ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವ ಮುನ್ನ ದೇವಸ್ಥಾನ...

ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವ ಮುನ್ನ ದೇವಸ್ಥಾನ 
ಆಡಳಿತಮಂಡಳಿಯಿಂದ ವರದಿ ಕೇಳಿ -ಬೆಂಗಳೂರು ಉಚ್ಚ ನ್ಯಾಯಾಲಯ

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿರುವ ದೇವಸ್ಥಾನ ಹಾಗೂ ಇತರ ಪಂಥೀಯರ ಪ್ರಾರ್ಥನಾಸ್ಥಳಗಳನ್ನು ತೆರವುಗೊಳಿಸುವ ಮೊದಲು ಆಡಳಿತ ಮಂಡಳಿಗಳ ವರದಿ ಕೇಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ. ನ್ಯಾ.ಬಿ.ವಿ.ನಾಗರತ್ನ ಅವರಿದ್ದ ಏಕ ಸದಸ್ಯ ಪೀಠ, ಆಡಳಿತ ಮಂಡಳಿಗಳ ವರದಿಯನ್ನು ಕೇಳದೆ ಏಕಾಏಕಿ ಅಕ್ರಮ ಪ್ರಾರ್ಥನಾಸ್ಥಳಗಳನ್ನು ತೆರವುಗೊಳಿಸುವುದು ಸರಿಯಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಆದರೆ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದ ಆದೇಶ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ದೇವಸ್ಥಾನ ಹಾಗೂ ಇತರ ಪ್ರಾರ್ಥನಾಸ್ಥಳಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರಕಾರವು ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಫೆಬ್ರವರಿ ೧೭ರಂದು ವಿಧಾನಸೌಧದಲ್ಲಿ ಗೃಹ ಸಚಿವ ಆರ್.ಅಶೋಕ ಸಮ್ಮುಖದಲ್ಲಿ ಜರುಗಿದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. (ಹಿಂದೂದ್ರೋಹಿ ಭಾಜಪ ಸರಕಾರ! ಇಂತಹ ಸರಕಾರವನ್ನು ಹಿಂದೂಗಳು ಅಧಿಕಾರದಿಂದ ಕೆಳಗಿಳಿಸುವುದರಲ್ಲಿಯೇ ಹಿಂದೂಗಳ ಹಿತ ಅಡಗಿದೆ! -ಸಂಪಾದಕರು) ಪ್ರಾರ್ಥನಾಸ್ಥಳಗಳನ್ನು ಒಡೆಯುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ವಿಧಿಸಿದ ನಿಯಮಾವಳಿಗಳನ್ನು ಸರಕಾರ ಪಾಲಿಸುತ್ತಿಲ್ಲ ಎಂದು ಹಲವಾರು ಸಂಘಟನೆಗಳು ಆಕ್ಷೇಪವೆತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಸಭೆ ನಡೆಯಿತು.

No comments:

Post a Comment