ಭಾಜಪ ರಾಜ್ಯದಲ್ಲಿ ಹಿಂದೂಗಳ ಅಸುರಕ್ಷಿತ ಉತ್ಸವ!
ಗುರುವಾಯನಕೆರೆ: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಗುರುವಾಯನಕೆರೆ ಎಂಬಲ್ಲಿ ಧರ್ಮಾಂಧರು ಹಿಂದೂಗಳ ಜಾತ್ರೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಫೆಬ್ರವರಿ ೧೩ರ ರಾತ್ರಿ ನಡೆಯಿತು. ಇದರಲ್ಲಿ ಇಬ್ಬರು ಹಿಂದೂಗಳು ಗಾಯಗೊಂಡರು. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. (ಹಿಂದೂಗಳೇ, ಧರ್ಮಾಂಧರು ಭಾಜಪ ರಾಜ್ಯದಲ್ಲಿ ಹಿಂದೂಗಳ ಧಾರ್ಮಿಕ ಯಾತ್ರೆಗಳ ಮೇಲೆ ದಾಳಿ ಮಾಡಲು ಧೈರ್ಯ ತೋರುತ್ತಿದ್ದಾರೆಂದಾದರೆ ಇಂತಹ ರಾಜಕಾರಣಿಗಳನ್ನು ತೊಲಗಿಸಿ ರಾಷ್ಟ್ರ ಮತ್ತು ಧರ್ಮಪ್ರೇಮಿ ರಾಜಕಾರಣಿಗಳನ್ನು ಆಡಳಿತದಲ್ಲಿ ಕೂರಿಸದೇ ಬೇರೆ ಪರ್ಯಾಯವಿಲ್ಲ! - ಸಂಪಾದಕರು) ಇಲ್ಲಿನ ಅರೆಮಲೆ ಬೆಟ್ಟದ ಕೊಡಮಣಿತ್ತಾಯ ದೈವದ ಕುಂಭ ಸಂಕ್ರಮಣದ ವಾರ್ಷಿಕ ಜಾತ್ರೆಯಲ್ಲಿ ಈ ಘಟನೆಯು ನಡೆಯಿತು. ಫೆಬ್ರವರಿ ೧೩ರ ರಾತ್ರಿ ಹತ್ತೂವರೆಯ ನಂತರ ಮೆರವಣಿಗೆಯು ಕಡಂಬು ಮನೆಯಿಂದ ಗುರುವಾಯನ ಕೆರೆ ವಾರ್ಷಿಕ ಪಿಲಿ ಚಾಮುಂಡಿಕಲ್ಲು ಮೂಲಕ ಅರೆಮಲೆ ಬೆಟ್ಟದ ಕಡೆಗೆ ಹೋಗುತ್ತಿತ್ತು. ಶೋಭಾಯಾತ್ರೆ ಗುರುವಾಯನಕೆರೆಯ ದ್ವಾರದ ಹತ್ತಿರ ಬರುತ್ತಿರುವಾಗ ಮೆರವಣಿಗೆಯ ಮೇಲೆ ಕಲ್ಲುತೂರಾಟ ಆರಂಭವಾಯಿತು. ೧೪ರಿಂದ ೨೦ ವಯೋಮಾನದ ೫೦ಜನ ಧರ್ಮಾಂಧರ ಗುಂಪು ಏಕಾಏಕಿ ಕಲ್ಲು ತೂರಾಟ ನಡೆಸಿದರು. ಅನಂತರ ಧರ್ಮಾಂಧರ ಕೆಲವು ಮನೆಗಳಿಂದಲೂ ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆಯಿತು. ಕಲ್ಲು ತೂರಾಟವನ್ನು ತಡೆಯಲು ಬಂದ ಪೊಲೀಸರಿಗೂ ಕಲ್ಲು ಬಿದ್ದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ಮಾಡಿದಾಗ ಹಿಂದೂಗಳಿಗೇ ಹೊಡೆತ ಬಿದ್ದಿದೆ. (ಕಳ್ಳನನ್ನು ಬಿಟ್ಟು ಸಂನ್ಯಾಸಿಗೆ ಗಲ್ಲು ಶಿಕ್ಷೆ ನೀಡುವ ಭಾಜಪದ ರಾಜ್ಯದಲ್ಲಿನ ಹಿಂದೂದ್ರೋಹಿ ಪೊಲೀಸರು!- ಸಂಪಾದಕರು) ಇನ್ನೊಂದೆಡೆ ಗುಂಪೊಂದು ದ್ವಿಚಕ್ರ ವಾಹನವನ್ನು ರಸ್ತೆಯಲ್ಲಿ ಅಡ್ಡ ಹಾಕಿ ರೋಷ ವ್ಯಕ್ತಪಡಿಸಿತು. ಕಲ್ಲು ತೂರಾಟದ ವೈಖರಿ ಗಮನಿಸಿದಾಗ ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಭಾಸವಾಗುತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದು ಕೆಲವು ವರ್ತಮಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. (ಧರ್ಮಾಂಧರು ಹಿಂದೂಗಳ ಮೇಲೆ ಸದಾ ಪೂರ್ವನಿಯೋಜಿತವಾಗಿಯೇ ದಾಳಿ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ. - ಸಂಪಾದಕರು) ಮೆರವಣಿಗೆಯಲ್ಲಿದ್ದ ಸಾವಿರಾರು ಹಿಂದೂಗಳು ಜಾತ್ರೆಯಲ್ಲಿ ಭಾಗವಹಿಸದೇ ಹಿಂತಿರುಗಿದರು. ಪ್ರತಿಸಲ ಈ ಉತ್ಸವದಲ್ಲಿ ನಡೆಯುತ್ತಿದ್ದ ಯಕ್ಷಗಾನ ಮತ್ತು ಬಯಲಾಟ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನಜಂಗುಳಿ ಇರುತ್ತಿತ್ತು; ಆದರೆ ಈ ವರ್ಷ ಧರ್ಮಾಂಧರ ದಾಂಧಲೆಯಿಂದ ಈ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟೇ ಹಿಂದೂಗಳು ಉಪಸ್ಥಿತರಿದ್ದರು. (ಸಾವಿರಾರು ಜನರಿದ್ದೂ ಧರ್ಮಾಂಧರ ದಾಳಿಯಿಂದ ರಕ್ಷಣೆ ಮಾಡಿಕೊಳ್ಳಲಾಗದ ಅಸಂಘಟಿತ ಹಿಂದೂಗಳು ಏಟು ತಿನ್ನಲು ಅರ್ಹರಾಗಿದ್ದಾರೆ. -ಸಂಪಾದಕರು) ಕಲ್ಲು ತೂರಾಟದಿಂದ ಗಾಯಗೊಂಡ ರಾಜೇಶ ಮತ್ತು ಸತೀಶ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸತೀಶರು ‘ಗುಂಪೊಂದು ಮೆರವಣಿಗೆಯ ಮೇಲೆ ದಾಳಿ ಮಾಡಿದೆ’ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. (ಧರ್ಮಾಂಧರಿಗೆ ಹೆದರಿ ಇಂತಹ ದೂರು ನೀಡಿದರೋ ಅಥವಾ ಪೊಲೀಸರ ಒತ್ತಡದಿಂದ ಇಂತಹ ದೂರು ನೀಡಬೇಕಾಯಿತೋ? - ಸಂಪಾದಕರು) ಪೊಲೀಸ್ ಅಧೀಕ್ಷಕ ರೋಹಿಣಿ ಇವರು ಘಟನಾಸ್ಥಳಕ್ಕೆ ಭೇಟಿ ನೀಡಿದರು.
No comments:
Post a Comment