ಪೂಜ್ಯ ರಾಜೇಂದ್ರ ಶಿಂದೆ ಇವರ ವಿಷಯದಲ್ಲಿ ಮಂಗಳೂರಿನ ಸಾಧಕರಿಗೆ ಬಂದ ಅನುಭೂತಿಗಳು

ಪೂಜ್ಯ ರಾಜೇಂದ್ರದಾದಾ ಬರುವ ಮೊದಲೇ ಅವರು ತಂಗುವ ಮನೆಯನ್ನು ನೋಡಿದಾಗ ಅದು ಸಂಪೂರ್ಣವಾಗಿ ಕೃಷ್ಣಮಯವಾಗಿದೆ ಎಂದೆನಿಸಿ ಸಾಧಕಿಗೆ ಭಾವಜಾಗೃತಿಯಾಗುವುದು
ಪೂಜ್ಯ ರಾಜೇಂದ್ರದಾದಾ ಬರುವ ೨ ದಿನದ ಮೊದಲು ನಾನು ನಿವಾಸಸ್ಥಾನದ ಮಹಡಿಯ ಮೇಲೆ ಹೋಗಿದ್ದೆನು. ಅಲ್ಲಿಂದ  ಪೂಜ್ಯ ದಾದಾರವರು ಬಂದಾಗ ಉಳಿಯುವ ನಿವಾಸಸ್ಥಾನವನ್ನು ನೋಡುವಾಗ ಆನಂದವೆನಿಸುತ್ತಿತ್ತು ಮತ್ತು ಅದು ಶ್ರೀಕೃಷ್ಣನ ಅರಮನೆಯಾಗಿದೆ, ಯಾವುದೋ ಕಾರಣಕ್ಕಾಗಿ ಅದು ಅಲಂಕೃತಗೊಂಡಿದೆ, ಆ ಅರಮನೆಯಲ್ಲಿ ಏನೋ ನಡೆಯಲಿಕ್ಕಿದೆ ಎಂದೆನಿಸುತ್ತಿತ್ತು. ಆ ಮನೆಯನ್ನು ನೋಡುವಾಗ ಮನಸ್ಸಿನಲ್ಲಿ ನನಗೆ ಏಕೆ ಇಷ್ಟು  ಆನಂದವಾಗುತ್ತಿದೆ, ಈ ರೀತಿ ವಿಚಾರ ಏಕೆ ಬರುತ್ತಿದೆ ಎನ್ನುವ ಪ್ರಶ್ನೆ ಬರುತ್ತಿತ್ತು. ನಂತರ ಪೂಜ್ಯ ದಾದಾರವರು ಬರುತ್ತಿರುವುದು ತಿಳಿಯಿತು.
ನನಗೆ ಎಷ್ಟು ಆನಂದವಾಗುತ್ತಿದೆಯೋ ಅದಕ್ಕಿಂತ ಹೆಚ್ಚು ಆ ಮನೆ ಆನಂದ ಪಡುತ್ತಿದೆ ಎಂದೆನಿಸುತ್ತಿತ್ತು. ಸಂತರು ಪ್ರತಿ ಬಾರಿ ಬಂದು ಅಲ್ಲಿ ತಂಗುವುದರಿಂದ ಆ ಮನೆ ಚೈತನ್ಯಮಯವಾಗಿದೆ ಎಂದೆನಿಸುತಿತ್ತು. ಪೂಜ್ಯ ದಾದಾರವರ ಸೇವೆಯಿದ್ದ ದಿನ ಆ ಮನೆಗೆ ಸೇವೆಗೆಂದು ಹೋದೆನು. ಆಗ ಶ್ರೀಕೃಷ್ಣನ ಚರಣ ಸೇವೆಗಾಗಿ ಅವನ ಅರಮನೆಗೆ ಹೋಗುತ್ತಿದ್ದೇನೆ ಎಂದೆನಿಸಿ ಭಾವಜಾಗೃತಿಯಾಗುತ್ತಿತ್ತು. ಕೋಣೆಗೆ ಹೋದಾಗ ಕೃಷ್ಣ ಅಲ್ಲಿದ್ದಾನೆ ಎಂದೆನಿಸುತ್ತಿತ್ತು. ಪ್ರತಿ ಬಾರಿ ಸಂತರ ಸೇವೆಗೆ ಹೋದಾಗ ನಾನು ಪೂಜ್ಯ ದಾದಾರವರ / ಸಂತರ ಸೇವೆಗೆ ಹೋಗುತ್ತಿದ್ದೇನೆ ಎನ್ನುವ ವಿಚಾರ ಬರುತ್ತಿತ್ತು; ಆದರೆ ಈ ಬಾರಿ ಅವರ ಸೇವೆಗೆ ಹೋದಾಗ, ಅವರು ಬರುವಾಗ, ಅವರ ನೆನಪಾದಾಗ ಆ ಕೋಣೆ, ಅವರ ವಸ್ತುಗಳು, ಆ ಮನೆ ಎಲ್ಲ ಕೃಷ್ಣಮಯವಾಗಿವೆ ಎಂದೆನಿಸುತ್ತಿತ್ತು. ಮೊದಲಿಗಿಂತಲೂ ಹೆಚ್ಚು ಆನಂದವೆನಿಸುತ್ತಿತ್ತು. ಮೊದಲು ಪೂ.ದಾದಾ ಹೋದಾಗ ತುಂಬಾ ಬೇಸರವಾಗುತ್ತಿತ್ತು. ಈ ಬಾರಿ ಕೃಷ್ಣ ನನ್ನನ್ನು ಬಿಟ್ಟು ಎಲ್ಲಿ ಹೋಗುತ್ತಾನೆ ಅವನು ಎಲ್ಲಿಯೂ ಹೋಗುವುದಿಲ್ಲ, ಅವನು ಸದಾ ನನ್ನೊಂದಿಗೇ ಇರುತ್ತಾನೆ ಎಂದೆನಿಸಿ ಆನಂದವಿತ್ತು. - ಕು. ವೇದಾವತಿ


ಸಂತರ ಚರಣ ನೋಡಿ ಉಪಾಯ ಮಾಡಿದಾಗ ತೊಂದರೆ ಕಡಿಮೆಯಾಗುವುದು ಮತ್ತು ಮರುದಿನ ಸನಾತನ ಪ್ರಭಾತದಲ್ಲಿ ಅದೇ ರೀತಿ ಉಪಾಯ ಮಾಡಬೇಕೆಂಬುದನ್ನು ಓದಿದಾಗ ಭಾವಜಾಗೃತಿಯಾಗುವುದು
೨೪.೧.೨೦೧೧ರಂದು ಸಾಯಂಕಾಲ ಉಪಾಯ ಮಾಡುತ್ತಿರುವಾಗ ತುಂಬಾ ನಿದ್ರೆ ಬರುತ್ತಿತ್ತು. ಕೂಡಲೇ ಉಪಾಯ ಮುಗಿದ ನಂತರ ಪೂಜ್ಯ ದಾದಾರವರ ಹತ್ತಿರ ಹೋದೆನು. ಆಗ ಅವರು ನನಗೆ ಕುಳಿತುಕೊಳ್ಳಲು ಹೇಳಿದರು. ಆಗ ನಾನು ಅವರೆದುರು ಕುಳಿತು ಶ್ರೀಕೃಷ್ಣನಿಗೆ ‘ಹೇ ಶ್ರೀಕೃಷ್ಣಾ, ಪೂಜ್ಯ ದಾದಾರವರಿಂದ ಉಪಾಯವಾಗಿ ನನ್ನ ತೊಂದರೆಯು ಕಡಿಮೆಯಾಗಲಿ ಮತ್ತು ನನ್ನೊಳಗಿರುವ ಮಾಂತ್ರಿಕನ ಶಕ್ತಿಯು ನಾಶವಾಗಲಿ ಹಾಗೂ ಅವರ ಚೈತನ್ಯವನ್ನು ಗ್ರಹಿಸಲು ಶಕ್ತಿ ನೀಡು’ ಎಂದು ಪ್ರಾರ್ಥನೆ ಮಾಡಿದೆನು. ನಂತರ ನನ್ನ ಮನಸ್ಸಿನಲ್ಲಿ ಪೂಜ್ಯ ದಾದಾರವರ ಚರಣಗಳನ್ನು ನೋಡುತ್ತಾ ಉಪಾಯ ಮಾಡೋಣ ಎನ್ನುವ ವಿಚಾರ ಬಂದಿತು. ಕೂಡಲೇ ಪೂಜ್ಯ ದಾದಾರವರ ಚರಣಗಳನ್ನು ನೋಡಿದೆನು. ಆಗ ಪೂ.ದಾದಾರವರು ತಮ್ಮ ಚರಣಗಳನ್ನು ಮುಂದೆ ಮಾಡಿದರು ಮತ್ತು ನಾನು ಚರಣವನ್ನು ನೋಡುತ್ತಾ ‘ಓಂ’ ಜಪ ಮಾಡಿದೆನು. ೧೦ ನಿಮಿಷದಲ್ಲಿ ನನಗಾಗುತ್ತಿದ್ದ ತೊಂದರೆಯು ಕಡಿಮೆಯಾಯಿತು. ಮರುದಿನ ಸನಾತನ ಪ್ರಭಾತದಲ್ಲಿ ಸಂತರ ಉಪಾಯದ ಸಮಯದಲ್ಲಿ ಏನು ಮಾಡಬೇಕು? ಅವರ ಲಾಭವನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ಶ್ರದ್ಧಾ ಅಕ್ಕನವರು ಬರೆದ ವಿಷಯ ಓದಿದಾಗ ನನಗೆ ತುಂಬಾ ಭಾವಜಾಗೃತಿಯಾಯಿತು. ಈ ವಿಚಾರ ನನಗೆ ಪೂಜ್ಯ ದಾದಾರವರೇ ಕೊಟ್ಟಿರಬೇಕು ಎನ್ನುವ ವಿಚಾರ ಬಂದಿತು. ಕೂಡಲೇ ಶ್ರೀಕೃಷ್ಣನಿಗೆ ಮತ್ತು ಪೂಜ್ಯ ದಾದಾರವರಿಗೆ ಕೃತಜ್ಞತೆ ವ್ಯಕ್ತಪಡಿಸಿದೆನು.
ಶರಣಾಗತಿಯಿಂದ ಪ್ರಾರ್ಥನೆ ಮಾಡಿದಾಗ ಸಂತರ ಸೇವೆಯ ಭಾಗ್ಯ ದೊರೆಯುವುದು
ಸಂತರು ಪ್ರತಿ ಬಾರಿ ಬರುವಾಗ ಇರುವ ಸೇವೆಗಿಂತ ಈ ಬಾರಿ ಕಡಿಮೆ ಸೇವೆ ಇದೆ ಎಂದೆನಿಸಿ ಶರಣಾಗತಿಯಿಂದ ನೀವೇ ನನ್ನಿಂದ ಸಂತರ ಸೇವೆಯನ್ನು ಹೆಚ್ಚು ಹೆಚ್ಚು ಮಾಡಿಸಿಕೊಳ್ಳಿ ಎಂದು ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಿದೆನು. ನಂತರ ಅಶ್ವಿನಿ ಅಕ್ಕನಿಗೆ ಹೇಳಿದಾಗ ಅವರು ಮರುದಿನ ಕಾರ್ಯಕ್ರಮವಿರುವಲ್ಲಿಗೆ ಹೋಗಲು ಹೇಳಿದರು. ಆಗ ನಾನು ಪೂಜ್ಯ ದಾದಾರವರು ಹೇಳಬೇಕಲ್ಲ ಎಂದೆನು. ನನ್ನ ಮನಸ್ಸಿನಲ್ಲಿ ಪೂಜ್ಯ ದಾದಾ ಬರಲಿಕ್ಕೆ ಹೇಳುವುದಿಲ್ಲ. ನಾನು ಅವರ ಸೇವೆ ಮಾಡಲಿಕ್ಕೆ ಯೋಗ್ಯಳಲ್ಲ ಎಂಬ ವಿಚಾರ ಬಂದಿತು. ಮರುದಿನ ಮಧ್ಯಾಹ್ನ ೧ ಗಂಟೆಗೆ ಅಶ್ವಿನಿ ಅಕ್ಕನವರು ‘ನಿಮಗೆ ಪೂಜ್ಯ ದಾದಾ ಬರಲಿಕ್ಕೆ ಹೇಳಿದ್ದಾರೆ’ ಎಂದಾಗ ನನಗೆ ತುಂಬಾ ಭಾವಜಾಗೃತಿಯಾಯಿತು. ಏಕೆಂದರೆ ಈಶ್ವರನಿಗೆ ಶರಣಾಗಿ ಪ್ರಾರ್ಥನೆ ಮಾಡಿದರೆ ಅವನು ಏನು ಬೇಕಾದರೂ ಕೊಡುತ್ತಾನೆ ಎನ್ನುವುದು ಕಲಿಯಲು ಸಿಕ್ಕಿತು. - ಕು.ಮಂಗಲಾ ಗೌಡ, ಮಂಗಳೂರು.

No comments:

Post a Comment