ಹೊಸದೆಹಲಿ : ಈ ಹಿಂದೆ ಚೀನಾವು ಜಮ್ಮುಕಾಶ್ಮೀರದಲ್ಲಿನ ಭಾರತೀಯರಿಗೆ ಪ್ರತ್ಯೇಕ ‘ವೀಸಾ’ ನೀಡಿತ್ತು, ಅಂತಹದ್ದೇ ‘ವೀಸಾ’ವನ್ನು ಈಗ ಅರುಣಾಚಲ ಪ್ರದೇಶದ ನಾಗರಿಕರಿಗೂ ನೀಡುತ್ತಿದೆ. ಚೀನಾವು ಅರುಣಾಚಲಪ್ರದೇಶ ಮತ್ತು ಜಮ್ಮು ಹಾಗೂ ಕಾಶ್ಮೀರಗಳು ವಿವಾದಿತ ಪ್ರದೇಶಗಳಾಗಿದ್ದು ಅದು ನಮ್ಮದೆಂದು ಹೇಳಿಕೊಂಡಿದೆ. ಇತ್ತೀಚೆಗಷ್ಟೇ ಚೀನಾವು ಜಮ್ಮು ಮತ್ತು ಕಾಶ್ಮೀರದ ಲಢಾಖ ಪ್ರಾಂತದೊಳಗೆ ನುಸುಳಿದೆಯೆಂದು ತಿಳಿದು ಬಂದಿದೆ.
ಚೀನಾಕ್ಕೆ ತಾಜಾಕಿಸ್ತಾನದೊಂದಿಗೂ ಗಡಿವಿವಾದವಿದೆ. ಚೀನಾವು ಇತ್ತೀಚೆಗೆ ಈ ದೇಶದ ೧ ಸಾವಿರ ಚದರ ಕಿ.ಮೀ. ಭೂಮಿಯನ್ನು ಕಬಳಿಸಲು ಯಶಸ್ವಿಯಾಗಿದೆ. ಈ ಯಶಸ್ಸಿನ ಮದೋನ್ಮತ್ತಗೊಂಡ ಚೀನಾ ತನ್ನ ಗಮನವನ್ನು ಅರುಣಾಚಲ ಪ್ರದೇಶದ ಮೇಲೆ ಕೇಂದ್ರೀಕರಿಸಿದೆ.
No comments:
Post a Comment