ಧಾರ್ಮಿಕಸ್ಥಳ ಕೆಡಹುವ ಹುನ್ನಾರವನ್ನು ಪ್ರತಿಯೊಬ್ಬ ಹಿಂದೂವು ವಿರೋಧಿಸಬೇಕು -ಶ್ರೀ.ಶಂಕರ ಹೆಗಡೆ
ಬೆಳ್ತಂಗಡಿಯಲ್ಲಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ದ ಶಾಖೆ ಉದ್ಘಾಟನೆ
ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ.ಲಕ್ಷ್ಮೀಶ ಗಬ್ಲಡ್ಕ, (ಎಡದಿಂದ) ಶ್ರೀ.ಶಂಕರ ಹೆಗಡೆ, ಶ್ರೀ.ರಾಮ ಭಟ್ ಹಾಗೂ ಶ್ರೀ.ಗೋಪಾಲಕೃಷ್ಣ ಮಲ್ಯ |
ಬೆಳ್ತಂಗಡಿ: ‘ದೇವರೇ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುವ ಧಾರ್ಮಿಕ ನೆಲೆಯನ್ನೇ ನಾಶ ಮಾಡುವಂತಹ ಸ್ಥಿತಿ ನ್ನು ಇಂದಿನ ಸರಕಾರ ಉಂಟು ಮಾಡಿದ್ದು ಅತ್ಯಂತ ದುಃಖದ ಸಂಗತಿಯಾಗಿದೆ. ಇದನ್ನು ಹಿಂದೂಗಳಾದ ನಾವೆಲ್ಲರೂ ವಿರೋಧಿಸಿ ದೇವರ ಕೃಪೆಗೆ ಪಾತ್ರರಾಗ ಬೇಕಾಗಿದೆ. ಅನಧಿಕೃತ ಧಾರ್ಮಿಕ ಸ್ಥಳಗಳನ್ನು ಉಳಿಸಲು ಹೋರಾಟ ನಡೆಸುತ್ತಿರುವ ಮಹಾಸಂಘದ ಜೊತೆ ನಾವೆಲ್ಲ ಕೈ ಜೋಡಿಸಿ ಹೋರಾಟ ಮಾಡಬೇಕು’ ಎಂದು ಶ್ರೀ ಅಯ್ಯಪ್ಪ ಮಂದಿರ ಮತ್ತು ಶ್ರೀ ರಾಘವೇಂದ್ರ ಮಠದ ಕಾರ್ಯದರ್ಶಿ ಶ್ರೀ.ಶಂಕರ ಹೆಗಡೆ ಯವರು ಹೇಳಿದ್ದಾರೆ. ಅವರು ದಿನಾಂಕ ೨೦.೨.೨೦೧೧ರಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಸಭಾಗೃಹದಲ್ಲಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಇದರ ಬೆಳ್ತಂಗಡಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡು ತ್ತಿದ್ದರು. ಈ ಸಮಾರಂಭದಲ್ಲಿ ಮಹಾಸಂಘದ ಉಪಾಧ್ಯಕ್ಷ ಶ್ರೀ. ಲಕ್ಷ್ಮೀಶ ಗಬ್ಲಡ್ಕ, ಮಹಾಸಂಘದ ಸದಸ್ಯ ಶ್ರೀ.ರಾಮ ಭಟ್, ಹಿಂದೂ ಜನ ಜಾಗೃತಿ ಸಮಿತಿಯ ಶ್ರೀ. ಗೋಪಾಲಕೃಷ್ಣ ಮಲ್ಯರವರು ಉಪಸ್ಥಿತರಿದ್ದು ಮಾರ್ಗ ದರ್ಶನ ಮಾಡಿದರು. ದೇವಸ್ಥಾನದ ವಿಶ್ವಸ್ತರು, ಭಕ್ತರು ಭಾಗವಹಿಸಿದ್ದರು.
‘ಹಿಂದುತ್ವದ ಹೆಸರಿನಲ್ಲಿ ಆಯ್ಕೆ ಯಾದ ಸರಕಾರ ಹಿಂದೂ ಧಾರ್ಮಿಕತೆ ಯನ್ನೇ ಧೂಳಿಪಟ ಮಾಡುತ್ತಿದೆ. ನಮ್ಮಲ್ಲಿ ಧಾರ್ಮಿಕ ಸ್ಥಳಗಳ ಬಗ್ಗೆ ಶ್ರದ್ಧೆ ಇಲ್ಲದ್ದರಿಂದ ಪ್ರಪಂಚವೇ ಅಧಃಪತನಕ್ಕೆ ಹೋಗುತ್ತಿದೆ. ಇದಕ್ಕೆಲ್ಲ ನಮ್ಮಲ್ಲಿ ಧರ್ಮ ಶಿಕ್ಷಣದ ಅಭಾವವೇ ಕಾರಣವಾಗಿದೆ’ ಎಂದು ಶ್ರೀ.ಗಬ್ಲಡ್ಕರವರು ಹೇಳಿದರು.

No comments:
Post a Comment