ಹಿಂದೂಗಳ ಧರ್ಮಗ್ರಂಥದಲ್ಲಿನ ವಿಷಯಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಅವಾಸ್ತವ ಟಿಪ್ಪಣಿ !
ಮುಂಬೈ : ಸರ್ವೋಚ್ಚ ನ್ಯಾಯಾಲಯವು ಓರ್ವ ಭಿಲ್ಲವ ಸ್ತ್ರೀಯ ಮೇಲಿನ ಅತ್ಯಾಚಾರದ ಬಗ್ಗೆ ಶಿಕ್ಷೆಯ ಅಚ್ಚೊತ್ತುವಾಗ ‘ಭಿಲ್ಲವ ಈ ಕೆಳಜಾತಿಯ ಏಕಲವ್ಯನು ಧನುರ್ವಿದ್ಯೆಯಲ್ಲಿ ನಿಪುಣನಾಗಬಾರದೆಂದು ಗುರು ದ್ರೋಣಾಚಾರ್ಯರು ಅವನಿಂದ ಬಲಗೈಯ ಹೆಬ್ಬೆರಳನ್ನು ಕೇಳಿ ಪಡೆದುಕೊಂಡಿರುವುದು ಅತ್ಯಂತ ನಾಚಿಕೆಯ ವಿಷಯವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ. ಉಚ್ಚ ಜಾತಿಯ ಯುವಕನೊಂದಿಗೆ ಪ್ರೇಮ ಸಂಬಂಧ ವಿಟ್ಟುಕೊಂಡ ಆರೋಪದಿಂದ ಅಹಮ್ಮದ ನಗರ ಜಿಲ್ಲೆಯ ಚಿಂಚೋಡಿ ಎಂಬಲ್ಲಿ ೧೯೯೪ ರ ಮೇ ೧ ರಂದು ಮೂವರು ಪುರುಷರು ಮತ್ತು ಓರ್ವ ಸ್ತ್ರೀಯು ೨೫ ವರ್ಷದ ಓರ್ವ ಭಿಲ್ಲವ ಯುವತಿಯನ್ನು ನಗ್ನಗೊಳಿಸಿ ಥಳಿಸಿದ್ದರು. ಈ ನಾಲ್ವರಿಗೂ ಶಿಕ್ಷೆ ವಿಧಿಸುವಾಗ ನ್ಯಾ. ಮಾರ್ಕಂಡೇಯ ಕಾಟಜೂ ಮತ್ತು ನ್ಯಾ. ಶ್ರೀಮತಿ ಗ್ಯಾನಸುಧಾ ಮಿಶ್ರಾರವರ ವಿಭಾಗೀಯ ಪೀಠವು ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದೆ.
(ಏಕಲವ್ಯನು ಕೆಳಜಾತಿಯವನಾಗಿದ್ದನು ಅಥವಾ ಅವನು ಅರ್ಜುನನಿಗಿಂತ ಮುಂದೆ ಹೋಗಬಾರದೆಂಬ ದ್ವೇಷದಿಂದ ದ್ರೋಣಾಚಾರ್ಯರು ಅವನ ಹೆಬ್ಬೆರಳನ್ನು ಕೇಳಿದರು ಎಂಬ ಜಾತೀಯವಾದಿ ಹಾಗೂ ವಿಕೃತಿವಾದಿ ವಿಚಾರಗಳು ಇತ್ತೀಚೆಗಿನ ಜಾತೀಯವಾದಿ ಸಂಘಟನೆಗಳು ಬ್ರಾಹ್ಮಣದ್ವೇಷದಿಂದ ಹಬ್ಬಿಸುತ್ತಿದ್ದಾರೆ. ಹೆಬ್ಬೆರಳನ್ನು ಕೇಳುವ ಗುರು ದ್ರೋಣಚಾರ್ಯರೆಂದರೆ ಇಂದಿನ ಭ್ರಷ್ಟಾಚಾರಿ ಶಿಕ್ಷಕರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆಧ್ಯಾತ್ಮಿಕ ಉನ್ನತಿಗಾಗಿ ಅಹಂ ಎಲ್ಲಕ್ಕಿಂತ ದೊಡ್ಡ ಅಡ್ಡಿಯಾಗಿದೆ. ಗುರು ಹಾಗೂ ಋಷಿಗಳು ತ್ರಿಕಾಲಜ್ಞಾನಿಗಳಾಗಿರುವುದರಿಂದ ಏಕಲವ್ಯನ ಅಹಂ ಹೆಚ್ಚಾಗ ಬಾರದೆಂದು ಅವರು ಅವನ ಹೆಬ್ಬೆರಳನ್ನು ಕೇಳಿದರು, ಇದು ಅದರ ಹಿಂದಿರುವ ಆಧ್ಯಾತ್ಮಿಕ ಅರ್ಥವಾಗಿದೆ. ಏಕಲವ್ಯನ ಹೆಬ್ಬೆರಳು ಕೇಳುವ ಪ್ರಸಂಗದ ಶಬ್ದಾರ್ಥದ ಬಗ್ಗೆ ವಿಚಾರ ಮಾಡಿದಾಗ, ಇದನ್ನು ನ್ಯಾಯಾಲಯವೇ ಹೇಳಿದೆ ಎಂದರ್ಥವಾಗುತ್ತದೆ. ಇತ್ತೀಚೆಗೆ ನ್ಯಾಯಾಲಯಗಳು ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಈ ಪದ್ಧತಿ ಆಗಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಜಿ. ಬಾಲಕೃಷ್ಣನರವರು ರಾಧಾ ಮತ್ತು ಕೃಷ್ಣರ ವಿಷಯದಲ್ಲಿ ಅಶ್ಲೀಲ ಟೀಕೆಯನ್ನು ಮಾಡಿ ಆರಂಭಿಸಿದ್ದಾರೆ. ನ್ಯಾಯಾಲಯವು ಧಾರ್ಮಿಕ ವಿಷಯದಲ್ಲಿ ತಪ್ಪು ಟಿಪ್ಪಣಿ ಮಾಡುವುದು ಹಿಂದೂಗಳ ಧಾರ್ಮಿಕ ಭಾವನೆಯನ್ನು ಮೆಟ್ಟಿದಂತೆಯೇ ಆಗಿದೆ. - ಸಂಪಾದಕರು)
No comments:
Post a Comment