ಆಳಂದದಲ್ಲಿ (ಗದಗ ಜಿಲ್ಲೆ) ಮೂರು ದೇವಸ್ಥಾನಗಳಲ್ಲಿನ ಮೂರ್ತಿ ಭಗ್ನ!

ಬಲಾಢ್ಯ ಹಿಂದುತ್ವವಾದಿ ಸಂಘಟನೆಗಳು ಈ ಬಗ್ಗೆ ಏನಾದರೂ 
ಹೇಳುವವೋ ಅಥವಾ ನಿತ್ಯದಂತೆ ಕೈಕಟ್ಟಿಕೊಂಡು ಬಾಯಿಗೆ ಬೀಗ ಜಡಿದು ಸುಮ್ಮನಿರುವವೋ?

ಹಿಂದೂಗಳಿಗೆ ಮೊಗಲಾಡಳಿತವನ್ನು ನೆನಪಿಸುವ ಘಟನೆ!




ಸನಾತನವು 11 ವರ್ಷಗಳಿಂದ ಹೇಳುತ್ತಿದ್ದ ಕೆಟ್ಟ ಕಾಲ ಇದೇ ನೋಡಿ







ಆಳಂದ: ಇಲ್ಲಿನ ‘ಶ್ರೀರಾಮ ಮಾರ್ಕೆಟ್’ನಲ್ಲಿನ ಹನುಮಂತನ ದೇವಸ್ಥಾನದಲ್ಲಿ ಹನುಮಂತನ ಮೂರ್ತಿ, ಅದರ ಪಕ್ಕದಲ್ಲಿರುವ ಮಾರ್ಕಂಡೇಶ್ವರ ದೇವಸ್ಥಾನದ ಎದುರಿನ ಅಶ್ವತ್ಥ ಮರದ ಕೆಳಗೆ ಸ್ಥಾಪಿಸಿದ ನಂದಿಯ ಮೂರ್ತಿ ಮತ್ತು ಜೈನ ಓಣಿಯಲ್ಲಿನ ಸಿದ್ದೇಶ್ವರ ಮಠದಲ್ಲಿನ ಶ್ರೀ ಸಿದ್ಧೇಶ್ವರ ಮೂರ್ತಿ ಈ ಮೂರು ಮೂರ್ತಿಗಳನ್ನು ಧ್ವಂಸಗೊಳಿಸಿದ್ದು ೧೩.೨.೨೦೧೧ರಂದು ಬೆಳಗ್ಗೆ ಗಮನಕ್ಕೆ ಬಂದಿತು. ಇವುಗಳಲ್ಲಿ ನಂದಿ ಮತ್ತು ಶ್ರೀ ಸಿದ್ದೇಶ್ವರ ಮೂರ್ತಿಯನ್ನು ರಸ್ತೆಯಲ್ಲಿ ಎಸೆಯಲಾಗಿತ್ತು. (ಇದು ವರೆಗೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿನ ಅನೇಕ ಮೂರ್ತಿಗಳನ್ನು ದುಷ್ಕರ್ಮಿಗಳು ಒಡೆದರೂ ಹಿಂದೂಗಳು ಯಾವುದೇ ಪರಿಣಾಮಕಾರಿ ಕೃತಿ ಮಾಡಲಿಲ್ಲ. ಮೂರ್ತಿ ಭಗ್ನಗೊಳಿಸಿದ ಒಬ್ಬನಿಗೂ ಕಾನೂನು ಯಾವುದೇ ರೀತಿಯ ಶಿಕ್ಷೆಯನ್ನು ನೀಡಲಿಲ್ಲ, ಹಾಗಾಗಿ ದುಷ್ಕರ್ಮಿಗಳು ಈಗ ಒಮ್ಮೆಲೆ ಮೂರು ಮೂರು ದೇವಸ್ಥಾನದಲ್ಲಿನ ಮೂರ್ತಿಗಳನ್ನು ಭಗ್ನಗೊಳಿಸುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. -ಸಂಪಾದಕರು)  ಈ ಘಟನೆಯ ಮಾಹಿತಿಯು ಊರಿನೆಲ್ಲೆಡೆ ಕಾಳ್ಗಿಚ್ಚಿನಂತೆ ಹರಡಿ ಉದ್ವಿಗ್ನವಾತಾವರಣ ನಿರ್ಮಾಣವಾಯಿತು. (ಹಿಂದೂಗಳೇ, ಇದು ವರೆಗೆ ಅನೇಕ ಬಾರಿ ಮೂರ್ತಿ ಭಗ್ನಘಟನೆಯ ನಂತರ ಕ್ಷಣಕಾಲ ವಾತಾವರಣ ಉದ್ವಿಗ್ನವಾಗಿದೆ; ಆದರೆ ಈ ಉದ್ವಿಗ್ನತೆಯು ಮೂರ್ತಿ ಭಗ್ನಗೊಳಿಸುವವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂಬುದನ್ನು ಗಮನದಲ್ಲಿಡಿ! - ಸಂಪಾದಕರು) ಶಾಸಕ ಸುಭಾಷ್ ಗುರುತ್ತೇದಾರ, ಪೋಲಿಸ್ ಉಪಾಧೀಕ್ಷಕರು, ತಹಶೀಲದಾರ ಮತ್ತು ಮುಖ್ಯಾಧಿಕಾರಿ ಇವರೆಲ್ಲರೂ ಘಟನಾ ಸ್ಥಳಕ್ಕೆ ಧಾವಿಸಿದರು. ಪೋಲಿರು ಶ್ವಾನದ ಮೂಲಕ ದುಷ್ಕರ್ಮಿಗಳನ್ನು ಹುಡುಕಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.

No comments:

Post a Comment