ಹಿಂದೂ ಜನಜಾಗೃತಿ ಸಮಿತಿಯ ದೇವಸ್ಥಾನ ರಕ್ಷಣಾ ಚಳುವಳಿಯಿಂದ ಎಚ್ಚೆತ್ತ ಸರಕಾರ!
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮರುಪರಿಶೀಲನೆಗಾಗಿ ಸಭೆ ನಡೆಸಲು ನಿರ್ಧಾರ
ಬೆಂಗಳೂರು: ಮುಜರಾಯಿ ವಿಕಾಸ ಮಂಡಳಿಯ ಅಧ್ಯಕ್ಷರು ದೇವಸ್ಥಾನ ರಕ್ಷಣಾ ಚಳುವಳಿಯಲ್ಲಿ ನೇತೃತ್ವ ವಹಿಸಿಕೊಂಡಿದ್ದಾರೆ. ಆದುದರಿಂದ ಹಿಂದೂ ಜನಜಾಗೃತಿ ಸಮಿತಿಯ ದೇವಸ್ಥಾನ ರಕ್ಷಣಾ ಚಳುವಳಿಗೆ ಸಕಾರಾತ್ಮಕ ಬೆಳವಣಿಗೆ ದೊರಕಿದೆ. ಮುಜರಾಯಿ ವಿಕಾಸ ಮಂಡಳಿಯ ಅಧ್ಯಕ್ಷರು (ಕೆಬಿನೆಟ್ ಮಂತ್ರಿಗಳ ದರ್ಜೆಯಿರುವ) ಶ್ರೀ.ಕೃಷ್ಣಯ್ಯ ಶೆಟ್ಟಿ ಇವರು ಹಿಂದೂ ಜನ ಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯ ಶಿಷ್ಟಮಂಡಳಿಯವರೊಂದಿಗೆ ಮುಖ್ಯಮಂತ್ರಿಗಳ ಸಂಯುಕ್ತ ಸಚಿವ ಶ್ರೀ. ನಂದಗೋಪಾಲರನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಇತ್ತೀಚೆಗೆ ಭೇಟಿಯಾಗಿ ದೇವಸ್ಥಾನಗಳ ರಕ್ಷಣೆಯ ಬಗ್ಗೆ ಚರ್ಚಿಸಿದರು.
ದೇವಸ್ಥಾನಗಳನ್ನು ಕೆಡಹುವ ಸರಕಾರದ ಕ್ರಮದಿಂದ ತಮಗೆ ಅತೀವ ನೋವುಂಟಾಗಿದೆ ಎಂದು ಶೆಟ್ಟಿಯವರು ಸಹಕಾರ್ಯದರ್ಶಿಯವರಿಗೆ ಹೇಳಿದರು. ಸಹಕಾರ್ಯದರ್ಶಿಯವರು ‘ತಾವೂ ಸರಕಾರದ ಒಂದು ಘಟಕವಾಗಿದ್ದೀರಿ’ ಎಂದು ಶ್ರೀ. ಶೆಟ್ಟಿಯವರಿಗೆ ಹೇಳಿದರು. ಆಗ ಅವರು ನಾನು ಸರಕಾರ್ಯದರ್ಶಿಯೆಂದು ಇಲ್ಲಿ ಬಂದಿಲ್ಲ, ಓರ್ವ ಹಿಂದೂ ಎಂದು ಇಲ್ಲಿ ಬಂದಿದ್ದೇನೆ. ನನಗೆ ನಮ್ಮ ಶ್ರದ್ಧಾಸ್ಥಾನಗಳನ್ನು ರಕ್ಷಣೆ ಮಾಡಬೇಕಿದೆ’ ಎಂದು ಶ್ರೀ. ಶೆಟ್ಟಿಯವರು ಹೇಳಿದರು. (ಇಂತಹ ಅಧಿಕಾರಿಗಳೇ ರಾಷ್ಟ್ರ ಮತ್ತು ಧರ್ಮ ಇವುಗಳ ನಿಜವಾದ ಶಕ್ತಿಯಾಗಿದ್ದಾರೆ. ಇತರೆಡೆಯ ಜನ್ಮ ಹಿಂದೂ ಅಧಿಕಾರಿಗಳು ಶ್ರೀ. ಶೆಟ್ಟಿಯವರ ಈ ಕೃತಿಯಿಂದ ಏನಾದರೂ ಬೋಧನೆ ಪಡೆಯುವರೇ ? - ಸಂಪಾದಕರು) ನಂತರ ಸಹಕಾರ್ಯದರ್ಶಿ ಸುಮಾರು ಒಂದು ಗಂಟೆಯ ತನಕ ಇದರ ಬಗ್ಗೆ ಚರ್ಚಿಸಿದರು. ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯವು ಕಳುಹಿಸಿದ ವರದಿಗಳ ಅಧ್ಯಯನ ಮಾಡಿದರು.
ಅನಂತರ ಸಹಕಾರ್ಯದರ್ಶಿ ಈ ವಿಷಯವನ್ನು ಮರುಪರಿಶೀಲಿಸಲು ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆಯನ್ನು ನಡೆಸಲು ನಿರ್ಧರಿಸಿದರು. ಈ ಸಭೆಯಲ್ಲಿ ಸಂಬಂಧಿತ ಇಲಾಖೆಯ ಮಂತ್ರಿಗಳನ್ನು ಮತ್ತು ವಿವಿಧ ಸಚಿವರೆಲ್ಲರನ್ನು ಕರೆಯಲಾಗುವುದು. ಸಭೆಯಲ್ಲಿ ಚರ್ಚಿಸಲಾಗುವ ಅಂಶಗಳನ್ನು ಅದೇ ಸಮಯದಲ್ಲಿ ಬರೆದುಕೊಂಡರು. ಅದಕ್ಕಾಗಿ ಸಮಿತಿಯ ಸದಸ್ಯರಿಂದ ಅವರು ಸೂಚನೆಗಳನ್ನು ಪಡೆದುಕೊಂಡರು.
ಹಿಂದೂ ಜನಜಾಗೃತಿ ಸಮಿತಿಯ ಚಂದ್ರು ಮೊಗೇರ ಇವರು ಶ್ರೀ. ನಂದಗೋಪಾಲ ಇವರಿಗೆ ಶಿವಮೊಗ್ಗ, ಚಿಕ್ಕ ಬಳ್ಳಾಪುರ ಮತ್ತು ಕೊಳ್ಳೆಗಾಲ ಇಲ್ಲಿನ ದೇವಸ್ಥಾನಗಳನ್ನು ಕೆಡಹುವ ಘಟನೆ ತೋರಿಸಿಕೊಟ್ಟಾಗ ಆ ಪ್ರಕರಣಕ್ಕೆ ಪರಿಹಾರ ದೊರಕುವ ತನಕ ದೇವಸ್ಥಾನಗಳ ಧ್ವಂಸವನ್ನು ನಿಲ್ಲಿಸಲು ಆದೇಶ ನೀಡಿದರು.

No comments:
Post a Comment