ಹಿಂದುತ್ವದ ಧ್ವನಿಯನ್ನು ಅದುಮುವ ‘ಐಬಿಎನ್ ಲೋಕಮತ’ ಸಂಪಾದಕ...

ಹಿಂದುತ್ವದ ಧ್ವನಿಯನ್ನು ಅದುಮುವ ‘ಐಬಿಎನ್ ಲೋಕಮತ’ ಸಂಪಾದಕ ನಿಖಿಲ ವಾಗಳೆಯ ಖಂಡನೀಯ ಪ್ರಯತ್ನ!



ಮುಂಬೈ: ಚರ್ಚೆಯ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ.ಅಭಯ ವರ್ತಕರು ಗೋವಾದಲ್ಲಿ  ಮೂರ್ತಿಭಗ್ನದ ಸಂದರ್ಭದಲ್ಲಿ ಮಾಹಿತಿ ನೀಡುತ್ತಿರುವಾಗ ಮರಾಠಿ ವಾರ್ತಾವಾಹಿನಿ ‘ಐಬಿಎನ್ ಲೋಕಮತ’ದ ಸಂಪಾದಕರಾದ ನಿಖಿಲ ವಾಗಳೆಯವರು ಹಿಂದುತ್ವಕ್ಕಾಗಿ ಧ್ವನಿಯೆತ್ತಿದ ಶ್ರೀ.ವರ್ತಕರ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ವಾಗಳೆಯವರು ಸನಾತನ ಸಂಸ್ಥೆಯ ಮೇಲೆ ಅಪ್ಪಟ ಸುಳ್ಳು ಆರೋಪ ಹೊರಿಸಿದರು. ‘ಗೋವಾದಲ್ಲಿನ ದೇವಸ್ಥಾನಗಳನ್ನು ಹಿಂದೂದ್ರೋಹಿಗಳು ಒಡೆದು ಹಾಕಿದ್ದಲ್ಲ. ಸನಾತನವು ಸಾದರ ಪಡಿಸಿದ ಈ ಚಿತ್ರಗಳು ಗಣಕ ಯಂತ್ರದ ಕೈಚಳಕದಿಂದ (ಫೋಟೋ ಟ್ರಿಕ್) ತಯಾರಿಸಿದ್ದಾಗಿವೆ’, ಎಂದು ಹೇಳಿ ವಾಗಳೆಯವರು ವೀಕ್ಷಕರನ್ನು ದಾರಿ ತಪ್ಪಿಸಿ ಸನಾತನದ ಬಗ್ಗೆ ವೀಕ್ಷಕರಲ್ಲಿ ತಪ್ಪು ಅಭಿಪ್ರಾಯ ನಿರ್ಮಾಣ ಮಾಡುವ ಪ್ರಯತ್ನ ಮಾಡಿದರು. ಇದನ್ನು ಸಹಿಸಲಾಗದೆ ಶ್ರೀ.ವರ್ತಕರು ಸ್ವಾಭಿಮಾನದಿಂದ ವಾಹಿನಿಯನ್ನು ಬಹಿರಂಗವಾಗಿ ಖಂಡಿಸಿ ಕಾರ್ಯಕ್ರಮವನ್ನು ಅರ್ಧದಲ್ಲಿಯೇ ಬಿಟ್ಟು ಹೊರಟು ಹೋದರು.

ಜನವರಿ ೨೧ರಂದು ‘ಆಜ್‌ಚಾ ಸವಾಲ’ ಈ ಕಾರ್ಯಕ್ರಮದಲ್ಲಿ ‘ಗ್ರಹಂ ಸ್ಟೆನ್ಸ್’ನ ಹತ್ಯೆಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಿಂಗ ಇವರಿಗೆ ನೀಡಿದ ಜೀವಾವಧಿ ಶಿಕ್ಷೆ ಸಾಕೇ?’ ಈ ವಿಷಯದಲ್ಲಿ ಚರ್ಚಾಕೂಟವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀ.ಅಭಯ ವರ್ತಕರು ಹಾಗೂ ಭಾರತೀಯ ಜನತಾ ಪಕ್ಷದ ಮುಂಬೈ ಪ್ರದೇಶದ ಪ್ರಧಾನ ಕಾರ್ಯದರ್ಶಿ ಶ್ರೀ.ಅತುಲ ಭಾತಖಳಕರ, ಕಾಂಗ್ರೆಸ್ಸಿನ ವಕ್ತಾರ ಹುಸೇನ ದಳವಾಯಿ ಮತ್ತು ಪತ್ರಕರ್ತರಾದ ಪ್ರದೀಪ ದೇಶಪಾಂಡೆ ಇವರು ಭಾಗವಹಿಸಿದ್ದರು. ಶ್ರೀ.ವರ್ತಕರು ಮತ್ತು ಶ್ರೀ.ಭಾತಖಳಕರ ಇವರು ದೇಶದ ವಿವಿಧ ಭಾಗದಲ್ಲಿ ಕ್ರೈಸ್ತ ಮಿಶನರಿಗಳಿಂದ ಹಿಂದೂಗಳನ್ನು ಮೋಸಗೊಳಿಸಿ ಮತಾಂತರ ಮಾಡಲಾಗುತ್ತದೆ ಎಂದು ಹೇಳಿದರು. ಅದಕ್ಕೆ ದೇಶಪಾಂಡೆಯವರು ಇದರ ವಿಷಯ ಯಾವುದೇ ಪ್ರಸಾರ ಮಾಧ್ಯಮದಲ್ಲಿ ಪ್ರಸಿದ್ಧಿಯಾಗಿರುವುದನ್ನು ನಾನು ನೋಡಿಲ್ಲ’ ಎಂದರು. ಆಗ ಅಭಯ ವರ್ತಕರು ‘ಹಿಂದೂಗಳ ಸಂದರ್ಭದಲ್ಲಿ ನಡೆಯುವ ಅನೇಕ ಕುಕೃತ್ಯಗಳ ವಾರ್ತೆಗಳನ್ನು ನೀಡುವುದೇ ಇಲ್ಲ, ಉದಾಹರಣೆಗಾಗಿ ಗೋವಾದಲ್ಲಿ ಸಾಯಿಬಾಬಾರವರ ಮೂರ್ತಿಯನ್ನು ಒಡೆದು ಹಾಕಲಾಯಿತು. ಅದರ ವಿಷಯದಲ್ಲಿ ನಾವು ಪುರಾವೆ ಮತ್ತು ಮಾಹಿತಿಯನ್ನು ‘ಐಬಿಎನ್ ಲೋಕಮತಕ್ಕೆ ನೀಡಿದ್ದೆವು. ಆ ವಾರ್ತೆಯೇ ಪ್ರಸಿದ್ಧಿಯಾಗಿಲ್ಲ’ ಎಂದರು. ಈ ವಾಕ್ಯಗಳನ್ನು ಪೂರ್ಣ ಗೊಳಿಸುವಾಗಲೇ ವಾಗಳೆಯವರು ಸನಾತನ ಸಂಸ್ಥೆಯನ್ನು ದೂಷಿಸಲು ಆರಂಭಿಸಿದರು.
ಅಭಯ ವರ್ತಕರ ಸ್ವಾಭಿಮಾನದ ನಡೆ!
ಈ ಸಂದರ್ಭದಲ್ಲಿ ಈ ಮಾಹಿತಿ ಸತ್ಯವಾಗಿದೆ ಎಂದು ಶ್ರೀ.ವರ್ತಕರು ಪದೇ ಪದೇ ಹೇಳುತ್ತಿದ್ದರು, ‘ನಮಗೆ ಮಾಹಿತಿ ಹಕ್ಕು ಕಾನೂನಿನ ಆಧಾರದಲ್ಲಿ ಸಿಕ್ಕಿದ ಮಾಹಿತಿಯನ್ನು ನಾವು ನಿಮಗೆ ಕೊಟ್ಟಿದ್ದೇವೆ. ಪೊಲೀಸರು ವಿಧಾನಸಭೆಯಲ್ಲಿ ಮಾಡಿದ ನಿವೇದನೆಯನ್ನೂ ನಿಮಗೆ ಕೊಡುತ್ತಿದ್ದೇವೆ. ನಾವು ಯಾವುದೇ ಸುಳ್ಳು ಹೇಳಿಲ್ಲ. ಸನಾತನ ಸಂಸ್ಥೆಗೆ ಯಾರದ್ದೇ ವ್ಯಾಸಪೀಠದ ಅವಶ್ಯಕತೆಯಿಲ್ಲ. ಸೂತ್ರಸಂಚಾಲಕರಾಗಿರುವುದರಿಂದ ವಾಗಳೆಯವರು ಏನು ಬೇಕಾದರೂ ಮಾತ ನಾಡಬಹುದು; ಆದರೆ ನಮ್ಮ ಮಾಹಿತಿ ಸತ್ಯವಾಗಿದೆ’ ಎಂದರು. (ಸತ್ಯದ ಪರವನ್ನು ಹಿಡಿದಿಟ್ಟುಕೊಂಡ ಶ್ರೀ.ಅಭಯ ವರ್ತಕರಿಂದ ಇತರ ಹಿಂದುತ್ವವಾದಿಗಳು ಪಾಠ ಕಲಿಯುವರೇ? -ಸಂಪಾದಕರು) ಅದರಿಂದ ಉದ್ವಿಗ್ನರಾದ ವಾಗಳೆ ‘ವರ್ತಕರೇ, ನೀವು ಸಭ್ಯತೆಯ ಮಿತಿಮೀರುತ್ತಿದ್ದೀರಿ. ಪ್ರಜಾಪ್ರಭುತ್ವವನ್ನು ದುರುಪಯೋಗಪಡಿಸುತ್ತಿದ್ದೀರಿ’ ಎಂದರು. ಆಗ ಶ್ರೀ.ವರ್ತಕರು ಸ್ವಾಭಿಮಾನದಿಂದ ಎದ್ದು ನಿಂತರು ಮತ್ತು ‘ಕೋಟಿಗಟ್ಟಲೆ ಜನರು ನೋಡುತ್ತಿದ್ದಾರೆ. ಯಾರು ಮಿತಿ ಮೀರುತ್ತಿದ್ದಾರೆಂಬುದು ಅವರಿಗೆ ತಿಳಿಯುತ್ತದೆ. ನಾನು ನಿಮ್ಮ ಕಾರ್ಯಕ್ರಮವನ್ನು ಬಹಿರಂಗವಾಗಿ ಖಂಡಿಸಿ ಎದ್ದು ಹೋಗುತ್ತಿದ್ದೇನೆ. ಸನಾತನ ಸಂಸ್ಥೆಗೆ ಸುಳ್ಳು ಹೇಳುವ ಅವಶ್ಯಕತೆಯಿಲ್ಲ’ ಎಂದರು. (ಹಿಂದೂಗಳ ಧಾರ್ಮಿಕ ಭಾವನೆಗಾಗಿ ವ್ಯಾಸಪೀಠವನ್ನು ತ್ಯಜಿಸುವ ಹಾಗೂ ಹಿಂದುತ್ವದ ಧ್ವನಿಯನ್ನು ಅದುಮುವ ಪ್ರಯತ್ನವನ್ನು ಧೂಳೀಪಟ ಮಾಡುವ ಶ್ರೀ.ಅಭಯ ವರ್ತಕರಿಗೆ ಅಭಿನಂದನೆ ! -ಸಂಪಾದಕರು)
ಈ ಘಟನೆಯಿಂದ ‘ಐಬಿಎನ್ ಲೋಕಮತ’ ಈ ವಾಹಿನಿ ಹಿಂದೂಗಳ ಕಪ್ಪು ಪಟ್ಟಿಯಲ್ಲಿ ದಾಖಲಾಗಿದೆ. ಅನೇಕ ಹಿಂದೂಗಳು ಶ್ರೀ.ವರ್ತಕರ ಕೃತಿಯಿಂದ ಪ್ರಭಾವಿತರಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಅನೇಕ ಹಿಂದೂಗಳು ‘ನಾವು ಈ ವಾಹಿನಿಗೆ ಬಹಿಷ್ಕಾರ ಹಾಕಿ ಅದನ್ನು ಮುಚ್ಚಬೇಕೆಂದು ಕೇಬಲಚಾಲಕರಿಗೆ ಆಗ್ರಹಿಸುವುದಾಗಿ ಹೇಳಿದರು.’
ಹಿಂದೂಗಳೇ, ನಿಮ್ಮ  ಧಾರ್ಮಿಕ ಭಾವನೆಯನ್ನು ಅಗೌರವಿಸುವ ವಾಹಿನಿಗಳಿಗೆ ಬಹಿಷ್ಕಾರ ಹಾಕಿ ಅವರಿಗೆ ಅರ್ಥವಾಗುವಂತಹ ಭಾಷೆಯಲ್ಲಿಯೇ ಕಾನೂನು ಮಾರ್ಗದಿಂದ ಉತ್ತರಿಸಿ!
‘ಐಬಿಎನ್ ಲೋಕಮತದ ‘ಆಜ್ ಚಾ ಸವಾಲ’ ಈ ಕಾರ್ಯಕ್ರಮವು ಪ್ರಸಾರಮಾಧ್ಯಮ ಇತಿಹಾಸದ ಕಪ್ಪು ಚುಕ್ಕೆ!
ಸನಾತನದ ಪ್ರವರ್ತಕರಾದ ಶ್ರೀ.ಅಭಯ ವರ್ತಕರವರು ಸ್ವಾಭಿಮಾನ ದಿಂದ ಕಾರ್ಯಕ್ರಮವನ್ನು ತ್ಯಜಿಸಿದರು!

ಹಿಂದೂಗಳೇ, ‘ಐಬಿಎನ್ ಲೋಕಮತ’ದ ಬಗ್ಗೆ ಈ ವಾರ್ತೆಯನ್ನು ನೀಡುವ ಉದ್ದೇಶವನ್ನು ತಿಳಿದುಕೊಳ್ಳಿರಿ!

ಶ್ರೀ.ಅಭಯ ವರ್ತಕರು ‘ಐಬಿಎನ್ ಲೋಕಮತ’ದ ಕಾರ್ಯಕ್ರಮಕ್ಕೆ ಹಿಂದೂಗಳ ಪ್ರತಿನಿಧಿಯಾಗಿ ಹೋಗಿದ್ದರು. ಅವರ ಅವಮಾನವೆಂದರೆ, ಇದು ಸನಾತನದ ಅವಮಾನವಲ್ಲ, ಅದು ಸಮಸ್ತ ಹಿಂದೂ ಧರ್ಮೀಯರ ಅವಮಾನವಾಗಿದೆ. ಜಾತ್ಯತೀತ ಪ್ರಸಾರ ಮಾಧ್ಯಮಗಳು ಹಿಂದೂಗಳ ಧಾರ್ಮಿಕ ಭಾವನೆಯನ್ನು ಹೇಗೆ ಹೀಯಾಳಿಸುತ್ತವೆ ಎಂಬುದನ್ನು ತೊರಿಸುವುದಕ್ಕಾಗಿ ಈ ವಾರ್ತೆಯನ್ನು ನೀಡುತ್ತಿದ್ದೇವೆ. ಎಲ್ಲ ಹಿಂದೂ ಬಾಂಧವರು ಇದರ ವಿರುದ್ಧ ಧ್ವನಿಯೆತ್ತಬೇಕು.
ಹಿಂದೂಗಳೇ, ನಿಮ್ಮ ಶ್ರದ್ಧಾಸ್ಥಾನಗಳ ಮೇಲಾಗುವ ಆಕ್ರಮಣದ ಬಗ್ಗೆ ಬಾಯಿ ಮುಚ್ಚಿ ಕುಳಿತುಕೊಳ್ಳುವ ಮತ್ತು ಆ ಆಕ್ರಮಣಗಳು ಸುಳ್ಳೆಂದು ನಿರ್ಧರಿಸಿರುವ ಇಂತಹ ಪ್ರಸಾರ ಮಾಧ್ಯಮಗಳ ಮೇಲೆ ಬಹಿಷ್ಕಾರ ಹಾಕಿರಿ!

ಖಂಡಿಸಲು ಸಂಪರ್ಕ
ದೂ.:(೦೨೨) ೬೬೮೯೦೦೦೦
ಫ್ಯಾಕ್ಸ್: (೦೨೨) ೬೬೭೧೪೭೬೫

No comments:

Post a Comment