೂ ಹಿತದ ಆಕಾಂಕ್ಷೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಯಡಿಯೂರಪ್ಪನವರ ಮೇಲೆ ಖಟ್ಲೆ ದಾಖಲಿಸಲು ರಾಜ್ಯದ ರಾಜ್ಯಪಾಲರು ಅನುಮತಿ ನೀಡಿದಾಗ ರಾಜ್ಯ ಬಂದ್‌ಗೆ ಕರೆ ನೀಡಿದ ಸರಕಾರ, ದೇವಸ್ಥಾನಗಳನ್ನು ಬೀಳಿಸುವಾಗ ಏಕೆ ರಸ್ತೆಗಿಳಿಯುವುದಿಲ್ಲ’ ಎಂದು ಶ್ರೀ. ಗಬ್ಲಡ್ಕರವರು ಪ್ರಶ್ನಿಸಿ ದ್ದಾರೆ. ‘ಹೊಸ ಕಾನೂನುಗಳು ಧಾರ್ಮಿಕ ಚಿಂತನೆಗೆ ಆಘಾತ ಮಾಡುತ್ತಿವೆ. ಇದಕ್ಕೆಲ್ಲ ಕಾರಣ ನಾವು ಸಂಘಟಿತರಾಗಿಲ್ಲ ದಿರುವುದು’ ಎಂದು ಶ್ರೀ. ಅಸ್ರಣ್ಣನವರು ಹೇಳಿದರು.
ಮಹಾಸಂಘದ ಅಧ್ಯಕ್ಷರಾದ ಮಾಧವ ಕಾಮತರವರು ದೇವಸ್ಥಾನಗಳನ್ನು ಕಾನೂನು ಪಾಲನೆಯ ಹೆಸರಿನಲ್ಲಿ ಸರಕಾರವೇ ಧ್ವಂಸಗೊಳಿಸುತ್ತಿರುವುದು ಕಳವಳಕಾರಿ ಎಂದರು. ‘ದೇವಸ್ಥಾನ ರಕ್ಷಣೆಗಾಗಿ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ’ ಎಂದು ಮಹಾಸಂಘದ ಕೋಶಾಧಿಕಾರಿ ಅನಂತ ಕಾಮತರವರು ಹೇಳಿದರು.
No comments:
Post a Comment