ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ...

 ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ

ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ಉಪಚಾರಗಳಲ್ಲಿ ೯.ಗಂಧವನ್ನು ಹಚ್ಚುವುದು, ೧೦.ಹೂವುಗಳನ್ನು ಅರ್ಪಿಸುವುದು, ೧೧.ಧೂಪವನ್ನು ತೋರಿಸುವುದು, ೧೨.ದೀಪವನ್ನು ಬೆಳಗುವುದು, ೧೩.ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತಿದೆ. (ಮುಂದುವರಿದ ಭಾಗ)



೨ಇ.ಮೂರನೆಯ ಉಪಚಾರ: ಧೂಪವನ್ನು ತೋರಿಸುವುದು
ಗಿಡಮೂಲಿಕೆಗಳ ರಸದಿಂದ ಉತ್ಪನ್ನವಾದ ಸುಗಂಧಿತ ಧೂಪವನ್ನು ದೇವರ ಎದುರಿಗೆ ಸುಡಬೇಕು. ಧೂಪವಿಲ್ಲದಿದ್ದರೆ ಊದುಬತ್ತಿಗಳನ್ನು ಹಚ್ಚಿಯೂ ಈ ಉಪಚಾರವನ್ನು ಪೂರ್ಣಗೊಳಿಸಬಹುದು.

೨ಇ೧.ಧೂಪವನ್ನು ತೋರಿಸುವುದರಿಂದಾಗುವ ಲಾಭಗಳು
ಅ. ಸುಗಂಧಿತ ಧೂಪವು ದೇವತೆಗಳಿಗೆ ಪ್ರಿಯವಾಗಿರುವುದರಿಂದ ಧೂಪವನ್ನು ತೋರಿಸುವುದರಿಂದ ದೇವತೆಗಳು ಪ್ರಸನ್ನ ರಾಗುತ್ತಾರೆ.
ಆ. ಧೂಪದಿಂದ ಪ್ರಕ್ಷೇಪಿತವಾಗುವ ರಜೋಗುಣಿ ಮತ್ತು ಪೃಥ್ವಿ ಹಾಗೂ ಆಪ ತತ್ತ್ವಗಳಿಗೆ ಸಂಬಂಧಿಸಿದ ಲಹರಿಗಳಿಂದಾಗಿ ವಾಸ್ತುವಿನಲ್ಲಿರುವ ಕನಿಷ್ಠ ದೇವತೆಗಳ ಲಹರಿಗಳು ಕಾರ್ಯನಿರತವಾಗುತ್ತವೆ. ಕನಿಷ್ಠ ದೇವತೆಗಳನ್ನು ಸಂತುಷ್ಟಗೊಳಿಸುವುದ ರಿಂದ ವಾಸ್ತುವಿನಲ್ಲಿರುವ ಕೆಟ್ಟ ಶಕ್ತಿಗಳ ಸಂಚಾರದ ಮೇಲೆ ನಿಯಂತ್ರಣವುಂಟಾಗುತ್ತದೆ.
ಇ. ಧೂಪದಿಂದ ವಾತಾವರಣವು ಸಾತ್ತ್ವಿಕವಾಗಲು ಸಹಾಯವಾಗುತ್ತದೆ.

೨ಇ೨. ಧೂಪವನ್ನು ತೋರಿಸುವಾಗ ಅದನ್ನು ಕೈಯಿಂದ ಏಕೆ ಹರಡಬಾರದು? (ಕೈಯಿಂದ ಪ್ರಕ್ಷೇಪಿತವಾಗುವ ಜೀವದ ಭಾವನಾತ್ಮಕ ವಿಚಾರಗಳ ರಜ- ತಮಾತ್ಮಕ ಸ್ಪಂದನಗಳಿಂದ ಧೂಪದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ವಾಯುವಿಗೆ ಅಡಚಣೆಯು ನಿರ್ಮಾಣವಾಗುತ್ತದೆ, ಆದುದರಿಂದ ಧೂಪವನ್ನು ತೋರಿಸುವಾಗ ಕೈಯಿಂದ ಹರಡಬಾರದು): ಧೂಪದಿಂದ ಪ್ರಕ್ಷೇಪಿತವಾಗುವ ವಾಯುವು ತೇಜ ಮತ್ತು ವಾಯುತತ್ತ್ವಗಳಿಗೆ ಸಂಬಂಧಿಸಿರುತ್ತದೆ. ಈ ವಾಯುವು ವಾತಾವರಣದಲ್ಲಿನ ರಜ-ತಮಾತ್ಮಕ ಕಣಗಳನ್ನು ಪ್ರಭಾವೀ ವಹನ ಪ್ರಕ್ರಿಯೆಯಿಂದ ಬೇರ್ಪಡಿಸುತ್ತದೆ. ಧೂಪವನ್ನು ತೋರಿಸಿದ ಮೇಲೆ ವಾಸ್ತುವಿನಲ್ಲಿರುವ ರಜ-ತಮ ಕಣಗಳಿಗೆ ವೇಗವು ಪ್ರಾಪ್ತವಾಗುತ್ತದೆ. ಇದರಿಂದ ನಿರ್ಮಾಣವಾಗುವ ಶಕ್ತಿಯು ವಾತಾವರಣದಲ್ಲಿ ಸೂಕ್ಷ್ಮ-ಜ್ವಾಲೆಗಳನ್ನು ನಿರ್ಮಿಸುತ್ತದೆ. ಯಾವಾಗ ಧೂಪವು ಕಾರ್ಯನಿರತವಾಗಿರುತ್ತದೆಯೋ ಆಗ ಅದು ಈ ಕಾರ್ಯನಿರತ ಶಕ್ತಿಗೆ ಬಲವನ್ನು ಪೂರೈಸಿ ರಜ-ತಮ ಕಣಗಳನ್ನು ವಾತಾವರಣದಲ್ಲಿಯೇ ವಿಘಟಿಸುತ್ತದೆ. ಧೂಪವನ್ನು ಕೈಯಿಂದ ಹರಡುವುದರಿಂದ ಕೈಯಿಂದ ಪ್ರಕ್ಷೇಪಿಸುವ ಜೀವದ ಭಾವನಾತ್ಮಕ ವಿಚಾರಗಳ ರಜ-ತಮಾತ್ಮಕ ಸ್ಪಂದನಗಳು ಧೂಪದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ವಾಯುವಿಗೆ ಅಡಚಣೆಗಳನ್ನುಂಟು ಮಾಡುತ್ತವೆ. ಇದರಿಂದ ಧೂಪದಿಂದ ಅಪೇಕ್ಷಿತವಿರುವ ವಾಸ್ತುಶುದ್ಧಿಯ ಕಾರ್ಯವು ಪೂರ್ಣವಾಗುವುದಿಲ್ಲ. ಆದುದರಿಂದ ಧೂಪ ಕೈಯಿಂದ ಹರಡಬಾರದು.

೨ಇ೩.ಊದುಬತ್ತಿ: ಧೂಪದ ನಂತರ ಊದುಬತ್ತಿಗಳನ್ನು ಬೆಳಗುವುದ ರಿಂದ ಊದುಬತ್ತಿಯ ಸುವಾಸನೆಯಿಂದ ಪ್ರಕ್ಷೇಪಿತವಾಗುವ ಸುಗಂಧದ ಕಣಗಳೆಡೆಗೆ ಬ್ರಹ್ಮಾಂಡದಲ್ಲಿನ ಆಯಾ ದೇವತೆಯ ಸಗುಣ ಲಹರಿಗಳು ಆಕರ್ಷಿತವಾಗುತ್ತವೆ.

-(ಸೌ.ಅಂಜಲಿ ಗಾಡಗೀಳರ ಮಾಧ್ಯಮ ದಿಂದ, ೭.೫.೨೦೦೫, ರಾತ್ರಿ ೯.೫೦)

೨ಇ೩ಅ.ದೇವತೆಯ ತಾರಕ ಮತ್ತು ಮಾರಕ ಉಪಾಸನೆಗನುಸಾರ ವಿಶಿಷ್ಟ ಪರಿಮಳದ ಊದುಬತ್ತಿಗಳನ್ನು ಉಪಯೋಗಿಸುವುದು: ದೇವತೆಯ ಉಪಾಸನೆಯಲ್ಲಿ ತಾರಕ ಉಪಾಸನೆ ಮತ್ತು ಮಾರಕ ಉಪಾಸನೆ ಹೀಗೆ ಎರಡು ಉಪಾಸನೆಗಳಿವೆ. ದೇವತೆಯ ಬಗ್ಗೆ ಭಕ್ತಿಭಾವವು ಹೆಚ್ಚಾಗಬೇಕು ಹಾಗೂ ಆನಂದ ಮತ್ತು ಶಾಂತಿಯ ಅನುಭೂತಿಯು ಬರಬೇಕೆಂದು ದೇವತೆಯ ತಾರಕ ರೂಪದ ಉಪಾಸನೆ ಯನ್ನು ಮಾಡುತ್ತಾರೆ, ಉದಾ.ದೇವತೆಯ ತಾರಕ ನಾಮಜಪ ಮಾಡುವುದು. ದೇವತೆಯ ಮಾರಕ ರೂಪದ ಉಪಾಸನೆ ಯನ್ನು ಮುಖ್ಯವಾಗಿ ಕೆಟ್ಟ ಶಕ್ತಿಗಳ ನಿವಾರಣೆಗಾಗಿ ಮಾಡುತ್ತಾರೆ ಉದಾ. ದೇವತೆಯ ಮಾರಕ ನಾಮಜಪವನ್ನು ಮಾಡುವುದು. ದೇವತೆಯ ತಾರಕ ಮತ್ತು ಮಾರಕ ಉಪಾಸನೆಗನುಸಾರ ದೇವತೆಯ ತಾರಕ ಮತ್ತು ಮಾರಕ ತತ್ತ್ವವನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುವಂತಹ ವಸ್ತುಗಳನ್ನು ಉಪಾಸನೆಗೆ ಉಪಯೋಗಿಸಿ ದರೆ ಅದು ಉಪಾಸಕರ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗುತ್ತದೆ. ಇದಕ್ಕನುಸಾರ ದೇವತೆಯ ತಾರಕ ಮತ್ತು ಮಾರಕ ರೂಪದ ಉಪಾಸನೆಯನ್ನು ಮಾಡುವಾಗ ಯಾವ ಪರಿಮಳದ ಊದುಬತ್ತಿಗಳನ್ನು ಉಪ ಯೋಗಿಸಿದರೆ ಆ ದೇವತೆಯ ತಾರಕ ಮತ್ತು ಮಾರಕ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ ಎಂಬುದನ್ನು ಮುಂದಿನ ಕೋಷ್ಟಕಗಳಲ್ಲಿ ನೀಡಲಾಗಿದೆ.

೨ಇ೩ಅ೧.ದೇವತೆಯ ತಾರಕ ರೂಪದ ಉಪಾಸನೆಗೆ ಪೂರಕವಾಗಿರುವ ಸುಗಂಧ : (ಒಂದಕ್ಕಿಂತ ಹೆಚ್ಚು ದೇವತೆಗಳ ಉಪಾಸನೆ ಮಾಡುವವರು ಉದಾ. ಒಂದಕ್ಕಿಂತ ಹೆಚ್ಚು ದೇವತೆಗಳ ಏಕತ್ರಿತ ನಾಮಜಪ ಮಾಡುವವರು ಆ ದೇವತೆಗಳ ಉಪಾಸನೆಗೆ ಪೂರಕವಾಗಿರುವ ಯಾವುದಾದರೊಂದು ಸಮೂಹದ ಸುಗಂಧವನ್ನು ಉಪಯೋಗಿಸಬೇಕು. ಉದಾ. ಶ್ರೀಗಣಪತಿ ಮತ್ತು ಶ್ರೀಕೃಷ್ಣನ ಏಕತ್ರಿತ ನಾಮಜಪ ಮಾಡುವವರು ಚಂದನ, ಕೇದಗೆ, ಚಮೇಲಿ ಅಥವಾ ಲಾವಂಚ ಇವುಗಳಲ್ಲಿನ ಯಾವು ದಾದರೊಂದು ಪರಿಮಳವನ್ನು ಆರಿಸಬೇಕು.)

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ’)

No comments:

Post a Comment