ಸಾಧಕರೇ, ಈ ರೀತಿಯ ನಕಾರಾತ್ಮಕ ಮಾನಸಿಕತೆಯಿಂದ ಸಾಧನೆ ಮಾಡಬೇಡಿ!

ಒಂದು ಕೇಂದ್ರದ ಸಾಧಕರಿಗೆ ಶೇ.೬೦ರಷ್ಟು ಮಟ್ಟ ಸಾಧಿಸಲು ಮಾಡಿದ ಪ್ರಯತ್ನದ ಬಗ್ಗೆ ಕೇಳಿದಾಗ ಅವರು, ‘ನಾವು ಶೇ.೬೦ಮಟ್ಟವನ್ನು ತಲುಪಲು ಸಾಧ್ಯವೇ ಇಲ್ಲ. ಆದುದರಿಂದ ನಾವು ಅದರ ಬಗ್ಗೆ ವಿಚಾರವನ್ನೂ ಮಾಡಲಿಲ್ಲ’ ಎಂದು ಹೇಳಿದರು. ಮೇಲಿನಂತೆ ತಪ್ಪು ವಿಚಾರ ಮಾಡಬಾರದು. ನಮ್ಮ ಪ್ರಗತಿಯಾಗಲು ಪ.ಪೂ.ಡಾಕ್ಟರರು ಪ್ರತಿದಿನ ಮಾರ್ಗದರ್ಶನ ಮಾಡುತ್ತಿದ್ದಾರೆ ಮತ್ತು ನಮ್ಮಿಂದ ಪ್ರಯತ್ನವಾಗಲು ಸತತವಾಗಿ ಸಹಾಯವನ್ನೂ ಮಾಡುತ್ತಿದ್ದಾರೆ. ನಾವು ಪ್ರಯತ್ನಿಸಿದರೆ ಪ್ರಗತಿಯಾಗುವುದಂತೂ ಖಚಿತ. ನಮ್ಮ ಆಧ್ಯಾತ್ಮಿಕ ಪ್ರಗತಿಯಾಗಬೇಕೆಂಬ ಉದ್ದೇಶದಿಂದಲೇ ನಾವು ‘ಸನಾತನ ಸಂಸ್ಥೆ’ಗೆ ಬಂದಿದ್ದೇವೆ. ನಾವು ಪ್ರಗತಿಯ ವಿಚಾರ ಮಾಡದಿದ್ದರೆ ಯಾವ ಉದ್ದೇಶಕ್ಕಾಗಿ ಸಾಧನೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಗಾಂಭೀರ್ಯವಾಗಿ ವಿಚಾರ ಮಾಡಬೇಕು. -ಶ್ರೀ.ಶಂಕರ ನರೂಟೆ, ಬೆಳಗಾವಿ.

No comments:

Post a Comment