ಶಿಕ್ಷಣ ಇಲಾಖೆಯ ಕಚೇರಿ ಹೊರಗೆ ಭ್ರಷ್ಟಾಚಾರದ ‘ದರಪಟ್ಟಿ’!

ಭ್ರಷ್ಟಾಚಾರದಲ್ಲಿ ಮುಳುಗಿರುವ ದೇಶ !
ಮೀರತ : ತಮಗೆ ಬೇಕಾದ ಪರಿಕ್ಷಾ ಕೇಂದ್ರ ಪಡೆಯಲು ೨ ಲಕ್ಷ ರೂಪಾಯಿಗಳು, ಉತ್ತರಪತ್ರಿಕೆಗಳನ್ನು ಬರೆದುಕೊಳ್ಳಲು ಅನುಮತಿಗಾಗಿ ೧೦ ಸಾವಿರ ರೂಪಾಯಿಗಳು, ಬದಲಿ ಮಾಡಿಸಿಕೊಳ್ಳುವುದಕ್ಕಾಗಿ ೧ ಲಕ್ಷ ರೂಪಾಯಿಗಳು, ಒಂದು ನಿರ್ದಿಷ್ಟ ಹುದ್ದೆಗೆ ನೇಮಕಗೊಳ್ಳಲು ೫೦ ಸಾವಿರ ರೂಪಾಯಿಗಳು,
೧೧ ನೇ ಮತ್ತು ೧೨ ನೇ ತರಗತಿಗಳಿಗೆ ಅನುಮತಿ ಪಡೆಯುವುದಕ್ಕಾಗಿ ೨ ಲಕ್ಷ ರೂಪಾಯಿಗಳು ಈ ರೀತಿಯ ‘ದರಪಟ್ಟಿ’ಯನ್ನು ಉತ್ತರಪ್ರದೇಶದ ವಿಧಾನ ಪರಿಷತ್ತಿನ ಸದಸ್ಯರಾದ ಓಂ ಪ್ರಕಾಶ ಶರ್ಮರವರು ಶಿಕ್ಷಣ ಇಲಾಖೆಯ ಕಚೇರಿಯ ಹೊರಗೆ ಅಂಟಿಸಿದ್ದಾರೆ. ಶ್ರೀ. ಶರ್ಮರವರು ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಚಳುವಳಿಯ ಒಂದು ಅಂಗವಾಗಿ ಶ್ರೀ. ಶರ್ಮ ರವರು ಮೀರತ ಜಿಲ್ಲೆಯ ಶಿಕ್ಷಣ ಇಲಾಖೆಯ ಭ್ರಷ್ಟಾಚಾರವನ್ನು ಬೆಳಕಿಗೆ ತಂದಿದ್ದಾರೆ.

No comments:

Post a Comment