ಮಠಗಳ ಆರ್ಥಿಕ ವ್ಯವಹಾರಗಳು ಸರಕಾರೀ ವೀಕ್ಷಣೆಯಿಂದ ಹೊರಗೆ!
- ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸರಕಾರದ ಒಪ್ಪಿಗೆ
- ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸರಕಾರದ ಒಪ್ಪಿಗೆ
ಬೆಂಗಳೂರು: ಮಠಗಳ ಆರ್ಥಿಕ ವ್ಯವಹಾರಗಳನ್ನು ಸರಕಾರೀ ಪರೀಕ್ಷೆಗಳಿಂದ ಮುಕ್ತಗೊಳಿಸುವ ‘ಕರ್ನಾಟಕ ಧಾರ್ಮಿಕ ಸಂಸ್ಥೆ ಮತ್ತು ಧಾರ್ಮಿಕದತ್ತಿ ಕಾಯಿದೆ (ತಿದ್ದುಪಡಿ), ೧೯೯೭’ ಈ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸರಕಾರವು ಸಮ್ಮತಿ ನೀಡಿದೆ. ಈ ಪ್ರಸ್ತಾಪದಿಂದ ಮಠ ಹಾಗೂ ದೇವಸ್ಥಾನಗಳನ್ನು ಸರಕಾರಿ ತನಿಖೆಯಿಂದ ಮುಕ್ತಗೊಳಿಸಲಾಗುವುದು. ಮುಜರಾಯಿ ಇಲಾಖೆಯ ಸಚಿವ ವಿ.ಎಸ್. ಆಚಾರ್ಯರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. (ಇಂತಹ ಸ್ಥಿತಿಯಲ್ಲಿ ಸರಕಾರ ಹಾಗೂ ರಾಜಕಾರಣಿಗಳ ವಶದಲ್ಲಿರುವ ದೇವಸ್ಥಾನ ಸಮಿತಿಗಳಿಗೆ ಭ್ರಷ್ಟಾಚಾರವೆಸಗಲು ಇನ್ನು ಮುಕ್ತತೆ ಸಿಗುವುದು! -ಸಂಪಾದಕರು)
No comments:
Post a Comment