ಸಾಧಕರೇ, ಸಾಧಕ-ವಕ್ತಾರರಾಗಲು ಪ್ರಯತ್ನಿಸಿ!

‘ಸದ್ಯ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಭೆಗಳ ಆಯೋಜನೆಗಳು ನಡೆದಿವೆ. ಇಂತಹ ಧರ್ಮಸಭೆಗಳಿಗೆ ಉಪಸ್ಥಿತರಿರುವ ಧರ್ಮಾಭಿಮಾನಿಗಳೂ ತಮ್ಮ ಊರಿನಲ್ಲಿ ಅಥವಾ ತಮ್ಮ ಪರಿಸರದಲ್ಲಿ ಧರ್ಮಜಾಗೃತಿ ಸಭೆಯನ್ನು ಏರ್ಪಡಿಸುವಂತೆ ಸಮಿತಿಗೆ ವಿನಂತಿಸಿಕೊಂಡಿವೆ. ಪ್ರಸ್ತುತ ಈ ಸಭೆಗಳಿಗೆ ಹಿಂದೂ ಧರ್ಮಾಭಿಮಾನಿಗಳಿಂದ ಅತ್ಯುತ್ತಮ ಬೆಂಬಲ ದೊರೆಯುತ್ತಿದೆ ಹಾಗೂ ಮುಂಬರುವ ಕಾಲದಲ್ಲಿಯೂ ಈ ಧರ್ಮಸಭೆಗಳಿಗೆ ಅತ್ಯುತ್ತಮ ಬೆಂಬಲ ದೊರಕಲಿದೆ.
‘ಹಿಂದೂ ಧರ್ಮಜಾಗೃತಿ ಸಭೆಗಳ ಶೇ. ೭೦ರಷ್ಟು  ಫಲನಿಷ್ಪತ್ತಿಯು ಸಾಧಕ- ವಕ್ತಾರರ ಮಾರ್ಗದರ್ಶನವನ್ನು ಅವಲಂಬಿಸಿದೆ’ ಎಂದು ಜವಾಬ್ದಾರ ಸಾಧಕರು ಹೇಳಿದ್ದಾರೆ.
ಮುಂಬರಲಿರುವ ಕಾಲದಲ್ಲಿ ಒಂದೇ ವೇಳೆ ಅನೇಕ ಸ್ಥಳಗಳಲ್ಲಿ ಹಿಂದೂ ಧರ್ಮ ಜಾಗೃತಿ ಸಭೆಗಳು ನಡೆಯಲಿವೆ. ಈ ದೃಷ್ಟಿಯಿಂದಲೂ ಸಭೆಯಲ್ಲಿ ಮಾತನಾಡಲು ಬಹಳಷ್ಟು ವಕ್ತಾರರು ಬೇಕಾಗಿದ್ದಾರೆ. ಯಾವ ಸಾಧಕರಿಗೆ ಈ ಸೇವೆ ಮಾಡಲು ಇಷ್ಟವಿದೆಯೋ ಅಂತಹವರು ಸಾಧಕ- ವಕ್ತಾರರಾಗಲು ಪ್ರಯತ್ನಿಸಬೇಕು. ಹಿಂದೂ ಧರ್ಮಜಾಗೃತಿ ಸಭೆಯ ಮೂಲಕ ಬಹಳಷ್ಟು ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳು ನಾಶವಾಗುತ್ತವೆ ಮತ್ತು ಸಮಾಜದಲ್ಲಿ ಸಾಧನೆಗಾಗಿ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ. ಈ ಸಭೆಗಳಲ್ಲಿ ಪ್ರತ್ಯಕ್ಷ ಶ್ರೀಕೃಷ್ಣನ ಉಪಸ್ಥಿತಿಯಿರುತ್ತದೆ ಹಾಗೂ ದೇವತೆಗಳೂ ವ್ಯಾಪಕ ಧರ್ಮ ಪ್ರಸಾರದ ಕಾರ್ಯದಲ್ಲಿ ಸಾಧಕರಿಗೆ ಸಹಾಯ ಮಾಡುತ್ತಿದ್ದಾರೆ. ಸಾಧಕ ಮತ್ತು ಧರ್ಮಾಭಿಮಾನಿಗಳಿಗೆ ಇವೆಲ್ಲವುಗಳ ಲಾಭ ದೊರಕಬಾರದೆಂದು ಕೆಟ್ಟ ಶಕ್ತಿಗಳು ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಸಾಧಕರಿಗೆ ಮತ್ತು ಧರ್ಮಾಭಿಮಾನಿಗಳಿಗೆ ವಿವಿಧ ರೀತಿಗಳಲ್ಲಿ ಮತ್ತು ವಿವಿಧ ಸ್ತರಗಳಲ್ಲಿ ತೊಂದರೆಗಳನ್ನು ನೀಡುತ್ತಿವೆ. ಇಂತಹ ಸಭೆಗಳಿಂದ ಧರ್ಮಾಭಿಮಾನಿಗಳು ಕೃತಿಶೀಲರಾಗಿ ಅವರಿಂದಾಗಿ ದೊಡ್ಡ ಪ್ರಮಾಣದಲ್ಲಿ ಪ್ರಖರ ಸಂಘಟನೆಯಾಗುತ್ತದೆ. ಇದು ಕೆಟ್ಟ ಶಕ್ತಿಗಳಿಗೆ ಇಷ್ಟವಿಲ್ಲದ್ದರಿಂದ ಅವು ನಿರಂತರವಾಗಿ ಈ ಕಾರ್ಯದಲ್ಲಿ ಅಡಚಣೆ ತರಲು ಪ್ರಯತ್ನಿಸುತ್ತಿವೆ. ಆದುದರಿಂದ ಧರ್ಮಸಭೆಯಲ್ಲಿ ಮಾತನಾಡುವ ವಕ್ತಾರರೂ ವಿವಿಧ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಈ ಸೇವೆಯನ್ನು ಮಾಡಲು ಇಷ್ಟಪಡುವವರು ಮುಂದಿನಂತೆ ಪ್ರಯತ್ನಿಸಬೇಕು.
೧.ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಈ ಸೇವೆ ಮಾಡಬಾರದು:
ಏಕೆಂದರೆ ಅವರ ತೊಂದರೆ ಇನ್ನೂ ಹೆಚ್ಚಾಗಬಹುದು ಹಾಗೂ ಸಭೆಯಲ್ಲಿ ಮಾತನಾಡುವಾಗ ಅಡಚಣೆ ಬರಬಹುದು.
೨.ಎಲ್ಲರಿಗಾಗಿರುವ ಉಪಾಯವನ್ನು ನಿಯಮಿತವಾಗಿ ಮಾಡಿ!: 
ಸಾಧಕರು ಎಲ್ಲರಿಗಾಗಿರುವ ಉಪಾಯವನ್ನು ನಿಯಮಿತವಾಗಿ ಮಾಡಬೇಕು. ಯಾವುದೇ ಕಾರಣದಿಂದ ಮತ್ತು ಸ್ವಲ್ಪ ಸಮಯಕ್ಕೂ ಅದನ್ನು ನಿಲ್ಲಿಸಬಾರದು. ಹಸ್ತಲಿಖಿತದ ಉಪಾಯವನ್ನೂ ನಿಯಮಿತವಾಗಿ ಮಾಡುವುದು ಆವಶ್ಯಕವಾಗಿದೆ.
೩.ಅಧ್ಯಯನ ಹೆಚ್ಚಿಸುವುದು:  
ಇಂತಹ ಸಾಧಕರು ನಿರಂತರ ಸದ್ಯದ ಪರಿಸ್ಥಿತಿಯ ಅಧ್ಯಯನ ಮಾಡಬೇಕು. ಇದಕ್ಕಾಗಿ ನಿಯಮಿತವಾಗಿ ‘ಸನಾತನ ಪ್ರಭಾತ’ವನ್ನು ಓದಬೇಕು ಹಾಗೂ ರಾಷ್ಟ್ರ ಪುರುಷರ ಚರಿತ್ರೆ ಇತ್ಯಾದಿ ಲೇಖನಗಳನ್ನು ಓದಬೇಕು.
೪.ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ತೇಜಸ್ವಿ ಅಭಿಮಾನ ಮತ್ತು ಪ್ರೀತಿ ಯನ್ನು ಹೆಚ್ಚಿಸುವುದು: 
ನಮ್ಮಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರಖರ ಅಭಿಮಾನ ಮತ್ತು ಪ್ರೀತಿಯಿದ್ದರೆ ಮಾತ್ರ ಅದು ನಮ್ಮ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಅದಕ್ಕಾಗಿ ಸಾಧಕರು ಸ್ವತಃ ಇದನ್ನು ಹೆಚ್ಚಿಸಿಕೊಂಡರೆ ಮಾತ್ರ ರಾಷ್ಟ್ರ ಮತ್ತು ಧರ್ಮ ಇವುಗಳ ಸ್ಥಿತಿ ಸುಧಾರಿಸಲು ನಾವು ಪ್ರಬಲ ವಿಚಾರಗಳನ್ನು ಮಂಡಿಸಬಹುದು.
೫.ಹಿಂದೂ ಧರ್ಮದ ಹಾನಿ, ದೇವತೆಗಳ ವಿಡಂಬನೆ ಮತ್ತು ಸಂತರು ಹಾಗೂ ರಾಷ್ಟ್ರಪುರುಷರ ನಿರಂತರ ನಡೆಯುತ್ತಿರುವ ಅವಮಾನ ಮತ್ತು ರಾಷ್ಟ್ರದ ಅಧೋಗತಿಯ ಬಗ್ಗೆ ಮನಸ್ಸಿನಲ್ಲಿ ತೀವ್ರ ಆಕ್ರೋಶವಿರುವುದು:  
ಇಂತಹ ಸಾಧಕರ ಮನಸ್ಸಿನಲ್ಲಿ ಹಿಂದೂ ಧರ್ಮಕ್ಕಾಗುತ್ತಿರುವ ಹಾನಿ, ಸಮಾಜದಲ್ಲಿ ಪದೇ ಪದೇ ನಡೆಯುತ್ತಿರುವ ದೇವತೆಗಳ ವಿಡಂಬನೆ ಮತ್ತು ರಾಜಕಾರಣಿಗಳು, ಆಡಳಿತ ಹಾಗೂ ಕೆಲವು ಪ್ರಸಾರಮಾಧ್ಯಮಗಳಿಂದ, ಸಂತರಿಗೆ ಮತ್ತು ರಾಷ್ಟ್ರಪುರುಷರಿಗೆ ಆಗುತ್ತಿರುವ ಅವಮಾನ ಅಲ್ಲದೇ ರಾಷ್ಟ್ರದ ಅಧೋಗತಿ ಇವುಗಳ ಬಗ್ಗೆ ತೀವ್ರ ಆಕ್ರೋಶವಿರುವುದು ಆವಶ್ಯಕವಾಗಿದೆ. ಹಾಗಿದ್ದರೆ ಮಾತ್ರ ಕಟು ಶಬ್ದಗಳಿಂದ ಇವುಗಳನ್ನು ಜನತೆಯ ಎದುರು ಮಂಡಿಸಿ ಈ ಸ್ಥಿತಿಯನ್ನು ಸುಧಾರಿಸಲು ಅವರನ್ನು ಕೃತಿಶೀಲರನ್ನಾಗಿಸಲು ಉದ್ಯುಕ್ತರನ್ನಾಗಿಸಬಹುದು. ಇಂತಹ ಪ್ರಖರ ವಿಚಾರ ಕೇಳಿ ಧರ್ಮಾಭಿಮಾನಿಗಳ ಕ್ಷಾತ್ರವೃತ್ತಿ ಜಾಗೃತವಾಗಬೇಕು ಮತ್ತು ರಾಷ್ಟ್ರ- ಧರ್ಮದ್ರೋಹಿಗಳು ಗಡಗಡ ನಡುಗಬೇಕು.
೬.ಸಾಧನೆಯನ್ನು ಹೆಚ್ಚಿಸುವುದು:  
ಇಂತಹ ಸಾಧಕರು ಸತತವಾಗಿ ಸತ್‌ನಲ್ಲಿ ಇರಲು ಪ್ರಯತ್ನಿಸಬೇಕು ಹಾಗೂ ವಿವಿಧ ಸೇವೆಯನ್ನು ಮಾಡಬೇಕು. ಅದರಿಂದ ತಮ್ಮೊಳಗಿನ ಚೈತನ್ಯವನ್ನು ಹೆಚ್ಚಿಸಲು ಸಹಾಯವಾಗುತ್ತದೆ ಮತ್ತು ಮಾತಿನಲ್ಲಿ ಎಷ್ಟು ಚೈತನ್ಯವಿರುತ್ತದೆಯೋ ಅಷ್ಟೇ ಆ ಭಾಷಣವು ಪ್ರಭಾವೀ ಮತ್ತು ಪರಿಣಾಮಕಾರಿಯಾಗುತ್ತದೆ. ಸಾಧಕ-ವಕ್ತಾರರು ಪ್ರಾರ್ಥನೆ, ಕೃತಜ್ಞತೆ, ನಾಮಜಪ, ಸತತವಾಗಿ ಶ್ರೀಕೃಷ್ಣನಿಗೆ ಮೊರೆ ಹೋಗುವುದು ಮತ್ತು ದೇವರಲ್ಲಿ ಸೇವೆ ಮಾಡಿಸಿಕೊ ಎಂದು ಸತತ ಶರಣಾಗುವುದು ಇತ್ಯಾದಿ ವಿಷಯಗಳನ್ನು ಮಾಡುವುದು ಅತ್ಯಂತ ಆವಶ್ಯಕವಿದೆ. ದೇವರ ಕಾರ್ಯವನ್ನು ದೇವರೇ ಮಾಡಿಸಿಕೊಳ್ಳುತ್ತಾನೆ. ನಾವು ಕೇವಲ ಮಾಧ್ಯಮರಾಗಿದ್ದೇವೆ ಮತ್ತು ಸೇವೆಯನ್ನು ಈಶ್ವರನಿಗೆ ಅಪೇಕ್ಷಿತವಾಗುವಂತೆ ಮಾಡಿದರೆ ನಮ್ಮ ಉನ್ನತಿಯಾಗುತ್ತದೆ. ಸಾಧಕರು ಈ ಸೇವೆಯನ್ನು ಇತರರ ಸಹಾಯ ಪಡೆದು ಅಹಂ ರಹಿತವಾಗಿ ಎಷ್ಟು ಮಾಡುತ್ತಾರೆಯೋ, ಅಷ್ಟೇ ಅವರ ಸೇವೆಯ ಫಲನಿಷ್ಪತ್ತಿ ಹೆಚ್ಚುತ್ತದೆ.
೭.ಹಿಂದೂ ಧರ್ಮಜಾಗೃತಿ ಸಭೆ ಯಲ್ಲಿ ಇತರ ವಕ್ತಾರರು ಮಾಡುವ ಭಾಷಣಗಳ ಅಧ್ಯಯನ ಮಾಡುವುದು: 
ಸಾಧಕರು ಧರ್ಮಜಾಗೃತಿ ಸಭೆಯಲ್ಲಿ ಮಾತನಾಡುವ ಇತರ ವಕ್ತಾರರ ಭಾಷಣಗಳ ಅಧ್ಯಯನ ಮಾಡುವುದು ಆವಶ್ಯಕ ವಾಗಿದೆ. ಅವರು ಮಂಡಿಸುತ್ತಿರುವ ತಾತ್ತ್ವಿಕ ವಿಷಯ, ಅದರಲ್ಲಿನ ಸೂಕ್ಷ್ಮ ಹಾಗೂ ಅವರು ಮಾತನಾಡುವ ಪದ್ಧತಿ, ಧ್ವನಿ ಯಲ್ಲಿನ ಏರಿಳಿತ, ಶಬ್ದೋಚ್ಚಾರ, ಮುಖದ ಹಾವಭಾವ, ಕೈ ಮೇಲೆ ಕೆಳಗೆ ಮಾಡುವುದು, ವ್ಯಾಸಪೀಠದಲ್ಲಿ ಕುಳಿತುಕೊಳ್ಳುವ ಮತ್ತು ನಿಂತುಕೊಳ್ಳುವ ಭಂಗಿ ಇವೆಲ್ಲವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕು.
ಸಭೆಯಲ್ಲಿ ಮಾತನಾಡುವ ವಕ್ತಾರರು ಸಭೆಯಾದ ನಂತರ ಧರ್ಮಾಭಿಮಾನಿಗಳ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡುತ್ತಾರೆ ಹಾಗೂ ಕೃತಿಶೀಲ ಧರ್ಮಾಭಿಮಾನಿಗಳನ್ನು ಹೇಗೆ ಹುಡುಕುತ್ತಾರೆ ಇವೆಲ್ಲವುಗಳ ಅಧ್ಯಯನ ಮಾಡಬೇಕು. ಇದಕ್ಕಾಗಿ ಸಮಾಜದ ಬಗ್ಗೆ ಅಧ್ಯಯನವಿರುವುದು ಅವಶ್ಯಕವಾಗಿದೆ. ಸಾಧಕ-ವಕ್ತಾರರಿಗೆ ಯಾರು ಜಿಜ್ಞಾಸುಗಳಾಗಿದ್ದಾರೆ, ಯಾರು ಸುಮ್ಮನೇ ಪ್ರಶ್ನೆ ಕೇಳುತ್ತಾರೆ ಮತ್ತು ಯಾರು ‘ಕೇವಲ ಸಮಯ ಕಳೆಯಲು ಇದೆಲ್ಲವನ್ನೂ ನೋಡಲು ಬಂದಿದ್ದಾರೆ’ ಇವೆಲ್ಲವು ಗಮನಕ್ಕೆ ಬರಬೇಕು.
೭.ಆದರ್ಶ ಸಾಧಕನೇ ಉತ್ತಮ ಸಾಧಕ-ವಕ್ತಾರನಾಗಬಹುದು:  
ತಾವು ಅಧ್ಯಾತ್ಮ ಪ್ರಸಾರದ ಪ್ರತೀ ಉಪಕ್ರಮವನ್ನು ತಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ ನಡೆಸುತ್ತಿದ್ದೇವೆ. ತಾವು ಯಾವುದೇ ಒಂದು ಸೇವೆಯನ್ನು ಭಾವಪೂರ್ಣ, ಪರಿಪೂರ್ಣ ಮತ್ತು ತಪ್ಪಿಲ್ಲದೇ, ಜೀವವನ್ನು ಪಣಕ್ಕಿಟ್ಟು ಮಾಡಿದರೆ ಅದು ಗುರುಚರಣಗಳಿಗೆ ಸೇರುತ್ತದೆ ಮತ್ತು ಅವರ ಕೃಪೆಯಿಂದಲೇ ತಮ್ಮ ಪ್ರಗತಿಯಾಗುತ್ತದೆ. ಸೇವೆ ಚೆನ್ನಾಗಿ ಮತ್ತು ಪರಿಣಾಮಕಾರಿಯಾಗಲು ಅದರ ಬಗ್ಗೆ ಆಸಕ್ತಿಯಿರಬೇಕು. ಅದರಂತೆ ‘ಇದರಿಂದ ನನಗೆ ಬೇಗನೇ ಗುರುಗಳ ಚರಣಗಳನ್ನು ಸೇರಬೇಕಾಗಿದೆ’ ಎಂಬ ವಿಚಾರವೂ ಆವಶ್ಯಕವಾಗಿದೆ. ಆಗ ಮಾತ್ರ ಸೇವೆಯು ಚೆನ್ನಾಗಿ ಆಗುತ್ತದೆ ಮತ್ತು ಸಮಾಜದಲ್ಲಿ ಅದರ ಪ್ರಭಾವ ಬೀರುತ್ತದೆ. ಇದರಿಂದ ಸಾಧಕರು ತಮ್ಮ ವ್ಯಷ್ಟಿ ಸಾಧನೆ ಚಾಚು ತಪ್ಪದೇ ಮಾಡುವುದು ಆವಶ್ಯಕವಾಗಿದೆ. ಸಮಾಜವು ಕೇವಲ ತಮ್ಮ ಮಾತಿನಿಂದಲ್ಲ, ಕೃತಿಯಿಂದ ಹೆಚ್ಚು ಕಲಿಯು ತ್ತದೆ. ಆದುದರಿಂದ ಪ್ರತಿಯೊಬ್ಬ ಸಾಧಕರು ಪ್ರಥಮವಾಗಿ ‘ಈಶ್ವರನಿಗೆ ಅಪೇಕ್ಷಿತವಿರುವ ಆದರ್ಶ ಸಾಧಕ’ನಾಗಲು ಪ್ರಯತ್ನಿಸಬೇಕು. ಆಗ ಮಾತ್ರ ನಾವು ಯಾವುದೇ ಸೇವೆಯನ್ನು ಚೆನ್ನಾಗಿ ಮಾಡಬಹುದು. ಅದರಿಂದ ಗುರುಕೃಪೆಯಾಗುವುದು ಮತ್ತು ಇನ್ನೂ ಹೆಚ್ಚೆಂದರೆ ನಮ್ಮ ಪ್ರಗತಿಯಾಗುತ್ತದೆ. ಹೀಗಾದರೆ ಮಾತ್ರ ಸಾಧಕರ ವಾಣಿಯಲ್ಲಿ ಚೈತನ್ಯವು ಬರುತ್ತದೆ ಮತ್ತು ಅವರು ಪರಿಣಾಮಕಾರಿ ಅಧ್ಯಾತ್ಮ ಪ್ರಸಾರ ಮಾಡಬಹುದು.
ಸಾಧಕರೇ, ಈ ಆಪತ್ಕಾಲದಲ್ಲಿ ಈಶ್ವರನು ನಮಗೆ ವಿವಿಧ ಸೇವೆಗಳನ್ನು ನೀಡಿದ್ದಾನೆ ಮತ್ತು ಅವನೇ ನಮ್ಮ ಪ್ರಗತಿಗಾಗಿ ಪ್ರೇರೇಪಿಸುತ್ತಾನೆ. ಈ ಅವಕಾಶವನ್ನು ಸಂಪೂರ್ಣ ಉಪಯೋಗಿಸಿ ಅವನ ಕೃಪೆಗೆ ಅರ್ಹರಾಗಲು ತಳಮಳದಿಂದ ಪ್ರಯತ್ನಿಸೋಣ ಮತ್ತು ರಾಷ್ಟ್ರ-ಧರ್ಮದ ಸ್ಥಿತಿ ಸುಧಾರಿಸಲು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ ಮಾಡೋಣ.’ - ಸೌ. ರಾಜಶ್ರೀ ಖೊಲ್ಲಂ (ಮಾರ್ಗಶಿರ ಶುಕ್ಲ ೧೩, ಕಲಿಯುಗ ವರ್ಷ ೫೧೧೨ (೧೯.೧೨. ೨೦೧೦))

No comments:

Post a Comment