‘ಸನಾತನ ಪ್ರಭಾತ’ದ ಕುರಿತು ಸಾಧಕರಿಗೆ ಹಾಗೂ ವಾಚಕರಿಗೆ ಬಂದ ಅನುಭೂತಿಗಳು

 ಸಮಾಜದಲ್ಲಿ ಅನೇಕ ಪತ್ರಿಕೆಗಳು ಇವೆ. ಆದರೆ ಮೋಕ್ಷಕ್ಕೆ ಕರೆದುಕೊಂಡು ಹೋಗುವ ಒಂದೇ ಒಂದು ಪತ್ರಿಕೆಯೆಂದರೆ ‘ಸನಾತನ ಪ್ರಭಾತ’ ! - ಓರ್ವ ಧರ್ಮಾಭಿಮಾನಿ
ಸನಾತನ ಪ್ರಭಾತವು ಕಳೆದ ೧೨ ವರ್ಷಗಳಿಂದ ತನ್ನ ವಿಚಾರಗಳನ್ನು ಮಂಡಿಸುತ್ತಾ ಬಂದಿದ್ದು ಈಗ ಅದು ತಪಃಪೂರ್ತಿ(೧೨ ವರ್ಷ)ಗೊಳಿಸುತ್ತಿದೆ. ಈ ನಿಮಿತ್ತ ಸಾಧಕ-ವಾಚಕರಿಗೆ ಸನಾತನ ಪ್ರಭಾತದಿಂದ ಬಂದ ಅನುಭವ ಹಾಗೂ ಅನುಭೂತಿಗಳನ್ನು ಇಲ್ಲಿ ನೀಡುತ್ತಿದ್ದೇವೆ. ಇದರಿಂದ ಇತರರೂ ಸ್ಫೂರ್ತಿ ಪಡೆದು ‘ಸನಾತನ ಪ್ರಭಾತ’ದ ಉದ್ದೇಶವು ಸಫಲವಾಗಲೆಂದು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ.

ಏನು ಬೇಕಿರುತ್ತದೆಯೋ ಅದು ಆ ವಾರದಲ್ಲಿಯೇ ದೊರೆಯುವುದು : 
ಅ. ನಾನು ಕಳೆದ ೮ ವರ್ಷದಿಂದ ಸನಾತನ ಪ್ರಭಾತ ಪತ್ರಿಕೆಯನ್ನು ನಿಯಮಿತವಾಗಿ ಓದುತ್ತಿದ್ದೇನೆ. ಇದರಲ್ಲಿ ಬರುವ ವಿಷಯವು ನನ್ನ ಜೀವನದಲ್ಲಿ ಮಾರ್ಗದರ್ಶಕವಾಗಿದೆ. ನನಗೆ ಆಯಾ ವಾರದಲ್ಲಿ ಏನು ಮಾಹಿತಿ ಬೇಕಾಗಿರುತ್ತದೆಯೋ ಅದೇ ಮಾಹಿತಿ ಪತ್ರಿಕೆಯಲ್ಲಿ ಬರುವುದು ಬಹಳ ಆಶ್ಚರ್ಯಕರವಾಗಿದೆ. ಹಾಗೆಯೇ ಸಾಧಕರ ಸೂಚನೆಯಲ್ಲಿ ಬರುವ ಸೂಚನೆಯೂ ನನಗೆ ಕೆಲವೊಮ್ಮೆ ಮುಂಚಿತವಾಗಿಯೇ ದೊರೆತು ಅದನ್ನು ಪಾಲಿಸಿರುತ್ತೇನೆ. ಉದಾ. ಕರ್ಪೂರದ ಉಪಚಾರವನ್ನು ನಾನು ಸನಾತನ ಪತ್ರಿಕೆಯಲ್ಲಿ ಬರುವ ಮುಂಚೆಯೇ ಮಾಡಿದ್ದೇನೆ. ಹೀಗೆ ನಿರ್ಗುಣ ಮತ್ತು ಸಗುಣ ಎರಡೂ ರೀತಿಯಲ್ಲಿ ಉಪಚಾರ ಮಾಹಿತಿ, ಜ್ಞಾನವನ್ನೂ ದೊರಕಿಸಿಕೊಟ್ಟ ಸದ್ಗುರುಗಳಿಗೆ ಮತ್ತು ಸನಾತನ ಪ್ರಭಾತಕ್ಕೆ ಆಭಾರಿಯಾಗಿದ್ದೇನೆ ಮತ್ತು ಅನಂತಾನಂತ ಕೃತಜ್ಞತೆಗಳು. - ಸೌ. ಶೋಭಾ ಗುರುರಾಜ, ಉಡುಪಿ
ಆ. ಮನಸ್ಸಿನಲ್ಲಿ ಬರುವ ಪ್ರಶ್ನೆಗಳಿಗೆ ಸನಾತನ ಪ್ರಭಾತದಲ್ಲಿ ಒಂದೆರಡು ವಾರದಲ್ಲಿ ಉತ್ತರವು ದೊರೆಯುತ್ತದೆ.
-ಸೌ. ಸುಧಾ ಗುರುಪ್ರಸಾದ, ಸಿದ್ಧಾಪುರ
 
೨. ಸನಾತನ ಪ್ರಭಾತವನ್ನು ಶರೀರಕ್ಕೆ ಕಟ್ಟಿದ ನಂತರ ಶರೀರದಲ್ಲಿದ್ದ ಕೆಟ್ಟ ಶಕ್ತಿಯು ದೂರ ಹೋಗುವುದು : ನನ್ನ ಸಹೋದರನಿಗೆ ಪ್ರತಿದಿನ ಕೆಟ್ಟ ಶಕ್ತಿಯ ತೊಂದರೆಯಾಗುತ್ತಿತ್ತು. ಒಮ್ಮೆ ಅವನು ತುಂಬ ಪ್ರಕಟನಾಗಿದ್ದನು. ಆಗ ತಾನು ಹಾಕಿದ ಅಂಗಿ ಪಂಚೆಯನ್ನು ತೆಗೆದು ದೂರಕ್ಕೆ ಎಸೆದನು ಮತ್ತು ಮಂಚದ ಮೇಲೆ ಮಲಗಿ ಅಸಹನೀಯವಾಗಿ ಒದ್ದಾಡಲಾರಂಭಿಸಿದನು. ಆಗ ನಾನು ಕೂಡಲೇ ಊದುಬತ್ತಿಯನ್ನು ಉರಿಸಿ ಅವನ ಸಮೀಪವಿಟ್ಟು ವಿಭೂತಿ ಹಚ್ಚಲಾರಂಭಿಸಿದೆನು. ಅವನು ನನ್ನನ್ನು ಕೈಯಿಂದ ದೂಡಲಾರಂಭಿಸಿದನು. ಆಗ ನಾನು ಅವನಿಗೆ ಪರಮ ಪೂಜ್ಯ ಗುರುದೇವರಲ್ಲಿ ಭಾವಪೂರ್ಣವಾಗಿ ಪ್ರಾರ್ಥನೆ ಮಾಡಲು ಹೇಳಿದೆನು. ನಂತರ ನಾನು ಸನಾತನ ಪ್ರಭಾತ ಪತ್ರಿಕೆಯನ್ನು ಅವನ ಎದೆಯಿಂದ ಮೊಣಕಾಲಿನ ವರೆಗೆ ಎರಡೂ ಕಡೆಯಲ್ಲಿ ಇಟ್ಟು ದಾರದಿಂದ ಕಟ್ಟಿ ದೆನು. ಆಗ ಕೂಡಲೇ ಅವನ ಒದ್ದಾಟ ನಿಂತು ಹೋಯಿತು. ನಂತರ ಸುಮಾರು ಸಾಯಂ ಕಾಲ ೭ಗಂಟೆಯಿಂದ ೧೦ ಗಂಟೆಯ ವರೆಗೆ ಮಲಗಿದ್ದನು. ಎದ್ದಾಗ ಅವನು ‘ಪತ್ರಿಕೆ ಯನ್ನು ಕಟ್ಟಿದ ಕೂಡಲೇ ವಿಕಾರವಾಗಿರುವ ಒಂದು ಕೆಟ್ಟ ಶಕ್ತಿ ನನ್ನ ದೇಹದಿಂದ ಹೊರಗೆ ಹೋಗಿ ಮಂಚದ ಕೆಳಭಾಗದಲ್ಲಿದ್ದು ನನ್ನನ್ನೇ ನೋಡುತ್ತಿತ್ತು. ತಲೆಯ ಮೇಲ್ಭಾಗದಲ್ಲಿ ಶ್ರೀಧರ ಸ್ವಾಮಿಗಳ ಹಸ್ತ ಕಾಣುತ್ತಿತ್ತು’ ಎಂದನು. ಆಗ ನನಗೆ ಗುರುದೇವರ ಬಗ್ಗೆ ಕಣ್ಣೀರಿನೊಂದಿಗೆ ಭಾವಪೂರ್ಣ ಕೃತಜ್ಞತೆ ವ್ಯಕ್ತವಾಯಿತು. - ಕು. ಸುಕನ್ಯಾ, ಸಿದ್ಧಾಪುರ

೩.ಸನಾತನ ಪ್ರಭಾತ ಬರುವುದಕ್ಕೆ ಹಾತೊರೆಯುವ ವಾಚಕರು
ಬಾರ್ಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ವ್ಯವಸ್ಥಾಪಕರು ಸನಾತನ ಪ್ರಭಾತವನ್ನು ಓದಲಾರಂಭಿಸಿದರು. ಅತ್ಯಲ್ಪ ಸಮಯದಲ್ಲಿ ಪತ್ರಿಕೆ ಅವರ ಮೇಲೆ ಅಗಾಧ ಪರಿಣಾಮ ಬೀರಿತು. ಅವರಿಗೆ ಸಂಸ್ಥೆಯ ಕಾರ್ಯದ ಬಗ್ಗೆ ಅಪಾರ ಗೌರವವಿದೆ. ಏನಾದರು ಸಂದೇಹ ಬಂದಾಗ ದೂರವಾಣಿಯ ಮೂಲಕ ವಿಚಾರಿಸಿಕೊಳ್ಳುತ್ತಾರೆ. ಪತ್ರಿಕೆಯ ಪ್ರತಿಯೊಂದು ಪುಟವನ್ನೂ ತಪ್ಪದೆ ಓದಿ ಅಧ್ಯಯನ ಮಾಡು ತ್ತಾರೆ. ದೇವಸ್ಥಾನದಲ್ಲಿ ಫಲಕ ಹಾಕುವುದಕ್ಕೆ ಮತ್ತು ಉತ್ಸವದ ಸಮಯದಲ್ಲಿ ಗ್ರಂಥ ಪ್ರದರ್ಶನಕ್ಕೆ ಯೋಗ್ಯ ವ್ಯವಸ್ಥೆಯನ್ನು ಮಾಡಿ ಕೊಡುತ್ತಾರೆ. ಅವರು ಪತ್ರಿಕೆಯ ಚಂದಾ ಮುಗಿಯುವ ಮೊದಲೇ ತಿಳಿಸಲು ಹೇಳುತ್ತಾರೆ. - ಕು. ಸುಕನ್ಯಾ, ಸಿದ್ಧಾಪುರ

ಸನಾತನ ಪ್ರಭಾತವನ್ನು ಓದುವಾಗ ಕೃತಜ್ಞತಾ ಭಾವವು ವ್ಯಕ್ತವಾಗುತ್ತದೆ - ಕುಮಾರಿ ಪ್ರತಿಮಾ, ಸಿದ್ಧಾಪುರ

No comments:

Post a Comment