‘ಸನಾತನ ಪ್ರಭಾತ’ದಂತಹ ಸಾವಿರಾರು ನಿಯತಕಾಲಿಕೆಗಳ ಆರಂಭವು ಕಾಲದ ಅವಶ್ಯಕತೆ! - ಪ.ಪೂ. ಡಾ. ಜಯಂತ ಆಠವಲೆ
ಸಾಪ್ತಾಹಿಕ ‘ಸನಾತನ ಪ್ರಭಾತ’ವು ಇಂದು ೧೩ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಒಂದು ಮಗುವು ಜನಿಸಿದಾಗ ಅದರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದಲ್ಲಿ, ಆ ಮಗುವು ಎಷ್ಟು ವರ್ಷ ಬದುಕಲಿದೆಯೋ? ಎಂಬ ಸಂದೇಹವು ಉಂಟಾಗುತ್ತದೆ. ಪ್ರಾರಂಭದಲ್ಲಿ ‘ಸನಾತನ ಪ್ರಭಾತ’ದ ಸ್ಥಿತಿಯೂ ಹೀಗೆಯೇ ಇತ್ತು. ಈ ನಿಯತಕಾಲಿಕೆಗೆ ಸಂಬಂಧಪಟ್ಟ ಸೇವೆ ಮಾಡುವವರಲ್ಲಿ ಯಾರಿಗೂ ಇಂತಹ ಸೇವೆಯನ್ನು ಮಾಡುವ ತರಬೇತಿಯಾಗಲಿ, ವ್ಯಾವಹಾರಿಕ ಅನುಭವವಾಗಲಿ, ದೊಡ್ಡ ಆರ್ಥಿಕ ಬೆಂಬಲವಾಗಲಿ, ಪತ್ರಿಕಾರಂಗದ ಯಶಸ್ಸು ಹೊಂದಿರುವ ಯಾವ ವ್ಯಕ್ತಿಗಳ ಹೆಸರುಗಳಾಗಲಿ ಇರಲಿಲ್ಲ. ಅದರಲ್ಲಿಯೂ ಚಿತ್ರರಂಗದ ನಟ-ನಟಿಯರು, ಆಟ ಇಂತಹ ವಿಷಯಗಳನ್ನು ಮುದ್ರಿಸದಿರುವ ಸ್ವನಿಶ್ಚಿತ ನಿಬಂಧನೆಗಳಿದ್ದವು. ಈ ಪತ್ರಿಕೆಯು ಒಂದೆರಡು ವರ್ಷ ನಡೆಯುವುದು ಕಷ್ಟ ಎಂಬ ಸಂದೇಹವೂ ಇತ್ತು. ಆದರೂ ಪ್ರತ್ಯಕ್ಷದಲ್ಲಿ ಅದು ಉಳಿದಿದೆ ಮತ್ತು ಇಂದಿನ ವರೆಗೆ ಪ್ರಕಟವಾಗುತ್ತಿದೆ. ಇದು ಸದ್ಗುರುಗಳ, ಈಶ್ವರನ ಕೃಪೆಯೇ ಆಗಿದೆ!ಆದರೆ ಇಂದು ಈ ಪತ್ರಿಕೆಯ ಮೇಲೆ ನಿರ್ಬಂಧದ ಕಾರ್ಮೋಡ ಕವಿದಿದೆ. ‘ಸನಾತನ ಪ್ರಭಾತ’ದ ಪ್ರಕಟಣೆ ನಿಲ್ಲಬೇಕೆಂದು ಅನೇಕ ಹಿಂದೂದ್ವೇಷಿಗಳ ಅಭಿಲಾಷೆಯಾಗಿದೆ. ಧರ್ಮ ವಿರೋಧಕರು ಅತ್ಯಂತ ಬಲಿಷ್ಠರಾಗಿದ್ದಾರೆ. ಆದ್ದರಿಂದ ಮುಂದಿನ ‘ಸನಾತನ ಪ್ರಭಾತ’ವು ಪ್ರಕಟವಾಗುವುದೋ ಇಲ್ಲವೋ ಎಂಬ ಅರ್ಥದ ಸೂಚನೆಯನ್ನು ಪ್ರಕಟಿಸುವ ಸಂದರ್ಭಗಳು ಬಹಳಷ್ಟು ಬಾರಿ ಒದಗಿವೆ. ಪತ್ರಿಕೆಗೆ ಬೆದರಿಕೆಯೊಡ್ಡುವುದು, ಕಾರ್ಯಾಲಯದ ಮೇಲೆ ಆಕ್ರಮಣಗಳಾಗುವುದು, ವಿಚಾರಣೆ, ಸಂಪಾದಕರು ಸೆರೆಮನೆವಾಸ ಅನುಭವಿಸಬೇಕಾಗುವುದು ಮುಂತಾದ ಅಗ್ನಿಪರೀಕ್ಷೆಗಳಿಂದ ಎದುರಿಸುವ ಅನೇಕ ಸಂದರ್ಭಗಳು ಈ ಪತ್ರಿಕೆಗೆ ಬಂದೊದಗಿದೆ.
ಇದು ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸನಾತನ ಹಿಂದೂ ಧರ್ಮದ ಕಾರ್ಯವು ಪ್ರಾಮಾಣಿಕವಾಗಿ ನಡೆಯುತ್ತಿದೆ ಎಂಬುದಕ್ಕೆ ಪ್ರತ್ಯಕ್ಷ ಪುರಾವೆಯಾಗಿದೆ. ಯಾರು ಹಿಂದೂ ಧರ್ಮದ ಕಾರ್ಯವನ್ನು ಮಾಡುತ್ತಾರೆಯೋ ಅವರಿಗೆ ಎಲ್ಲೆಡೆಯಿಂದ ವಿರೋಧವೇ ಆಗುತ್ತದೆ ಎಂಬ ಇತಿಹಾಸವಿದೆ. ಧರ್ಮದ ಕಾರ್ಯವನ್ನು ಮಾಡುವಾಗ ಎಲ್ಲ ಭಾರವನ್ನೂ ಈಶ್ವರನ ಮೇಲೆ ಹಾಕಿ ಮುಂದೆ ಹೋಗುತ್ತಿರಬೇಕು ಎಂಬ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ‘ಸನಾತನ ಪ್ರಭಾತ’ಕ್ಕೆ ಸಂಬಂಧಪಟ್ಟ ಸೇವೆಗಳಲ್ಲಿ ತೊಡಗಿರುವವರು ಮುನ್ನಡೆಯುತ್ತಿದ್ದಾರೆ. ಪ್ರತಿಯೊಂದು ಆರಂಭಕ್ಕೂ ಅಂತ್ಯ ಇದ್ದೇ ಇರುತ್ತದೆ. ನಿರ್ಮಿತಿಯ ನಂತರ ಸ್ಥಿತಿ ಮತ್ತು ತದ ನಂತರ ಲಯ ಎಂಬ ಸಿದ್ಧಾಂತವಿದೆ. ಈ ನಿಯತಕಾಲಿಕೆಯು ಈ ಸಿದ್ಧಾಂತಕ್ಕೆ ಅಪವಾದವಾಗಿರಲು ಹೇಗೆ ಸಾಧ್ಯವಿದೆ? ಹೀಗಿದ್ದರೂ ಒಂದು ಸಂಗತಿ ಮಾತ್ರ ಖಚಿತ-ಯಾವ ಪ್ರೇರಣೆ ಮತ್ತು ಕೃಪೆಯ ಬಲದ ಮೇಲೆ ‘ಸನಾತನ ಪ್ರಭಾತ’ವು ಮಾರ್ಗವನ್ನು ಕ್ರಮಿಸುತ್ತಿದೆಯೋ ಆ ಪ್ರೇರಣೆಯು ಚಿರಂತನವಾಗಿದೆ ಮತ್ತು ಆ ಕೃಪೆಗೆ ಕೊನೆಯಿಲ್ಲ. ಎರಡೂ ಅನಾದಿ ಹಾಗೂ ಅನಂತವಾಗಿವೆ. ಈ ಪ್ರೇರಣೆಯ ಹಾಗೂ ಕೃಪೆಯ ಆಧಾರದಿಂದಾಗಿ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಆಗುತ್ತಿರುವ ಕಾರ್ಯವು ಮುಂದುವರೆಯುತ್ತಲೇ ಇರುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ಇಂದು ‘ಸನಾತನ ಪ್ರಭಾತ’ದಂತೆ ತತ್ಸಮಾನ ಧರ್ಮಕಾರ್ಯವನ್ನು ಮಾಡುವ ಒಂದೆರಡಲ್ಲ ಸಾವಿರಾರು ನಿಯತಕಾಲಿಕೆಗಳು ಪ್ರಾರಂಭವಾಗುವ ಅವಶ್ಯಕತೆಯಿದೆ. ಶುದ್ಧ ಧರ್ಮಪ್ರೇರಣೆಯ ಆಧಾರದ ಮೇಲೆ ಕಾರ್ಯವು ನಡೆಯುತ್ತದೆ ಎಂಬುದಕ್ಕೆ ಹಿಂದೂಗಳು ಮತ್ತೊಂದು ಉದಾಹರಣೆಯನ್ನು ಹುಡುಕುವ ಅವಶ್ಯಕತೆಯಿಲ್ಲ. ಪ್ರಸಾರಮಾಧ್ಯಮಗಳಿಂದ ಹಿಂದೂ ಧರ್ಮದ ಪರವಾಗಿ ವಿಷಯಗಳನ್ನು ಮಂಡಿಸಿ ಹಿಂದೂಗಳನ್ನು ಜಾಗೃತಗೊಳಿಸುವುದಷ್ಟೇ ಅಲ್ಲ ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುವವರನ್ನು ವಿರೋಧಿಸಿ ತಡೆಗಟ್ಟುವುದು ಕಾಲದ ಅವಶ್ಯಕತೆಯಾಗಿದೆ. ‘ಸನಾತನ ಪ್ರಭಾತ’ವು ಒಂದು ಕಿಡಿಯಾಗಿದೆ. ಈ ಕಿಡಿಯು ಪತ್ರಿಕಾರಂಗದಲ್ಲಿ ಅಗ್ನಿಯಂತೆ ಪ್ರಜ್ವಲಿಸಬೇಕೆಂಬ ನಿರೀಕ್ಷೆಯು ‘ಸನಾತನ ಪ್ರಭಾತ’ಕ್ಕೆ ಇದೆ. ಈ ಕಿಡಿಯ ಮನೋಗತವನ್ನು ತಿಳಿದುಕೊಂಡು ಅದರ ವ್ರತವನ್ನು ಸ್ವೀಕರಿಸಲು ಎಷ್ಟು ಜನ ಮುಂದೆ ಬರುವರು? ‘ಸನಾತನ ಪ್ರಭಾತ’ ದ ಮೇಲೆ ಸದ್ಗುರುಗಳ ಕೃಪೆಯು ಅಖಂಡವಾಗಿ ಇರಲಿ ಹಾಗೂ ಇಂತಹ ಅನೇಕ ನಿಯತಕಾಲಿಕೆಗಳು ಉದಯಿಸಲೆಂದು ಸದ್ಗುರುಗಳ ಚರಣಗಳಲ್ಲಿ ಪ್ರಾರ್ಥನೆ !’ - ಪ.ಪೂ. ಡಾ. ಆಠವಲೆ

No comments:
Post a Comment