ಧರ್ಮಕಾರ್ಯರೂಪಿ ಕಾರ್ಯ ಮಾಡುತ್ತಿರುವ ಸನಾತನ ಪ್ರಭಾತ ಸೇವಕರ ಕೃತಜ್ಞತಾರೂಪಿ ಶಬ್ದಗಳು

ಸನಾತನ ಪ್ರಭಾತದ ಈ ಧರ್ಮಕಾರ್ಯರೂಪಿ ಸೇವೆಯನ್ನು ಅನೇಕ ಸಾಧಕರು ಮಾಡಿ ಹೋದರು. ಆದರೆ ಪ.ಪೂ. ಗುರುದೇವರು ಯಾರನ್ನೂ ಅಲ್ಲೇ ಸಿಲುಕಿಸಲಿಲ್ಲ. ಅವರಿಗೆ ಮುಂದಿನ ಸೇವೆಯನ್ನು ನೀಡಿದರು. ಪ.ಪೂ.ಗುರುದೇವರ ಕೃಪೆಯಿಂದ ನಮಗೆ ಸಾಪ್ತಾಹಿಕ ಸನಾತನ ಪ್ರಭಾತದ ಸೇವೆಯನ್ನು ಮಾಡುವ ಅವಕಾಶವು ಲಭಿಸಿದೆ. ಅದು ಅನುವಾದ  ಇರಬಹುದು, ವಿತರಣೆ ಇರಬಹುದು. ಓರ್ವ ಗುರುಗಳು ಯಾವುದರಿಂದಲೂ ತಮ್ಮ ಧರ್ಮಕಾರ್ಯವನ್ನು ಮಾಡಿಸುತ್ತಾರೆ ಎಂಬುದಕ್ಕೆ ಈ ಸೇವಕರೇ ಉದಾಹರಣೆ ಎಂದೆನಿಸುತ್ತದೆ. ಏಕೆಂದರೆ ನಮ್ಮಂತಹ ಅಜ್ಞಾನಿಗಳನ್ನು ತಂದು ಕುಳ್ಳಿರಿಸಿ ತಮ್ಮ ಈ ಧರ್ಮಕಾರ್ಯಕ್ಕೆ ಈ ಅಜ್ಞಾನಿಗಳನ್ನು ಮಾಧ್ಯಮವನ್ನಾಗಿಸಿದ್ದಕ್ಕಾಗಿ ಪ.ಪೂ.ಗುರು ದೇವರ ಚರಣಗಳಲ್ಲಿ ಎಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಅನಿಸುತ್ತದೆ. ಇದರಲ್ಲಿ ಆ ಸೇವೆಯನ್ನು ಕಲಿಯದೇ ಮಾಡುತ್ತಾ ಮಾಡುತ್ತಾ ಕಲಿತವರೇ ಹೆಚ್ಚು. ಗುರುಗಳಿಗೆ ಎಲ್ಲವೂ ಸಾಧ್ಯವಿರುವಾಗ ನಮ್ಮಿಂದ ಈ ಸಾಪ್ತಾಹಿಕದ ಸೇವೆ ಮಾಡಲು ಸಾಧ್ಯವಿಲ್ಲ ಎಂಬ ವಿಚಾರವು ಯಾವುದೇ ಸಾಧಕರಲ್ಲಿ ಬಂದಿಲ್ಲ. ಅವರು ನಮಗೆ ಈ ಸೇವೆಯನ್ನು ನೀಡಿದ್ದಕ್ಕಾಗಿ ಒಂದಿಷ್ಟು ಸನಾತನ ಪ್ರಭಾತಕ್ಕೆ ಕೃತಜ್ಞತೆ ಅರ್ಪಿಸುವ ಶಬ್ದಗಳನ್ನು ಬರೆಯೋಣವೆಂದೆನಿಸಿತು.
ಸನಾತನ ಪ್ರಭಾತ ಸೇವೆಯಲ್ಲಿ ಸಾಧಕರ ಸಂಖ್ಯೆ ಕಡಿಮೆಯಿದೆ ಮತ್ತು ಯಾವುದೇ ಸಾಧಕರಲ್ಲಿ ಅದರ ಕೌಶಲ್ಯವಿಲ್ಲ. ನಾವೆಷ್ಟೋ ತಪ್ಪು ಮಾಡುತ್ತೇವೆ. ಪ್ರತೀ ಬಾರಿ ಮಾಡಿದ ತಪ್ಪನ್ನೇ ಮಾಡುತ್ತೇವೆ. ಆದರೂ ಗುರುದೇವರು ಈ ಸಾಧಕ ಸರಿಯಿಲ್ಲ ಎಂದು ಯಾವತ್ತೂ ದೂರ ಮಾಡಲಿಲ್ಲ. ಇನ್ನೂ ಪ್ರಯತ್ನಿಸಿ ಎಂದು ಸಂತರ ಹಾಗೂ ಬೇರೆ ಬೇರೆ ಸಾಧಕರ ಮಾಧ್ಯಮದಿಂದ ಯೋಗ್ಯ ದೃಷ್ಟಿಕೋನವನ್ನು ನೀಡುತ್ತಿದ್ದಾರೆ. ನಮ್ಮಲ್ಲಿ ದೋಷ, ಅಹಂ ತುಂಬಿದ್ದರೂ ಗುರುದೇವರು ನಮಗೆ ಸನಾತನ ಪ್ರಭಾತ ಸಮಾಜದಲ್ಲಿ ಅಧ್ಯಾತ್ಮದ ಬೀಜ ಬಿತ್ತುವ ಅವಕಾಶ ನೀಡಿದ್ದಾರೆ. ಇದರಲ್ಲಿ ಸೇವೆ ಮಾಡಲು ಯಾವುದೇ ಯೋಗ್ಯತೆಯಿಲ್ಲದಿದ್ದರೂ ನಮಗೆ ಈ ಸೇವೆಯನ್ನು ನೀಡಿದ್ದಕ್ಕೆ ನಾವು ಅನಂತಾನಂತ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಈ ಶಬ್ದಗಳು ಕೃತಜ್ಞತೆಯನ್ನು ವ್ಯಕ್ತಪಡಿಸಲು ಅಪೂರ್ಣವಾಗಿವೆ. ಆದರೆ ನಿಜವಾಗಲೂ ನಮ್ಮಲ್ಲಿ ಇದರ ಬಗ್ಗೆ ಕೃತಜ್ಞತಾಭಾವವು ಇನ್ನೂ ನಿರ್ಮಾಣವಾಗಿಲ್ಲ. ಅದಕ್ಕಾಗಿ ನಾವು ಪ.ಪೂ.ಗುರುದೇವರಲ್ಲಿ ಹಾಗೂ ಧರ್ಮಕಾರ್ಯಸ್ವರೂಪ ಸನಾತನ ಪ್ರಭಾತದ ಕ್ಷಮೆಯಾಚಿಸುತ್ತಿದ್ದೇವೆ.
ಹೇ ಶ್ರೀಕೃಷ್ಣಾ, ಮುಂದೆಯೂ ನಮ್ಮಿಂದ ಗುರುಗಳಿಗೆ ಅಪೇಕ್ಷಿತವಿರುವಂತೆ ಪರಿಪೂರ್ಣ ಹಾಗೂ ಭಾವಪೂರ್ಣ ಸೇವೆಯಾಗಲಿ. ನಮ್ಮ ಸ್ವಭಾವದೋಷ ಹಾಗೂ ಅಹಂ ಕಡಿಮೆಗೊಳಿಸಲು ನಮ್ಮಿಂದ ಯೋಗ್ಯ ರೀತಿಯಲ್ಲಿ ಪ್ರಯತ್ನವಾಗಿ ನಮ್ಮಲ್ಲಿ ಸತತ ಕೃತಜ್ಞತಾಭಾವವು ತುಂಬಲಿ. -ಸನಾತನ ಪ್ರಭಾತದ ಸೇವಕರು

No comments:

Post a Comment