ಸಾಧು-ಸಂತರನ್ನು ನೋಯಿಸುವುದೆಂದರೆ ಪ್ರತ್ಯಕ್ಷ ದೇವರನ್ನು ನೋಯಿಸಿದಂತೆ! -ಪ.ಪೂ.ಮುರುಘರಾಜೇಂದ್ರ ಮಹಾಸ್ವಾಮೀಜಿ
ಗೋಕಾಕದಲ್ಲಿ ಹಿಂದೂ ಧರ್ಮಜಾಗೃತಿ ಸಭೆಗೆ ೨,೫೦೦ ಹಿಂದೂಗಳ ಉಪಸ್ಥಿತಿ
ಎಡದಿಂದ ಶ್ರೀ.ಮೋಹನ ಗೌಡ, ಕು.ಸ್ಫೂರ್ತಿ ಬೆನಕನವಾರಿ ಹಾಗೂ ದೀಪಪ್ರಜ್ವಲನೆ ಮಾಡುವ ಪ.ಪೂ.ಮುರುಘರಾಜೇಂದ್ರ ಮಹಾಸ್ವಾಮೀಜಿ |
ಗೋಕಾಕ: ನಾವು ಧರ್ಮವನ್ನು ಬಿಟ್ಟಿರುವುದರಿಂದ ಧರ್ಮ ನಮ್ಮನ್ನು ಬಿಡುತ್ತಿದೆ. ಸಾಧು-ಸಂತರನ್ನು ನೋಯಿಸಿದರೆ ಪ್ರತ್ಯಕ್ಷ ದೇವರನ್ನು ನೋಯಿಸಿದಂತೆಯೇ ಆಗುತ್ತದೆ.
ಅಸಂಘಟಿತ ಹಿಂದೂಗಳಿಗಾಗಿ ದೇಶದ ಮೇಲೆ ಅನೇಕ ಆಕ್ರಮಣಗಳಾಗಿವೆ. ಹಿಂದೂಗಳು ಸಂಘಟಿತರಾದರೆ ಮಾತ್ರ ರಾಮರಾಜ್ಯದ ಸ್ಥಾಪನೆಯಾಗಬಹುದು ಹಾಗೂ ಧರ್ಮರಕ್ಷಣೆಯಾಗುವುದು. ಹಿಂದೂ ಜನಜಾಗೃತಿ ಸಮಿತಿ ಛತ್ರಪತಿ ಶಿವಾಜಿ ಮಹಾರಾಜರು ಮಾಡಿದಂತಹ ಕಾರ್ಯವನ್ನು ಮಾಡುತ್ತಿದೆ, ಎಂದು ಇಲ್ಲಿನ ಶೂನ್ಯಸಂಪಾದನ ಮಠದ ಪ.ಪೂ.ಮುರುಘರಾಜೇಂದ್ರ ಮಹಾ ಸ್ವಾಮೀಜಿಯವರು ಮಾರ್ಗದರ್ಶನ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜನವರಿ ೧೬ರಂದು ಇಲ್ಲಿನ ಮಯೂರ ಶಾಲೆಯ ಮೈದಾನದಲ್ಲಿ ಆಯೋಜಿಸಲ್ಪಟ್ಟ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಭೆಯನ್ನು ಸನಾತನ ಸಂಸ್ಥೆಯ ಕು.ಸ್ಫೂರ್ತಿ ಬೆನಕನವಾರಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಮೋಹನ ಗೌಡ ಇವರೂ ಸಂಬೋಧಿಸಿದರು. ಸೂತ್ರ ಸಂಚಾಲನೆಯನ್ನು ಶ್ರೀ.ವೈಭವ ಮಾಣಗಾವಕರ ಮತ್ತು ಶ್ರೀ.ಸ್ವಯಂಪ್ರಕಾಶ ಬಂಕಾಪುರರವರು ಮಾಡಿದರು. ಈ ಸಭೆಯಲ್ಲಿ ೨ಸಾವಿರದ ೫೦೦ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಶಬರಿಮಲೆಯಲ್ಲಿ ನಡೆದಿರುವ ಅನಾಹುತದಲ್ಲಿ ಮರಣ ಹೊಂದಿರುವ ಭಕ್ತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಸಂಘಟಿತ ಹಿಂದೂಗಳಿಗಾಗಿ ದೇಶದ ಮೇಲೆ ಅನೇಕ ಆಕ್ರಮಣಗಳಾಗಿವೆ. ಹಿಂದೂಗಳು ಸಂಘಟಿತರಾದರೆ ಮಾತ್ರ ರಾಮರಾಜ್ಯದ ಸ್ಥಾಪನೆಯಾಗಬಹುದು ಹಾಗೂ ಧರ್ಮರಕ್ಷಣೆಯಾಗುವುದು. ಹಿಂದೂ ಜನಜಾಗೃತಿ ಸಮಿತಿ ಛತ್ರಪತಿ ಶಿವಾಜಿ ಮಹಾರಾಜರು ಮಾಡಿದಂತಹ ಕಾರ್ಯವನ್ನು ಮಾಡುತ್ತಿದೆ, ಎಂದು ಇಲ್ಲಿನ ಶೂನ್ಯಸಂಪಾದನ ಮಠದ ಪ.ಪೂ.ಮುರುಘರಾಜೇಂದ್ರ ಮಹಾ ಸ್ವಾಮೀಜಿಯವರು ಮಾರ್ಗದರ್ಶನ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜನವರಿ ೧೬ರಂದು ಇಲ್ಲಿನ ಮಯೂರ ಶಾಲೆಯ ಮೈದಾನದಲ್ಲಿ ಆಯೋಜಿಸಲ್ಪಟ್ಟ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಭೆಯನ್ನು ಸನಾತನ ಸಂಸ್ಥೆಯ ಕು.ಸ್ಫೂರ್ತಿ ಬೆನಕನವಾರಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಮೋಹನ ಗೌಡ ಇವರೂ ಸಂಬೋಧಿಸಿದರು. ಸೂತ್ರ ಸಂಚಾಲನೆಯನ್ನು ಶ್ರೀ.ವೈಭವ ಮಾಣಗಾವಕರ ಮತ್ತು ಶ್ರೀ.ಸ್ವಯಂಪ್ರಕಾಶ ಬಂಕಾಪುರರವರು ಮಾಡಿದರು. ಈ ಸಭೆಯಲ್ಲಿ ೨ಸಾವಿರದ ೫೦೦ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಶ್ರೀಕೃಷ್ಣನ ಕೃಪೆಯಿಂದಲೇ ಸನಾತನದ ಸಾಧಕರ ಆಧ್ಯಾತ್ಮಿಕ ಪ್ರಗತಿ ವೇಗವಾಗಿ ಆಗುತ್ತಿದೆ!
- ಕು.ಸ್ಪೂರ್ತಿ ಬೆನಕನವಾರಿ
ಸನಾತನದ ಸಾಧಕರು ವಿವಿಧ ತನಿಖಾ ದಳದಿಂದಾಗುವ ತನಿಖೆ ಹಾಗೂ ಸನಾತನ ದ್ವೇಷಿಗಳಿಂದ ಸನಾತನದ ಆಶ್ರಮದ ಮೇಲಾಗುವ ಆಕ್ರಮಣವನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಸನಾತನದ ಸಾಧಕರು ಶೀಘ್ರಗತಿಯಲ್ಲಿ ಆಧ್ಯಾತ್ಮಿಕ ಪ್ರಗತಿ ಹೊಂದುತ್ತಿದ್ದಾರೆ. ಇದಕ್ಕೆ ಸನಾತನದ ಮೇಲೆ ಶ್ರೀಕೃಷ್ಣನ ಅಖಂಡ ಕೃಪಾದೃಷ್ಟಿ ಇರುವುದು ಹಾಗೂ ಅನೇಕ ಧರ್ಮಾಭಿಮಾನಿಗಳ ಸಹಕಾರವೇ ಕಾರಣ. ಗಮನಾರ್ಹ ಅಂಶಗಳು
ಧರ್ಮಸಭೆಯ ಹಿಂದಿನ ದಿನ ಮತ್ತು ಸಭೆಯ ದಿನ ಸ್ವಾಮೀ ದಯಾನಂದಜೀ ಇವರು ಇಡೀ ದಿನ ಮೈದಾನದಲ್ಲಿದ್ದರು. ಅವರು ಸೇವೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿದರು.ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಶಬರಿಮಲೆಯಲ್ಲಿ ನಡೆದಿರುವ ಅನಾಹುತದಲ್ಲಿ ಮರಣ ಹೊಂದಿರುವ ಭಕ್ತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯ ಸ್ಥಳಕ್ಕೆ ಮುಸಲ್ಮಾನ ದಂಪತಿಗಳು ಬಂದಿದ್ದರು. (ಮುಸಲ್ಮಾನರ ಧರ್ಮಸಭೆಗೆ ಹಿಂದೂಗಳು ಹೋಗುವ ಧೈರ್ಯ ಮಾಡುವರೇ?-ಸಂಪಾದಕರು)
ಸಭೆ ಮುಗಿದ ನಂತರ ವಕ್ತಾರರೊಂದಿಗೆ ಚರ್ಚಿಸಲು ೧೦೦ಕ್ಕಿಂತಲೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಸಭೆ ಮುಗಿದ ನಂತರ ವಕ್ತಾರರೊಂದಿಗೆ ಚರ್ಚಿಸಲು ೧೦೦ಕ್ಕಿಂತಲೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಸಭೆಯ ನಂತರದ ಧರ್ಮಾಭಿಮಾನಿಗಳ ಸಭೆಯಲ್ಲಿ ಭಾಜಪದ ಮೂರು ತಾಲೂಕಿನ ಪ್ರಮುಖರಾದ ಸೌ.ಶ್ರೀದೇವಿ ತಡಕೋಡ ಇವರು “ಸಾಧಕರು ನನಗೆ ಅನೇಕ ಬಾರಿ ಸತ್ಸಂಗಕ್ಕೆ ಬರಲು ಹೇಳಿದರು. ನನಗೆ ಇದೂ ಸಹ ಇತರ ಸಂಪ್ರದಾಯದ ಸತ್ಸಂಗದಂತೆಯೇ ಇರಬಹುದು ಎಂದು ತಿಳಿದು ನಾನು ಹೋಗಿರಲಿಲ್ಲ. ಆದರೆ ಇಂದು ನನಗೆ ನಾನು ಎಷ್ಟು ಕಳೆದುಕೊಂಡಿ ದ್ದೇನೆ ಎಂಬುದು ತಿಳಿಯಿತು. ನೀವು ಸಭೆಯ ಸ್ಥಳದಲ್ಲಿ ‘ಧರ್ಮಕ್ಕಾಗಿ ಕನಿಷ್ಟ ಒಂದು ಗಂಟೆಯನ್ನಾದರೂ ನೀಡಿರಿ’, ಎಂದು ಹಿಂದೂಗಳಿಗೆ ಕರೆ ನೀಡುವ ಫಲಕ ಹಚ್ಚಿದ್ದೀರಿ. ನಾನು ಪ್ರತಿದಿನ ೫ ಗಂಟೆ ನೀಡಲು ಪ್ರಯತ್ನ ಮಾಡುತ್ತೇನೆ." ಎಂದರು.
No comments:
Post a Comment