ಸನಾತನ ಕಳೆದ ೧೦ ವರ್ಷಗಳಿಂದ ಹೇಳುತ್ತಿದ್ದ ಕೆಟ್ಟಕಾಲ ಇಲ್ಲಿದೆ ನೋಡಿ !
ಭಾದೋಹಿ (ಉತ್ತರಪ್ರದೇಶ) : ಗೋಪಾಲಗಂಜ ಪರಿಸರದಲ್ಲಿದ್ದ ಸುಮಾರು ೨೦೦ ವರ್ಷಗಳಷ್ಟು ಹಿಂದಿನ ರಾಧಾಕೃಷ್ಣ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ೧೬ ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವ ಅಷ್ಟಲೋಹಗಳ ಮೂರು ಮೂರ್ತಿಗಳು ಕಳವಾಗಿರುವುದರಿಂದ ಕಳವಳ ನಿರ್ಮಾಣವಾಗಿದೆ. ೧೨ ಜನವರಿಯ ಬೆಳಗ್ಗೆ ಸಮಯದಲ್ಲಿ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಆ ದೇವಸ್ಥಾನದ ಬಾಗಿಲು ತೆರೆದಿರುವುದು ಕಾಣಿಸಿತು. ಈ ಮೂರ್ತಿಗಳ ಎತ್ತರ ೧೦ ಇಂಚು ಹಾಗೂ ಭಾರ ೮ ಕಿಲೋ ಇದೆ. ಸುಮಾರು ೧೫ ದಿನಗಳ ಹಿಂದೆ ಅಜ್ಞಾತರು ಅಲ್ಲಿನ ಕಾಣಿಕೆಹುಂಡಿಯನ್ನು ಅಪಹರಿಸಿದ್ದರು. ಅನಂತರ ಮೂರ್ತಿಗಳು ಕಳವಾದ ಇದು ಎರಡನೇ ಘಟನೆಯಾಗಿವೆ.
(ಮಹಾರಾಷ್ಟ್ರ, ಕರ್ನಾಟಕ, ಗೋವಾದ ನಂತರ ಈಗ ಉತ್ತರಪ್ರದೇಶದಲ್ಲಿಯೂ ಹಿಂದೂಗಳ ದೇವಸ್ಥಾನಗಳಲ್ಲಿ ಕಳ್ಳತನಗಳಾಗುತ್ತಿದೆ. ಇವೆಲ್ಲ ಘಟನೆಗಳನ್ನು ನೋಡುವಾಗ ಎಲ್ಲ ಪಕ್ಷಗಳ ರಾಜಕಾರಣಿಗಳು ಹಿಂದೂಗಳ ಧಾರ್ಮಿಕ ಭಾವನೆಯ ವಿಷಯದಲ್ಲಿ ಎಷ್ಟು ಉದಾಸೀನರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಹಿಂದೂದ್ವೇಷಿ ರಾಜಕಾರಣಿಗಳನ್ನು ಅಧಿಕಾರದಿಂದ ಕೆಳಗಿಳಿಸಿ ರಾಷ್ಟ್ರ ಹಾಗೂ ಧರ್ಮಹಿತ ಬಯಸುವ ರಾಜ ಕಾರಣಿಗಳಿಗೆ ಅಧಿಕಾರವನ್ನು ಒಪ್ಪಿಸುವುದೇ ಪರ್ಯಾಯವಾಗಿದೆ ! - ಸಂಪಾದಕರು)
No comments:
Post a Comment