ಚಿದಾನಂದ ಮೂರ್ತಿಯವರಿಗೆ ಕೊನೆಗೂ ಲಭಿಸಿತು ಗೌರವ ‘ಡಾಕ್ಟರೇಟ್’ ಪದವಿ!

ಬೆಂಗಳೂರು: ಸಂಶೋಧಕ, ಹಿರಿಯ ವಿದ್ವಾಂಸ ಡಾ.ಎಮ್.ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ಪದವಿ ಪ್ರಧಾನಿಸಲು ರಾಜ್ಯಪಾಲ ಹಂಸರಾಜ ಭಾರದ್ವಾಜರು ಅಸ್ತು ಎಂದಿದ್ದಾರೆ. ಡಾ.ಚಿದಾನಂದ ಮೂರ್ತಿಯವರ ಮತಾಂತರ ವಿಷಯದ ವಿಚಾರ ಸರಣಿ ಬಗ್ಗೆ ಆಕ್ಷೇಪಿಸಿ ಮತ್ತು ಅವರನ್ನು ಕೋಮುವಾದಿ ಎಂದು ನಿರ್ಧರಿಸಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸ್ತಾಪವನ್ನು ಭಾರದ್ವಾಜರು ನಿರಾಕರಿಸಿದರು.
ಬೆಂಗಳೂರು ವಿಶ್ವವಿದ್ಯಾಲಯವು ಚಿದಾನಂದ ಮೂರ್ತಿ, ಕವಿ ಕೆ.ಎಸ್.ನಿಸಾರ ಅಹ್ಮದ ಮತ್ತು ಪ್ರಸಿದ್ಧ ಕಲಾಕಾರ ಬಿ.ಕೆ.ಎಸ್. ವರ್ಮಾ ಇವರಿಗೆ ಗೌರವಾನ್ವಿತ ‘ಡಾಕ್ಟರೇಟ್’ ಪದವಿ ನೀಡಲು ರಾಜ್ಯಪಾಲರಿಗೆ ಪ್ರಸ್ತಾಪ ಕಳುಹಿಸಿತ್ತು. ಅದರಲ್ಲಿ ಕೆ.ಎಸ್.ನಿಸಾರ ಅಹ್ಮದ ಮತ್ತು ಬಿ.ಕೆ.ಎಸ್.ವರ್ಮಾರಿಗೆ ‘ಡಾಕ್ಟರೇಟ್’ ಕೊಡಲು ಅಂಕಿತ ಹಾಕಿದ್ದರು; ಆದರೆ ಚಿದಾನಂದ ಮೂರ್ತಿಯವರ ಮತಾಂತರ ವಿಷಯದ ವಿಚಾರಸರಣಿಯನ್ನು ಆಕ್ಷೇಪಿಸಿ ಅವರಿಗೆ ‘ಡಾಕ್ಟರೇಟ್’ ನೀಡಲು ತಡೆ ಹಿಡಿದಿದ್ದರು. (ರಾಜ್ಯಪಾಲರು ಚಿದಾನಂದ ಮೂರ್ತಿ ಬದಲು ನಿಸಾರ ಅಹ್ಮದರಿಗೆ ಒಪ್ಪಿಗೆ ನೀಡದಿರಲು ಧೈರ್ಯ ತೋರಿಸುತ್ತಿದ್ದರೇ? ಇದರಿಂದ ರಾಜ್ಯ ಪಾಲರ ಹಿಂದೂದ್ವೇಷ ಸ್ಪಷ್ಟವಾಗುತ್ತದೆ. - ಸಂಪಾದಕರು)
ಡಾ.ಚಿದಾನಂದ ಮೂರ್ತಿಯವರು ಮತಾಂತರದ ನಿರ್ಬಂಧವನ್ನು ಬೆಂಬಲಿಸಿದ್ದರು. (ಚಿದಾನಂದ ಮೂರ್ತಿಯವರು ಬಲವಂತವಾಗಿ ನಡೆಯುವ ಮತಾಂತರವನ್ನು ವಿರೋಧಿಸಿ ಸತ್ಯದ ಪಕ್ಷವನ್ನು ವಹಿಸಿಕೊಂಡಾಗ ಜಾತ್ಯತೀತ ರಾಜಕಾರಣಿಗಳ ಹೊಟ್ಟೆ ನೋವಾದರೆ ಅದನ್ನು ಒಂದು ಪಕ್ಷ ಒಪ್ಪಬಹುದಿತ್ತು; ಆದರೆ ರಾಜ್ಯಪಾಲರಿಗೆ ಅದು ಏಕೆ ಕೆಡುಕೆನಿಸಿತು ಎಂಬುದು ತಿಳಿಯುವುದಿಲ್ಲ ಅಥವಾ ರಾಜ್ಯಪಾಲರೂ ಅದೇ ಗುಂಪಿನವರೇ? -ಸಂಪಾದಕರು)
ಈ ಘಟನೆಯನ್ನು ರಾಜ್ಯದ ಸಾಹಿತಿಗಳೆಲ್ಲರೂ ಪ್ರತಿಭಟಿಸಿದರು. ಅದರಂತೆ ಎಲ್ಲ ಸ್ತರಗಳಿಂದ ಟೀಕಿಸಲಾಯಿತು. ಕೆಲವರು ರಾಜಭವನದ ಎದುರು ಆಂದೋಲನ ನಡೆಸಿದರು. ಈ ಟೀಕೆಯಿಂದ ಮತ್ತು ಜನರ ಒತ್ತಡಕ್ಕೆ ಮಣಿದು ಕೊನೆಗೂ ಭಾರದ್ವಾಜರು ಡಾ.ಚಿದಾನಂದ ಮೂರ್ತಿಯವರಿಗೆ ‘ಡಾಕ್ಟರೇಟ್’ ಪದವಿ ಪ್ರಧಾನಿಸಲು ಸಿದ್ಧರಾದರು.

No comments:

Post a Comment