ಶೇ.೬೦ರಷ್ಟು ಮಟ್ಟ ತಲುಪಿದ ಸಾಧಕರ ವೈಶಿಷ್ಟ್ಯಗಳು
೧.ಮಾಯೆಯಿಂದ ಅಲಿಪ್ತರಾಗಿರುತ್ತಾರೆ.
೨.ಅವರ ಶರೀರ ಮತ್ತು ವಸ್ತುಗಳಿಗೆ ಸುಗಂಧ ಬರುತ್ತದೆ.
೩.ಮನೋಲಯವಾಗಲು ಪ್ರಾರಂಭವಾಗುವುದು ಮತ್ತು ವಿಶ್ವಮನಸ್ಸಿನಲ್ಲಿರುವ ವಿಚಾರಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ.
೪.ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ಮೇಲೆ ಉಪಾಯ ಮಾಡಬಹುದು.
೫.ಮೃತ್ಯುನಂತರ ಜನ್ಮ-ಮೃತ್ಯುವಿನ ಚಕ್ರವ್ಯೂಹದಿಂದ ಮುಕ್ತವಾಗಿ ಮಹಾಲೋಕದಲ್ಲಿ ಸ್ಥಾನ ದೊರಕುವುದು.
ಸಾಧನೆಯ ಪ್ರವಾಸ
೧.ಸನಾತನ ಸಂಸ್ಥೆಯ ಸತ್ಸಂಗದ ಬಗ್ಗೆ ತಿಳಿದ ನಂತರ ಅಲ್ಲಿ ಹೋಗುವುದು: ‘ನಾನು ಕುನಾಳಕಟ್ಟೆ (ಭೇಡಶಿ), ದೊಡಾಮಾರ್ಗ ಜಿಲ್ಲೆಯಲ್ಲಿ ‘ಮೆಕ್ಯಾನಿಕ್’ ಆಗಿ ನೌಕರಿ ಮಾಡುತ್ತಿದ್ದೆನು. ಅಲ್ಲಿ ಸನಾತನ ಸಂಸ್ಥೆಯ ಸತ್ಸಂಗ ನಡೆಯುತ್ತಿತ್ತು. ಡಾ.ಚಂದ್ರಶೇಖರ ಪ್ರಸಾದಿಯವರು ನಮ್ಮ ಸಂಕುಲಕ್ಕೆ ಬಂದಾಗ ಅವರ ಭೇಟಿಯಾಯಿತು. ಅವರು ನನಗೆ ನಾಮಜಪವನ್ನು ಮಾಡಲು ಹೇಳಿದರು. ಆಗ ನನಗೆ ಜಪ, ಅಧ್ಯಾತ್ಮದ ಬಗ್ಗೆ ಏನೂ ತಿಳಿದಿರಲಿಲ್ಲ. ಅವರು, ‘ಸತ್ಸಂಗಕ್ಕೆ ಬಂದರೆ ಎಲ್ಲ ವಿಷಯಗಳು ನಿಮಗೆ ತಿಳಿಯುವವು’ ಎಂದು ಹೇಳಿದರು. ಮರುದಿನ ನಾನು ಸತ್ಸಂಗಕ್ಕೆ ಹೋದಾಗ ನನ್ನ ಪರಿಚಯವನ್ನು ಮಾಡಿಸಿ ಕೊಟ್ಟರು ಮತ್ತು ಇತರರೂ ತಮ್ಮ ಪರಿಚಯವನ್ನು ಮಾಡಿಕೊಟ್ಟರು.
೨.‘ಶ್ರೀ ಕುಲದೇವತಾಯೈ ನಮಃ’ ಈ ನಾಮಜಪ ಮಾಡಿದ ನಂತರ ಆ ದೇವತೆಯ ಹೆಸರು ತಿಳಿಯಿತು ಮತ್ತು ಸಭೆಗಳಲ್ಲಿ ಸೇವೆ ಮಾಡಿ ಆನಂದ ದೊರಕಿರುವುದು: ಈ ಸತ್ಸಂಗಕ್ಕೆ ಶ್ರೀ.ಸದಾನಂದ ದೇಸಾಯಿ ಬಂದಿದ್ದರು. ಅವರು ನನಗೆ ನಾಮಜಪದ ಬಗ್ಗೆ ವಿಸ್ತಾರವಾಗಿ ಮಾಹಿತಿ ಹೇಳಿದರು. ನನಗೆ ನನ್ನ ಕುಲದೇವತೆಯ ಹೆಸರೂ ತಿಳಿದಿರಲಿಲ್ಲ. ಅವರು ನನಗೆ ‘ಶ್ರೀ ಕುಲದೇವತಾಯೈ ನಮಃ’ ಎಂದು ನಾಮಜಪ ಮಾಡಲು ಹೇಳಿದರು. ಒಂದು ತಿಂಗಳು ಜಪ ಮಾಡಿದ ನಂತರ ನನಗೆ ಕುಲದೇವತೆಯ ಹೆಸರು ತಿಳಿಯಿತು. ಈ ಸತ್ಸಂಗದ ಮಾಧ್ಯಮದಿಂದ ನನಗೆ ಅಧ್ಯಾತ್ಮದ ಮಹತ್ವ ತಿಳಿಯಿತು. ನಂತರ ದೋಡಾಮಾರ್ಗದಲ್ಲಿ ಡಾ.ಸೌ.ಶೀತಲ ಪ್ರಸಾದಿಯವರ ದೊಡ್ಡ ಸಭೆಯಿತ್ತು. ಅಲ್ಲಿ ನಾನು ಸೇವೆಗಾಗಿ ಹೋದೆನು. ಅಲ್ಲಿ ಸಾಧಕರೊಂದಿಗೆ ಸೇವೆ ಮಾಡಿದೆನು. ಆ ಸೇವೆಯಲ್ಲಿ ನನಗೆ ಬಹಳ ಆನಂದ ಸಿಕ್ಕಿತು ಮತ್ತು ನನ್ನ ಸಾಧನೆಯು ಪ್ರಾರಂಭವಾಯಿತು.
೩.ಸಾಧನೆಯಿಂದ ವ್ಯಸನಮುಕ್ತನಾಗುವುದು ಮತ್ತು ಅಧ್ಯಾತ್ಮದ ಬಗ್ಗೆ ಆಕರ್ಷಣೆ ನಿರ್ಮಾಣವಾಗುವುದು: ನಂತರ ನಮ್ಮ ಮನೆಯಲ್ಲಿ ಸತ್ಸಂಗ ಪ್ರಾರಂಭವಾಯಿತು. ಆಗ ನನಗೆ ಗ್ರಂಥದ ಸೇವೆಯನ್ನು ಕೊಟ್ಟಿದ್ದರು. ಆ ಸಮಯದಲ್ಲಿ ನನಗೆ ಹೊಸ ಹೊಸ ಅನುಭೂತಿಗಳು ಬರಲಾರಂಭಿಸಿದವು. ನನಗೆ ಮದ್ಯಪಾನ, ಸಿಗರೇಟು, ತಂಬಾಕು ಇತ್ಯಾದಿ ದುಶ್ಚಟಗಳಿದ್ದವು. ಸಾಧನೆಯನ್ನು ಪ್ರಾರಂಭಿಸಿದ ನಂತರ ದುಶ್ಚಟಗಳು ನಿಂತವು. ಅಂದಿನಿಂದ ಮನಸ್ಸಿನ ಯಾವುದೇ ವಿಚಾರಗಳತ್ತ ಗಮನ ಕೊಡದೆ ಅಧ್ಯಾತ್ಮದತ್ತ ಆಕರ್ಷಿಸಲ್ಪಟ್ಟೆನು.
೪.ವಿವಿಧ ರೀತಿಯ ಸೇವೆಗಳನ್ನು ಮಾಡುವ ಅವಕಾಶ ಸಿಗುವುದು: ಹಿಂದೆ ಪ.ಪೂ.ಡಾಕ್ಟರರ ಸರ್ವಧರ್ಮ ಸತ್ಸಂಗಗಳು ನಡೆಯುತ್ತಿದ್ದವು. ಆ ಸತ್ಸಂಗಗಳಿಗೆ ವಿವಿಧ ಜಿಲ್ಲೆಗಳಲ್ಲಿ ನಾನು ಸೇವೆಗಾಗಿ ಹೋಗುತ್ತಿದ್ದೆನು. ಕುಡಾಳ ಸೇವಾಕೇಂದ್ರಕ್ಕೆ ಪ್ರತಿ ತಿಂಗಳು ತಪ್ಪದೆ ಸೇವೆಗೆ ಹೋಗಲು ಪ್ರಾರಂಭಿಸಿದೆನು. ಒಮ್ಮೆ ಪ.ಪೂ.ಡಾಕ್ಟರರು ಕಣಕವಲಿಯ ಹತ್ತಿರದ ಪ.ಪೂ.ಪಟೇಲ ಬಾಬಾರವರ ಮನೆಗೆ ಬಂದಿದ್ದರು. ಅಲ್ಲಿ ನಾವು ೪ ದಿನ ಮತ್ತು ನಾಶಿಕದ ಕುಂಭಮೇಳದಲ್ಲಿ ೧೨ ದಿನ ಸೇವೆಗಾಗಿ ಹೋದೆವು. ಹೀಗೆ ಅನೇಕ ಸೇವೆ ಮಾಡಿ ಮನಸ್ಸಿಗೆ ಚೈತನ್ಯ ಮತ್ತು ಆನಂದ ದೊರಕುತ್ತಿತ್ತು. ಸೇವೆಯಲ್ಲಿಯೇ ಇರಬೇಕೆಂದೆನಿಸುತ್ತಿತ್ತು.
೫.ನೌಕರಿ ನಿಮಿತ್ತ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆಯಾಗುತ್ತಿದ್ದುದರಿಂದ ಸಾಧನೆ ಸರಿಯಾಗಿ ಆಗದಿರುವುದು: ನಾನು ಕ್ರಿ.ಶ.೧೯೯೯ರಿಂದ ಇದು ವರೆಗೆ ಎಲ್ಲ ಗುರುಪೂರ್ಣಿಮೆ ಮತ್ತು ೮ ಹಿಂದೂ ಧರ್ಮಜಾಗೃತಿ ಸಭೆಗಳಲ್ಲಿ ಸೇವೆ ಮಾಡಿದೆನು. ಆದರೆ ನನಗೆ ಕುನಾಳ ಕಟ್ಟೆಯಿಂದ ನನ್ನ ವರ್ಗಾವಣೆಯಾದುದರಿಂದ ೨೦೦೫ ರಿಂದ ೨೦೦೯ರ ತನಕ ಸತ್ಸಂಗ ಸಿಗಲಿಲ್ಲ. ನನಗೆ ಪ್ರತಿದಿನ ಒಂದೊಂದು ಊರಿನಲ್ಲಿ ನೌಕರಿ ಮಾಡಬೇಕಾಗುತ್ತಿತ್ತು. ಅದುದರಿಂದ ನನ್ನ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯು ಸರಿಯಾಗಿ ಆಗುತ್ತಿರಲಿಲ್ಲ.
೬.ಪ.ಪೂ.ಡಾಕ್ಟರರ ದರ್ಶನದ ಇಚ್ಛೆಯು ಪೂರ್ಣವಾಗುವುದು: ಮಾಘ ಕೃಷ್ಣ ಏಕಾದಶಿ/ದ್ವಾದಶಿ, ಕಲಿಯುಗ ವರ್ಷ ೫೧೧೧ (೩೧.೧.೨೦೧೦) ರಂದು ನಾನು ನಿವೃತ್ತನಾದೆನು. ಅದರ ನಂತರ ಗೋಕಾಕಿಗೆ ಬಂದು ಸೇವೆಯನ್ನು ಪ್ರಾರಂಭಿಸಿದೆನು. ಈಗ ನಾನು ಹೆಚ್ಚೆಚ್ಚು ಸಮಯ ಸೇವೆಗೆ ಕೊಡುತ್ತಿದ್ದೇನೆ. ೧ ತಿಂಗಳಿಂದ ನನ್ನ ಮನಸ್ಸಿನಲ್ಲಿ ಪ.ಪೂ.ಡಾಕ್ಟರರ ದರ್ಶನ ಪಡೆಯುವ ವಿಚಾರ ಬರುತ್ತಿತ್ತು. ಈ ತಳಮಳವು ಅವರಿಗೆ ತಿಳಿಯಿತು ಮತ್ತು ನನಗೆ ಆಶ್ರಮಕ್ಕೆ ಹೋಗುವ ಅವಕಾಶವು ದೊರಕಿತು. ಪ.ಪೂ.ಡಾಕ್ಟರರ ದರ್ಶನವಾದುದರಿಂದ ನಾನು ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ.’
-ಶ್ರೀ.ಶ್ರೀಕಾಂತ ಹುಲ್ಲೋಳಿ, ಗೋಕಾಕ.
ಶ್ರೀ.ಹುಲ್ಲೋಳಿ ಕಾಕಾರವರ ಬಗ್ಗೆ ಅರಿವಿಗೆ ಬಂದ ಅಂಶಗಳು
೧.‘ರಾಮನಾಥಿ ಆಶ್ರಮಕ್ಕೆ ಓರ್ವ ಸಂತರೊಂದಿಗೆ ಯಾರನ್ನು ಕಳುಹಿಸುವುದು’ ಎಂದು ವಿಚಾರ ಮಾಡುತ್ತಿದ್ದಾಗ, ‘ಹುಲ್ಲೋಳಿ ಕಾಕಾರನ್ನು ಕಳುಹಿಸೋಣ. ಇದರಿಂದ ಅವರಿಗೆ ಲಾಭವಾಗುವುದು’ ಎಂದು ಮೊದಲನೇ ವಿಚಾರ ಮನಸ್ಸಿನಲ್ಲಿ ಬಂದಿತು. ಅವರು ಎಂದಿಗೂ ತಾನಾಗಿಯೇ ಆಶ್ರಮಕ್ಕೆ ಹೋಗುವ ಬಗ್ಗೆ ಕೇಳಿರಲಿಲ್ಲ. ಅವರು ತಾನು ಮತ್ತು ತನ್ನ ಸೇವೆ ಇದೇ ವಿಚಾರಗಳಲ್ಲಿ ಮಗ್ನರಾಗಿರುತ್ತಿದ್ದರು.
೨.ಹುಲ್ಲೋಳಿ ಕಾಕಾರವರು ಗೋಕಾಕ ಕೇಂದ್ರಕ್ಕೆ ಬಂದಾಗಿನಿಂದ ಅವರು ತನ್ನ ಮತ್ತು ಇತರರ ಸಾಧನೆ ಚೆನ್ನಾಗಿ ಆಗಬೇಕೆಂದು ಗಮನ ಕೊಡುತ್ತಾರೆ. ಕೇಂದ್ರದಲ್ಲಿ ಯಾವುದೇ ಉಪಕ್ರಮವಿದ್ದರೆ ಅದರ ಜವಾಬ್ದಾರಿ ತಾವೇ ಸ್ವೀಕರಿಸುತ್ತಾರೆ ಮತ್ತು ಉಪಕ್ರಮವನ್ನು ಪೂರ್ಣಗೊಳಿಸುತ್ತಾರೆ.
೩.ಇತ್ತೀಚೆಗೆ ಗೋಕಾಕ ಕೇಂದ್ರದಲ್ಲಿ ಒಂದು ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದ ಜವಾಬ್ದಾರಿಯು ಕಾಕಾರವರಲ್ಲಿತ್ತು. ಆ ಕಾರ್ಯಕ್ರಮದ ಸಿದ್ಧತೆಯನ್ನು ಅವರು ಭಾವಪೂರ್ಣವಾಗಿ ಮತ್ತು ಯಾವುದೇ ಕುಂದು-ಕೊರತೆಗಳಿಲ್ಲದೆ ಮಾಡಿದ್ದರು.
೪.ಕಾಕಾರಿಗೆ ಈಗ ಗೋಕಾಕಿನ ಸಾಧಕರ ವ್ಯಷ್ಟಿ ಸಾಧನೆಯು ಚೆನ್ನಾಗಿ ಆಗಬೇಕು ಮತ್ತು ಅವರ ಸಾಧನೆಯ ಅಡಿಪಾಯವನ್ನು ಸರಿ ಪಡಿಸುವಂತೆ ಪ್ರಯತ್ನಿಸಲು ಹೇಳಲಾಗಿದೆ.
೫.ಕಾಕಾರಲ್ಲಿ ಭಾವವಿರುವುದರಿಂದ ಅವರೊಡನೆ ಮಾತನಾಡುವಾಗ ಆನಂದ ಸಿಗುತ್ತದೆ ಮತ್ತು ಅವರ ಸ್ವಭಾವವು ಶಾಂತವಾಗಿರುವುದರಿಂದ ಮಾತಿನಲ್ಲಿ ಆತ್ಮೀಯತೆ ಎನಿಸುತ್ತದೆ.
೬.ಅಹಂ ಪ್ರಮಾಣವು ಕಡಿಮೆಯಿದೆ. ಕೇಳಿ ಮಾಡುವ ಗುಣವಿದೆ. ಇತರರೊಡನೆ ಮಾತನಾಡುವಾಗ ಗೌರವದಿಂದ ಮಾತ ನಾಡುತ್ತಾರೆ, ಅವರ ಮಾತಿನಲ್ಲಿಯೇ ಗೌರವಭಾವದ ಅರಿವಾಗುತ್ತದೆ. ಅವರಿಗೆ ಯಾವ ಸೇವೆ ಕೊಟ್ಟರೂ ಅದನ್ನು ಪ್ರಾಮಾಣಿಕತನದಿಂದ ಮಾಡುತ್ತಾರೆ.’
- ಶ್ರೀ.ಶಂಕರ ನರೂಟೆ, ಬೆಳಗಾವಿ.

No comments:
Post a Comment