ಗೋವಾದಲ್ಲಿ ನಾಲ್ಕನೇ ತರಗತಿಯ ಮರಾಠಿ ಭಾಷೆಯ
‘ಪರಿಸರ ಅಭ್ಯಾಸ’ಪಠ್ಯಪುಸ್ತಕದ ಸುಧಾರಿಸಿದ ಆವೃತ್ತಿಯಲ್ಲಿ ೫೦೦ ತಪ್ಪುಗಳು!
೪ ವರ್ಷಗಳಿಂದ ಬೆಂಬೆತ್ತಿಯೂ ಶಿಕ್ಷಣ ಇಲಾಖೆಯಿಂದ ಸುಧಾರಣೆಯಿಲ್ಲ!
ಶಿಕ್ಷಣ ಇಲಾಖೆಯ ನಿರ್ಲಕ್ಷತನ !
ಪಣಜಿ : ನಾಲ್ಕನೇ ತರಗತಿಯ ಮರಾಠಿ ಭಾಷೆಯ ‘ಪರಿಸರ ಅಭ್ಯಾಸ’ ಈ ಪಠ್ಯ ಪುಸ್ತಕದ ಸುಧಾರಿಸಿದ ಆವೃತ್ತಿಯಲ್ಲಿ ೫೦೦ ತಪ್ಪುಗಳಿವೆ. ವಿದ್ಯಾರ್ಥಿಗಳಿಗೆ ತಪ್ಪುಗಳಿಂದ ತುಂಬಿರುವ ಪಠ್ಯಪುಸ್ತಕಗಳನ್ನು ನೀಡುವ ಪರಂಪರೆಯನ್ನು ತಪ್ಪಿಸುವುದಕ್ಕಾಗಿ ಗೋವಾ ಸರಕಾರವು ಶಿಕ್ಷಣತಜ್ಞರ ವಿಶೇಷ ಸಮಿತಿಯನ್ನು ನೇಮಿಸಿ ಈ ಪ್ರಕರಣವನ್ನು ವಿಚಾರಣೆ ಮಾಡಬೇಕು, ಎಂದು ಶಿಕ್ಷಕರಾದ ಶ್ರೀ. ದೇವೇಂದ್ರ ಕಾಂದೋಳಕರರವರು ಮಹಾರಾಷ್ಟ್ರದ ಮುಖ್ಯಮಂತ್ರಿ ದಿಗಂಬರ ಕಾಮತರವರಿಗೆ ಒಂದು ನಿವೇದನೆಯ ಮೂಲಕ ಮನವಿ ಸಲ್ಲಿಸಿದ್ದಾರೆ. ಇದರ ಹಿಂದಿನ ಆ ಪಠ್ಯಪುಸ್ತಕದ ಆವೃತ್ತಿಯಲ್ಲಿ ೩೦೦೦ ಕ್ಕಿಂತಲೂ ಹೆಚ್ಚು ತಪ್ಪುಗಳಿದ್ದವು.
No comments:
Post a Comment