ಶೇ.೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ೬೧ ವಯಸ್ಸಿನ ವಿಶಾಖಾಪಟ್ಟಣಂನ ಸಾಧಕ ಶ್ರೀ. ವಿಷ್ಣುದಾಸ ಕೀರ್ತನೆ ಇವರ ಸಾಧನೆಯ ಪ್ರವಾಸ
![]() |
| ಶ್ರೀ. ವಿಷ್ಣುದಾಸ ಕೀರ್ತನೆ |
ಸನಾತನದ ಶೇ. ೬೦ ರ ಮಟ್ಟವನ್ನು ತಲುಪಿದ ಇನ್ನೊಬ್ಬ ಸಾಧಕ ಆಂಧ್ರಪ್ರದೇಶದಲ್ಲಿನ ವಿಶಾಖಾಪಟ್ಟಣಂನ ಶ್ರೀ. ವಿಷ್ಣುದಾಸ ಕೀರ್ತನೆ. ಇವರ ವೈಶಿಷ್ಟ್ಯವೇನೆಂದರೆ ಅವರು ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಾಧನೆಯನ್ನು ಬಿಡದೇ ಈ ಮಟ್ಟವನ್ನು ತಲುಪಿದ್ದಾರೆ. ಅವರಿಗೆ ಮನೆಯಿಂದ ವಿರೋಧವಾಗುವುದರ ಜೊತೆಗೆ ನೌಕರಿ ಮಾಡುವಲ್ಲಿಯೂ ಉದ್ದೇಶಪೂರ್ವಕವಾಗಿ ಸಾಧನೆಗೆ ವಿರೋಧವಾಗುತ್ತಿತ್ತು.
ಹಾಗಾಗಿ ಅವರನ್ನು ಬೇರೆಬೇರೆ ದುರ್ಗಮ ಸ್ಥಳಗಳಿಗೆ ವರ್ಗಾವಣೆ ಮಾಡಲಾಯಿತು ಮತ್ತು ವಿಶಾಖಪಟ್ಟಣಂನಲ್ಲಿ ಬೆರಳೆಣಿಕೆಯಷ್ಟು ಸಾಧಕರಿರುವುದರಿಂದ ಸಾಧನೆಯ ಮಾರ್ಗದರ್ಶನಕ್ಕಾಗಿ ಯಾರೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಅವರು ದೊರಕಿದ ಅವಕಾಶಗಳನ್ನು ಬಿಡದೇ ಜಿಗುಟುತನದಿಂದ ಮತ್ತು ಕಷ್ಟಪಟ್ಟು ಸಾಧನೆಯನ್ನು ಮಾಡಿದರು. ಆದುದರಿಂದಲೇ ಅವರ ಮನೋಲಯವಾಗಲು ಸಾಧ್ಯವಾಯಿತು ಮತ್ತು ಅವರು ಎಲ್ಲ ಸಾಧಕರಿಗೆ ಆದರ್ಶಪ್ರಾಯವಾಗಿದ್ದಾರೆ.ಶ್ರೀ. ಕೀರ್ತನೆಕಾಕಾ ಇವರಲ್ಲಿರುವ ಸೇವೆ ಮಾಡುವುದು ಮತ್ತು ಪ್ರೀತಿಗಳೆಂಬ ಗುಣಗಳಿಂದ ಡಿಸೆಂಬರ್ ೨೦೧೦ ರಲ್ಲಿಯೇ ಅವರು ಶೇ. ೬೦ ಮಟ್ಟವನ್ನು ತಲುಪಿದ್ದರು. ಅವರ ಅನುಕರಣೆ ಮಾಡಿದರೆ ಇತರ ಸಾಧಕರ ಮಟ್ಟವೂ ಬೇಗನೇ ಹೆಚ್ಚಾಗಲಿದೆ. ಶ್ರೀ. ವಿನಾಯಕ ಶಾನಭಾಗರಿಗೆ ಕಾಕಾರವರ ಮಟ್ಟವನ್ನು ಗುರುತಿಸಲು ಸಾಧ್ಯವಾಯಿತು ಎಂಬುದು ಒಳ್ಳೆಯದಿದೆ. ಆದರೆ ಅವರು ತಾವೂ ಈ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸಬೇಕು. - ಡಾ. ಆಠವಲೆ
ಶೇ. ೬೦ರ ಮಟ್ಟವನ್ನು ತಲುಪಿದ ಸಾಧಕರ ವೈಶಿಷ್ಟ ಗಳು
೧. ಮಾಯೆಯಿಂದ ಅಲಿಪ್ತರಾಗುತ್ತಾರೆ
೨. ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿ ಮಹಾಲೋಕದಲ್ಲಿ ಸ್ಥಾನ ಪಡೆಯುತ್ತಾರೆ.
೩. ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ಮೇಲೆ ಉಪಾಯ ಮಾಡಬಹುದು.
೪. ಮನೋಲಯವಾಗಲು ಆರಂಭವಾಗುತ್ತದೆ ಮತ್ತು ವಿಶ್ವಮನಸ್ಸಿನ ವಿಚಾರಗಳನ್ನು ಗ್ರಹಣ ಮಾಡಲು ಸಾಧ್ಯವಾಗುತ್ತದೆ
ಅರವತ್ತು ವರ್ಷ ಪೂರ್ಣವಾದ ನಂತರ ಜನರು ಮಾಯೆಯಲ್ಲಿ ಹೆಚ್ಚು ಸಿಲುಕಿಕೊಂಡರೆ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪಡೆದ ನಂತರ ಮಾಯೆಯಿಂದ ನಿವೃತ್ತರಾಗುತ್ತಾರೆ !

೧. ಸನಾತನ ಸಂಸ್ಥೆಗೆ ಬರುವ ಮೊದಲು ಮಾಡುತ್ತಿದ್ದ ಸಾಧನೆ
೧ ಅ. ದೇವತೆ ಮತ್ತು ಸಂತರ ಸೆಳೆತವಿರುವುದು ಮತ್ತು ಭಜನೆ, ಪ್ರವಚನಗಳು ಮತ್ತು ಕೀರ್ತನೆಗಳ ಮಾಧ್ಯಮದಿಂದ ಸಾಧನೆಯನ್ನು ಮಾಡುತ್ತಿರುವುದು : ಚಿಕ್ಕಂದಿನಿಂದಲೂ ನನಗೆ ದೇವತೆಗಳು ಮತ್ತು ಸಂತರ ಸೆಳೆತವಿತ್ತು. ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಪ್ರತಿವಾರ ಭಜನೆಯಾಗುತ್ತಿತ್ತು ಮತ್ತು ಅದು ರಾತ್ರಿ ೧ ರಿಂದ ೨ ಗಂಟೆಯ ತನಕ ನಡೆಯುತ್ತಿತ್ತು ಮತ್ತು ನಾನು ಅದರಲ್ಲಿ ಮಗ್ನನಾಗುತ್ತಿದ್ದೆ. ಮುಂದೆ ನೌಕರಿಗಾಗಿ ಮುಂಬೈಗೆ ಬಂದ ನಂತರ ನನ್ನ ದಹಿಸರದಿಂದ ಚರ್ಚ್‌ಗೇಟ್ ತನಕದ ಪ್ರವಾಸವು ಭಜನೆಗಳ ಮೂಲಕ ರೈಲಿನಲ್ಲಿ ನಡೆಯುತ್ತಿತ್ತು. ಒಂದು ಗಂಟೆ ಹೇಗೆ ಕಳೆಯುತ್ತಿತ್ತು ಎಂದು ಗೊತ್ತಾಗುತ್ತಿರಲಿಲ್ಲ. ಮುಂದೆ ಮುಂದೆ ಎಲ್ಲಿಯಾದರೂ ಪ್ರವಚನ ಮತ್ತು ಕೀರ್ತನೆಗಳೇನಾದರೂ ಇದ್ದಲ್ಲಿ ನಾನು ಅಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಿದ್ದೆನು. ಆ ಸಮಯದಲ್ಲಿ ನನಗೆ ಸಂತರ ಬಗ್ಗೆ ಏನೂ ಮಾಹಿತಿಯಿರಲಿಲ್ಲ. ಮಠಾಧಿಪತಿಗಳು ಸರ್ವಶ್ರೇಷ್ಠರಾಗಿದ್ದಾರೆಂದು ತಿಳಿದುಕೊಳ್ಳುತ್ತಿದ್ದೆನು. ನನ್ನ ತಪ್ಪು ತಿಳುವಳಿಕೆಯು ಮುಂದೆ ಸಾಧನೆ ಹೆಚ್ಚಾದ ನಂತರ ದೂರವಾಯಿತು.
೧ ಆ. ಸಾಯಿಬಾಬಾರವರ ಭಜನೆಗಳಾಗುವಲ್ಲಿ ಹೋಗಿ ಕುಳಿತುಕೊಳ್ಳು ವುದು, ಆದರೆ ಅಂತರ್ಮನವು ಬೇರೇನನ್ನೋ ಹುಡುಕುತ್ತಿರುವುದು : ಮನೆಯಲ್ಲಿ ಕುಳಿತು ಅನೇಕ ಗಂಟೆಗಳ ಕಾಲ ಪೂಜೆ ಮಾಡುವುದು ಮತ್ತು ದೇವಸ್ಥಾನಕ್ಕೆ ಹೋಗಿ ಕರ್ಮಕಾಂಡ ಮಾಡುವಲ್ಲಿ ನನಗೆ ಆಸಕ್ತಿಯಿರಲಿಲ್ಲ. ಶಾರೀರಿಕ ಮತ್ತು ಮಾನಸಿಕ ತೊಂದರೆಯಿಂದ ನಾನು ಸಾಯಿ ಬಾಬಾರವರ ಭಜನೆಗಳಿಗೆ ಹೋಗಿ ಕುಳಿತು ಕೊಳ್ಳತೊಡಗಿದೆ. ಆಗ ನನಗೆ ಸ್ವಲ್ಪ ಒಳ್ಳೆಯದೆನಿಸುತ್ತಿತ್ತು. ನನ್ನ ಅಂತರ್ಮನವು ಬೇರೇನನ್ನೋ ಹುಡುಕುತ್ತಿತ್ತು. ನಾನೆಲ್ಲೋ ಕಡಿಮೆ ಬೀಳುತ್ತಿದ್ದೇನೆ ಎಂಬುದರ ಅರಿವು ನನಗಾಗುತ್ತಿತ್ತು. ಆದರೆ ನಿರ್ದಿಷ್ಟವಾಗಿ ಎಲ್ಲಿ ಕಡಿಮೆ ಬೀಳುತ್ತಿದ್ದೇನೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ.

೨. ಸನಾತನ ಸಂಸ್ಥೆಯ ಪರಿಚಯ
ಏಪ್ರಿಲ್ ೧೯೯೮ ರಲ್ಲಿ ವಿಶಾಖಪಟ್ಟಣಂನಲ್ಲಿರುವ ಶ್ರೀ. ಯಶವಂತ ಕಣಗಲೇಕರ ಇವರು ಅಲ್ಲಿನ ಪ್ರಸಾರದ ಬಗ್ಗೆ ಡಾ. ಪಾಂಡುರಂಗ ಮರಾಠೆ ಇವರೊಂದಿಗೆ ಚರ್ಚಿಸಿದ್ದರು. ಆಗ ಅವರು ನನಗೆ ಸಾಧನೆಯ ಬಗ್ಗೆ ಸಂಪೂರ್ಣ ದೃಷ್ಟಿಕೋನವನ್ನು ನೀಡಿದರು. ನಾನು ಹುಡುಕುತ್ತಿರುವುದು ಇದೇ ಆಗಿದೆ ಎಂದು ನನಗೆ ಅರಿವಾಯಿತು. ಇಲ್ಲಿಂದಲೇ ನನ್ನ ಸಾಧನೆಯು ಪ್ರಾರಂಭವಾಯಿತು. ನಾನು ನಾಮ ಜಪಿಸಲು ಪ್ರಾರಂಭಿಸಿದೆ. ಆ ಸಮಯದಲ್ಲಿ ನನಗೆ ಬಹಳ ಆನಂದ ಸಿಗತೊಡಗಿತು. ನನ್ನ ಅಂತರ್ಮನವು ನಾನು ಯೋಗ್ಯವಾದುದನ್ನು ಮಾಡುತ್ತಿದ್ದೇನೆ ಎಂದು ಹೇಳುತ್ತಿತ್ತು.
೩. ಸೇವೆಯನ್ನು ಆರಂಭಿಸಿದ್ದರಿಂದ ಅಸಹನೀಯ ರೋಗದಿಂದ ಮುಕ್ತಿಯಾಗುವುದು
ನಾಮ ಜಪಿಸಲು ಆರಂಭಿಸಿದುದರಿಂದ ಚಂಚಲವಾಗಿದ್ದ ನನ್ನ ಮನಸ್ಸು ಶಾಂತವಾಗತೊಡಗಿತು. ಅನಂತರ ಸೇವೆಯ ಮಹತ್ವ ಅರಿವಾದುದರಿಂದ ನಾನು ಸೇವೆಯನ್ನು ಮಾಡಲು ಆರಂಭಿಸಿದೆ. ಇದರಿಂದ ತಲೆಸುತ್ತುವುದು (vertigo) ಮುಂತಾದ ಅಸಹನೀಯ ರೋಗಗಳಿಂದ ನನಗೆ ಬಿಡುಗಡೆ ದೊರಕಿತು. ಕಿವಿಯ ತಜ್ಞರು ಸಹ ಈ ರೋಗವು ಶರೀರದ ಹೊರಗಿನದ್ದಾಗಿದೆ ಎಂದು ಹೇಳಿದ್ದರು. ಆಗ ಜೀವನದಲ್ಲಿನ ಶೇ. ೮೦ ರಷ್ಟು ತೊಂದರೆಗಳು ಆಧ್ಯಾತ್ಮಿಕ ಸ್ವರೂಪದ್ದಾಗಿರುತ್ತವೆ ಎಂಬ ಅನುಭೂತಿ ನನಗೆ ಬಂದಿತು.
೪. ತ್ಯಾಗಿ ವೃತ್ತಿ
೪ ಅ. ಧನವನ್ನು ಅರ್ಪಿಸಬೇಕು ಎಂಬ ವಿಚಾರವು ಮನಸ್ಸಿಗೆ ಬರುವುದು, ಆಗ ಸಹಜವಾಗಿ ಹಣವು ಒದಗುವುದು ಮತ್ತು ಅಂದಿನಿಂದ ತ್ಯಾಗದ ಮೇಲಿನ ವಿಶ್ವಾಸ ಹೆಚ್ಚಾಗುವುದು : ತ್ಯಾಗದ ಮಹತ್ವ ತಿಳಿದ ನಂತರ ನಾನು ಧನದ ತ್ಯಾಗವನ್ನೂ ಮಾಡತೊಡಗಿದೆನು. ಕ್ರಿ.ಶ. ೧೯೯೮ ರಲ್ಲಿ ಕಣಗಲೇಕರಕಾಕಾರವರು ಗುರುದಕ್ಷಿಣೆಯ ವಿಷಯವನ್ನು ಹೇಳಿದರು. ಆಗ ನಾನೂ ಗುರುದಕ್ಷಿಣೆಯೆಂದು ಡಾ. ಮರಾಠೆಕಾಕಾರ ವರಲ್ಲಿ ಅರ್ಪಣೆ ಕೊಡುವುದಾಗಿ ನಿರ್ಧರಿಸಿದೆನು. ಅದರಲ್ಲಿ ನನಗೆ ೭ ಸಾವಿರ ರೂಪಾಯಿಗಳು ಕಡಿಮೆ ಬೀಳುತ್ತಿದ್ದವು. ಯೋಗಾಯೋಗವೆಂದರೆ ಅದೇ ದಿನ ನನ್ನ ಮಾಲೀಕರು ನನಗೆ ಬೋನಸ್ ಎಂದು ೫ ಸಾವಿರ ರೂಪಾಯಿಗಳನ್ನು ಕೊಟ್ಟರು. ಇವೆಲ್ಲವೂ ಪ.ಪೂ. ಡಾಕ್ಟರರ ಕೃಪೆಯಿಂದಲೇ ಆಯಿತು. ಹಣವನ್ನು ಅರ್ಪಿಸುವಾಗ ನನಗೆ ಬಹಳ ಆನಂದ ಸಿಕ್ಕಿತು. ಅಂದಿನಿಂದ ನನಗೆ ತ್ಯಾಗದ ಮೇಲಿನ ವಿಶ್ವಾಸವು ಹೆಚ್ಚಾಯಿತು. ಪ್ರತಿ ತಿಂಗಳು ರೂ.೧೦೧೦ ರೂಪಾಯಿಗಳನ್ನು ಅರ್ಪಣೆ ಮಾಡತೊಡಗಿದೆನು.
೪ ಆ. ಗುರುಪೂಜೆಗಾಗಿ ಮನೆಯ ದೇವರಕೋಣೆಯನ್ನು ನೀಡುವುದು : ಕಾಕಾರವರು ಮತ್ತು ಆಧುನಿಕ ವೈದ್ಯ ಮರಾಠೆಯವರು ಹೇಳಿದಾಗಿನಿಂದ ನನ್ನ ಉತ್ಸುಕತೆ ಜಾಗೃತವಾಯಿತು. ಸೇವೆ ಮಾಡುತ್ತಿರುವಾಗ ಆನಂದಸಿಗುತ್ತಿತ್ತು. ಕಾಕಾರವರು, ಗುರು ಪೂಜೆಗಾಗಿ ಒಂದು ದೇವರಕೋಣೆಯು ಸಿಕ್ಕಿದರೆ ಒಳ್ಳೆಯದಿತ್ತು ಎಂದರು ಆಗ, ನಾನು ವರ್ತಮಾನಪತ್ರಿಕೆಗಳನ್ನು ನೆಲದ ಮೇಲೆ ಹಾಸಿ ನನ್ನ ದೇವರ ಕೋಣೆಯಲ್ಲಿದ್ದ ಎಲ್ಲ ದೇವತೆಗಳನ್ನು ಅದರ ಮೇಲಿರಿಸಿದೆ. ಮತ್ತು ಗುರುಪೂರ್ಣಿಮೆಗಾಗಿ ದೇವರಕೋಣೆ ನೀಡಿದೆ. ಇದನ್ನು ಮಾಡುತ್ತಿರುವಾಗ ನನ್ನ ಮನಸ್ಸಿನಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳು ಬರಲಿಲ್ಲ. ಬದಲಾಗಿ ಯೋಗ್ಯವಾಯಿತು ಎಂದೆನಿಸಿ ಆನಂದದಲ್ಲಿ ಹೆಚ್ಚಳವಾಯಿತು
೫. ಪ.ಪೂ. ಡಾಕ್ಟರರನ್ನು ನೋಡಿದ ನಂತರ ಸಂತರೆಂದರೇನು ಎಂದು ತಿಳಿಯುವುದು : ೧೯೯೮ ರಲ್ಲಿ ಪಣಜಿಯಲ್ಲಿ ಪ.ಪೂ.ಡಾಕ್ಟರರನ್ನು ಭೇಟಿಯಾಗುವ ಯೋಗ ಬಂದಿತು. ಅಲ್ಲಿ ಪ.ಪೂ. ರಾಮಜೀ ದಾದಾರವರೂ ಇದ್ದರು. ಸಂತರೆಂದರೇನು ಎಂಬುದು ನನಗೆ ಆಗ ಅನುಭವಕ್ಕೆ ಬಂದಿತು. ಇಲ್ಲದಿದ್ದರೆ ಸಂತರೆಂದರೆ ಗಡ್ಡ ಬೆಳೆಸಿ ಕೇಸರಿ ವಸ್ತ್ರವನ್ನುಟ್ಟ ಅಧ್ಯಾತ್ಮ ತಿಳಿದ ವ್ಯಕ್ತಿಗಳು ಎಂದು ನನಗೆ ಅನಿಸುತ್ತಿತ್ತು. ಪ.ಪೂ. ಡಾಕ್ಟರರನ್ನು ಭೇಟಿಯಾದಾಗ ಅವರು ಪ್ರಶ್ನೆ ಕೇಳಿ ಎಂದರು. ನನ್ನಲ್ಲಿ ಕೇಳುವಂತ ಹದ್ದು ಏನೂ ಇರಲಿಲ್ಲ. ಏಕೆಂದರೆ ನನಗೆ ಯಾವುದೇ ಕಲ್ಪನೆಯಿರಲಿಲ್ಲ. ಕೊನೆಗೆ ಅವರೇ ಸಾಧನೆ ಹೇಳಿ ಗುರುಪೂರ್ಣಿಮೆಗಾಗಿ ಆಶೀರ್ವದಿಸಿದರು. (ಮುಂದುವರಿಯುವುದು)

No comments:
Post a Comment