ಪ.ಪೂ. ಡಾಕ್ಟರರು ಸಾಧಕರ ಭೇಟಿಯ ಸಮಯದಲ್ಲಿ ಮಾಡಿದ ಮಾರ್ಗದರ್ಶನ

ಶ್ರೀಕೃಷ್ಣ ಹಾಗೂ ಪ.ಪೂ. ಡಾಕ್ಟರರ ಕೃಪೆಯಿಂದ ನನಗೆ ರಾಮನಾಥಿ ಆಶ್ರಮಕ್ಕೆ ಹೋಗುವ ಹಾಗೂ ಪ.ಪೂ. ಡಾಕ್ಟರರ ಮಾರ್ಗದರ್ಶನ ಪಡೆಯುವ ಅವಕಾಶ ದೊರಕಿತು. ಅದಕ್ಕಾಗಿ ಶ್ರೀಕೃಷ್ಣನ ಚರಣಗಳಲ್ಲಿ ಅನಂತ ಕೃತಜ್ಞತೆಗಳು. ನಾವು ಒಟ್ಟು ಸುಮಾರು ೧೦ ಸಾಧಕರಿದ್ದೆವು. ೨೫.೧೨.೨೦೧೦ ರಂದು ರಾತ್ರಿ ೯.೪೫ ರಿಂದ ೧೧.೩೦ ರ ವರೆಗೆ ಪ.ಪೂ. ಡಾಕ್ಟರರ ಸತ್ಸಂಗ ಲಭಿಸಿತು. ಎಲ್ಲರಿಗೂ ಇದರ ಲಾಭವಾಗಲಿ ಎಂದು ಅವರ ಮಾರ್ಗದರ್ಶನವನ್ನು ಇಲ್ಲಿ ನೀಡಲಾಗಿದೆ. - ಡಾ. ವತ್ಸಲ ಕಾಶಿ, ಬೆಂಗಳೂರು.
ಅ. ಭಾವ
೧. ಅಧ್ಯಾತ್ಮದಲ್ಲಿ ಭಾವಜಾಗೃತಿಗೆ ಮಹತ್ವವಿರುವುದು
ಸಾಧಕಿ (ಭಾವದಿಂದ ಅಳುತ್ತಿದ್ದಳು) :
ನನಗೆ ಏನು ಹೇಳಬೇಕೆಂಬುದೇ ತಿಳಿಯುತ್ತಿಲ್ಲ.
ಪ.ಪೂ. ಡಾಕ್ಟರರು : ಒಳ್ಳೆಯದೇ. ಅಧ್ಯಾತ್ಮದಲ್ಲಿ ಇದೇ ಬೇಕಾಗಿರುತ್ತದೆ.
ಸಾಧಕಿ : ನನ್ನ ತಾಯಿ ಸುಮಾರು ೩ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಆದರೆ ಯಾವಾಗ ಅವರು ರಾಮನಾಥಿ ಆಶ್ರಮಕ್ಕೆ ಬರಲು ಹೊರಡುವಾಗೆಲ್ಲ ಏನಾದರೂ ವಿಘ್ನವುಂಟಾಗಿ ಅವರಿಗೆ ಬರಲಾಗುವುದಿಲ್ಲ. ಆದರೆ ನಾನು ಕೇವಲ ಕೆಲವು ತಿಂಗಳುಗಳಿಂದ ಮಾತ್ರ ಸಾಧನೆ ಮಾಡುತ್ತಿದ್ದೇನೆ. ಆದರೆ ನನಗೆ ಬೇಗನೆ ರಾಮನಾಥಿ ಆಶ್ರಮಕ್ಕೆ ಬರಲು ಅವಕಾಶ ಸಿಕ್ಕಿತು. ನನ್ನಲ್ಲಿ ಯಾವುದೇ ಯೋಗ್ಯತೆಯಿಲ್ಲ. ಆದರೂ ನನಗೆ ಗುರುಗಳು ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದೆನಿಸಿ ಬೇಸರವಾಗುತ್ತದೆ.
ಪ.ಪೂ. ಡಾಕ್ಟರರು : ಯಾವುದೇ ಯೋಗ್ಯತೆಯಿಲ್ಲ ಎಂಬ ಕೀಳರಿಮೆ ಬೇಡ. ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳುವ ಬಗ್ಗೆ ವಿಚಾರ ಮಾಡಿ ಅದರಂತೆ ಕೃತಿ ಮಾಡಿ.
ಸಾಧಕ : ನನಗೆ ಗುರುಕುಲದಲ್ಲಿ ಪ್ರವೇಶ ಪಡೆಯಬೇಕೆಂಬ ಇಚ್ಛೆ ಇತ್ತು. ಆದರೆ ಹಾಗೆ ಆಗಲಿಲ್ಲ.
ಪ.ಪೂ. ಡಾಕ್ಟರರು : ಗುರುಕುಲದಲ್ಲಿ ಪ್ರವೇಶ ಸಿಗುವುದು, ಸಿಗದಿರುವುದು ಮಹತ್ವದ್ದಲ್ಲ. ಸಾಧನೆ ಚೆನ್ನಾಗಿ ಆಗಿ ಪ್ರಗತಿಯಾಗುತ್ತಿದೆಯೇ ಎಂಬುದು ಮಹತ್ವದ್ದಾಗಿರುತ್ತದೆ. ಪ್ರತಿಯೊಬ್ಬರ ಸಾಧನಾಮಾರ್ಗವು ಬೇರೆ ಬೇರೆಯಾಗಿರುತ್ತದೆ. ತಮ್ಮ-ತಮ್ಮ ಸಾಧನೆಯನ್ನು ಮಾಡಿಕೊಳ್ಳುವುದೇ ಮಹತ್ವವಿರುತ್ತದೆ. ‘ಈ ಸೇವೆ ಮಾಡಲೇ ಅಥವಾ ಆ ಸೇವೆ ಮಾಡಲೇ’ ಎಂಬ ದ್ವಂದ್ವಕ್ಕೆ ಸಿಲುಕಿಕೊಳ್ಳಬಾರದು. ಹೇಳಿದ ಸಾಧನೆಯನ್ನು ಚೆನ್ನಾಗಿ ಮಾಡಬೇಕು, ಆಗ ಪ್ರಗತಿಯಾಗುತ್ತದೆ.

೨. ಜನ್ಮಜನ್ಮಾಂತರಗಳ ಸಂಸ್ಕಾರದಲ್ಲಿ ಬದಲಾವಣೆಯಾಗಲು ಸ್ವಯಂ ಸೂಚನೆಯನ್ನು ದೀರ್ಘಕಾಲದ ವರೆಗೆ ನೀಡಲು ಹೇಳುವುದು
ಸಾಧಕ : ನಾನು ತುಂಬ ಸಮಯದಿಂದ ಸ್ವಯಂಸೂಚನೆ ನೀಡಿ ನನ್ನಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇನೆ. ಆದರೂ ಸಮಾಧಾನಕರ ಬದಲಾವಣೆ ಕಾಣುತ್ತಿಲ್ಲ. ಆದ್ದರಿಂದ ಕೆಲವೊಮ್ಮ ಸೂಚನೆ ಕೊಡುವುದೇ ಬೇಡ ಎಂದೆನಿಸುತ್ತದೆ.
ಪ.ಪೂ. ಡಾಕ್ಟರರು : ಹೀಗೆ ವಿಚಾರ ಮಾಡುವುದು ಸರಿಯಲ್ಲ. ನಾವು ಶರೀರ ಸಧೃಡವಾಗಲು ವ್ಯಾಯಾಮ ಮಾಡಿದರೂ ಅದನ್ನು ಪಡೆಯಲು ತುಂಬ ವರ್ಷಗಳು ಬೇಕಾಗುತ್ತವೆ. ಸ್ಥೂಲದೇಹವನ್ನು ಬದಲಾಯಿಸಲು ಇಷ್ಟು ವರ್ಷಗಳು ತಗಲುತ್ತಿರುವಾಗ, ಸೂಕ್ಷ  ದೇಹದಲ್ಲಿರುವ ಹಲವು ಜನ್ಮಗಳ ಸಂಸ್ಕಾರಗಳನ್ನು ಬದಲಾಯಿಸಲು ಇನ್ನೂ ಹೆಚ್ಚು ಸಮಯ ತಗಲುತ್ತದೆ. ಇದರ ಅರಿವಿಟ್ಟುಕೊಂಡು ಸತತವಾಗಿ ಸೂಚನೆ ಕೊಡುವುದನ್ನು ಮುಂದುವರಿಸಬೇಕು.
ಆ. ಸೇವೆ
೧. ಸೇವೆಯಿಂದ ಆನಂದ ಪಡೆಯುವುದು ಉತ್ತಮ ಕಾರ್ಯಕರ್ತರ ಲಕ್ಷಣವಾಗಿದ್ದು ಅಂತರ್ಮುಖತೆ, ಅಂತರ್ನಿರೀಕ್ಷಣೆ, ಸ್ವಭಾವದೋಷ, ಅಹಂ ನಿರ್ಮೂಲನೆ ಮುಂತಾದವುಗಳಿಂದಲೇ ಆಧ್ಯಾತ್ಮಿಕ ಉನ್ನತಿಯಾಗಲಿರುವುದು
ಸಾಧಕ :
ನನಗೆ ಸೇವೆ ಮಾಡುವಾಗ ತುಂಬ ಆನಂದ ಸಿಗುತ್ತದೆ. ಊಟ-ತಿಂಡಿ- ನಿದ್ರೆ ಇತ್ಯಾದಿಯ ಕಡೆಗೆ ಗಮನವಿರುವುದಿಲ್ಲ; ಆದರೆ ಈಗ ಎಲ್ಲರೂ ನನಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ತಖ್ತೆಯನ್ನು ಬರೆಯಿರಿ’ ಎಂದು ಹೇಳುತ್ತಿರುತ್ತಾರೆ. ನನಗೆ ಅದನ್ನು ಮಾಡಲು ಆಗುತ್ತಿಲ್ಲ. ನಾನು ಕೇವಲ ಸೇವೆಯನ್ನು ಮಾಡುತ್ತಾ ಅದರಿಂದ ಆನಂದವನ್ನು ಪಡೆಯುತ್ತಿದ್ದರೆ ಅದು ತಪ್ಪಾಗುತ್ತದೆಯೇ ?
ಪ.ಪೂ. ಡಾಕ್ಟರರು : ಸೇವೆಯನ್ನು ಮಾಡುತ್ತಿರುವಾಗ ಮೈ ಮರೆಯುವುದು ಮತ್ತು ಅದರಿಂದ ಆನಂದ ಪಡೆಯುವುದು ಉತ್ತಮ ಕಾರ್ಯಕರ್ತನ ಲಕ್ಷಣವಾಗಿದೆ. ಎಲ್ಲ ಸಂಘ-ಸಂಸ್ಥೆಗಳ ಕಾರ್ಯಕರ್ತರಿಗೂ ಇದು ಅನ್ವಯಿಸುತ್ತದೆ; ಆದರೆ ಸಾಧನೆಯಾಗಬೇಕಾದರೆ ಅಂತರ್ಮುಖತೆ, ಅಂತರ್ನಿರೀಕ್ಷಣೆ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯು ಆಗಲೇಬೇಕು. ನೀವು ಇವುಗಳನ್ನು ಮಾಡದಿದ್ದಲ್ಲಿ ಉತ್ತಮ ಕಾರ್ಯಕರ್ತರಾಗಿಯೇ ಉಳಿದುಕೊಳ್ಳುವಿರಿ. ನಿಮ್ಮ ಮನಸ್ಸು ಮತ್ತು ಅಹಂ ಇವುಗಳ ಲಯ, ಅಂದರೆ ಪ್ರಗತಿಯೂ ಆಗಲಾರದು. ಆಧ್ಯಾತ್ಮಿಕ ಉನ್ನತಿ ಮತ್ತು ಈಶ್ವರ ಪ್ರಾಪ್ತಿ ಮಾಡಿಕೊಳ್ಳುವುದೇ ಸನಾತನದ ಉದ್ದೇಶವಾಗಿದೆ. ಆದ್ದರಿಂದ ಇವುಗಳನ್ನೆಲ್ಲ ಮಾಡಲೇಬೇಕು. ಸಾಧಕನಾಗಬೇಕಾದರೆ ಇತರರು ಹೇಳಿದ್ದನ್ನು ಕೇಳಲೇಬೇಕು.
೨. ಸ್ವಂತ ಮನಸ್ಸಿನಿಂದ ನಿರ್ಧರಿಸದೇ 
ಹೇಳಿದ ಅಥವಾ ದೊರಕಿದ ಸೇವೆಯನ್ನು ಮಾಡುತ್ತಿರಬೇಕು !
ಸಾಧಕ : ಕೆಲವೊಮ್ಮೆ ‘ರಾಮನಾಥಿ ಆಶ್ರಮದಲ್ಲಿದ್ದು ಸಾಧನೆ ಮಾಡಲೇ ಅಥವಾ ಊರಿನಲ್ಲಿದ್ದು ಸಮಷ್ಟಿ ಸಾಧನೆ ಮಾಡಲೇ’, ಎಂದು ದ್ವಂದ್ವವಾಗುತ್ತದೆ. 
ಪ.ಪೂ. ಡಾಕ್ಟರರು : ಮನಸ್ಸಿನಂತೆ ನಿರ್ಧರಿಸಬಾರದು. ಹೇಳಿದ ಅಥವಾ ದೊರಕಿದ ಸೇವೆಯನ್ನು ಮಾಡಬೇಕು.
ಸಾಧಕ (ವಯಸ್ಸಾಗಿದ್ದವರು) : ನನಗೆ ಹೆಚ್ಚು ವಯಸ್ಸಾಗಿರುವುದರಿಂದ ಸಾಧನೆ ಮಾಡಲು ನನ್ನ ಬಳಿ ಕಡಿಮೆ ವರ್ಷಗಳಿವೆ. ಹಾಗೂ ನನಗೆ ಯುವ ವಯಸ್ಸಿನವರು ಮಾಡುವಷ್ಟು ಸೇವೆ ಮಾಡಲಾಗುವುದಿಲ್ಲ. ಈ ವಿಚಾರಗಳಿಂದಾಗಿ ಕೆಲವೊಮ್ಮೆ ನನಗೆ ನಿರಾಶೆಯಾಗುತ್ತದೆ.
ಪ.ಪೂ. ಡಾಕ್ಟರರು : ಹೀಗೆ ವಿಚಾರ ಮಾಡಬೇಕಾಗಿಲ್ಲ. ನೀವು ಇಷ್ಟು ಮಾಡಬೇಕು ಅಥವಾ ಅಷ್ಟು ಮಾಡಬೇಕು ಎಂದಿಲ್ಲ. ನಿಮ್ಮಲ್ಲಿ ಏನಿದೆಯೋ ಅದನ್ನು ನೀವು ಅರ್ಪಿಸಬೇಕಾಗಿದೆ. ನಿಮಗೆ ಇರುವಷ್ಟು ಸಮಯದಲ್ಲಿ, ನಿಮ್ಮಿಂದ ಸಾಧ್ಯವಾದಷ್ಟು ಸೇವೆಯನ್ನು ಭಾವಪೂರ್ಣವಾಗಿ ಮಾಡುವುದೇ ಹೆಚ್ಚು ಮಹತ್ವದ್ದಾಗಿದೆ. ಇನ್ನೊಂದೆಂದರೆ ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿಯೂ ಸ್ವ-ಇಚ್ಛೆಯನ್ನು ಬಿಟ್ಟು ಪರೇಚ್ಛೆಯಿಂದ ವರ್ತಿಸಲು ಪ್ರಯತ್ನಿಸಿ. ಅದರಿಂದ ನಿಮ್ಮ ಪ್ರಗತಿಯಾಗಲು ಸಹಾಯವಾಗುತ್ತದೆ. ಸ್ವೇಚ್ಛೆಯಿಂದ ಪರೇಚ್ಛೆಗೆ ಹೋಗಲು ಕಷ್ಟವೆನಿಸಿದರೆ ಅದಕ್ಕಾಗಿ ಸ್ವಯಂಸೂಚನೆಯನ್ನು ಕೊಡಬಹುದು.
೩. ಅನೇಕರ ಭಕ್ತಿಯಿದ್ದೂ ವಾತಾವರಣದಲ್ಲಿ ಹೆಚ್ಚಾದ ರಜ-ತಮದಿಂದಾಗಿ ಸೇವೆ ಮಾಡಲು ಸಾಧ್ಯವಾಗದಿರುವುದು
ಸಾಧಕ : ಓರ್ವ ಸಾಧಕರಲ್ಲಿ ಒಳ್ಳೆಯ ತಳಮಳ ಮತ್ತು ಭಾವವಿದೆ ಆದರೂ ಸೇವೆ ಮಾಡಲು ಆಗುತ್ತಿಲ್ಲ.
ಪ.ಪೂ. ಡಾಕ್ಟರರು : ಅನೇಕರಲ್ಲಿ ಭಕ್ತಿಯಿರುತ್ತದೆ. ಆದರೆ ವಾತಾವರಣದಲ್ಲಿ ಹೆಚ್ಚಾದ ರಜ-ತಮಗಳಿಂದ ಹೀಗಾಗುತ್ತದೆ.
೪. ಸೇವೆ ಹೇಳುವಾಗ ಸಾಧಕರ ಕ್ಷಮತೆ ಮತ್ತು ಕೌಶಲ್ಯದ ಅಧ್ಯಯನ ಮಾಡಬೇಕು !
ಸಾಧಕ : ಕೆಲವೊಮ್ಮೆ ನಾನು ಒಬ್ಬ ಸಾಧಕನಿಗೆ ಸೇವೆಯನ್ನು ಹೇಳಿದಾಗ ಅವನು ಪದೇ ಪದೇ ಅದೇ ತಪ್ಪುಗಳನ್ನು ಮಾಡುತ್ತಾನೆ. ನಾನು ಮತ್ತೆ ಮತ್ತೆ ಅವನಿಗೆ ಆ ತಪ್ಪಿನ ಬಗ್ಗೆ ಹೇಳುತ್ತಿರಬೇಕಾಗುತ್ತದೆ. ಆಗ ನಮಗಿಬ್ಬರಿಗೂ ತೊಂದರೆಯಾಗುತ್ತದೆ. ಇಂತಹ ಸಮಯದಲ್ಲಿ ನಾನು ಏನು ಮಾಡಬೇಕು ?
ಪ.ಪೂ. ಡಾಕ್ಟರರು : ಪದೇ ಪದೇ ಅದೇ ತಪ್ಪುಗಳಾಗುತ್ತಿದ್ದರೆ ಆ ಸಾಧಕನಿಗೆ ಆ ಸೇವೆಯನ್ನು ಮಾಡುವ ಕ್ಷಮತೆ/ಕೌಶಲ್ಯವಿದೆಯೇ ಎಂಬುದನ್ನು ನೋಡಬೇಕು. ಇಲ್ಲವಾದರೆ, ಅದನ್ನು ನಿರ್ಮಿಸಲು ಸಾಧ್ಯವಿದೆಯೇ ಎಂದು ನೋಡಿ ಪ್ರಯತ್ನಿಸಬೇಕು. ಸಾಧ್ಯವಿಲ್ಲದಿದ್ದಲ್ಲಿ ಬೇರೆ ಸೇವೆಯನ್ನು ಕೊಡಬೇಕು. (ಮುಂದುವರಿಯುವುದು)

No comments:

Post a Comment