ಎಲ್ಲ ಜನ್ಮಹಿಂದೂಗಳು ‘ಕರ್ಮಹಿಂದೂ’ಗಳಾಗಬೇಕು ಎಂಬುದು...

ಎಲ್ಲ ಜನ್ಮಹಿಂದೂಗಳು ‘ಕರ್ಮಹಿಂದೂ’ಗಳಾಗಬೇಕು ಎಂಬುದು ‘ಸನಾತನ ಪ್ರಭಾತ’ಕ್ಕೆ ಅಪೇಕ್ಷಿತವಿದೆ !
ವಾಚಕರೇ, ‘ಸನಾತನ ಪ್ರಭಾತ’ದಲ್ಲಿನ ಯೋಗ್ಯ ದೃಷ್ಟಿಕೋನವನ್ನು ತಿಳಿದುಕೊಳ್ಳಿರಿ!



‘ಸನಾತನ ಪ್ರಭಾತ’ವು ಇತ್ತೀಚೆಗಿನ ಹಿಂದೂ ಧರ್ಮ ಮತ್ತು ಹಿಂದುತ್ವದ ರಕ್ಷಣೆಗಾಗಿ ಕಾರ್ಯ ಮಾಡುತ್ತಿರುವ ಒಂದು ಮಹತ್ವದ ಪತ್ರಿಕೆಯಾಗಿದೆ. ಇದರಲ್ಲಿನ ವಾರ್ತೆಗಳನ್ನು ಓದಿದಾಗ ವಾಚಕರ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಆ ಪ್ರಶ್ನೆಗಳು ಮತ್ತು ಅವುಗಳ ಉತ್ತರವನ್ನು ಮುಂದೆ ನೀಡಲಾಗಿದೆ. ಅದರಿಂದ ಜನಸಾಮಾನ್ಯರ ಮನಸ್ಸಿನಲ್ಲಿರುವ ಸಂದೇಹಗಳು ನಿವಾರಣೆಯಾಗಿ ಈ ಪತ್ರಿಕೆಯ ಮಹತ್ವವು ತಿಳಿಯುವುದು. ಅಷ್ಟೇ ಅಲ್ಲ, ಈ ಪತ್ರಿಕೆಯು ಕೇವಲ ವಾಚನ ಮಾಡಿ ಅಥವಾ ಮೇಲಿಂದ ದೃಷ್ಟಿ ಹಾಯಿಸಿ ಬದಿಯಲ್ಲಿಡಲಿಕ್ಕಾಗಿ ಇರದೇ ಅದನ್ನು ಓದಿ ಅದರಲ್ಲಿನ ವಿಷಯಗಳನ್ನು ಚಿಂತನ-ಮನನ ಮಾಡಿ ಅವುಗಳನ್ನು ಕೃತಿ ಮಾಡಲಿಕ್ಕಾಗಿಯೇ ಇವೆ ಎಂಬುದೂ ಗಮನಕ್ಕೆ ಬರುವುದು.
ಸನಾತನ ಪ್ರಭಾತದಲ್ಲಿ ಯೋಗ್ಯಾಯೋಗ್ಯ ಏನೆಂಬುದನ್ನು ಸಂಪಾದಕೀಯ ಟಿಪ್ಪಣಿಯಿಂದ ತಿಳಿದುಕೊಂಡು ನಿಮಗೂ ಯಾವುದೇ ಒಂದು ಸಮಸ್ಯೆಯ ಮೂಲಕ್ಕೆ ಹೋಗಿ ಸರಿಯಾದ ನಿವಾರಣೆಯನ್ನು ಕಂಡುಹಿಡಿಯುವ ಅಭ್ಯಾಸವಾಗಬಹುದು. ಇಂತಹ ನಿವಾರಣೋಪಾಯಗಳನ್ನು ಕೃತಿಯಲ್ಲಿ ತಂದರೆ ಮಾತ್ರ ನಾವು ಆ ಸಮಸ್ಯೆಯಿಂದ ಹೊರ ಬರಬಹುದು. ಇದಕ್ಕಾಗಿ ಸನಾತನ ಪ್ರಭಾತವನ್ನು ಓದುವುದು ಮಾತ್ರವಲ್ಲ, ಅದನ್ನು ಅಧ್ಯಯನ ಮಾಡುವ ಅವಶ್ಯಕತೆಯಿದೆ. ಈ ಪ್ರಶ್ನೋತ್ತರವನ್ನು ಓದಿ ಬಹಳಷ್ಟು ಹಿಂದೂಗಳಿಗೆ ಹಿಂದೂ ಧರ್ಮದ ವಿಷಯದಲ್ಲಿ ಏನಾದರೂ ಮಾಡುವ ಸದ್ಬುದ್ಧಿ ಬರಲಿ ಎಂದು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ.


೧.‘ಸನಾತನ ಪ್ರಭಾತ’ದ ‘ಮುಖ್ಯ ವಾರ್ತೆ’ - ರಾಷ್ಟ್ರ ಮತ್ತು ಹಿಂದೂ ಧರ್ಮದ ಮೇಲಾಗುವ ಆಘಾತಗಳು!
ಪ್ರಶ್ನೆ : ‘ಸನಾತನ ಪ್ರಭಾತ! ಒಂದು ಹಿಂದುತ್ವನಿಷ್ಠ ನಿಯತಕಾಲಿಕೆ! ಹಿಂದೂಗಳನ್ನು ಜಾಗೃತಗೊಳಿಸುವ ಒಂದು ಕಿಡಿ!’ ಎಂಬ ವಿಶೇಷಣವನ್ನು ಕೇವಲ ‘ಸನಾತನ ಪ್ರಭಾತ’ಕ್ಕೇ ಏಕೆ ಜೋಡಿಸುತ್ತಾರೆ?
ಉತ್ತರ : ಯಾವ ವಾರ್ತೆಗಳು ಇತರ ಪತ್ರಿಕೆಗಳಿಗೆ ‘ವಾರ್ತೆ’ಎಂದು ಅನಿಸುವುದಿಲ್ಲವೋ, ಆ ವಾರ್ತೆಗಳೇ ‘ಸನಾತನ ಪ್ರಭಾತ’ದ ‘ಮುಖ್ಯ ವಾರ್ತೆ’ಗಳಾಗಿರುತ್ತವೆ, ಉದಾ. ದೇಶ-ವಿದೇಶದಲ್ಲಿ ಎಲ್ಲಿಯಾದರೂ ಹಿಂದೂಗಳ ದೇವತೆಗಳ ವಿಡಂಬನೆಯಾದರೆ ಅಥವಾ ಹಿಂದೂ ಧರ್ಮದವರ ಮೇಲೆ ದೌರ್ಜನ್ಯವಾದರೆ ಸನಾತನ ಪ್ರಭಾತವು ತಕ್ಷಣ ಅದರತ್ತ ಗಮನ ಹರಿಸುತ್ತದೆ ಹಾಗೂ ಇತರರನ್ನೂ ಈ ಬಗ್ಗೆ ಜಾಗೃತಗೊಳಿಸುತ್ತದೆ. ಈ ವಿಷಯಗಳನ್ನು ಇತರ ನಿಯತಕಾಲಿಕೆಗಳಲ್ಲಿ ಅಪರೂಪವಾಗಿಯೇ ಮುದ್ರಿಸಲಾಗುತ್ತದೆ. ಕೆಲವೊಮ್ಮೆ ಮುದ್ರಿಸುವುದೇ ಇಲ್ಲ.
೨. ವಾಚಕರಿಗೆ ವಿಚಾರ ಮಾಡಲು ಉದ್ಯುಕ್ತಗೊಳಿಸುವ, ಯೋಗ್ಯ ದೃಷ್ಟಿ ಕೋನ ನೀಡುವುದೇ ನಿಜವಾದ ವಾರ್ತೆ!
ಪ್ರಶ್ನೆ: ನೀವೂ ವಾರ್ತೆಗಳನ್ನು ಕೊಡುತ್ತೀರಿ, ಇತರ ನಿಯತಕಾಲಿಕೆಗಳೂ ವಾರ್ತೆಗಳನ್ನು ಕೊಡುತ್ತವೆ. ಅವುಗಳಲ್ಲಿ ಏನು ವ್ಯತ್ಯಾಸವಿದೆ?
ಉತ್ತರ: ನಿಶ್ಚಿತವಾಗಿಯೂ ಅದರಲ್ಲಿ ವ್ಯತ್ಯಾಸವಿದೆ. ವಾರ್ತೆ ಒಂದೇ ರೀತಿಯದ್ದಾಗಿದ್ದರೂ, ಯಾವ ವಾರ್ತೆಗಳು ನಮ್ಮೊಂದಿಗೆ ವಾಚಕರಿಗೂ ಚಿಂತನೆ ಮಾಡಲು ಉದ್ಯುಕ್ತಗೊಳಿಸುತ್ತದೆಯೋ, ಯೋಗ್ಯವಾದ ದೃಷ್ಟಿ ಕೋನ ನೀಡುತ್ತದೆಯೋ, ಅದುವೇ ನಿಜವಾದ ವಾರ್ತೆಗಳಾಗಿವೆ. ಇತರ ನಿಯತ ಕಾಲಿಕೆಗಳು ವಾರ್ತೆಗಳಿಗೆ ಉಪ್ಪು-ಖಾರ (ಸುಳ್ಳು ವಿಶೇಷಣಗಳನ್ನು) ಹಚ್ಚಿದರೆ, ‘ಸನಾತನ ಪ್ರಭಾತ’ ವಸ್ತುನಿಷ್ಠ ವಾರ್ತೆಗಳನ್ನು ಮುದ್ರಿಸಿ ವಾಚಕರಿಗೆ ಅದರ ವಿಷಯದಲ್ಲಿ ಯೋಗ್ಯವಾದ ಮಾರ್ಗದರ್ಶನ ಮಾಡುತ್ತದೆ. ಅದರಿಂದ ವಾಚಕರಿಗೆ ಧರ್ಮದ ಮೇಲಾಗುವ ಆಘಾತಗಳ ಪ್ರಶ್ನೆಗಳಿಗೆ ತಕ್ಷಣ ಉತ್ತರ ಸಿಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಸನಾತನ ಪ್ರಭಾತ’ವು ವಾರ್ತೆಗಳನ್ನು ಓದಿ ಬದಿಗಿಡುವುದಕ್ಕಲ್ಲ, ಯಾವುದಾದರೂ ಅನರ್ಥಗಳು ಪುನಃ ಘಟಿಸಬಾರದು ಎಂಬುದಕ್ಕಾಗಿ ಏನು ಮಾಡಬೇಕು, ಎಂಬ ಬಗ್ಗೆ ಮಾರ್ಗದರ್ಶನ ಪಡೆದು ಕೃತಿ ಮಾಡಲಿಕ್ಕಾಗಿಯೇ ಇದೆ.
೩.ರಾಷ್ಟ್ರ ಹಾಗೂ ಹಿಂದೂ ಧರ್ಮದ ರಕ್ಷಣೆಗೆ ಮೊದಲ ಆದ್ಯತೆ!
ಪ್ರಶ್ನೆ: ಇತರ ಪತ್ರಿಕೆಗಳು ಮತ್ತು ‘ಸನಾತನ ಪ್ರಭಾತ’ದ ವಾರ್ತೆಗಳಲ್ಲಿ ಭಿನ್ನತೆ ಏನಿರುತ್ತದೆ?
ಉತ್ತರ: ರಾಷ್ಟ್ರ ಮತ್ತು ಹಿಂದೂ ಧರ್ಮದ ಮೇಲಾಗುವ ದೊಡ್ಡ ಆಘಾತಗಳ ವಾರ್ತೆಗಳನ್ನು ಇತರ ನಿಯತಕಾಲಿಕೆಗಳು ಒಳಗಿನ ಪುಟಗಳಲ್ಲಿ ಹಾಗೂ ಸಣ್ಣದಾಗಿ ಮುದ್ರಿಸುತ್ತವೆ. ಅದೇ ವಾರ್ತೆ ‘ಸನಾತನ ಪ್ರಭಾತ’ದ ಮುಖ್ಯ ವಾರ್ತೆಯಾಗಿರುತ್ತದೆ; ಏಕೆಂದರೆ ಆ ವಾರ್ತೆ ರಾಷ್ಟ್ರ ಹಾಗೂ ಹಿಂದೂ ಧರ್ಮದ ರಕ್ಷಣೆಯ ದೃಷ್ಟಿಯಲ್ಲಿ ಬಹಳ ಮಹತ್ವದ್ದಾಗಿರುತ್ತದೆ. ಅದರಿಂದ ಬೋಧನೆ ಪಡೆಯಲಿಕ್ಕಿರುತ್ತದೆ. ಇತರ ಪತ್ರಿಕೆಗಳು ಬೋಧನೆ ಪಡೆಯದೆ ಹಾಗೆಯೇ ಬಿಟ್ಟು ಬಿಡುತ್ತವೆ. ಅಂದರೆ ಯಾವ ವಾರ್ತೆಗಳನ್ನು ಇತರ ಪತ್ರಿಕೆಗಳಿಗೆ ಕೊನೆಯಲ್ಲಿ ತೆಗೆದು ಕೊಳ್ಳಬೇಕೆನಿಸುವುದೋ, ಅವುಗಳು ‘ಸನಾತನ ಪ್ರಭಾತ’ಕ್ಕೆ ಮೊದಲ ಆದ್ಯತೆಯ ವಾರ್ತೆಗಳೆನಿಸುತ್ತವೆ.
೪.ನಾವು ಎಲ್ಲಿದ್ದೇವೆಯೋ, ಅದು ‘ಹಿಂದೂಸ್ಥಾನ’ವಾಗಿದೆ, ಇಲ್ಲಿ ಹಿಂದೂ ಗಳ ಮೇಲಾಗುವ ಆಘಾತಗಳ ಬಗ್ಗೆ ಪ್ರಶ್ನಿಸದಿದ್ದರೆ ಮತ್ತೇನು ಬ್ರಿಟನ್ ಅಥವಾ ಅಮೇರಿಕಾಗಳಲ್ಲಿ ಕೇಳಬೇಕೇ?
ಪ್ರಶ್ನೆ: ನೀವು ಕೇವಲ ‘ಹಿಂದೂ’ ಎಂಬ ಶಬ್ದಜಾಲದ ಸುತ್ತಮುತ್ತಲಿನ ವಾರ್ತೆಗಳನ್ನೇ ಏಕೆ ಹೆಚ್ಚು ಮುದ್ರಿಸುತ್ತೀರಿ?
ಉತ್ತರ : ನಿಜ ಹೇಳಬೇಕೆಂದರೆ, ಈ ಪ್ರಶ್ನೆಯೇ ತಪ್ಪಾಗಿದೆ. ಮುಖ್ಯವೆಂದರೆ, ನಾವು ಎಲ್ಲಿದ್ದೇಯೋ, ಅದು ‘ಹಿಂದೂಸ್ಥಾನ’  ಆಗಿದೆ. ಇಲ್ಲಿ ಹಿಂದೂಗಳ ಮೇಲಾಗುವ ಆಘಾತಗಳ ಬಗ್ಗೆ ಪ್ರಶ್ನಿಸಬಾರದು, ಎಂದಾದರೆ, ಅದನ್ನೇನು ಬ್ರಿಟನ್ ಅಥವಾ ಅಮೇರಿಕಾದಲ್ಲಿ ಹೋಗಿ ಕೇಳಬೇಕೇ? ಈಗ ನೀವು ಹೇಳುವಂತೆ ಇಲ್ಲಿ ಹಿಂದೂಗಳ ಸಂದರ್ಭ ಇರುತ್ತದೆ, ಏಕೆಂದರೆ ದೇಶ ಹಿಂದೂಸ್ಥಾನವಾಗಿದ್ದಾಗ ಅದು ಸಮೃದ್ಧವಾಗಿತ್ತು. ಈಗ ನೀವು ಹೇಳುವ ಹಾಗೆ ಹಿಂದೂಗಳ ಸಮಸ್ಯೆಗಳನ್ನು ಬಿಟ್ಟು ಬಿಟ್ಟರೆ, ಹಿಂದೂಗಳ ಮೇಲಾಗುವ ಆಘಾತಗಳ ಬಗ್ಗೆ ಯಾರು ವಿಚಾರ ಮಾಡುವರು? ಅಲ್ಲದೇ ರಾಷ್ಟ್ರದ ಸಂದರ್ಭದಲ್ಲಿ ನೋಡಿದರೆ, ಇಂದಿನ ರಾಜಕಾರಣಿಗಳು ಧರ್ಮದಲ್ಲಿ ಕಲಬೆರಕೆ ಮಾಡಿದ್ದಾರೆ. ಆದ್ದರಿಂದ ಅವರು ಜಾತ್ಯತೀತ (ಅಧರ್ಮಿ)ರಾಗಿದ್ದಾರೆ; ಆದ್ದರಿಂದ ಈ ರಾಷ್ಟ್ರದ ಉನ್ನತಿ ಕೇವಲ ಈ ಜಾತ್ಯತೀತ ವಾದವನ್ನು ಅಳಿಸಿ ಹಾಕುವುದರಲ್ಲಿಯೇ ಇದೆ.
೫. ಇಂದು ಭಾರತ ಹಿಂದೂಗಳದ್ದಲ್ಲ ಅಹಿಂದೂಗಳದ್ದಾಗಿದೆ ಹಾಗೂ ‘ಸರ್ವ ಧರ್ಮಸಮಭಾವ’ ಎಂಬ ಶಬ್ದವು ಅಹಿಂದೂಗಳಿಗಾಗಿ ಮೀಸಲಾತಿಯಾಗಿದೆ.
ಪ್ರಶ್ನೆ: ಇಂದು ಭಾರತ ಕೇವಲ ಹಿಂದೂಗಳದ್ದಲ್ಲ, ಅದು ಸರ್ವಧರ್ಮದವರದ್ದಾಗಿದೆ!
ಉತ್ತರ: ಈ ವಾಕ್ಯವನ್ನು ಸ್ವಲ್ಪ ಬದಲಾಯಿಸಿರಿ. ಇಂದು ಭಾರತ ಹಿಂದೂಗಳದ್ದಲ್ಲ, ಅಹಿಂದೂಗಳದ್ದಾಗಿ ಹೋಗಿದೆ. ಇಲ್ಲಿ ‘ಹಿಂದೂ’ ಎಂಬ ಹೆಸರನ್ನು ಉಚ್ಚರಿಸಿದರೆ ಜಾತ್ಯತೀತವಾದಿಗಳು ಬೊಬ್ಬೆ ಹಾಕುತ್ತಾರೆ ಹಾಗೂ ‘ಸರ್ವಧರ್ಮಸಮಭಾವ’ ಎಂಬ ಶಬ್ದ ಅಹಿಂದೂಗಳಿಗಾಗಿ ಕಾಯ್ದಿರಿಸಲಾಗಿದೆ.
೬.ಹಿಂದೂಗಳು ಅನ್ಯಾಯದ ವಿರುದ್ಧ ಪ್ರತೀಕಾರ ಮಾಡಿದರೆ ಅಥವಾ ಧ್ವನಿಯೆತ್ತಿದರೆ, ಶಾಂತಿ ಭಂಗ ಮಾಡಿದ ದೋಷವನ್ನು ಅವರ ತಲೆಗೆ ಕಟ್ಟುತ್ತಾರೆ.
ಪ್ರಶ್ನೆ: ನಿಮ್ಮ ವಾರ್ತೆಗಳಲ್ಲಿನ ಟಿಪ್ಪಣಿಯಿಂದ ಶಾಂತಿ ಭಂಗವಾಗುತ್ತದೆ!
ಉತ್ತರ: ಇಂದು ಶಾಂತಿಯೆಲ್ಲಿದೆ? ಭಾರತದ ನಾಲ್ಕೂ ದಿಕ್ಕಿನಲ್ಲಿ ಅಶಾಂತಿಯೇ ಹರಡಿದೆ. ಅಂದರೆ ‘ಸನಾತನ ಪ್ರಭಾತ’ವು ಅಶಾಂತಿಯನ್ನು ಹೆಚ್ಚಿಸುತ್ತದೆ ಎಂದು ನಿಮಗೆ ಹೇಳಬೇಕಾಗಿದೆಯೇ? ಇಂದು ಹಿಂದೂಗಳು ಅನ್ಯಾಯದ ವಿರುದ್ಧ ಪ್ರತೀಕಾರ ಮಾಡಿದರೆ ಅಥವಾ ಧ್ವನಿಯೆತ್ತಿದರೆ, ಅಶಾಂತಿ ಹಬ್ಬಿದರೆಂಬ ದೋಷವನ್ನು ಅವರ ತಲೆಗೆ ಕಟ್ಟುತ್ತಾರೆ. ಅಲ್ಲದೇ ‘ಸನಾತನ ಪ್ರಭಾತ’ವು ತನ್ನ ಲೇಖನದಲ್ಲಿ ಶಾಂತಿಯನ್ನು ಕೆಡಿಸುವುದಿಲ್ಲ, ಅದು ಶಾಂತಿ ಸ್ಥಾಪಿಸಲು ಒತ್ತಾಯಿಸುತ್ತದೆ; ಆದರೆ ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ಆದುದರಿಂದ ಯಾರು ಶಾಂತಿಯನ್ನು ಕೆಡಿಸುತ್ತಾರೋ ಅವರ ಮನಃಶ್ಯಾಂತಿ ಕೆಡುತ್ತದೆ. ಅದಕ್ಕೆ ನಾವೇನು ಮಾಡಬೇಕು?
೭.ವಾಚಕರೇ, ‘ಸನಾತನ ಪ್ರಭಾತ’ ವನ್ನು ಓದಿ ಕೃತಿಶೀಲರಾಗಿರಿ ಹಾಗೂ ರಾಷ್ಟ್ರ ಮತ್ತು ಧರ್ಮದ ರಕ್ಷಣೆ ಮಾಡಿ ಹಿಂದೂ ರಾಷ್ಟ್ರ ನಿರ್ಮಾಣದ ಅಡಿಪಾಯ ಹಾಕಿರಿ!
ಪ್ರಶ್ನೆ : ನಿಮ್ಮ ವಾಚಕರಿಂದ ನಿಮ್ಮ ಅಪೇಕ್ಷೆಯೇನು?
ಉತ್ತರ: ನಮಗೆ ಯಾರಿಂದಲೂ ಯಾವುದೇ ಅಪೇಕ್ಷೆಯಿಲ್ಲ. ಆದರೆ ಮುಂದಿನ ಅಂಶಗಳು ಎಲ್ಲರಿಂದ ಅಪೇಕ್ಷಿತವಿದೆ.
೧. ‘ಸನಾತನ ಪ್ರಭಾತ’ವನ್ನು ಓದಿ ಬದಿಯಲ್ಲಿಡದೆ, ಅದನ್ನು ಓದಿ ಕೃತಿಶೀಲರಾಗಿರಿ. ಧರ್ಮಕ್ಕಾಗಿ ನಾನೇನು ಮಾಡಬಲ್ಲೆ’, ಎನ್ನುವ ವಿಷಯದಲ್ಲಿ ‘ಸನಾತನ ಪ್ರಭಾತ’ದಲ್ಲಿನ ವಾರ್ತೆಗಳು, ವಿವಿಧ ಲೇಖನಗಳು, ಸಂಪಾದಕೀಯ ಟಿಪ್ಪಣಿಗಳು ಇತ್ಯಾದಿ ಗಳನ್ನು ಮನನ ಮಾಡಿ ಕೃತಿ ಮಾಡಿರಿ ಹಾಗೂ ರಾಷ್ಟ್ರ ಹಾಗೂ ಧರ್ಮ ರಕ್ಷಣೆ ಮಾಡಿ ಹಿಂದೂ ರಾಷ್ಟ್ರನಿರ್ಮಾಣದ ಅಡಿಪಾಯ ಹಾಕಿರಿ. ಧರ್ಮಶಿಕ್ಷಣ ಪಡೆದುಕೊಳ್ಳಿರಿ ಹಾಗೂ ಆಚರಣೆ ಮಾಡಿರಿ! ಹೀಗೆ ಜನ್ಮ ಹಿಂದೂವಿನಿಂದ ‘ಕರ್ಮಹಿಂದೂ’ಗಳಾಗಿರಿ.
೨. ‘ಸನಾತನ ಪ್ರಭಾತ’ವನ್ನು ಕೇವಲ ನಿಮಗಾಗಿಯೇ ಇಟ್ಟುಕೊಳ್ಳದೆ ಅದನ್ನು ಮನೆಮನೆಗೆ ತಲುಪಿಸಿರಿ. ಪ್ರತಿಯೊಬ್ಬ ಹಿಂದೂವಿನ ಮನೆಗೆ ‘ಸನಾತನ ಪ್ರಭಾತ’ ವನ್ನು ತಲುಪಿಸಲು ಪ್ರಯತ್ನಿಸಿರಿ. ಇಂದಲ್ಲ, ನಾಳೆಯಾದರೂ ಅವರು ಕರ್ಮಹಿಂದೂ ಗಳಾಗುವರು.
೩. ಹೀಗೆ ಎಲ್ಲ ವಾಚಕರು ಕೃತಿಶೀಲರಾದರೆ, ರಾಮರಾಜ್ಯದ ಸ್ಥಾಪನೆಗೆ ತಡವಾಗದು.’ 
-ಶ್ರೀ. ಪ್ರಶಾಂತ ಹರಿಹರ, ಮಂಗಳೂರು.

No comments:

Post a Comment