ಅಸಹನೀಯ ರೋಗವನ್ನು ಎದುರಿಸುತ್ತಾ ಶೇ. ೬೦ ಮಟ್ಟ ತಲುಪಿದ...

ಅಸಹನೀಯ ರೋಗವನ್ನು ಎದುರಿಸುತ್ತಾ ಶೇ. ೬೦ ಮಟ್ಟ ತಲುಪಿದ ಬೆಳಗಾವಿಯ ಸೌ. ಮಾಧವಿ ಘಾಟೆಯವರ ಸತ್ಕಾರ !
ಸನಾತನದ ರಾಮನಾಥಿ ಆಶ್ರಮದಲ್ಲಿ ಸೌ. ಮಾಧವಿ ಘಾಟೆಯವರ ಸತ್ಕಾರ ಮಾಡುತ್ತಿರುವ ಸೌ. ವಿಜಯಲಕ್ಷ್ಮಿ ಕಾಳೆಅಜ್ಜಿ
ರಾಮನಾಥಿ: ಸನಾತನದ ಆಶ್ರಮದಲ್ಲಿ ದೇಹತ್ಯಾಗದ ಇಚ್ಛೆಯಿರುವ ಸನಾತನದ ಬೆಳಗಾವಿಯ ಸಾಧಕಿ ಸೌ. ಮಾಧವಿ ಘಾಟೆಯವರನ್ನು ಈಶ್ವರನು ನಿಜವಾದ ಅರ್ಥದಲ್ಲಿ ಜೀವನಮುಕ್ತ ಮಾಡಿದ್ದಾನೆ! ೨.೨.೨೦೧೧ರಂದು ಇವರು ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವ ನಿಮಿತ್ತ ಸೌ.ಘಾಟೆ ಕಾಕೂರನ್ನು ಸನಾತನದ ರಾಮನಾಥಿ ಆಶ್ರಮದಲ್ಲಿ ಸೌ.ವಿಜಯಲಕ್ಷ್ಮಿ ಕಾಳೆ ಅಜ್ಜಿಯವರ ಹಸ್ತದಿಂದ ಉಡಿ ತುಂಬಿಸಿ ಹಾಗೂ ಶ್ರೀಫಲ ಮತ್ತು ಹಾರವನ್ನು ಅರ್ಪಿಸಿ ಸತ್ಕಾರ ಮಾಡಲಾಯಿತು.
ಕಳೆದ ೧೨ ವರ್ಷದಿಂದ ಸನಾತನದ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತಿರುವ ಹಾಗೂ ‘ಸ್ಕ್ಲೇರೋಡರ್ಮಾ’ ದಂತಹ ಮಹಾರೋಗದೊಂದಿಗೆ ಹೋರಾಡಿ ಶೇ.೬೦ಮಟ್ಟವನ್ನು ತಲುಪಿದ ಸೌ. ಘಾಟೆ ಕಾಕೂರವರಿಗೆ ಸತ್ಕಾರದ ಸಮಯದಲ್ಲಿ ಭಾವಾಶ್ರುಗಳಿಂದ ಕಣ್ಣುತುಂಬಿ ಬಂದು ‘ನಾನು ಪ.ಪೂ.ಡಾಕ್ಟರರಿಗೆ ಕೃತಜ್ಞಳಾಗಿದ್ದೇನೆ, ಆದರೆ ನಾನು ಇನ್ನು ಕೂಡ ಪ.ಪೂ. ಡಾಕ್ಟರರೊಂದಿಗೆ ಸಂಪೂರ್ಣವಾಗಿ ಏಕರೂಪವಾಗಲಿಲ್ಲ, ಆ ಬಗ್ಗೆ ದುಃಖವಿದೆ’ ಎಂದು ಹೇಳಿದರು. ಆಗ ಶೇ.೬೦ ಮಟ್ಟ ವಿರುವ ಹಾಗೂ ಸತ್ಕಾರ ಮಾಡಿದ ಸೌ. ಕಾಳೆಅಜ್ಜಿಯವರು ‘ತಾವು ಯಾವ ಪದ್ಧತಿಯಲ್ಲಿ ಇವೆಲ್ಲವುಗಳನ್ನು ಎದುರಿಸುತ್ತಿರುವಿರೋ ಆ ನಿಮ್ಮ ಧೈರ್ಯವೇ ನಿಮ್ಮನ್ನು ಶೇ.೬೦ಅಲ್ಲ ಶೇ. ೧೦೦ರಷ್ಟು ಉನ್ನತಿಯಾಗಲಿದೆ ಎಂದು ಹೇಳುತ್ತಿದೆ. ಆದುದರಿಂದ ತಾವು ಪ.ಪೂ.ಗುರುದೇವರೊಂದಿಗೆ ಏಕರೂಪವಾಗುವಿರಿ!’ ಎಂದರು.
ಸನಾತನದ ಮಾರ್ಗದರ್ಶಕ ಸೇವಕಿ ಕು.ಅನುರಾಧ ವಾಡೇಕರರು ಅವರ ಸಂದರ್ಶನ ತೆಗೆದುಕೊಂಡರು. ಆಗ ಸೌ. ಘಾಟೆ ಕಾಕುರವರು ಸಾಧಕರನ್ನು ಉದ್ದೇಶಿಸಿ ಮಾತನಾಡುತ್ತಾ, ‘ಪ.ಪೂ.ಡಾಕ್ಟರರು ಎಲ್ಲರೊಂದಿಗೆ ಆತ್ಮೀಯತೆಯಿಂದಿರಲು ಹೇಳಿದ್ದಾರೆ. ಯಾರ ಬಗ್ಗೆಯಾದರೂ ಒಂದು ವೇಳೆ ಪ್ರತಿಕ್ರಿಯೆ ಬಂದರೆ ಕೂಡಲೇ ಅವರಿಗೆ ಅದನ್ನು ಹೇಳಿ ತನ್ನ ದೋಷವನ್ನು ಕೇಳಬೇಕು. ಇದರಿಂದ ಇಬ್ಬರ ಮನಸ್ಸು ಮುಕ್ತವಾಗುತ್ತದೆ’ ಎಂದು ಹೇಳಿದರು.
ಕ್ಷಣಚಿತ್ರ
ಸತ್ಕಾರ ಮಾಡುತ್ತಿರುವಾಗ ಉತ್ಸಾಹ ದಿಂದ ಸೌ.ಘಾಟೆಕಾಕೂ ಎದುರಿಗಿದ್ದ  ಶ್ರೀಕೃಷ್ಣನ ಪ್ರತಿಮೆಗೆ ಕೈಮುಗಿದು ಗುರುದೇವರನ್ನು ಉದ್ದೇಶಿಸಿ “ಇದು ನಿಮ್ಮ ಸತ್ಕಾರವಾಗಿದೆ! ಪ.ಪೂ.ಗುರುದೇವ ಈ ಸತ್ಕಾರವನ್ನು ನಿಮ್ಮ ಚರಣಗಳಲ್ಲಿ ಅರ್ಪಿಸುತ್ತೇನೆ! ನಾನು ಎಂಬುದು ಏನಿಲ್ಲ. ನನ್ನ ಅಸ್ತಿತ್ವವಿಲ್ಲ, ನಾನು ಏನು ಮಾಡಲು ಸಾಧ್ಯವಿಲ್ಲ. ಎಲ್ಲವನ್ನು ನೀವೇ ಮಾಡಿರುವಿರಿ. ನಾನು ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞಳಾಗಿದ್ದೇನೆ’ ಎಂದರು.
ಸತ್ಕಾರವಾದ ಮೇಲೆ ಮನಸ್ಸಿನ ಸ್ಥಿತಿಯ ಬಗ್ಗೆ ಅವರು ‘ನಾನು ಸ್ಥಿರವಾಗಿದ್ದೇನೆ; ಕಾರಣ ಸತ್ಕಾರ, ಪ್ರಗತಿ ಇವೆಲ್ಲವೂ ಗುರುದೇವರೇ ಮಾಡಿದ್ದಾರೆ. ನಾನು ತಟಸ್ತವಾಗಿ ಅದರ ಕಡೆಗೆ ನೋಡುತ್ತಿದ್ದೇನೆ. ಈ ಸತ್ಕಾರವು ನನ್ನದಲ್ಲ; ಅವರದ್ದೇ ಆಗಿದೆ’ ಎಂದು ಹೇಳಿದರು!
ವೈಶಿಷ್ಟ್ಯ
ಸೌ.ಘಾಟೆಕಾಕೂರ ಸೇವೆ ಮಾಡುವ ಅವರ ಪುತ್ರಿ ಸೌ.ಅಮೃತ ದೇಶಪಾಂಡೆಯವರ ನಾಮಜಪ ಪ್ರಾರ್ಥನೆ ಕೆಲವು ದಿನಗಳಿಂದ ಇವರ ಸಹವಾಸದಿಂದ ಪ್ರಾರಂಭವಾಗುತ್ತದೆ ಹಾಗೂ ಒಳ್ಳೆಯ ರೀತಿಯಿಂದ ಆಗುತ್ತಿದೆ. ಕಾಕೂರವರ ಮಟ್ಟ ಹೇಳಿದ ದಿನ ಬೆಳಗ್ಗೆ ಸೌ.ದೇಶಪಾಂಡೆಯವರಿಗೆ ತಾಯಿಯ ಮಟ್ಟವು ಶೇ.೬೦ ಆಗಿದೆಯೆಂದು ಹೇಳಬಹುದು ಎಂದೆನಿಸಿತು. ಅವರಿಗೆ ಮತ್ತು ಅವರ ಸಹೋದರಿ ಹಾಗೂ ಸೌ.ಘಾಟೆ ಕಾಕೂರರವರ ಎರಡನೆ ಪುತ್ರಿ ಸೌ.ನೇಹಾ ಪ್ರಭುರವರಿಗೆ ‘ಕಾಕೂವಿಗೆ ಪುನರ್ಜನ್ಮ ಬೇಡ’ವೆಂದು ಹಿಂದೆ ಪ್ರಾರ್ಥನೆಯಾಗುತ್ತಿತ್ತು. ಸೌ.ಘಾಟೆ ಕಾಕೂ ರಾಮನಾಥಿ ಆಶ್ರಮಕ್ಕೆ ಬರುವ ಮೊದಲು ಅವರ ಪತಿಗೂ ಇದರ ಮುನ್ಸೂಚನೆಯು ದೊರಕಿತ್ತು.

No comments:

Post a Comment