ಸ್ವಭಾವದೋಷ ತಖ್ತೆ, ದಿನಚರಿಯನ್ನು ರಾತ್ರಿ ಬರೆಯದೇ ಸಾಧ್ಯವಿದ್ದಷ್ಟು ಹಗಲಿನಲ್ಲಿಯೇ ಬರೆಯಿರಿ!

ಹೆಚ್ಚಿನ ಸಾಧಕರು ದಿನದ ತಮ್ಮ ಎಲ್ಲ ಸೇವೆಗಳು ಮುಗಿದ ನಂತರ ದಿನಚರಿ ಹಾಗೂ ಸ್ವಭಾವದೋಷ ತಖ್ತೆಯನ್ನು ಬರೆಯುತ್ತಾರೆ. ಆಗ ಶರೀರವು ದಣಿದಿರುತ್ತದೆ. ಅಂತೆಯೇ ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವವು ಹೆಚ್ಚಿರುವುದರಿಂದ ದಿನದುದ್ದಕ್ಕೂ ಏನಾಯಿತು ಎಂಬುದು ನೆನಪಾಗದಿರುವುದು, ಏನೂ ಹೊಳೆಯದಿರುವಂತಹ ತೊಂದರೆಗಳಾಗುತ್ತವೆ. ಆದುದರಿಂದ ತಖ್ತೆಯನ್ನು ಬರೆಯಲು ಬಹಳ ಸಮಯ ತಗಲುತ್ತದೆ. ಸಾಧಕರಿಗೆ ವ್ಯವಸ್ಥಿತವಾಗಿ ಬರೆಯಲಾಗದೇ ಪ್ರಕ್ರಿಯೆಯನ್ನು ನಿಲ್ಲಿಸಿದ ಬಗ್ಗೆ ಅಸಮಾಧಾನವಾಗುವುದರಿಂದ ಕಿರಿಕಿರಿಯಾಗುತ್ತದೆ.
ಸ್ವಭಾವದೋಷ, ಅಹಂ ನಿರ್ಮೂಲನೆಯ ಪ್ರಕ್ರಿಯೆಗಳು ಒತ್ತಡವನ್ನು ದೂರಗೊಳಿಸಲು ಹಾಗೂ ಆನಂದ ಪ್ರಾಪ್ತಿಗಾಗಿ ಇರುವುದರಿಂದ ನಮ್ಮ ಉದ್ದೇಶವು ಸಫಲವಾಗುವುದಿಲ್ಲ. ಹಗಲಿನ ಸಮಯದಲ್ಲಿ ಬರವಣಿಗೆಯನ್ನು ಮಾಡಿದರೆ ಪ್ರಸಂಗಗಳನ್ನು ತಪ್ಪು ನಡೆದ ತಕ್ಷಣ ಬರೆಯುವುದ ರಿಂದ ಆಯಾ ತಪ್ಪುಗಳ ಅರಿವಾಗಿ ಪ್ರಕ್ರಿಯೆಗೆ ವೇಗವು ಪ್ರಾಪ್ತವಾಗುತ್ತದೆ. ಅಂತೆಯೇ ದಿನಚರಿಯನ್ನು ಮಧ್ಯಾಹ್ನ, ಸಂಜೆ ಹೀಗೆ ವಿಂಗಡಿಸಿ ಬರೆದರೆ ‘ಸಮಯ ಎಲ್ಲಿ ವ್ಯರ್ಥ ವಾಗುತ್ತದೆ’ ಎಂಬುದು ತಕ್ಷಣ ಗಮನಕ್ಕೆ ಬರುತ್ತದೆ. ಹಾಗಾಗಿ ಸಾಧಕರು ಬರವಣಿಗೆಯನ್ನು ಬೆಳಗಿನ ಸಮಯದಲ್ಲಿ ಮಾಡಬೇಕು. - ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment