ಬಾಂಗ್ಲಾದೇಶಿ ನುಸುಳುಕೋರರಿಗೆ ಬೆಂಗಳೂರು ಆಶ್ರಯತಾಣ!

ಪಾಕ್ ಮತ್ತು ಬಾಂಗ್ಲಾದೇಶ ನುಸುಳುಕೋರರಿಂದ ವ್ಯಾಪಿಸಿದ ಭಾರತ!
ಬೆಂಗಳೂರು: ಬಂಗಾಲ ಮಾರ್ಗದಿಂದ ಭಾರತದೊಳಗೆ ನುಸುಳಿರುವ ಬಾಂಗ್ಲಾದೇಶಿ ನುಸುಳುಕೋರರಿಗೆ ಬೆಂಗಳೂರು ಒಂದು ಆಶ್ರಯತಾಣವಾಗಿದೆ. ಈ ನಗರದಲ್ಲಿ ನುಸುಳಿದ ಸಾವಿರಾರು ಬಾಂಗ್ಲಾದೇಶಿ ನಾಗರಿಕರಲ್ಲಿ ಅನೇಕರು ಕಾನೂನುಬಾಹಿರ ವ್ಯವಹಾರದಲ್ಲಿ ತೊಡಗಿದ್ದಾರೆ. ಕೆಲವರು ನಕಲಿ ನೋಟುಗಳನ್ನು ಚಲಾವಣೆಯಲ್ಲಿ ತರುತ್ತಿದ್ದಾರೆ. ಕೆಲವರು ಅಮಲುಪದಾರ್ಥವನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಳ್ಳತನ, ದರೋಡೆಯಲ್ಲಿ ತೊಡಗಿದ್ದಾರೆ. ಇವರಲ್ಲಿನ ಅನೇಕ ಜನರು ಭಯೋತ್ಪಾದನಾ ಚಟುವಟಿಕೆಯಲ್ಲಿಯೂ ತೊಡಗಿದ್ದಾರೆ. (ದೇಶದಲ್ಲಿ ಭಯೋತ್ಪಾದನೆಯನ್ನು ಹಬ್ಬಿಸಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವ ಸಾವಿರಾರು ಬಾಂಗ್ಲಾದೇಶಿಯರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಭಾರತದಲ್ಲಿ ಆಶ್ರಯ ನೀಡುವ ಎಲ್ಲ ಪಕ್ಷದ ರಾಜಕಾರಣಿಗಳು ದೇಶದ್ರೋಹಿಗಳೇ ಆಗಿದ್ದಾರೆ. ಇಂತಹ ರಾಜಕಾರಣಿಗಳ ಕೈಯಲ್ಲಿ ದೇಶವು ಎಂದಾದರೂ ಸುರಕ್ಷಿತವಾಗಿರುವುದೇ? ನಾಗರಿಕರೇ, ಇಂತಹ ಸ್ವಾರ್ಥಿ ರಾಜ ಕಾರಣಿಗಳನ್ನು ಇನ್ನೆಷ್ಟು ಕಾಲ ಪೋಷಿಸುತ್ತೀರಿ?-ಸಂಪಾದಕರು) ‘ನಗರದಲ್ಲಿ ಎಷ್ಟೋ ಬಾಂಗ್ಲಾದೇಶಿ ನುಸುಳುಕೋರರು ಅನಧಿಕೃತವಾಗಿ ವಾಸಿಸುತ್ತಿದ್ದಾರೆ ಎಂಬ ಬಗ್ಗೆ ನಿಖರ ಅಂಕಿಅಂಶಗಳು ನಮ್ಮಲ್ಲಿ ಇಲ್ಲ. ಇದರಲ್ಲಿನ ಅನೇಕ ಜನರು ಭಯೋತ್ಪಾದನೆಯ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ನಮಗೆ ತಿಳಿದಿರುತ್ತದೆ’, ಎಂದು ಪೊಲೀಸ್ ಉಪಾಯುಕ್ತ ಅಲೋಕ ಕುಮಾರ ಇವರು ಹೇಳಿದ್ದಾರೆ.

No comments:

Post a Comment