ವಕ್ತಾರನೆಂದು ಮಾತನಾಡಲು ೧೫೦ ಕಿಲೋಮೀಟರ್ ದೂರದಿಂದ ಕರೆಯಿಸಿ ‘ವಕ್ತಾರನೆಂದು ಆಮಂತ್ರಿಸಲೇ ಇಲ್ಲ’ ಎಂದು ಹೇಳಿ ವಂಚನೆ
ಸನಾತನಕ್ಕೆ ವಿಶ್ವ ಹಿಂದೂ ಪರಿಷತ್ತಿನಿಂದ (ವಿಹಿಂಪ) ಘೋರ ಅವಮಾನ!
ಸಂಘಟನೆಯೊಂದರ ವಕ್ತಾರರ ಅವಮಾನವು ಆ ಸಂಘಟನೆಯ ಅವಮಾನವೇ ಆಗುತ್ತದೆ. ನಮ್ಮಲ್ಲಿ ಬಂದ ಅತಿಥಿಗೆ ಯೋಗ್ಯ ಗೌರವವನ್ನು ಕೊಡುವುದು ಭಾರತೀಯ ಸಂಸ್ಕೃತಿಯ ಸಾಮಾನ್ಯ ಶಿಷ್ಟಾಚಾರವಾಗಿದೆ. ಶತ್ರುವಿನೊಂದಿಗೂ ಒಳ್ಳೆಯದಾಗಿ ನಡೆದುಕೊಳ್ಳುವುದು ನಮ್ಮ ಸಂಸ್ಕೃತಿಯಾಗಿದೆ. ಮುಸಲ್ಮಾನ ಮುಲ್ಲಾ-ಮೌಲ್ವಿಗಳು ಹಜ್ ಯಾತ್ರೆಗಾಗಿ ಅನುದಾನವನ್ನು ಕೇಳಲು ಸಂಘ ಹಾಗೂ ಸಂಘ ಪರಿವಾರದ ಸಂಘಟನೆಗಳ ಬಳಿ ಬಂದಾಗ ಈ ಸಂಘಟನೆಗಳು ಅವರೊಂದಿಗೆ ಒಳ್ಳೆಯ ರೀತಿಯಲ್ಲಿಯೇ ವರ್ತಿಸುತ್ತಿರಬಹುದು.
ಸಂಘಪರಿವಾರದ ವ್ಯಾಸಪೀಠಕ್ಕೆ ಅನೇಕ ಬಾರಿ ಬೌದ್ಧ ಧರ್ಮೀಯರನ್ನು ಆಹ್ವಾನಿಸಲಾಗುತ್ತದೆ ಮತ್ತು ಅವರು ಹಿಂದೂ ಧರ್ಮವನ್ನು ಯಥೇಚ್ಛವಾಗಿ ಟೀಕಿಸುತ್ತಾರೆ. ಅದಕ್ಕೆ ಸಂಘದವರು ‘ಏನು ಮಾಡುವುದು, ನಾವು ಅವರೊಂದಿಗೆ ಆತ್ಮೀಯತೆ ಬೆಳೆಸಬೇಕಾಗಿದೆ. ಆದ ಕಾರಣ ಇದೆಲ್ಲವನ್ನು ಸಹಿಸಿಕೊಳ್ಳಲೇಬೇಕು!’ ಎನ್ನುತ್ತಾರೆ. ಆದರೆ ಇಲ್ಲಿ ಹಿಂದುತ್ವವಾದಿಯಾದ ಸನಾತನದ ವಕ್ತಾರನು ವಿಹಿಂಪಗೆ ಅಸಹನೀಯವಾಗುತ್ತಾನೆ.
ಶ್ರೀವರ್ಧನ (ರಾಯಗಡ ಜಿಲ್ಲೆ) - ವಿಶ್ವ ಹಿಂದೂ ಪರಿಷತ್ತಿನ ‘ಹನುಮತ್ ಜಾಗರಣ ಸಮಿತಿ’ಯ ವತಿಯಿಂದ ಶ್ರೀವರ್ಧನ ಎಂಬಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮ್ಮೇಳನಕ್ಕೆ ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ.ಅಭಯ ವರ್ತಕ ಇವರನ್ನು ವಕ್ತಾರರೆಂದು ಆಮಂತ್ರಿಸಲಾಗಿತ್ತು. ಶ್ರೀ.ಅಭಯ ವರ್ತಕ ಇವರು ೧೫೦ ಕಿಲೋಮೀಟರ್ ಪ್ರಯಾಣ ಮಾಡಿ ಅಲ್ಲಿ ತಲುಪಿದಾಗ ಮಾತ್ರ ‘ಸನಾತನ ಸಂಸ್ಥೆಯು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸುತ್ತದೆ’ ಎಂಬ ಕಾರಣವನ್ನು ಹೇಳಿ ಅವರಿಗೆ ವ್ಯಾಸಪೀಠದಲ್ಲಿ ಮಾತನಾಡಲು ನಿರಾಕರಿಸಲಾಯಿತು. ವಿಹಿಂಪ ಸನಾತನ ಸಂಸ್ಥೆಗೆ ಘೋರ ಅವಮಾನ ಮಾಡಿದ ಸಂಗತಿಯಿಂದ ಹಿಂದೂಗಳು, ಹಿಂದೂಗಳನ್ನು ಸಂಘಟಿಸುವುದು ಬಹಳ ಕಠಿಣವಿದೆ ಎಂಬುದು ದೃಢೀಕರಿಸಲ್ಪಟ್ಟಿತು. (ಹೀಗೆ ವರ್ತಿಸುವ ಕಾರ್ಯಕರ್ತರರು ಎಂದಾದರೂ ಹಿಂದೂಗಳನ್ನು ಸಂಘಟಿಸಬಹುದೇ? ವಿಹಿಂಪ.ನ ಹಿರಿಯ ನೇತಾರರು ಈ ನೇತಾರರಿಗೆ ಹಿಂದೂ ಸಂಘಟನೆಯ ಆವಶ್ಯಕತೆಯನ್ನು ತಿಳಿಸಿ ಹೇಳುವರೇ?- ಸಂಪಾದಕರು)
ಶ್ರೀ.ವರ್ತಕರನ್ನು ವಕ್ತಾರ ಎಂದು ಆಮಂತ್ರಿಸುವುದು ಮತ್ತು ಅವರ ಭಾಷಣದ ಸಮಯವನ್ನು ನಿರ್ಧರಿಸುವುದು
‘ಹನುಮತ್ ಜಾಗರಣ ಸಮಿತಿ’ಯು ಶ್ರೀವರ್ಧನ ಎಂಬಲ್ಲಿ ಜನವರಿ ೨ರಂದು ಹಿಂದೂ ಸಮ್ಮೇಳನವನ್ನು ಆಯೋಜಿಸಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಆಯೋಜಕರು ಎಂದು ಹೆಸರಿದ್ದ ಶ್ರೀ.ಸಂತೊಷ ವೇಶ್ವೀಕರ ಇವರು ಸಭೆಯ ೧೦ ದಿನಗಳ ಮೊದಲು ಸನಾತನದ ಮಾಣಗಾವ್ ಎಂಬಲ್ಲಿನ ಸಾಧಕರಾದ ಶ್ರೀಕಾಂತ ಜೋಶಿ ಇವರೊಂದಿಗೆ ಚರ್ಚಿಸಿ ಶ್ರೀ.ಅಭಯ ವರ್ತಕ ಇವರನ್ನು ಸಭೆಗೆ ವಕ್ತಾರರೆಂದು ಆಮಂತ್ರಿಸುವುದನ್ನು ನಿಶ್ಚಯಿಸಿದರು. ಶ್ರೀ.ಅಭಯ ವರ್ತಕರವರು ಬೇರೊಂದು ನಗರದಲ್ಲಿನ ಸಭೆಯೊಂದಕ್ಕೆ ವಕ್ತಾರರೆಂದು ಹೋಗುವವರಿದ್ದರು. ಆದರೂ ಅವರು ವಿಹಿಂಪನ ಆಮಂತ್ರಣಕ್ಕೆ ವಿಶೇಷ ಮಹತ್ವವನ್ನು ಕೊಟ್ಟು ಆ ಸಭೆಯನ್ನು ರದ್ದುಪಡಿಸಿ ಶ್ರೀವರ್ಧನಕ್ಕೆ ಹೋಗಲು ನಿರ್ಧರಿಸಿದರು. ಶ್ರೀವರ್ಧನ ಎಂಬಲ್ಲಿಯ ಸನಾತನದ ಸಾಧಕರಾದ ಶ್ರೀ. ಶ್ರೀಕಾಂತ ಜೋಶಿ ಇವರು ಶ್ರೀ. ವೇಶ್ವೀಕರ್ ಇವರೊಂದಿಗೆ ಸಭೆಯ ಸ್ಥಳವನ್ನು ತಲುಪುವ ಆಯೋಜನೆಯ ಬಗ್ಗೆ ಚರ್ಚಿಸಿದರು. ಅದಕ್ಕೆ ಶ್ರೀ.ವೇಶ್ವೀಕರರು, ‘ಬೆಳಗ್ಗೆ ೧೧.೩೦ಕ್ಕೆ ಸಭಾಸ್ಥಳಕ್ಕೆ ಬರಬೇಕು. ಅವರಿಗೆ ಮಾತನಾಡಲು ೩೦ರಿಂದ ೪೫ ನಿಮಿಷಗಳನ್ನು ಕೊಡುವೆವು. ಮಧ್ಯಾಹ್ನದ ಭೋಜನವನ್ನು ಅವರು ನಮ್ಮೊಂದಿಗೆಯೇ ಮಾಡಲಿ’ ಎಂದು ಹೇಳಿದರು. ಶ್ರೀ.ಅಭಯ ವರ್ತಕರವರು ಪ್ರಖರ ಹಿಂದುತ್ವದ ಬಗ್ಗೆ ಮಾತನಾಡಲಿ ಎಂಬ ವಿಶೇಷ ವಿನಂತಿಯನ್ನೂ ಅವರು ಮುಂದಿಟ್ಟರು. ‘ಈಗಾಗಲೇ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದ್ದು ಅದರಲ್ಲಿ ಶ್ರೀ.ವರ್ತಕರವರ ಹೆಸರು ಇಲ್ಲ, ಪರವಾಗಿಲ್ಲವೇ?’ ಎಂದು ಅವರು ಕೇಳಿದರು. ಆಗ ಸನಾತನದ ಶ್ರೀ.ಜೋಶಿಯವರು ‘ಪರವಾಗಿಲ್ಲ’ ಎಂದರು.
ಸಭೆಯ ಹಿಂದಿನ ದಿನವೂ ಸಕಾರಾತ್ಮಕ ಪ್ರತಿಕ್ರಿಯೆ ಕೊಡುವುದು
ತದನಂತರ ಶ್ರೀ.ಜೋಶಿ ಇವರು ಜನವರಿ ೧ರ ಮಧ್ಯಾಹ್ನ ೧೨.೩೦ಕ್ಕೆ ಶ್ರೀ.ವೇಶ್ವೀಕರ್ ಇವರನ್ನು ಸಂಪರ್ಕಿಸಿದರು. ಆಗ ಶ್ರೀ.ವೇಶ್ವೀಕರರು ‘ಶ್ರೀ.ವರ್ತಕರು ಬೆಳಗ್ಗೆ ೧೧.೩೦ಕ್ಕೆ ತಲುಪಲಿ. ಮಧ್ಯಾಹ್ನದ ಭೋಜನಕ್ಕೆ ನಿಮ್ಮ ಮೂರು ಜನ ಮಾತ್ರವಲ್ಲದೇ, ಅದಕ್ಕಿಂತ ಹೆಚ್ಚು ಜನ ಸಾಧಕರು ಬಂದರೂ ಪರವಾಗಿಲ್ಲ. ನಿಮಗೆ ಆದರಾತಿಥ್ಯವನ್ನು ಮಾಡುವ ಅವಕಾಶವು ನಮಗೆ ಸಿಕ್ಕಿದಂತಾಗುವುದು. ನಾನು ನಿಮಗಾಗಿ ಕಾಯುತ್ತಿದ್ದೇನೆ’ ಎಂದರು.
ಸಮನ್ವಯ ಮಾಡುತ್ತಿದ್ದ ಶ್ರೀ.ವೇಶ್ವೀಕರ ಪರವೂರಿಗೆ ಹೋಗಿದ್ದಾರೆ ಹಾಗೂ ಭಾಷಣ ರದ್ದು ಪಡಿಸಿರುವುದೆಂದು ಹೇಳುವುದು
ಪನವೇಲ್‌ನಲ್ಲಿ ಜನವರಿ ೧ ರ ಸಂಜೆ ಹಿಂದೂ ಧರ್ಮಜಾಗೃತಿ ಸಭೆ ನಡೆಯಿತು. ಶ್ರೀ.ವರ್ತಕ ಇವರು ರಾತ್ರಿ ೧ ಗಂಟೆಗೆ ಮಲಗಿ, ಬೆಳಗ್ಗೆ ೫ ಗಂಟೆಗೆ ಎದ್ದು ಬಸ್ಸಿನಲ್ಲಿ ಪ್ರಯಾಣ ಮಾಡಿ ಶ್ರೀವರ್ಧನಕ್ಕೆ ತಲುಪಿದರು. ಅವರೊಂದಿಗೆ ಸ್ಥಳೀಯ ಸಾಧಕರಾದ ಶ್ರೀ.ಜೋಶಿ ಹಾಗೂ ಕುಮಾರಿ ಪೂನಮ್ ಚೌರಸಿಯಾ ಇವರು ಸಭಾಸ್ಥಳಕ್ಕೆ ಹೋದರು. ಅಲ್ಲಿ ಶ್ರೀ.ವೇಶ್ವೀಕರ್ ಇವರು ಪರವೂರಿಗೆ ಹೋಗಿದ್ದಾರೆ ಎಂದು ಹೇಳಲಾಯಿತು. ಅವರ ಜಾಗದಲ್ಲಿ ಮತ್ತೊಬ್ಬ ಸಂಯೋಜಕ ರಾದ ಶ್ರೀ.ಸಮೀರ ಪಾಟೀಲ್ ಇವರು ಮುಂದಿನಂತೆ ಹೇಳಿದರು, ‘ಕ್ಷಮಿಸಿ, ನಾವು ಸನಾತನ ಸಂಸ್ಥೆಯ ವಕ್ತಾರರಿಗೆ ಮಾತನಾಡಲು ಸಮಯ ಕೊಡುವುದಿಲ್ಲ. ವಿಹಿಂಪನ ಕೊಂಕಣ ಪ್ರಾಂತ ಸಹಮಂತ್ರಿಗಳಾಗಿರುವ ಶ್ರೀ.ದೀಪಕ ಗಾಯಕವಾಡ್ ಇವರು ‘ಸನಾತನದವರು ನಮ್ಮನ್ನು ಟೀಕಿಸುತ್ತಾರೆ’, ‘ಬಲಾಢ್ಯ ಹಿಂದೂ ಸಂಘಟನೆಗಳು ಏನು ಮಾಡುತ್ತಾರೆ?’ ಹೀಗೆಲ್ಲ ನಮ್ಮ ಬಗ್ಗೆ ಬರೆದು ಪ್ರಕಾಶಿಸುತ್ತಾರೆ’ ನಮ್ಮ ವ್ಯಾಸಪೀಠದ ಮೇಲೆ ಅವರನ್ನು ಸೇರಿಸಬಾರದು.’ ಎಂದು ನಮಗೆ ಹೇಳಿದ್ದಾರೆ. ಆದ್ದರಿಂದ ನಾವು ನಿಮ್ಮ ಭಾಷಣವನ್ನು ರದ್ದು ಮಾಡಬೇಕಾಗುತ್ತಿದೆ ಎಂದರು.
ನಮ್ಮದೇನೂ ಪಾತ್ರ ಇಲ್ಲ ಎಂದು ಕಾರ್ಯಕರ್ತನೇ ಹೇಳುವುದು
ಶ್ರೀ. ವರ್ತಕ ಇವರು ಅವರಿಗೆ, ‘ನಾವು ಬೇರೆಡೆ ಇದ್ದ ಒಂದು ಕಾರ್ಯಕ್ರಮವನ್ನು ರದ್ದು ಪಡಿಸಿ ೧೦ದಿನ ಮೊದಲೇ ಈ ಬಗ್ಗೆ ಆಯೋಜನೆ ಮಾಡಿ ಇಲ್ಲಿಗೆ ಆಗಮಿಸಿದ್ದೇವೆ. ನೀವು ಮೊದಲೇ ತಿಳಿಸಿದ್ದರೆ ಕನಿಷ್ಠ ಪಕ್ಷ ನಮ್ಮ ಸಮಯವಾದರೂ ಉಳಿಯು ತ್ತಿತ್ತು.’ ಎಂದರು. ಆಗ ಸಂಯೋಜಕರಲ್ಲಿ ಒಬ್ಬರಾದ ಶ್ರೀ.ಸಂತೋಷ ಚೌಕಕರ್ ಇವರು, ‘ಶ್ರೀ.ಗಾಯಕವಾಡರವರು ೧೦ ನಿಮಿಷಗಳಲ್ಲೇ ಆಗಮಿಸುವವರಿದ್ದಾರೆ. ನೀವು ಅವರೊಂದಿಗೆ ಚರ್ಚಿಸಿ. ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ. ನಮಗಂತೂ ಎರಡು ಹಿಂದೂ ಸಂಘಟನೆಗಳಲ್ಲಿ ವಾದವು ಇರಕೂಡದು ಎಂದೆನಿಸುತ್ತದೆ’ ಎಂದರು.
ಮೇಲಿಂದ ಮೇಲೆ ವಿವಿಧ ಮಾಹಿತಿಗಳನ್ನು ನೀಡಿಯೂ ಆ ಬಗ್ಗೆ ಚಕಾರವೆತ್ತದಿರುವುದು
ಶ್ರೀ.ಗಾಯಕವಾಡರವರು ಅಲ್ಲಿಗೆ ತಲುಪಿದ ಕೂಡಲೇ, ನಾಟಕೀಯವಾಗಿ ನಗುತ್ತ ಹೀಗೆಂದರು, ‘ಅಭಯ ವರ್ತಕ ರಿಗೆ ವಿಜಯವಾಗಲಿ! ವ್ಯಾಸಪೀಠದ ಮೇಲೆ ಮೂರೇ ಕುರ್ಚಿಗಳಿರುವಾಗ ನಿಮಗೆ ಹೇಗೆ ಮಾತನಾಡುವ ಅವಕಾಶವನ್ನು ಕೊಡುವುದು? ನೀವು ಮಾತಾಡಲೇ ಬೇಕಾಗಿದ್ದರೆ ನನ್ನ ಭಾಷಣವನ್ನು ರದ್ದು ಮಾಡುತ್ತೇನೆ’. ಇದರಿಂದ ಶ್ರೀ.ಅಭಯ ವರ್ತಕ ಇವರು ಆಶ್ಚರ್ಯಚಕಿತರಾದರು. ನಡೆದ ಪ್ರಸಂಗದ ಬಗ್ಗೆ ಗಾಂಭೀರ್ಯದಿಂದ ಚರ್ಚಿಸೋಣ ಎಂದು ಅವರು ಕೇಳಿ ಕೊಂಡಾಗ ಶ್ರೀ.ಗಾಯಕವಾಡರವರು ಚರ್ಚೆ ಮಾಡುವ ಸಿದ್ಧತೆಯನ್ನು ತೋರಿಸಿದರು. ಚರ್ಚೆಯಲ್ಲಿ ಶ್ರೀ.ವರ್ತಕ ಇವರು, ‘೬-೭ ತಿಂಗಳುಗಳ ಹಿಂದೆ ರಾ.ಸ್ವ.ಸಂಘದ ವರಿಷ್ಠ ನೇತಾರರೊಂದಿಗೆ ನಾವು ಒಂದು ಸಭೆ ಮಾಡಿದ್ದೆವು. ಅದರಲ್ಲಿ ಸನಾತನವು ಸಂಘ ಪರಿವಾರದಲ್ಲಿನ ಸಂಘಟನೆಗಳನ್ನು ಟೀಕಿಸಬಾರದು ಎಂದು ನಿರ್ಧರಿಸಲಾಯಿತು. ಅದರಂತೆ ಕಳೆದ ೬ತಿಂಗಳುಗಳಲ್ಲಿ ಸನಾತನವು ಒಂದು ಬಾರಿಯೂ ಸಂಘ ಪರಿವಾರದ ಸಂಘಟನೆಗಳನ್ನು ಟೀಕಿಸಿಲ್ಲ. ನಿಮಗೆ ಸನಾತನದ ವಕ್ತಾರರು ಬೇಕಾಗಿರಲಿಲ್ಲ ಎಂದಿದ್ದರೆ ಕನಿಷ್ಠ ಹಿಂದಿನ ದಿನವಾದರೂ ಹೇಳುವ ಅಗತ್ಯವಿರಲಿಲ್ಲವೇ? ನಾನು ಈಗ ೧೫೦ಕಿಲೋಮೀಟರ್ ಪ್ರಯಾಣ ಮಾಡಿ ಹಿಂತಿರುಗಬೇಕಾಗಿ ಬಂದಿದೆ. (ಈ ಬಗ್ಗೆ ಶ್ರೀ.ಗಾಯಕವಾಡ್ ಇವರು ಚಕಾರವನ್ನೂ ಎತ್ತಲಿಲ್ಲ) ವಿಹಿಂಪ ನಿಂದ ನಮಗೆ ಈ ಬಗೆಯ ಹಲವಾರು ಅನುಭವಗಳು ಬಂದಿವೆ. ಜಳಗಾವದಲ್ಲಿ ಸನಾತನದ ವಕ್ತಾರರನ್ನು ವ್ಯಾಸಪೀಠದ ಮೇಲೆ ಕೂರಿಸಿದರು ಮತ್ತು ಅವರ ಭಾಷಣವಾಗುವ ಮೊದಲೇ ಕಾರ್ಯಕ್ರಮವನ್ನು ಮುಗಿಸಿದರು. ನಂತರ ಆಯೋಜಕರು, ‘ಇವರ ಭಾಷಣ ಉಳಿದುಬಿಟ್ಟಿತಲ್ಲ!’ ಎಂದರು. ಇಂದು ನೀವು ನಿಮ್ಮ ನಿಲುವನ್ನು ಸ್ಪಷ್ಟಪಡಿಸುವುದೇ ಉತ್ತಮ. ಹಿಂದಿನಿಂದ ಮಾತನಾಡಿಕೊಳ್ಳುವುದಕ್ಕಿಂತ ಎದುರೆದುರು ಚರ್ಚೆಯಾಗುವುದೇ ಸೂಕ್ತ. ನೀವು ನನ್ನನ್ನು ಇಷ್ಟು ದೂರ ಕರೆಯಿಸಿ ನನಗೆ ಮಾತನಾಡಲು ಅವಕಾಶ ಕೊಡದಿದ್ದರೆ ಅದು ಶ್ರೀ.ವರ್ತಕ ಇವರ ಅವಮಾನವಾಗಿರದೇ ಸನಾತನ ಸಂಸ್ಥೆಗೆ ಆದ ಅವಮಾನವಾಗಿದೆ. ನೀವು ಈ ಬಗ್ಗೆ ಏನಾದರು ಹೇಳಲೇಬೇಕು’ ಎಂದು ಹೇಳಿದರು. ಹೀಗೆ ಹೇಳಿದ ನಂತರವೂ ಶ್ರೀ.ಗಾಯಕವಾಡರವರು ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲಿಲ್ಲ. ಶ್ರೀ.ವರ್ತಕ ಇವರು ಮುಂದೆ ಮಾತನಾಡುತ್ತಾ, ‘ಸನಾತನವು, ಸಂಘದ ಮೇಲಿನ ದ್ವೇಷದಿಂದಾಗಿ ಸಂಘದ ತಪ್ಪುಗಳನ್ನು ತೋರಿಸುತ್ತಿಲ್ಲ. ಹಿಂದುತ್ವದ ಮೇಲಿರುವ ಆತೀವ ಪ್ರೀತಿಯೇ ಹೀಗೆ ಮಾಡುವ ಹಿಂದಿನ ಉದ್ದೇಶವಾಗಿದೆ. ಈಗ ನಾವು ಅದನ್ನೂ ನಿಲ್ಲಿಸಿದ್ದೇವೆ. ನಮಗೆ ನಿಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆ ಇದೆ. ತಾವು ಇಂದು ಯಾವ ನಿರ್ಣಯಕ್ಕೆ ಬರುವಿರೋ, ಆ ಮೂಲಕ ಹಿಂದೂಗಳು ಸಂಘಟಿತರಾಗುವುದಕ್ಕೆ ಸಂಬಂಧಪಟ್ಟಂತೆ ಹೊಸ ಸಂದೇಶವು ಜನಮಾನಸಕ್ಕೆ ತಲುಪುವುದು. ತಮ್ಮ ವರಿಷ್ಠರೊಂದಿಗೆ ನಡೆದಿದ್ದ ನಮ್ಮ ಚರ್ಚೆಯ ವಿಷಯವು ಎಲ್ಲ ಮಟ್ಟದ ಕಾರ್ಯಕರ್ತರ ವರೆಗೂ ತಲುಪಿದೆ ಎಂದೆನಿಸುತ್ತಿಲ್ಲ’ ಎಂದರು.
ಗಾಯಕವಾಡ ಇವರ ಉದ್ಧಟತನ!
ಶ್ರೀ.ಗಾಯಕವಾಡರವರು, ‘ನಾವು ನಿಮ್ಮನ್ನು ಸಭೆಗೆ ವಕ್ತಾರರೆಂದು ಆಮಂತ್ರಿಸಲೇ ಇಲ್ಲ’ ಎಂದರು. ಅದರಿಂದ ಬೆರಗಾದ ಶ್ರೀ.ವರ್ತಕ ಇವರು, ‘ಸಭೆಯ ಮುಖ್ಯ ಆಯೋಜಕರು ‘ನೀವು ವಕ್ತಾರರೆಂದು ಬನ್ನಿ’ ಎಂದು ಹೇಳಿದ್ದರು. ಸಭೆಯಲ್ಲಿ ನನಗೆ ಮಾತನಾಡಲು ಎಷ್ಟು ಸಮಯ ಕೊಡಲಾಗುವುದು ಎಂಬುದನ್ನೂ ತಿಳಿಸಿದ್ದರು. ಹೀಗಿರುವಾಗ ನೀವು ಹೇಗೆ ಈ ರೀತಿ ಹೇಳ ಬಲ್ಲಿರಿ?’ ಗಾಯಕವಾಡರವರು, ‘ನಾವು ಎಂದಾದರೂ ಬರುತ್ತೇವೆಯೇ? ನಿಮ್ಮ ಸಭೆಯಲ್ಲಿ ‘ನಮಗೆ ಮಾತನಾಡಲು ಕರೆಯಿರಿ’ ಎಂದು ನಾವು ಎಂದಾದರೂ ಹೇಳುತ್ತೇವೆಯೇ? ನೀವು ನಿಮ್ಮ ಸನಾತನ ಪ್ರಭಾತದಲ್ಲಿ ನಮ್ಮನ್ನು ಟೀಕಿಸಿದರೂ ಪರವಾಗಿಲ್ಲ. ನಾವು ಮುಸಲ್ಮಾನರ ಬಗ್ಗೆ ಮಾತನಾಡುವಲ್ಲಿ ಹಿಂಜರಿಯದಿರುವಾಗ ಇತರರ ವಿಷಯ ದಲ್ಲೇನು ಮಹಾ? ನಾವು ಯಾವುದೇ ಪರಿಣಾಮದ ಸಿದ್ಧತೆಯನ್ನು ಇಟ್ಟುಕೊಂಡೇ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ. ನಾವು ಈಗಾಗಲೇ ನಿರ್ಣಯಕ್ಕೆ ಬಂದಿದ್ದೇವೆ. ನಿಮಗೆ ಸಭೆಯಲ್ಲಿ ಮಾತನಾಡಲು ಬಿಡುವುದಿಲ್ಲವೆಂದರೆ ಬಿಡುವುದಿಲ್ಲ. ನಿಮಗಾಗಿ ಬೇಕಾದರೆ ನಾವು ಬೇರೆ ಹತ್ತು ಸಭೆಗಳನ್ನು ಆಯೋಜಿಸುವೆವು. ಆದರೆ ಇವತ್ತು ಇಲ್ಲ’ ಕೊನೆಯ ತನಕ ಶ್ರೀ.ಗಾಯಕವಾಡ್ ಇವರಿಗೆ ಶ್ರೀ. ಅಭಯ ವರ್ತಕ ಇವರು ಕೈಗೊಳ್ಳಬೇಕಾಗಿದ್ದ ಅನಾವಶ್ಯಕ ಪ್ರಯಾಣದ ಬಗ್ಗೆಯಾಗಲಿ, ಅವರ ಸಮಯ ವ್ಯಯವಾದ ಬಗ್ಗೆಯಾಗಲಿ ಸ್ವಲ್ಪವೂ ಖೇದವೆನಿಸಲಿಲ್ಲ.
ತದನಂತರ ಜನವರಿ ೩ರಂದು ಶ್ರೀ. ಅಭಯ ವರ್ತಕರವರು, ಸಭೆಯ ಆಯೋಜಕರಾಗಿದ್ದ ಶ್ರೀ.ಸಂತೋಷ ವೇಶ್ವೀಕರ್ ಇವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದರು. ಆಗ ಶ್ರೀ.ವೇಶ್ವೀಕರ್ ಇವರು, ‘ನಾವು ನಿಮ್ಮನ್ನು ವಕ್ತಾರನೆಂದು ಆಮಂತ್ರಿಸಿದ್ದೆವು; ಆದರೆ ನಮ್ಮ ವರಿಷ್ಠರು ನಿಮ್ಮೊಂದಿಗೆ ಏಕೆ ಈ ರೀತಿ ವರ್ತಿಸಿದರು ಎಂಬುದು ನಮಗೆ ತಿಳಿಯುತ್ತಿಲ್ಲ. ನಿಮಗೆ ಸಭೆಯಲ್ಲಿ ಮಾತನಾಡಲು ಸಮಯ ಕೊಡುವುದು ಸುಲಭವಾಗಿತ್ತು’ ಎಂದರು. (ಇದರಿಂದ ವಿಹಿಂಪನ ಕೆಲವು ಕಾರ್ಯಕರ್ತರಿಗೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಕಾರ್ಯ ಒಳ್ಳೆಯದೆನಿಸುತ್ತದೆ ಎಂಬುದು ತಿಳಿಯುತ್ತದೆ. ಆದರೆ ಸಂಘಟನೆಗಳಲ್ಲಿನ ವರಿಷ್ಠ ಮಟ್ಟದ ನೇತಾರರುಗಳಲ್ಲಿ ವೈಚಾರಿಕ ಗೊಂದಲವಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಿಹಿಂಪ ಇಂತಹ ನೇತಾರರಿಗೆ ತಿಳಿಸಿ ಹೇಳಬೇಕು. ಹಿಂದೂ ಸಂಘಟನೆಯ ಬಗ್ಗೆ ಅತೀವ ಆವಶ್ಯಕತೆಯ ಬಗ್ಗೆ ಅವರಿಗೆ ತಿಳಿಸಿ ಹೇಳಬೇಕೆಂದು ನಮ್ಮ ಅಪೇಕ್ಷೆಯಾಗಿದೆ -ಸಂಪಾದಕರು)
ತದನಂತರ ಜನವರಿ ೩ರಂದು ಶ್ರೀ. ಅಭಯ ವರ್ತಕರವರು, ಸಭೆಯ ಆಯೋಜಕರಾಗಿದ್ದ ಶ್ರೀ.ಸಂತೋಷ ವೇಶ್ವೀಕರ್ ಇವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದರು. ಆಗ ಶ್ರೀ.ವೇಶ್ವೀಕರ್ ಇವರು, ‘ನಾವು ನಿಮ್ಮನ್ನು ವಕ್ತಾರನೆಂದು ಆಮಂತ್ರಿಸಿದ್ದೆವು; ಆದರೆ ನಮ್ಮ ವರಿಷ್ಠರು ನಿಮ್ಮೊಂದಿಗೆ ಏಕೆ ಈ ರೀತಿ ವರ್ತಿಸಿದರು ಎಂಬುದು ನಮಗೆ ತಿಳಿಯುತ್ತಿಲ್ಲ. ನಿಮಗೆ ಸಭೆಯಲ್ಲಿ ಮಾತನಾಡಲು ಸಮಯ ಕೊಡುವುದು ಸುಲಭವಾಗಿತ್ತು’ ಎಂದರು. (ಇದರಿಂದ ವಿಹಿಂಪನ ಕೆಲವು ಕಾರ್ಯಕರ್ತರಿಗೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಕಾರ್ಯ ಒಳ್ಳೆಯದೆನಿಸುತ್ತದೆ ಎಂಬುದು ತಿಳಿಯುತ್ತದೆ. ಆದರೆ ಸಂಘಟನೆಗಳಲ್ಲಿನ ವರಿಷ್ಠ ಮಟ್ಟದ ನೇತಾರರುಗಳಲ್ಲಿ ವೈಚಾರಿಕ ಗೊಂದಲವಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಿಹಿಂಪ ಇಂತಹ ನೇತಾರರಿಗೆ ತಿಳಿಸಿ ಹೇಳಬೇಕು. ಹಿಂದೂ ಸಂಘಟನೆಯ ಬಗ್ಗೆ ಅತೀವ ಆವಶ್ಯಕತೆಯ ಬಗ್ಗೆ ಅವರಿಗೆ ತಿಳಿಸಿ ಹೇಳಬೇಕೆಂದು ನಮ್ಮ ಅಪೇಕ್ಷೆಯಾಗಿದೆ -ಸಂಪಾದಕರು)
ಸನಾತನದ ಮಾರ್ಗದರ್ಶಕ ಪ್ರಸಾರಸೇವಕಿ ಸೌ.ಶುಭಾಂಗಿ ಪಿಂಪಳೆ ಇವರಿಗೆ ದೊರೆತ ಮುನ್ಸೂಚನೆ
ಶ್ರೀ.ಅಭಯ ವರ್ತಕ ಇವರು ಶ್ರೀವರ್ಧನಕ್ಕೆ ಹೊರಡುವ ಮುನ್ನ ಸೌ. ಶುಭಾಂಗಿ ಅಕ್ಕನವರನ್ನು ಭೇಟಿ ಮಾಡಿದ್ದರು. ಆಗ ಅಕ್ಕನವರು, ‘ಸಂಘ ಪರಿವಾರದಲ್ಲಿನ ಸಂಘಟನೆಗಳು ಸಭೆಯನ್ನು ಆಯೋಜಿಸಿದೆ. ಅವರು ನಿಮ್ಮನ್ನು ವಕ್ತಾರರನ್ನಾಗಿ ಆಮಂತ್ರಿಸುವುದು ಉತ್ತಮವೇ ಆಗಿದೆ; ಆದರೆ ಅವರ ಮೇಲೆ ಪೂರ್ಣ ವಿಶ್ವಾಸವನ್ನಿಡದೇ ಜಾಗ್ರತೆಯಿಂದಿರಿ. ಅವರು ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆ ವಹಿಸಿ!’ ಎಂದಿದ್ದರು ಮತ್ತು ವಾಸ್ತವದಲ್ಲಿಯೂ ಸಂಘ ಪರಿವಾರವು ಸನಾತನಕ್ಕೆ ಮೋಸ ಮಾಡಿತು.
(ವಿಶೇಷ ಟಿಪ್ಪಣಿ : ಎರಡು ವರ್ಷ ಗಳ ಹಿಂದೆ ಶ್ರೀ.ದೀಪಕ ಗಾಯಕವಾಡ್ ಇವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ಸಭೆಗೆ ವಕ್ತಾರರೆಂದು ಉಪಸ್ಥಿತರಾಗಿದ್ದರು. ಅಲ್ಲದೆ, ಸಂಘದವರು ಸಮಿತಿಯ ಸಭೆಗೆ ಬಂದು ‘ಈ ಹಾಡನ್ನು ಹಾಡಬೇಕು, ಆ ಹಾಡನ್ನು ಹಾಡಬೇಕು’ ಎಂದು ಹೇಳಿದಾಗ ನಾವು ಅವರಿಗೆ ಆ ಹಾಡುಗಳನ್ನು ಹಾಡಲು ಬಿಡುತ್ತೇವೆ.)
(ವಿಶೇಷ ಟಿಪ್ಪಣಿ : ಎರಡು ವರ್ಷ ಗಳ ಹಿಂದೆ ಶ್ರೀ.ದೀಪಕ ಗಾಯಕವಾಡ್ ಇವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ಸಭೆಗೆ ವಕ್ತಾರರೆಂದು ಉಪಸ್ಥಿತರಾಗಿದ್ದರು. ಅಲ್ಲದೆ, ಸಂಘದವರು ಸಮಿತಿಯ ಸಭೆಗೆ ಬಂದು ‘ಈ ಹಾಡನ್ನು ಹಾಡಬೇಕು, ಆ ಹಾಡನ್ನು ಹಾಡಬೇಕು’ ಎಂದು ಹೇಳಿದಾಗ ನಾವು ಅವರಿಗೆ ಆ ಹಾಡುಗಳನ್ನು ಹಾಡಲು ಬಿಡುತ್ತೇವೆ.)
ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ!
ವರಿಷ್ಠರು ಹೇಳಿದ್ದಾರೆ ಎಂದು ಹೇಳಿಕೊಂಡು ಸಂಘಪರಿವಾರದ ಸಂಘಟನೆಗಳಿಂದ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯವನ್ನು ಮಹಾರಾಷ್ಟ್ರ, ಗೋವಾ ಮತ್ತು ದಕ್ಷಿಣ ಭಾರತದಲ್ಲಿ ವಿರೋಧಿಸಲಾಗುತ್ತಿದೆ. ಸನಾತನದ ವಕ್ತಾರರನ್ನು ಸಭೆಗೆ ಆಮಂತ್ರಿಸಿ ಕೊನೆಯ ಘಳಿಗೆಯಲ್ಲಿ ಮಾತನಾಡಲು ಬಿಡದಿರುವುದು, ಸಂಘ ಪರಿವಾರದ ಯಾವ ಕಾರ್ಯಕರ್ತರೂ ಸನಾತನದ ಕಾರ್ಯಕ್ರಮಕ್ಕೆ ಹೋಗಕೂಡದು ಎಂದು ಹೇಳುವುದು, ಸನಾತನದ ಸತ್ಸಂಗಗಳನ್ನು ನಿಲ್ಲಿಸುವುದು ಇವೇ ಮುಂತಾದ ಕೃತ್ಯಗಳನ್ನು ಸಂಘಪರಿವಾರದ ಕಾರ್ಯಕರ್ತರು ಮಾಡಿದ್ದಾರೆ. ಅದೇ ಸಮಯದಲ್ಲಿ ಕೆಲವು ಕಡೆಗಳಲ್ಲಿ ವಿಶೇಷವಾಗಿ ಉತ್ತರಭಾರತದ ಸಂಘ ಪರಿವಾರದ ಕಾರ್ಯಕರ್ತರು ಸನಾತನದ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಉತ್ತಮ ರೀತಿಯಲ್ಲಿ ಸಹಾಯವನ್ನು ಮಾಡುತ್ತಿದ್ದಾರೆ. ಇದರಿಂದ, ಸಂಘ ಪರಿವಾರದ ವರಿಷ್ಠ ಮಟ್ಟದಲ್ಲಿ ವೈಚಾರಿಕ ಗೊಂದಲವಿದೆ ಎಂಬುದೇ ಸ್ಪಷ್ಟವಾಗುತ್ತದೆ. ಹಿಂದುತ್ವದ ಕಾರ್ಯವನ್ನು ಮಾಡುವ ಸಂಘಟನೆಗಳ ಬಗ್ಗೆ ಸಂಘ ಪರಿವಾರದ ಕೆಲವು ನೇತಾರರಲ್ಲಿ ಇಂತಹ ವೈಚಾರಿಕ ಮತಭೇದಗಳ ಭೂಮಿಕೆ ಇರುವುದು ಹಿಂದೂ ಸಂಘಟನೆಗೆ ಮಾರಕವಾಗಿದೆ. ರಾಷ್ಟ್ರಾಭಿಮಾನಿ ಹಿಂದೂಗಳಿಗೆ ವಿಶ್ವವ್ಯಾಪಿ ಕಾರ್ಯ ಮಾಡುವ ಸಂಘ ಪರಿವಾರದ ಕಾರ್ಯಕರ್ತರಿಂದ ಇಂತಹ ವರ್ತನೆ ಅಪೇಕ್ಷಿತವಿಲ್ಲ. ಸಂಘ ಪರಿವಾರದಲ್ಲಿನ ಎಲ್ಲ ಸಂಘಟನೆಗಳ ಕಾರ್ಯದ ಬಗ್ಗೆ ಸನಾತನಕ್ಕೆ ಅತೀವ ಆದರವಿದೆ. ಆದರೂ ಕೆಲವು ಬೆರಳೆಣಿಕೆಯಷ್ಟು ಕಾರ್ಯಕರ್ತರಿಂದ ಹಿಂದೂ ಸಂಘಟನೆಗೆ ಹಾನಿಯಾಗಬಾರದು ಹಾಗೂ ಸಂಘಪರಿವಾರದ ಕಾರ್ಯಕರ್ತರಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗಳ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಧರ್ಮಾಭಿಮಾನಿ ಹಿಂದೂಗಳಿಗೆ ಎರಡೂ ಸಂಘಟನೆಗಳ ಮತವು ತಿಳಿಯಬೇಕು ಹಾಗೂ ಸಂಘ ಪರಿವಾರದ ವರಿಷ್ಠ ನೇತಾರರು ಈ ಕಾರ್ಯಕರ್ತರಿಗೆ ತಿಳಿಸಿ ಹೇಳಬೇಕು ಎಂಬ ಏಕೈಕ ಉದ್ದೇಶದಿಂದ ಈ ವೃತ್ತಾಂತವನ್ನು ಇಲ್ಲಿ ಕೊಡುತ್ತಿದ್ದೇವೆ. ಇದರಲ್ಲಿ ಸಂಘ ಪರಿವಾರದ ಮಾನಹಾನಿ ಮಾಡುವ ಯಾವುದೇ ಉದ್ದೇಶವಿಲ್ಲ.
No comments:
Post a Comment