೧. ಶಾರೀರಿಕ ದೃಷ್ಟಿಯಿಂದ ಮಹತ್ವ: ಬಾಯಿಯ ಆರೋಗ್ಯಕ್ಕಾಗಿ ಉದಾ. ಹಲ್ಲಿನಲ್ಲಿ ಸಿಲುಕಿರುವ ಆಹಾರ ಕಣಗಳು ಹೊರಟು ಹೋಗಲು, ನಾಲಿಗೆಯ ಮೇಲೆ ಕೀಟಾಣುಗಳ ಬಿಳಿಯುಕ್ತ ಹಳದಿ ಪದರು ತಯಾರಾಗಬಾರದೆಂದು ಬಾಯಿಯನ್ನು ಮುಕ್ಕಳಿಸಬೇಕು.
೨.ಆಧ್ಯಾತ್ಮಿಕ ದೃಷ್ಟಿಯಿಂದ ಮಹತ್ವ: ಭೋಜನದ ನಂತರ ಮನಸ್ಸು ಮತ್ತು ಬುದ್ಧಿಯು ಭೋಜನದ ಪದಾರ್ಥಗಳ ರುಚಿಯ ಬಗ್ಗೆ ಪದೇ ಪದೇ ಚಿಂತನೆ ಮಾಡುತ್ತದೆ. ಬಾಯಿ ಮುಕ್ಕಳಿಸುವುದರಿಂದ ನಾಲಿಗೆಯ ರುಚಿಯ ಮೂಲಕ ಮನಸ್ಸು ಮತ್ತು ಬುದ್ಧಿಯೊಂದಿಗಿರುವ ವಾಸನಾ ಯುಕ್ತ ಸಂಪರ್ಕವು ಕಡಿದು ಹೋಗಲು ಭೋಜನದ ನಂತರ ಕಡಿಮೆ ಪಕ್ಷ ೧೧ ಸಲ ಬಾಯಿ ಮುಕ್ಕಳಿಸಬೇಕು. ಅದು ಸಾಧ್ಯ ವಾಗದಿದ್ದರೆ ೫ ಸಲವಾದರೂ ಬಾಯಿ ಮುಕ್ಕಳಿಸಬೇಕು.’ - ಸೌ.ಪ್ರಾಂಜಲಿ ಜೋಶಿ. ಸನಾತನ ಆಶ್ರಮ, ದೇವದ, ಪನವೇಲ.
No comments:
Post a Comment