ಸನಾತನ ನಿರ್ಮಿತ ‘ಆಹಾರ’ ಎಂಬ ಗ್ರಂಥದಲ್ಲಿ ‘ಚಹಾದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ’ದ ಬಗ್ಗೆ ಮಾಹಿತಿ ತಿಳಿದ ನಂತರ ಆಶ್ರಮದಲ್ಲಿನ ಬಹಳಷ್ಟು ಸಾಧಕರು ಚಹಾ ಕುಡಿಯುವುದನ್ನು ನಿಲ್ಲಿಸಿ ದ್ದಾರೆ ಮತ್ತು ‘ಕಷಾಯ’ ಸೇವಿಸುತ್ತಿದ್ದಾರೆ. ಸದ್ಯ ಪೇಯವೆಂದು ಪ್ರತಿದಿನ ಕುಡಿಯಲು ಉಪಯೋಗಿಸುವ ‘ಚಹಾ’ ಆರೋಗ್ಯದ ದೃಷ್ಟಿಯಿಂದ ಬಹಳ ಅಪಾಯಕಾರಿಯಾಗಿದೆ ಮತ್ತು ಅದರಿಂದ ಶರೀರದಲ್ಲಿ ಕಪ್ಪು ಶಕ್ತಿಯು ಸಂಗ್ರಹವಾಗುತ್ತದೆ. ಹಾಗಾಗಿ ಕಷಾಯ ದಂತಹ ಸಾತ್ತ್ವಿಕ ಪೇಯವನ್ನು ಸೇವಿಸಿದರೆ ಚಿಕ್ಕವರು ಮತ್ತು ದೊಡ್ಡವರಿಗೂ ಅದರ ಲಾಭವಾಗುವುದು. ಹಾಗಾಗಿ ಕಷಾಯ ತಯಾರಿಸುವ ವಿಧಾನ ಇಲ್ಲಿ ನೀಡಲಾಗಿದೆ.
೧. ಕಷಾಯಪುಡಿ ತಯಾರಿಸುವ ವಿಧಾನ : ಕೊತ್ತಂಬರಿ ೪೦೦ ಗ್ರಾಂ ಮತ್ತು ಜೀರಿಗೆ ೧೦೦ ಗ್ರಾಂ ಇವುಗಳ ಮಿಶ್ರಣ ವನ್ನು ಸ್ವಲ್ಪ೨. ಕಷಾಯ ಪೇಯಯನ್ನು ತಯಾರಿಸುವುದು : ೧ ಲೋಟ ಕಷಾಯವನ್ನು ತಯಾರಿಸಲು ಮುಕ್ಕಾಲು ಲೋಟ ನೀರು, ೧ ಚಮಚ ಸಕ್ಕರೆ ಮತ್ತು ಅರ್ಧ ಚಮಚ ಕಷಾಯದ ಪುಡಿ ಹಾಕಬೇಕು. ಈ ಮಿಶ್ರಣವು ಕುದ್ದ ನಂತರ ಅದರಲ್ಲಿ ಕಾಲು ಲೋಟ ಬಿಸಿ ಹಾಲನ್ನು ಹಾಕಬೇಕು. ಋತುವಿಗನು ಸಾರ ಅದರಲ್ಲಿ ಹಸಿಶುಂಠಿ, ಮಜ್ಜಿಗೆ ಹುಲ್ಲು ಮತ್ತು ತುಳಸಿ ಇವುಗಳನ್ನೂ ಹಾಕಬಹುದು.
ಕಷಾಯದಲ್ಲಿನ ಘಟಕ ದ್ರವ್ಯಗಳು ಮತ್ತು ಅವುಗಳ ಗುಣಧರ್ಮ
೧. ಕೊತ್ತಂಬರಿ : ಕೊತ್ತಂಬರಿಯು ರುಚಿಯಲ್ಲಿ ಕಹಿ, ಖಾರ, ಒಗರು; ಉಷ್ಣ, ಸ್ನಿಗ್ಧ, ಮೂತ್ರ ಶುದ್ಧಿ ಮಾಡುವುದು, ಪಚನ ವಾಗಲು ಹಗುರ, ಹಸಿವೆ ಹೆಚ್ಚಿಸುವುದು, ಪಚನಕ್ರಿಯೆ ಸುಧಾರಿಸುವುದು, ರುಚಿಕರ, ಶೌಚವು ಹೆಚ್ಚಾಗುತ್ತಿದ್ದರೆ ಅದನ್ನು ಕಡಿಮೆ ಮಾಡುವುದು, ವಾತ, ಪಿತ್ತ, ಕಫ ಎಂಬ ಮೂರು ದೋಷಗಳನ್ನು ದೂರ ಮಾಡು ವಂತಹದ್ದಾಗಿದೆ. ಆಗಾಗ ಬಾಯಾರಿಕೆ ಯಾಗುವುದು, ಮೈ ಉರಿಯುವುದು, ವಾಂತಿ, ದಮ್ಮು, ಕೆಮ್ಮು, ನಿಶ್ಯಕ್ತಿ, ಹೊಟ್ಟೆಹುಳ ಮುಂತಾದವುಗಳಿಗೆ ಸಿದ್ಧೌಷಧವಾಗಿದೆ.
೨. ಜೀರಿಗೆ : ಜೀರಿಗೆ ರುಚಿಯಲ್ಲಿ ಖಾರ, ಉಷ್ಣ, ಹಗುರ(ಪಚನಕ್ಕೆ ಹಗುರ), ರುಕ್ಷ, ಹಸಿವು ಹೆಚ್ಚಿಸುವಂತಹದ್ದು, ಶೌಚವು ಹೆಚ್ಚಾಗುತ್ತಿದ್ದರೆ ಅದನ್ನು ಕಡಿಮೆ ಮಾಡು ವಂತಹದ್ದು, ಸ್ವಲ್ಪ ಪಿತ್ತಕಾರಿ, ಬುದ್ಧಿಯನ್ನು ಹೆಚ್ಚಿಸುವಂತಹದ್ದು, ಗರ್ಭಾಶಯದ ವ್ಯಾಧಿ ಯನ್ನು ನಿವಾರಿಸುವಂತಹದ್ದು, ವೀರ್ಯ ವರ್ಧಕ, ಪೌಷ್ಟಿಕ, ರುಚಿಕರ, ಕಫ ದೋಷ ವನ್ನು ನಿವಾರಿಸುವಂತಹದ್ದು, ದೃಷ್ಟಿಗೆ ಹಿತ ಕಾರಿ, ವಾತ, ಹೊಟ್ಟೆ ಉಬ್ಬುವಿಕೆ ಇತ್ಯಾದಿ ನಿವಾರಿಸುತ್ತದೆ ಮತ್ತು ವಾಂತಿ ನಿಲ್ಲಿಸುತ್ತದೆ.
೩. ಹಾಲು : ಇದು ಹುಟ್ಟಿನಿಂದಲೇ ಎಲ್ಲರಿಗೂ ಲಾಭದಾಯಕ, ವಾತ-ಪಿತ್ತ ನಿವಾರಿಸುವಂತಹದ್ದು, ಶೌಚವನ್ನು ಸ್ವಚ್ಛ ಮಾಡುವಂತಹದ್ದು, ಶಕ್ತಿ ನೀಡುವಂತಹದ್ದು, ದೇಹದ ಸವೆಸುವಿಕೆಯನ್ನು ತುಂಬುವಂತಹ ದ್ದಾಗಿದೆ. ಕಷಾಯದಲ್ಲಿನ ಘಟಕದ್ರವ್ಯ ಗಳೆಲ್ಲವೂ ಆರೋಗ್ಯ ಕಾಪಾಡುವಂತಹ ದ್ದಾಗಿದೆ. ಕಷಾಯವು ವಾತ, ಪಿತ್ತ ಮತ್ತು ಕಫ ಎಂಬ ಮೂರು ಪ್ರಕೃತಿಯ ಜನರಿಗೆ ಬಹಳಷ್ಟು ಲಾಭದಾಯಕವಾಗಿದೆ. ಆದುದ ರಿಂದ ಯಾರೂ ಕಷಾಯವನ್ನು ಸೇವಿಸ ಬಹುದು. ಹಾಗಾಗಿ ದೇಹಕ್ಕೆ ಹಾನಿಕರವಾದ ಚಹಾ ಸೇವಿಸುವುದಕ್ಕಿಂತ ಎಲ್ಲ ದೋಷ ಗಳನ್ನು ದೂರ ಮಾಡುವ ಕಷಾಯವು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಕಷಾಯ ಕುಡಿಯುವುದರಿಂದ ಯಾವುದೇ ರೋಗವು ಬರುವುದಿಲ್ಲ. ಕೇವಲ ಕೆಲವು ಸಲ ಕಷಾಯ ಇಷ್ಟವಿಲ್ಲದಿದ್ದರೆ ಅದರ ಅಪ್ರಿಯತೆಯಿಂದ ತೊಳೆಸುವುದು, ವಾಂತಿ ಇತ್ಯಾದಿ ರೋಗ ಬರಬಹುದು’. - ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:
Post a Comment