ಆಪತ್ಕಾಲದ ಭೀಕರತೆ ಹೆಚ್ಚುತ್ತಿರುವುದರಿಂದ ಆಧ್ಯಾತ್ಮಿಕ ಉಪಾಯದ...

ಆಪತ್ಕಾಲದ ಭೀಕರತೆ ಹೆಚ್ಚುತ್ತಿರುವುದರಿಂದ ಆಧ್ಯಾತ್ಮಿಕ ಉಪಾಯದ ಬಗ್ಗೆ ಸತರ್ಕತೆಯನ್ನು ಹೆಚ್ಚಿಸಲು ಏನು ಮಾಡಬಹುದು ಎಂಬ ಬಗ್ಗೆ ಹೊಳೆದ ಅಂಶಗಳು
೧. ನಾವು ಆಸನದಿಂದ ಎದ್ದ ಕೂಡಲೇ ಆಸನದ ಮೇಲೆ ದೇವತೆಗಳ ಚಿತ್ರವಿಡುವುದು : ನಾವು ಕುಳಿತುಕೊಳ್ಳುವ ಆಸನದಿಂದ ಎದ್ದ ಕೂಡಲೇ ಅಲ್ಲಿ ದೇವತೆಗಳ ಚಿತ್ರ ಅಥವಾ ನಾಮಪಟ್ಟಿ ಇಡಬೇಕು. ಇಲ್ಲದಿದ್ದರೆ ಆ ನಡುವಿನ ಅವಧಿಯಲ್ಲಿ ಕೆಟ್ಟ ಶಕ್ತಿಗಳು ನಮ್ಮ ಆಸನದ ಮೇಲೆಯೇ ಆವರಣ ತಂದು ನಮಗೆ ತೊಂದರೆ ಕೊಡಬಹುದು.
೨. ರಾತ್ರಿ ಕನ್ನಡಕವನ್ನು ತೆಗೆದಿಡುವಾಗ ಅದನ್ನು ಕೂಡಲೇ ಪ.ಪೂ. ಡಾಕ್ಟರರ ನೇತ್ರದ ಛಾಯಾಚಿತ್ರದ ಮೇಲಿಡುವುದು : ರಾತ್ರಿ ಕನ್ನಡಕ ತೆಗೆದಿಡುವಾಗ ಅದನ್ನು ಕೂಡಲೇ ಪ.ಪೂ. ಡಾಕ್ಟರರ ನೇತ್ರದ ಛಾಯಾಚಿತ್ರದ ಮೇಲಿಡಬಹುದು. ಇದರಿಂದ ಇಡೀ ರಾತ್ರಿ ಚೈತನ್ಯದಿಂದ ಭರಿತವಾದ ಕನ್ನಡಕವನ್ನು ಹಾಕಿಕೊಳ್ಳುವುದರಿಂದ ಕಣ್ಣಿನ ತೊಂದರೆಯು ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
೩. ಬಟ್ಟೆ ಒಣಗಿಸುವ ಹಗ್ಗಕ್ಕೇ ನಾಮಪಟ್ಟಿ ಹಚ್ಚುವುದು : ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸುವ ಸೌಲಭ್ಯವಿಲ್ಲದಿದ್ದರೆ, ಮನೆಯೊಳಗೆ ಬಟ್ಟೆ ಒಣಗಿಸಲು ಹಾಕುವ ಹಗ್ಗಕ್ಕೆ ನಾಮಪಟ್ಟಿ ಹಚ್ಚಬಹುದು ಅಥವಾ ಬಟ್ಟೆಗಳು ಕಡಿಮೆಯಿದ್ದಲ್ಲಿ ಬಟ್ಟೆಯ ಮೇಲೆಯೇ ಪ್ಲಾಸ್ಟಿಕ್‌ನಲ್ಲಿರುವ ನಾಮಪಟ್ಟಿಯನ್ನು ‘ಕ್ಲಿಪ್’ನಿಂದ ಹಾಕ ಬಹುದು. ಇದರಿಂದ ಬಟ್ಟೆ ಒಣಗುವಾಗಲೇ ಅದರಲ್ಲಿ ಚೈತನ್ಯ ಬರುತ್ತದೆ.
೪. ರಾತ್ರಿ ಸಮಯದಲ್ಲಿ ಶ್ರೀಕೃಷ್ಣನ ಚಿತ್ರಕ್ಕೆ ಹೂವಿನ ಹಾರ ಹಾಕಿದಂತೆ ನಮ್ಮ ಕುತ್ತಿಗೆಯಲ್ಲಿನ ಆಭರಣಗಳನ್ನು ಹಾಕಿಡುವುದು : ರಾತ್ರಿ ಕುತ್ತಿಗೆಯಲ್ಲಿನ ಸರ ಅಥವಾ ಇತರ ಆಭರಣಗಳನ್ನು ತೆಗೆದಿಡುವಾಗ ಶ್ರೀಕೃಷ್ಣನ ಚಿತ್ರಕ್ಕೆ ಹೂವಿನ ಹಾರ ಹಾಕುವಂತೆ ಹಾಕಿಡಬಹುದು. ಇದರಿಂದ ಆಭರಣದಲ್ಲಿನ ಆವರಣ ನಾಶವಾಗಿ ಬೆಳಗ್ಗೆ ಚೈತನ್ಯದಿಂದ ತುಂಬಿದ ಆಭರಣ ಹಾಕಿಕೊಳ್ಳುವುದರಿಂದ ನಮ್ಮಲ್ಲಿ ಸಾಧನೆ ಮಾಡುವ ಉತ್ಸಾಹವು ಹೆಚ್ಚಾಗುತ್ತದೆ, ಹಾಗೆಯೇ ಕಿವಿ, ಬೆರಳು, ಕಾಲಿನ ಆಭರಣಗಳನ್ನು ಒಂದು ಪೆಟ್ಟಿಗೆಯಲ್ಲಿ ದೇವತೆಯ ಚಿತ್ರವಿಟ್ಟು ಅದರಲ್ಲಿ ಹಾಕಿಡಬಹುದು.
೫. ಬಟ್ಟೆ ಒಗೆಯುವ ಯಂತ್ರ ಆರಂಭಿಸಿದಾಗ ದೇವತೆಯ ಚಿತ್ರವಿಡುವುದು : ಬಟ್ಟೆ ಒಗೆಯುವ ಯಂತ್ರದಲ್ಲಿ ಬಟ್ಟೆ ಒಗೆಯುವಾಗ ಬಟ್ಟೆಗೆ ಸ್ವಲ್ಪ ಕರ್ಪೂರದ ಪುಡಿ ಹಾಕಬೇಕು. ಹಾಗೆಯೇ ಯಂತ್ರ ಆರಂಭ ಮಾಡಿದ ನಂತರ ಯಂತ್ರದ ಮೇಲೆಯೇ ದೇವತೆಯ ಚಿತ್ರವಿಡಬೇಕು. ಇದರಿಂದ ಅವರ ಕೃಪೆಯಿಂದ ಬಟ್ಟೆಯು ತೊಳೆದು ಬರುವಾಗಲೇ ಸಾತ್ತ್ವಿಕತೆಯಿಂದ ತುಂಬಿಕೊಂಡು ಬರುತ್ತದೆ. ಇದರಿಂದಲೇ ಬಟ್ಟೆ ಒಗೆಯುವ ಯಂತ್ರದಲ್ಲಿ ಬಟ್ಟೆ ಹಾಕಿದ ನಂತರ ಬಟ್ಟೆಯ ಮೇಲಾಗುವ ಮಾಂತ್ರಿಕರ ಆಕ್ರಮಣ ಕಡಿಮೆಯಾಗಲು ಸಹಾಯವಾಗುತ್ತದೆ.
೬. ಸ್ನಾನ ಮಾಡುವ ಅರ್ಧ ಗಂಟೆಯಿಂದ ೧ ಗಂಟೆ ಮೊದಲು ಮುಖವನ್ನು ಕರ್ಪೂರದ ಎಣ್ಣೆಯಿಂದ ಮಾಲೀಶ್ ಮಾಡಿದರೆ, ಮುಖ ಹಾಗೂ ಕಣ್ಣಿನ ಆವರಣ ಕಡಿಮೆಯಾಗುತ್ತದೆ : ಸ್ನಾನ ಮಾಡುವ ಅರ್ಧದಿಂದ ೧ ಗಂಟೆ ಮೊದಲೇ ತೆಂಗಿನ ಎಣ್ಣೆಗೆ ಕರ್ಪೂರ ಹಾಕಿ ಅದರಿಂದ ಮುಖ, ಕೊರಳು, ಕುತ್ತಿಗೆಗೆ ಮಾಲೀಶ್ ಮಾಡಿದರೆ ಮುಖದಲ್ಲಿನ ಹಾಗೂ ಕಣ್ಣಿನ ಮೇಲಿನ ಆವರಣ ಕಡಿಮೆಯಾಗುತ್ತದೆ. ಇದರಿಂದ ಕಣ್ಣಿನ ಕೆಳಗೆ ಬಂದಿರುವ ಕಪ್ಪು ವರ್ತುಲವು ಕಡಿಮೆಯಾಗುತ್ತದೆ. ಹಾಗೆಯೇ ಕಪ್ಪು ವಾಯುವಿನಿಂದಾಗಿ ತಲೆ ನೋವಾಗುವ ಪ್ರಮಾಣ ಕಡಿಮೆಯಾಗುತ್ತದೆ. ಸಾಧ್ಯವಿದ್ದರೆ ಎಳ್ಳೆಣ್ಣೆಯಲ್ಲಿ ಕರ್ಪೂರ ಹಾಕಿ ಹಚ್ಚಿದರೆ ಹೆಚ್ಚು ಲಾಭದಾಯಕವಾಗುತ್ತದೆ. ಇದರಿಂದಾಗಿ ಆಜ್ಞಾಚಕ್ರವು ಜಾಗೃತವಾಗಿ ಸಂಪೂರ್ಣ ಶರೀರಕ್ಕೆ ಚೈತನ್ಯ ಸಿಗಲು ಸಹಾಯವಾಗುತ್ತದೆ.
೭. ಮಲಗುವಾಗ ಕಣ್ಣಿನ ಮೇಲೆ ಕರ್ಪೂರ ಹಚ್ಚಿ ಮಲಗುವುದು : ಮಧ್ಯಾಹ್ನ ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಮಲಗುವಾಗ ಕಣ್ಣಿನ ಮೇಲೆ ಹಾಗೂ ಮುಖಕ್ಕೆ ಕರ್ಪೂರದ ಪುಡಿ ಹಚ್ಚಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಮತ್ತು ನಾಮಜಪ ಆರಂಭವಾಗಲು ಸಹಾಯವಾಗುತ್ತದೆ.
೮. ಪೂರ್ವಜರ ತೊಂದರೆಯಿಂದಾಗಿ ರಾತ್ರಿ ಕೆಟ್ಟ ಕನಸು ಬೀಳುತ್ತಿದ್ದರೆ, ಆಜ್ಞಾಚಕ್ರದ ಮೇಲೆ ದತ್ತಗುರುಗಳ ಚಿತ್ರವಿಟ್ಟುಕೊಳ್ಳುವುದು : ರಾತ್ರಿ ಪೂರ್ವಜರ ತೊಂದರೆಯಾಗುತ್ತಿರುವಾಗ ಕಪ್ಪು ಸರ್ಪ ಕಾಣುತ್ತಿದ್ದರೆ ಅಥವಾ ಪೂರ್ವಜರು ಕನಸಿನಲ್ಲಿ ಬಂದು ತೊಂದರೆ ಕೊಡುತ್ತಿದ್ದರೆ ಆಜ್ಞಾ ಚಕ್ರದ ಮೇಲೆ ದತ್ತಗುರುಗಳ ಚಿತ್ರ ಹಚ್ಚಿಯೇ ಮಲಗಬೇಕು. ಕೆಲವು ಸಮಯದ ನಂತರ ಕೆಟ್ಟ ಕನಸು ಬೀಳುವುದು ನಿಲ್ಲುತ್ತದೆ.
೯. ಸೊಂಟದ ಕೆಳಗಿನ ಭಾಗದಲ್ಲಿ ಆಧ್ಯಾತ್ಮಿಕ ತೊಂದರೆಯು ಕಡಿಮೆಯಾಗಲು ರಾತ್ರಿ ಮಲಗುವಾಗ ಕಾಲುಗಳ ಹೆಬ್ಬೆರಳುಗಳಿಗೆ ಪೆಟ್ಟಿಗೆ ಇಡುವುದು : ಕೆಲವರಿಗೆ ಸೊಂಟದ ಕೆಳಗಿನ ಭಾಗದಲ್ಲಿ ತೊಂದರೆಯಾಗುವುದು, ರಾತ್ರಿ ಮಲಗಿದ ನಂತರ ಕಾಲು ನೋಯಿಸುವುದು, ಮೊಣ ಕಾಲು ನೋಯಿಸುವಂತಹ ತೊಂದರೆಯಾಗುತ್ತದೆ. ಈ ತೊಂದರೆಯಿಂದ ರಾತ್ರಿ ಮಲಗುವಾಗ ಸೊಂಟದ ಕೆಳಗೆ ಕರ್ಪೂರ ಹಾಕಿದ ಎಣ್ಣೆಯನ್ನು ತಿಕ್ಕಿ ನಂತರ ಅದಕ್ಕೆ ಚಮೇಲಿಯ ಊದುಬತ್ತಿಯನ್ನು ತಿರುಗಿಸಿ ಸೊಂಟದ ಕೆಳಗಿನ ಆವರಣವನ್ನು ತೆಗೆಯ ಬೇಕು ಮತ್ತು ನಂತರ ಮಲಗುವಾಗ ಕಾಲಿನ ಎರಡು ಹೆಬ್ಬೆರಳುಗಳಿಗೆ ಪೆಟ್ಟಿಗೆಯನ್ನು ಇಡಬೇಕು. ಕಾಲು ನೋವು ಕಡಿಮೆಯಾಗಲು ತುಂಬ ಸಹಾಯವಾಗುತ್ತದೆ. (ಸನಾತನದ ಅತ್ತರಿನ ಪೆಟ್ಟಿಗೆ ಹೆಬ್ಬೆರಳುಗಳಿಗೆ ಟೊಪ್ಪಿಯಂತೆ ಹಾಕಬಹುದು. ಈ ಪೆಟ್ಟಿಗೆ ಗಟ್ಟಿಯಿರುವುದರಿಂದ ರಾತ್ರಿ ಮಲಗಿದ ನಂತರವೂ ಬೀಳುವುದಿಲ್ಲ.)
೧೦. ೮ ಮತ್ತು ೯ ನೇ ದ್ವಾರಕ್ಕಾಗಿ ಉಪಾಯಪಟ್ಟಿಯ ಸುತ್ತಲೂ ಕರ್ಪೂರದ ಪುಡಿಯಿಂದ ರಂಗೋಲಿಯಂತೆ ಮಂಡಲ ಹಾಕುವುದು : ೮ ಮತ್ತು ೯ ನೇ ದ್ವಾರದ ಉಪಾಯಪದ್ಧತಿಯಲ್ಲಿ ಹಸ್ತಲಿಖಿತದ ಪಟ್ಟಿಯ ಸುತ್ತಲೂ ಕರ್ಪೂರದ ಪುಡಿಯನ್ನು ರಂಗೋಲಿಯಂತೆ ಮಂಡಲ ಹಾಕಿ ಅದನ್ನು ಉಪಯೋಗಿಸಬಹುದು. ಇದರಿಂದ ಹಸ್ತ ಲಿಖಿತದಲ್ಲಿನ ಚೈತನ್ಯವು ಜಾಗೃತವಾಗಿರುತ್ತದೆ ಹಾಗೂ ಸೊಂಟದ ಕೆಳಗಿನ ಭಾಗದಲ್ಲಿನ ದುರ್ಗಂಧವು ಕರ್ಪೂರದ ಪುಡಿಯ ಸುಗಂಧದಿಂದ ನಾಶವಾಗಲು ಸಹಾಯವಾಗುತ್ತದೆ.
೧೧. ಬೆಳಗ್ಗೆ ಹಾಕುವ ಬಟ್ಟೆಯನ್ನು ರಾತ್ರಿಯೇ ಶ್ರೀಕೃಷ್ಣನ ಚಿತ್ರದಿಂದ ಭರಿತ ಗೊಳಿಸಿಕೊಳ್ಳುವುದು : ಬೆಳಗ್ಗೆ ಸ್ನಾನದ ನಂತರ ಹಾಕುವ ಬಟ್ಟೆಯ ಮೇಲೆ ರಾತ್ರಿ ಶ್ರೀಕೃಷ್ಣನ ಚಿತ್ರವನ್ನು ಇಡಬೇಕು ಮತ್ತು ಅದರಂತೆ ರಾತ್ರಿಯೇ ಚೈತನ್ಯದಿಂದ ಭರಿತವಾದ ಬಟ್ಟೆಯನ್ನು ಬೆಳಗ್ಗೆ ಧರಿಸುವುದರಿಂದ ಬೆಳಗ್ಗೆ ಮಾಡುವ ಸಾಧನೆಯ ಶಕ್ತಿ ಬಟ್ಟೆಯಲ್ಲಿನ ಆವರಣ ತೆಗೆಯಲು ಖರ್ಚಾಗುವುದಿಲ್ಲ.
ನಿಷ್ಕರ್ಷ : ಸಾಧನೆ ಆರಂಭಿಸುವ ಮೊದಲು ಶೇ. ೭೦ ರಷ್ಟು ಶಕ್ತಿಯು ಸಾಧನೆಯ ಸಿದ್ಧತೆಗೆ, ಅಂದರೆ ಆಯಾ ಘಟಕದಲ್ಲಿನ ಆವರಣ ತೆಗೆಯಲು ಮೊದಲೇ ಖರ್ಚು ಮಾಡಿದರೆ ಪ್ರತ್ಯಕ್ಷ ಸಾಧನೆ ಮಾಡುವಾಗ ಬರುವ ಅಡಚಣೆ ಕಡಿಮೆಯಾಗುತ್ತದೆ ಮತ್ತು ಅದಕ್ಕಾಗಿ ಸಾಧನೆ ಖರ್ಚಾಗದಿರುವುದರಿಂದ ಕಡಿಮೆ ಅವಧಿಯಲ್ಲಿ ತೊಂದರೆಯಿದ್ದೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. - ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಮಾಘ ಕೃ. ೬, ಕಲಿಯುಗ ವರ್ಷ ೫೧೧೨ (೨೪.೨.೨೦೧೧))

No comments:

Post a Comment