ಮಹಾಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ಶಿಕಾರಿಪುರದ ಕು. ಐಶ್ವರ್ಯ ರಾಯ್ಕರ (ವಯಸ್ಸು ೧೧ ವರ್ಷ) ಇವಳ ಗುಣವೈಶಿಷ್ಟ್ಯಗಳು
ಶಿಕಾರಿಪುರದ ಸಾಧಕಿ ಸೌ. ಕಾವೇರಿ ರಾಯ್ಕರ ಇವರ ಮಗಳಾದ ಕು.ಐಶ್ವರ್ಯ ರಾಯ್ಕರ ಇವಳು ಈಗ ೫ ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳ ಬಗ್ಗೆ ಅವಳ ಅಮ್ಮನಿಗೆ ಗಮನಕ್ಕೆ ಬಂದ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ಹುಟ್ಟಿನಿಂದ ೯ ತಿಂಗಳ ವರೆಗೆ
ಹೆರಿಗೆಯ ಸಮಯದಲ್ಲಿ ತೊಂದರೆಯಾಗದಿರುವುದು : ನನ್ನ ೨ ಮಕ್ಕಳಲ್ಲಿ ಐಶ್ವರ್ಯಳು ಸಣ್ಣವಳಾಗಿದ್ದಾಳೆ. ಇವಳ ಗರ್ಭಾವಸ್ಥೆಯಲ್ಲಿರುವಾಗ ಹಿಂದಿಗಿಂತಲೂ ನನ್ನ ಆರೋಗ್ಯ ಚೆನ್ನಾಗಿತ್ತು. ಮೊದಲ ಬಾರಿಯಲ್ಲಿ ಹೆಚ್ಚಾಗಿ ನನಗೆ ೯ ತಿಂಗಳುಗಳ ಕಾಲ ಹಾಸಿಗೆಯಲ್ಲಿಯೇ ಇರಬೇಕಾಗಿ ಬಂದಿತ್ತು. ಆ ಸಮಯದಲ್ಲಿ ನನಗೆ ಊಟ ಮಾಡುವಾಗಲೂ ತುಂಬಾ ತೊಂದರೆಯಾಗುತ್ತಿತ್ತು; ಆದರೆ ಇವಳನ್ನು ಹೆರುವಾಗ ನನಗೆ ಯಾವುದೇ ರೀತಿಯ ತೊಂದರೆಯಾಗದೇ ನನ್ನ ಗರ್ಭಾವಸ್ಥೆಯು ಆನಂದದಲ್ಲಿಯೇ ಕಳೆಯಿತು.
೨. ೧ ವರ್ಷ - ಬಾಲ್ಯಾವಸ್ಥೆ
೨ ಅ. ಬಾಲ್ಯಾವಸ್ಥೆಯಲ್ಲಿನ ಚಲನವಲನವು ಬೇಗನೇ ಆರಂಭವಾಯಿತು. ಅವಳು ತುಂಬ ಚುರುಕಾಗಿದ್ದಳು. ಇವಳು ೧ ವರ್ಷದವಳಾಗಿರುವಾಗಲೇ ತನ್ನ ಅಣ್ಣನೊಂದಿಗೆ ಅಂಗನವಾಡಿಗೆ ಹೋಗಲಾರಂಭಿಸಿದಳು.
೨ ಆ. ಅವಳು ಒಂದೂವರೆ ವರ್ಷದವಳಾಗಿರುವಾಗ ಸನಾತನ ಸಂಸ್ಥೆಯ ಪರಿಚಯವಾಯಿತು. ಅಂದಿನಿಂದ ಅವಳು ದತ್ತಜಪವನ್ನು ನಿಯಮಿತವಾಗಿ ಮಾಡುತ್ತಾಳೆ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಿದ್ದರೆ ಅವರಿಗೆ ದತ್ತಜಪ ಮಾಡಲು ಹೇಳುತ್ತಿದ್ದಳು.

೩. ಐಶ್ವರ್ಯಳ ಗುಣ
೩ ಅ. ಎಲ್ಲರೊಂದಿಗೆ ಹೊಂದಿಕೊಳ್ಳುವುದು : ಇವಳು ಎಲ್ಲರೊಂದಿಗೆ ಬೇಗನೇ ಹೊಂದಿಕೊಳ್ಳುತ್ತಾಳೆ. ಇವಳು ಮನೆಯವರಿಗೆ, ಶಿಕ್ಷಕರಿಗೆ, ಸಂಬಂಧಿಕರಿಗೆ ಎಲ್ಲರಿಗೂ ಇಷ್ಟವಾಗುತ್ತಾಳೆ. ಇವಳಿಗೆ ಮನೆಗೆ ಸಾಧಕರು ಬಂದರೆ ತುಂಬ ಖುಷಿಯಾಗುತ್ತದೆ.
೩ ಆ. ಮಕ್ಕಳೆಂದರೆ ಇಷ್ಟವಾಗುವುದು : ಇವಳಿಗೆ ಸಣ್ಣ ಮಕ್ಕಳೆಂದರೆ ತುಂಬ ಇಷ್ಟ. ಅವರನ್ನು ತಾಯಿಯಂತೆ ಮುದ್ದಿಸುತ್ತಾಳೆ ಮತ್ತು ಅವರೇನಾದರೂ ಮಲ-ಮೂತ್ರ ಮಾಡಿದರೆ ಅವಳು ಯಾವುದೇ ಅಸಹ್ಯವಿಲ್ಲದೇ ತೆಗೆಯುತ್ತಾಳೆ. ಅವಳಿಗೆ ಭೇದಭಾವ ಮಾಡುವುದೆಂದರೆ ಸ್ವಲ್ಪವೂ ಇಷ್ಟವಾಗುವುದಿಲ್ಲ ಮತ್ತು ಇತರರು ಹಾಗೇನಾದರೂ ಮಾಡುತ್ತಿದ್ದರೆ ಅವಳು ಅವರಿಗೆ ಸ್ಪಷ್ಟವಾಗಿ ಹೇಳುತ್ತಾಳೆ.
೩ ಇ. ಸಹಾಯ ವೃತ್ತಿ : ಇತರರಿಗೆ ಅಡಚಣೆಯಾದರೆ ಅವಳಿಗೆ ಅವರ ಬಗ್ಗೆ ತುಂಬ ಕರುಣೆಯುಂಟಾಗುತ್ತದೆ ಮತ್ತು ಅವರಿಗೆ ಸಹಾಯಕ್ಕಾಗಿ ಹೋಗುತ್ತಾಳೆ.
೩ ಈ. ಸಜೀವ-ನಿರ್ಜೀವದ ಬಗ್ಗೆ ಪ್ರೀತಿಯೆನಿಸುವುದು : ಅವಳಿಗೆ ಎಲ್ಲದರ ಬಗ್ಗೆ ಪ್ರೀತಿಯೆನಿಸುತ್ತದೆ. ಅವಳು ವಸ್ತುಗಳೊಂದಿಗೆ ಮಾತನಾಡುತ್ತಾಳೆ. ಒಂದು ದಿನ ಬೇಸಿಗೆ ಸಮಯದಲ್ಲಿ ಮನೆಯಲ್ಲಿ ನಡೆದ ಒಂದು ಕಾರ್ಯಕ್ರಮಕ್ಕಾಗಿ ಮನೆಯ ಮಹಡಿಯ ಮೇಲಿಟ್ಟಿದ್ದ ದೊಡ್ಡ ಪಾತ್ರೆ ತೆಗೆದುಕೊಂಡು ಬಂದಳು. ತುಂಬ ಬಿಸಿಲು ಇದ್ದುದರಿಂದ ಅದು ತುಂಬ ಬಿಸಿಯಾಗಿತ್ತು. ಅವಳು ಅದನ್ನು ತಂದು ಅಡುಗೆ ಮನೆಯಲ್ಲಿ ಇಡುವಾಗ ಇತರ ಪಾತ್ರೆಗಳಿಗೆ, ‘ನೀವೆಷ್ಟು ಭಾಗ್ಯವಂತರಾಗಿದ್ದೀರಿ! ಇಲ್ಲಿ ತಂಪು ಇರುವುದರಿಂದ ಮತ್ತು ನಿಮ್ಮನ್ನು ತಣ್ಣೀರಿನಲ್ಲಿ ತೊಳೆಯುವುದರಿಂದ ನೀವು ತಂಪಾಗಿರುತ್ತೀರಿ; ಆದರೆ ನಿಮ್ಮ ಮಿತ್ರನಾಗಿರುವ ಈ ಪಾತ್ರೆ ಮಾತ್ರ ಮಹಡಿಯ ಮೇಲೆ ಉಷ್ಣತೆಯಿಂದ ಬಿಸಿಯಾಗಿ ಯಾತನೆಯನ್ನು ಸಹಿಸುತ್ತಿದೆ.’ ಆಗ ನಮಗೆಲ್ಲರಿಗೂ ಆಶ್ಚರ್ಯವಾಯಿತು. ಅವಳಿಗೆ ಪಶು-ಪಕ್ಷಿಗಳೆಂದರೆ ತುಂಬ ಇಷ್ಟವಾಗುತ್ತದೆ.

೩ ಉ. ೧ ರಿಂದ ೮ ವರ್ಷ
ಯಾರ ಬಗ್ಗೆಯೂ ಪೂರ್ವಗ್ರಹ ಇಡದಿರುವುದು : ಐರ್ಶ್ವರ್ಯಳಿಗೆ ಯಾರಾದರೂ ಮನ ನೋಯಿಸುವಂತೆ ಮಾತನಾಡಿದರೆ ಅಥವಾ ಬೈದರೆ ಮನಸ್ಸಿನಲ್ಲೇ ಅಳುತ್ತಾಳೆ ಮತ್ತು ‘ಏನೂ ಆಗಿಲ್ಲವೆಂಬಂತೆ’ ಅವರೊಂದಿಗೆ ಪುನಃ ಒಂದಾಗುತ್ತಾಳೆ. ಯಾರ ಬಗ್ಗೆಯೂ ಪೂರ್ವಗ್ರಹವಿಟ್ಟು ಕೊಳ್ಳುವುದಿಲ್ಲ.
೩ ಊ. ಒಂದು ದಿನ ನನ್ನ ಉಪಾಯಕ್ಕೆ ತೆಗೆದುಕೊಳ್ಳುವ ಶಿವನ ಚಿತ್ರವು ನಿಷ್ಕಾಳಜಿಯಿಂದಾಗಿ ಬಟ್ಟೆಯೊಂದಿಗೆ ಬಟ್ಟೆ ತೊಳೆಯುವ ಯಂತ್ರಕ್ಕೆ ಹಾಕಿದೆನು. ಇದರಿಂದಾಗಿ ಅದು ಹಾಳಾಯಿತು. ‘ನನ್ನ ಈ ತಪ್ಪಿಗೆ ಯಾವ ಪ್ರಾಯಶ್ಚಿತ್ತ ತೆಗೆದುಕೊಳ್ಳಲಿ’, ಎಂದು ನಾನು ಐಶ್ವರ್ಯಾಳಲ್ಲಿ ಕೇಳಿದಾಗ ಅವಳು ‘ನೀನು ಕೂಡ ಬಟ್ಟೆ ತೊಳೆಯುವ ಯಂತ್ರದಲ್ಲಿ ಕುಳಿತುಕೋ, ಆಗಲೇ ಅದು ಯೋಗ್ಯ ಪ್ರಾಯಶ್ಚಿತ್ತವಾಗುವುದು’ ಎಂದಳು.
೩ ಎ. ಅವಳಿಗೆ ಸೇವೆ ಮಾಡಲು ಇಷ್ಟವಾಗುವುದು : ‘ನಾನು ಸೇವೆ ಮಾಡುತ್ತೇನೆ, ನನಗೆ ಜವಾಬ್ದಾರಿ ಕೊಡಿ’, ಎಂದು ಅವಳು ಹೇಳುತ್ತಾಳೆ. ಆಗ ನಾನು ‘ನೀನು ಇನ್ನೂ ಚಿಕ್ಕವಳಿದ್ದೀಯಾ’ ಎಂದು ಹೇಳಿದಾಗ ಅಳುತ್ತಾಳೆ. - ಸೌ. ಕಾವೇರಿ ರಾಯ್ಕರ್ (ಕು. ಐಶ್ವರ್ಯಳ ತಾಯಿ,) ಶಿಕಾರಿಪುರ, ಶಿವಮೊಗ್ಗ ಜಿಲ್ಲೆ)

No comments:
Post a Comment