ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಚಿ. ಗುರುದಾಸ ರಮಾನಂದ ಗೌಡ...

ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಚಿ. ಗುರುದಾಸ ರಮಾನಂದ ಗೌಡ (ವಯಸ್ಸು ೨ ವರ್ಷ ೬ ತಿಂಗಳು) ಇವನ ಗುಣವೈಶಿಷ್ಟ್ಯಗಳು!
ಚಿ.ಗುರುದಾಸ
ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಉಜಿರೆಯ ಸಾಧಕರಾದ ಸೌ. ಮಂಜುಳಾ ಹಾಗೂ ಶ್ರೀ. ರಮಾನಂದ ಗೌಡ ಇವರ ಮಗನಾದ ಚಿ. ಗುರುದಾಸ ರಮಾನಂದ ಗೌಡ ಇವನ ಬಗ್ಗೆ ಅವನ ತಾಯಿಗೆ ಗಮನಕ್ಕೆ ಬಂದ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.


೧. ಜನ್ಮದಿಂದ ೬ ತಿಂಗಳು
ಅ. ಜನಿಸಿದ ಮೂರನೇ ದಿನದಿಂದಲೇ ಆಸ್ಪತ್ರೆಯಲ್ಲಿ ಪ.ಪೂ.ಭಕ್ತರಾಜ ಮಹಾರಾಜರ ಭಜನೆಗಳನ್ನು ಹಾಕಿದರೆ ಶಾಂತವಾಗಿ ಮಲಗುತ್ತಿದ್ದನು.

ಆ.ಮನೆಯಲ್ಲಿ ಅಥವಾ ಸೇವಾಕೇಂದ್ರದಲ್ಲಿರುವಾಗ ಪ.ಪೂ.ಬಾಬಾ ಅಥವಾ ಪ.ಪೂ.ಡಾಕ್ಟರರ ಛಾಯಾಚಿತ್ರವನ್ನು ಕೈಯಲ್ಲಿ ಹಿಡಿದು ಮಲಗುತ್ತಿದ್ದನು.
೨.೧ ರಿಂದ ೨ವರ್ಷ
ಅ.ಸ್ನಾನವಾದ ಕೂಡಲೇ ದೇವರಿಗೆ ನಮಸ್ಕಾರ ಮಾಡಿ ತೀರ್ಥಸೇವಿಸಿ ತಿಲಕ ಹಚ್ಚಲು ಹೇಳುತ್ತಾನೆ.
ಆ.ಉಪಾಯದ ಮಹತ್ವವು ತಿಳಿದಿರುವುದು
೧.ಪ್ರತಿದಿನ ಉಪಾಯಗಳ ಭಾವಚಿತ್ರಗಳನ್ನು ಹಚ್ಚಲು ಹೇಳುತ್ತಾನೆ ಮತ್ತು ಇತರರಿಗೂ ನೆನಪಿಸುತ್ತಾನೆ. ತುಳಸಿದಳ ತೆಗೆದು ಇತರರಿಗೆ ಕೊಟ್ಟು ತಾನು ಸ್ವತಃ ತಿನ್ನುತ್ತಾನೆ.
೨.ನೋವಿರುವ ಭಾಗದಲ್ಲಿ ನ್ಯಾಸ ಹಾಗೂ ಜಪ ಮಾಡಿ ವಿಭೂತಿ ಹಚ್ಚುತ್ತಾನೆ. ನಂತರ ‘ಸರಿಯಾಯಿತು’, ಎಂದು ಹೇಳುತ್ತಾನೆ. ಇತರರಿಗೂ ನೋವಿರುವ ಭಾಗದಲ್ಲಿ ವಿಭೂತಿ ಹಚ್ಚುತ್ತಾನೆ.
೩.ಊದುಬತ್ತಿಯಿಂದ ತನ್ನ ಕಪ್ಪು ಆವರಣ ತೆಗೆಯುತ್ತಾನೆ.
೪. ಒಂದು ದಿನ ಅವನ ತಂದೆ ಮನೆಗೆ ರಾತ್ರಿ ತಡವಾಗಿ ಬಂದರು. ಆಗ ಕುರ್ಚಿಯ ಮೇಲೆ ಪ.ಪೂ. ಬಾಬಾರ ಛಾಯಾಚಿತ್ರ ಇಡಲಾಗಿತ್ತು. ಆಗ ಗುರುದಾಸನು ಅವರೊಡನೆ ಮಾತನಾಡದೆ ಅವರಿಗೆ ಬಾಬಾರ ಛಾಯಾ ಚಿತ್ರದ ಎದುರು ಕುಳಿತುಕೊಳ್ಳಲು ಹೇಳಿದನು.
ಇ.ಇತರರ ಒಳ್ಳೆಯ ಕೃತಿಯ ಅನುಕರಣೆ ಮಾಡುವುದು: 
ಇತರರು ಮಾಡಿದ ಯಾವುದೇ ಕೃತಿಯನ್ನು ನೋಡಿದರೆ, ತಾನೂ ಅದರಂತೆ ಮಾಡಲು ಪ್ರಯತ್ನಿಸುತ್ತಾನೆ, ಉದಾ.ಉಪಾಯಗಳ ಪೆಟ್ಟಿಗೆಗಳಿಗೆ ಊದುಬತ್ತಿ ತೋರಿಸುವುದು, ವಾಹನಗಳಿಗೆ ಹೂವುಗಳನ್ನು ಅರ್ಪಿಸುವುದು, ನೆಲದ ಮೇಲೆ ನೀರು ಬಿದ್ದಿದ್ದರೆ ಬಟ್ಟೆ ತಂದು ಒರೆಸುವುದು ಇತ್ಯಾದಿ.
ಈ.ಮಿತವ್ಯಯ ಮತ್ತು ವ್ಯವಸ್ಥಿತತೆ: 
ವಿದ್ಯುತ್ ಹೋದ ನಂತರ ಪ್ರಭಾರಕ ಯಂತ್ರ (ಚಾರ್ಜರ) ದೀಪವು ಉರಿಯುತ್ತದೆ.
ವಿದ್ಯುತ್ ಬಂದ ಕೂಡಲೇ ಅದನ್ನು ಬಂದ್ ಮಾಡಲು ಹೇಳುತ್ತಾನೆ. ಮನೆಯಲ್ಲಿ ಕಸ ಬಿದ್ದಿದ್ದರೆ, ಅದನ್ನು ಹೊರಗೆ ಹಾಕುತ್ತಾನೆ.
ಉ.ಸೂಕ್ಷ್ಮದ ಅರಿವಾಗುವುದು:
ಅ. ಒಂದು ದಿನ ನನ್ನ ತಂದೆಯವರು ತೋಟದ ಕೆಲಸ ಮಾಡಿ ಆಯಾಸವಾಗಿ ಮಲಗಿದ್ದರು. ಅವರೊಂದಿಗೆ ಇನ್ನೊಬ್ಬ ಗೃಹಸ್ಥರಿದ್ದರು. ಗುರುದಾಸನಿಗೆ ಅಜ್ಜ ದಣಿದಿದ್ದಾರೆಂದು ಗೊತ್ತಿರಲಿಲ್ಲ. ಅವನು ಅಜ್ಜನ ತಲೆಯ ಹತ್ತಿರ ಪ.ಪೂ.ಬಾಬಾರ ಭಾವಚಿತ್ರ ಮತ್ತು ಪ.ಪೂ.ಡಾಕ್ಟರರ ನೇತ್ರಗಳ ಭಾವಚಿತ್ರವನ್ನಿಟ್ಟನು.
ಆ. ಪ.ಪೂ.ದೇಶಪಾಂಡೆಕಾಕಾರವರು ದೇಹತ್ಯಾಗ ಮಾಡಿದ ದಿನ (೨೪.೯. ೨೦೧೦) ಬೆಳಗ್ಗೆ ಗುರುದಾಸನು ಸ್ನಾನ ಮಾಡಿ ಬಂದ ನಂತರ ದೇವರಿಗೆ ನಮಸ್ಕಾರ ಮಾಡಿದನು ಮತ್ತು ನಮ್ಮೆಲ್ಲರನ್ನು ದೇವರ ಕೋಣೆಯಲ್ಲಿ ಕುಳ್ಳಿರಿಸಿ ಎಲ್ಲರಿಗೆ ದೊಡ್ಡಸ್ವರದಲ್ಲಿ ‘ಓಂ’ (‘ಓಂ’ ಎಂದು ಅವನು ನಾಮ ಜಪ ಮಾಡುತ್ತಾನೆ.) ಜಪಿಸಲು ಹೇಳಿದನು. ನಡುವೆಯಲ್ಲಿ ಅವನ ಚಿಕ್ಕಮ್ಮ ಜೋರಾಗಿ ಹೇಳದಿದ್ದಾಗ ಅವನು ಅವಳಿಗೆ ಅದರ ಅರಿವು ಮಾಡಿಕೊಟ್ಟನು. ಹೀಗೆ ೫ನಿಮಿಷ ನಾಮಜಪ ಮಾಡಿದ ನಂತರವೇ ಅವನು ನಮ್ಮೆಲ್ಲರಿಗೆ ಏಳಲು ಬಿಟ್ಟನು.
- ಸೌ.ಮಂಜುಳಾ ರಮಾನಂದ, ಉಜಿರೆ.

No comments:

Post a Comment