ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ...

ನಿರ್ಮಾಲ್ಯವನ್ನು ತೆಗೆಯುವಾಗ ಮಾಡಿದ ವಿಶಿಷ್ಟ ಮುದ್ರೆಯಿಂದ ಕೈಯಿಂದ ಗ್ರಹಣವಾಗುವ ನಿರ್ಮಾಲ್ಯದಲ್ಲಿನ ಚೈತನ್ಯ
ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ

ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ.
೧೬ಉಪಚಾರಗಳಲ್ಲಿ ೯.ಗಂಧವನ್ನು ಹಚ್ಚುವುದು, ೧೦.ಹೂವುಗಳನ್ನು ಅರ್ಪಿಸುವುದು, ೧೧.ಧೂಪವನ್ನು ತೋರಿಸುವುದು, ೧೨.ದೀಪವನ್ನು ಬೆಳಗುವುದು, ೧೩.ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ. (ಮುಂದುವರಿದ ಭಾಗ)

ಆ.ಅರಿಶಿಣ-ಕುಂಕುಮವನ್ನು ಅರ್ಪಿಸುವಾಗ, ಅದರಂತೆಯೇ ನಿರ್ಮಾಲ್ಯವನ್ನು ತೆಗೆಯುವಾಗ ಅನಾಮಿಕಾ ಮತ್ತು ಹೆಬ್ಬೆರಳನ್ನು ಏಕೆ ಉಪಯೋಗಿಸ ಬೇಕು? (ಅನಾಮಿಕಾ ಮತ್ತು ಹೆಬ್ಬೆರಳನ್ನು ಜೋಡಿಸುವುದರಿಂದಾಗುವ ಮುದ್ರೆಯಿಂದ ಅನಾಹತ ಚಕ್ರವು ಜಾಗೃತವಾಗಿ ಭಾವ ಜಾಗೃತವಾಗುತ್ತದೆ. ಇದರಿಂದ ಅರಿಶಿಣ- ಕುಂಕುಮವನ್ನು ಅರ್ಪಿಸುವಾಗ ಮತ್ತು ನಿರ್ಮಾಲ್ಯವನ್ನು ತೆಗೆಯುವಾಗ ದೇವತೆಯ ಚೈತ್ಯನ್ಯವು ಗ್ರಹಿಸಲ್ಪಡುತ್ತದೆ):
ಅರಿಶಿಣ-ಕುಂಕುಮವನ್ನು ಅರ್ಪಿಸುವಾಗ ಮೊದಲು ಅರಿಶಿಣ ಆಮೇಲೆ ಕುಂಕುಮವನ್ನು ಬಲಗೈಯ ಹೆಬ್ಬೆರಳು ಮತ್ತು ಅನಾಮಿಕೆಯ ಚಿಟಿಕೆಯಿಂದ ದೇವತೆಗಳ ಚರಣಗಳಿಗೆ ಅರ್ಪಿಸುತ್ತಾರೆ. ಅದರಂತೆಯೇ ದೇವತೆಗಳ ನಿರ್ಮಾಲ್ಯವನ್ನು ತೆಗೆಯುವಾ ಗಲೂ ಅನಾಮಿಕಾ ಮತ್ತು ಹೆಬ್ಬೆರಳನ್ನೇ ಉಪಯೋಗಿಸುತ್ತಾರೆ. (ಚಿತ್ರ ನೋಡಿ) ಇದರ ಶಾಸ್ತ್ರವು ಮುಂದಿನಂತಿದೆ.
ಅನಾಮಿಕಾ ಮತ್ತು ಹೆಬ್ಬೆರಳನ್ನು ಒಂದುಗೂಡಿಸಿದಾಗ ಉಂಟಾಗುವ ಮುದ್ರೆಯಿಂದ ಜೀವದ ಅನಾಹತಚಕ್ರವು ಜಾಗೃತವಾಗಿ, ಜೀವದ ಕ್ರಿಯಾಶಕ್ತಿಯು ಜಾಗೃತವಾಗಲು ಸಹಾಯವಾಗುತ್ತದೆ. ಕ್ರಿಯಾ ಶಕ್ತಿಯ ಪ್ರಾಬಲ್ಯದಿಂದ ಜೀವದಲ್ಲಿ ಈಶ್ವರನ ಕುರಿತು ಭಾವಜಾಗೃತಿಯಾಗಲು ಹಾಗೂ ಪ್ರಾಣಮಯಕೋಶದಲ್ಲಿನ ರಜ-ಸತ್ತ್ವಕಣಗಳ ಪ್ರಮಾಣವು ಹೆಚ್ಚಾಗಲು ಸಹಾಯ ವಾಗುತ್ತದೆ. ಅನಾಮಿಕಾ ಮತ್ತು ಹೆಬ್ಬೆರಳನ್ನು ಉಪಯೋಗಿಸಿ ನಿರ್ಮಾಲ್ಯವನ್ನು ತೆಗೆಯುವುದರಿಂದ ಅಥವಾ ಅರಿಶಿಣ-ಕುಂಕುಮವನ್ನು ಅರ್ಪಿಸುವುದರಿಂದ ನಿರ್ಮಾಣವಾಗುವ ಮುದ್ರೆಯಿಂದಾಗಿ ಬ್ರಹ್ಮಾಂಡದಲ್ಲಿನ ಆಪತತ್ತ್ವದ ಲಹರಿಗಳು ಕಾರ್ಯನಿರತವಾಗಿ ನಿರ್ಮಾಲ್ಯದಲ್ಲಿನ ದೇವತೆಗಳ ಚೈತನ್ಯವು ಪ್ರವಹಿಸತೊಡಗುತ್ತವೆ, ಅದರಂತೆಯೇ ದೇವತೆಗಳ ಚರಣಗಳಲ್ಲಿನ ಸುಪ್ತ ಚೈತನ್ಯವು ಅರಿಶಿಣ-ಕುಂಕುಮಗಳ ಮಾಧ್ಯಮದಿಂದ ಕಾರ್ಯನಿರತವಾಗಿ ಜೀವದೆಡೆಗೆ ಪ್ರಕ್ಷೇಪಿತವಾಗಲು ಸಹಾಯವಾಗುತ್ತದೆ.-ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೧೨.೨೦೦೪)
೨ಆ.ಎರಡನೆಯ ಉಪಚಾರ:
ಎಲೆ ಮತ್ತು ಹೂವುಗಳನ್ನು ಅರ್ಪಿಸುವುದು
೨ಆ೧.ಎಲೆಗಳನ್ನು (ಪತ್ರೆ) ಅರ್ಪಿಸುವುದು:
ದೇವತೆಗಳಿಗೆ ಹೂವುಗಳನ್ನು ಅರ್ಪಿಸುವ ಮೊದಲು ಎಲೆಗಳನ್ನು ಅರ್ಪಿಸಬೇಕು. ದೇವತೆಗಳ ತತ್ತ್ವವನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುವ ಎಲೆಗಳನ್ನು ಅರ್ಪಿಸುವುದರಿಂದ ಪೂಜಕನಿಗೆ ಆ ದೇವತೆಗಳ ತತ್ತ್ವದಿಂದ ಹೆಚ್ಚು ಲಾಭವಾಗುತ್ತದೆ. ಈ ತತ್ತ್ವಕ್ಕನುಸಾರ ಶ್ರೀವಿಷ್ಣುವಿಗೆ ತುಳಸಿಯ ಎಲೆ, ಮಹಾದೇವನಿಗೆ ಬಿಲ್ವ ಪತ್ರೆ ಹಾಗೂ ಶ್ರೀ ಗಣಪತಿಗೆ ಗರಿಕೆ ಮತ್ತು ಶಮಿಯ ಎಲೆಗಳನ್ನು ಅರ್ಪಿಸಬೇಕು.
೨ಆ೧ಅ.ಶ್ರೀಗಣಪತಿಗೆ ಗರಿಕೆ ಯನ್ನು ಹೇಗೆ ಅರ್ಪಿಸಬೇಕು?
೧.ಮುಖವನ್ನು ಹೊರತುಪಡಿಸಿ ಶ್ರೀಗಣಪತಿಯ ಸಂಪೂರ್ಣ ಮೂರ್ತಿ ಯನ್ನು ಗರಿಕೆಯಿಂದ ಶೃಂಗರಿಸುವುದರಿಂದ ಮೂರ್ತಿಯು ಜಾಗೃತವಾಗಲು ಸಹಾಯ ವಾಗುವುದು:
ಮುಖವನ್ನು ಹೊರತುಪಡಿಸಿ ಶ್ರೀಗಣಪತಿಯ ಮೂರ್ತಿಯನ್ನು ಸಂಪೂರ್ಣವಾಗಿ ಗರಿಕೆಯಿಂದ ಮುಚ್ಚುವುದರಿಂದ ಮೂರ್ತಿಯ ಎಲ್ಲ ಬದಿಗಳಿಂದ ಗರಿಕೆಯ ಸುವಾಸನೆಯು ಬರುತ್ತದೆ. ಮುಖವನ್ನು ಹೊರತುಪಡಿಸಿ ಗರಿಕೆಗಳಿಂದ ಶ್ರೀಗಣಪತಿಯನ್ನು ಮುಚ್ಚುವುದರಿಂದ ಪರಿಮಳವು ಶ್ರೀ ಗಣಪತಿಯ ಆಕಾರದಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದ ಶ್ರೀಗಣಪತಿಯ ಪವಿತ್ರಕಗಳ ಆಕಾರಕ್ಕೆ ಈ ಆಕಾರದೆಡೆಗೆ ಬರಲು ಸುಲಭವಾಗುತ್ತದೆ. ಇದನ್ನೇ ‘ಮೂರ್ತಿಯು ಜಾಗೃತವಾಯಿತು’ ಎಂದು ಹೇಳುತ್ತಾರೆ.
೨.ಮೂರ್ತಿಯಲ್ಲಿ ಪವಿತ್ರಕಗಳು ಹೆಚ್ಚು ಪ್ರಮಾಣದಲ್ಲಿರಬೇಕೆಂದು ದಿನ ದಲ್ಲಿ ಮೂರು ಬಾರಿ ಪೂಜೆಯನ್ನು ಮಾಡಿ ಗರಿಕೆಯನ್ನು ಅರ್ಪಿಸುವುದು ಅವಶ್ಯಕ ವಾಗಿರುವುದು:
ಗರಿಕೆಯಲ್ಲಿ ಪರಿಮಳವಿರುವ ತನಕ ಪವಿತ್ರಕಗಳು ಹೆಚ್ಚು ಪ್ರಮಾಣದಲ್ಲಿ ಉಳಿದುಕೊಳ್ಳುತ್ತವೆ. ಮೂರ್ತಿಯಲ್ಲಿ ಪವಿತ್ರಕಗಳು ಹಾಗೆಯೇ ಇರಬೇಕೆಂದು ದಿನದಲ್ಲಿ ಮೂರು ಬಾರಿ ಗರಿಕೆಯನ್ನು ಬದಲಾಯಿಸುತ್ತಾರೆ. ಇದಕ್ಕಾಗಿ ದಿನದಲ್ಲಿ ಮೂರು ಬಾರಿ ಪೂಜೆಯನ್ನು ಮಾಡುತ್ತಾರೆ. (ಎಲೆಗಳ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಸನಾತನದ ‘ಪೂಜಾಸಾಮಗ್ರಿಗಳ ಮಹತ್ವ’ ಎಂಬ ಗ್ರಂಥದಲ್ಲಿ ಕೊಡಲಾಗಿದೆ.)
೨ಆ೨.ಹೂವನ್ನು ಅರ್ಪಿಸುವುದು
೨ಆ೨ಅ.ವಿಶಿಷ್ಟ ದೇವತೆಗಳಿಗೆ ವಿಶಿಷ್ಟ ಹೂಗಳನ್ನು ಏಕೆ ಅರ್ಪಿಸಬೇಕು?:
ವಿಶಿಷ್ಟ ಹೂವುಗಳಲ್ಲಿ ವಿಶಿಷ್ಟ ದೇವತೆಗಳ ಪವಿತ್ರಕಗಳನ್ನು ಅಂದರೆ, ಆ ದೇವತೆಗಳ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ಆಕರ್ಷಿಸುವ ಕ್ಷಮತೆಯು ಇತರ ಹೂವುಗಳಿಗಿಂತ ಹೆಚ್ಚಿರುತ್ತದೆ. ಇಂತಹ ಹೂವುಗಳನ್ನು ಆ ದೇವತೆ ಗಳಿಗೆ ಅರ್ಪಿಸಿದರೆ ಆ ದೇವತೆಗಳ ಮೂರ್ತಿಯಲ್ಲಿನ ಚೈತನ್ಯವು ಸಿಗುತ್ತದೆ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ’)

No comments:

Post a Comment