ಪಡುಬಿದ್ರೆಯ ಇನ್ನ ಮುದ್ದಾಣು ದೇವಸ್ಥಾನದಲ್ಲಿ ಕಳ್ಳತನ!

ಭಾಜಪ ರಾಜ್ಯದಲ್ಲಿ ನಿಲ್ಲದ ಸರಣಿ ಕಳ್ಳತನ!

ಪಡುಬಿದ್ರೆ: ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿನ ದೇವಸ್ಥಾನಗಳಲ್ಲಿ ಕಳ್ಳತನದ ಘಟನೆಗಳು ಎಡೆಬಿಡದೆ ನಡೆಯುತ್ತಿವೆ. ಹಿಂದೂದ್ವೇಷಿಗಳು ಫೆಬ್ರವರಿ ೧೬ರ ರಾತ್ರಿ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿನ ಇನ್ನ ಮುದ್ದಾಣು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು ಮೂರು ಲಕ್ಷ ರೂಪಾಯಿಗಳ ಒಡವೆಗಳನ್ನು ಕಳ್ಳತನ ಮಾಡಿದ್ದಾರೆ. ಆದರೆ ಕಳ್ಳರು ದೇವಸ್ಥಾನ ದಲ್ಲಿದ್ದ ಹುಂಡಿಯನ್ನು ಮುಟ್ಟಲಿಲ್ಲ. ಕಳ್ಳರು ದೇವಸ್ಥಾನದ ಮುಖ್ಯದ್ವಾರದ ಬೀಗ ಒಡೆದು ಒಳಗೆ ಪ್ರವೇಶಿಸಿದರು. ಅವರು ದೇವರ ಬಂಗಾರದ ಮುಖ, ಇತರ ಬೆಳ್ಳಿ ಆಭರಣಗಳನ್ನು ಕಳುವು ಮಾಡಿದ್ದಾರೆ. ಬೆಳಗ್ಗೆ ದೇವಸ್ಥಾನದ ಅರ್ಚಕರು ಪೂಜೆಗಾಗಿ ದೇವಸ್ಥಾನದ ಒಳಗೆ ಬಂದಾಗ ಈ ವಿಷಯವು ಬೆಳಕಿಗೆ ಬಂದಿತು.

No comments:

Post a Comment