ಚೀನಾದ ಸೈನಿಕರು ಮೇಲಿಂದ ಮೇಲೆ ಲೇಹದೊಳಗೆ ನುಸುಳುತ್ತಿದ್ದಾರೆಂದು ನಾಗರಿಕರ ಆರೋಪ

ಹೊಸದೆಹಲಿ : ಚೀನಾವು ಲೇಹ ಪ್ರದೇಶದೊಳಗೆ ಪದೇಪದೇ ನುಸುಳುವಿಕೆ ಮಾಡುತ್ತಿದೆ. ಇಂತಹ ಸ್ಥಿತಿಯಿರುವಾಗ ಕಳೆದ ವರ್ಷ ಚೀನಾದ ಸೈನಿಕರು ಭಾರತದೊಳಗೆ ನುಸುಳಿ ಅಲ್ಲಿ ಆಶ್ರಯಸ್ಥಳ ನಿರ್ಮಿತಿಯ  ಕೆಲಸವನ್ನು ನಿಲ್ಲಿಸಿದ ವಾರ್ತೆಯನ್ನು ಕೇಂದ್ರ ಸರಕಾರ ಖಂಡಿಸಿದೆ. ವಿದೇಶ ಸಚಿವಾಲಯದ ಪ್ರಕಾರ ಈ ವಾರ್ತೆ ನಿರಾಧಾರವಾಗಿದೆ.
(ದುರ್ಬಲ ಭಾರತೀಯ ರಾಜಕಾರಣಿಗಳು ಚೀನಾ, ಪಾಕಿಸ್ತಾನ ಮತ್ತು ಇತರ ನೆರೆ ರಾಷ್ಟ್ರಗಳು ಮಾಡಿದ ಯಾವುದೇ ಆಕ್ರಮಣದ ಸಂದರ್ಭದಲ್ಲಿ ಎಂದೂ ಕಠೋರ ಪಾತ್ರ ನಿರ್ವಹಿಸಲಿಲ್ಲ.  ಆದ್ದರಿಂದಲೇ ಚೀನಾವು ಭಾರತದ ಸಾವಿರಾರು ಚದರ ಕಿ.ಮೀ.ನಷ್ಟು ಭೂಮಿಯನ್ನು ಕಬಳಿಸಿದೆ. ಇಂತಹ ರಾಜಕಾರಣಿಗಳು ರಾಷ್ಟ್ರ ಮತ್ತು ರಾಷ್ಟ್ರದ ನಾಗರಿಕರನ್ನು ಹೇಗೆ ರಕ್ಷಣೆ ಮಾಡುವರು ? - ಸಂಪಾದಕರು)

No comments:

Post a Comment