ಎಸ್.ಎಸ್.ಆರ್.ಎಫ್. ಕಾರ್ಯಾಗಾರದಲ್ಲಿ ಸನಾತನದ ಸಂತ ಪೂ.ರಾಜೇಂದ್ರ ಶಿಂದೆಯವರು...

ಎಸ್.ಎಸ್.ಆರ್.ಎಫ್. ಕಾರ್ಯಾಗಾರದಲ್ಲಿ ಸನಾತನದ ಸಂತ ಪೂ.ರಾಜೇಂದ್ರ ಶಿಂದೆಯವರು ಮಾಡಿದ ಮಾರ್ಗದರ್ಶನ!
ಸನಾತನದ ರಾಮನಾಥಿ ಆಶ್ರಮದಲ್ಲಿ ಮಾರ್ಗಶಿರ ಕೃಷ್ಣ ಚತುರ್ದಶಿ, ಕಲಿಯುಗ ವರ್ಷ ೫೧೧೨ (೩.೧.೨೦೧೧)ರಂದು ಎಸ್.ಎಸ್.ಆರ್.ಎಫ್.ನ ವಿದೇಶಿ ಸಾಧಕರ ಕಾರ್ಯಾಗಾರವನ್ನು ಸನಾತನದ ಸಂತ ಪೂ.ರಾಜೇಂದ್ರ ಶಿಂದೆಯವರು ಉದ್ಘಾಟಿಸಿದರು. ಪೂ.ರಾಜೇಂದ್ರ ಶಿಂದೆ ಯವರು ಕಾರ್ಯಾಗಾರದ ವೇಳೆ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ. (ಮುಂದುವರಿದ ಭಾಗ, ಕಳೆದ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: http://kannadasanatanprabhat.blogspot.com/2011/02/blog-post_1948.html)

ಪ್ರಶ್ನೆ: ಒಂದು ದೇಶದ ಸಾಧಕರ ಸಾಧನೆಯಲ್ಲಿ ಏರಿಳಿತವಾಗುತ್ತಿದೆ. ಅಲ್ಲಿನ ಸಾಧಕರ ಮಾನಸಿಕ, ಸಾಂಸಾರಿಕ ಮತ್ತು ವ್ಯಾವಹಾರಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅವರಿಗೆ ಸಾಧನೆಯಲ್ಲಿ ಹೇಗೆ ಪ್ರೋತ್ಸಾಹ ನೀಡಬಹುದು?
ಉತ್ತರ: ಈ ಸಮಸ್ಯೆಯ ಬಗ್ಗೆ ಅಲ್ಲಿನ ಇತರ ಸಾಧಕರೊಂದಿಗೆ ಮಾತನಾಡಿಕೊಳ್ಳಬೇಕು ಮತ್ತು ಏನಾದರೂ ಪರಿಹಾರ ಸಿಗುತ್ತದೆಯೇ ಎಂದು ನೋಡಬೇಕು. ಅಂತಹ ಪರಿಸ್ಥಿತಿಯಲ್ಲಿಯೂ ಹೇಗೆ ಸಾಧನೆಯನ್ನು ಮಾಡಬಹುದು ಎಂದು ಸಾಧಕರಿಗೆ ಪ್ರತ್ಯಕ್ಷ ಉದಾಹರಣೆಗಳಿಂದ ತೋರಿಸಿಕೊಡಬೇಕು. ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಸಕಾರಾತ್ಮಕ ವಿಚಾರಸರಣಿ (ವೃತ್ತಿ)ಯಿರಬೇಕು. ಈ ಎಲ್ಲ ಸಮಸ್ಯೆಗಳು ಪ್ರಾರಬ್ಧದಿಂದ ಬಂದಿರಬಹುದು. ಇದರಿಂದ ಸಾಧಕರಿಗೆ ಪ್ರಾಪ್ತ ಪರಿಸ್ಥಿತಿಯನ್ನು ಸ್ವೀಕರಿಸಲು ಹೇಳಬೇಕು. ಮಂದ ಪ್ರಾರಬ್ಧವನ್ನು ಮಧ್ಯಮ ಸಾಧನೆಯಿಂದ, ಮಧ್ಯಮ ಪ್ರಾರಬ್ಧವನ್ನು ತೀವ್ರ ಸಾಧನೆಯಿಂದ ಎದುರಿಸಬಹುದು. ನಾವು ಯಾವಾಗಲೂ ಇತರರ ಮೇಲೆ ದೋಷ ಹೊರಿಸುತ್ತೇವೆ. ಆದರೆ ನಮ್ಮ ಪ್ರಾರಬ್ಧವನ್ನು ಸ್ವೀಕರಿಸುವುದು ಕೂಡ ಒಂದು ದೊಡ್ಡ ಸಾಧನೆಯಾಗಿದೆ. ಉದಾ. ಯಾವಾಗ ಒಂದು ಮಗು ಆಡುತ್ತಿರುವಾಗ ಬೀಳುತ್ತದೆಯೋ ಆಗ ಅದು ಅಳುವುದಿಲ್ಲ. ಆದರೆ ಯಾರಾದರೂ ಅದನ್ನು ದೂಡಿದಾಗ ಬಿದ್ದರೆ ಅದು ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಸಾಧಕರಿಗೆ ಒಂದು ವೇಳೆ ಸಹಚರರಿಂದ ಅಡಚಣೆಯಿದ್ದಲ್ಲಿ ಅಥವಾ ಏನಾದರೂ ಸಾಂಸಾರಿಕ ಅಡಚಣೆಗಳಿದ್ದಲ್ಲಿ ಅವರಿಗೆ ಈ ಅಡಚಣೆಗಳು ಪ್ರಾರಬ್ಧದಿಂದಾಗಿವೆ ಮತ್ತು ಅದನ್ನು ಭೋಗಿಸಿಯೇ ತೀರಿಸಬೇಕಾಗಿದೆ ಎಂದು ಹೇಳಬೇಕು ಮತ್ತು ಅದರ ಶಾಸ್ತ್ರವನ್ನೂ ತಿಳಿಸಿ ಹೇಳಬೇಕು ಹಾಗೂ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಒಳಿತು ಕೆಡುಕಗಳ ಪರಿಣಾಮವಾಗಿ ಈ ಪ್ರಾರಬ್ಧವನ್ನು ಭೋಗಿಸುತ್ತಿದ್ದೇವೆ. ಸಾಧಕರ ದೃಷ್ಟಿಕೋನವು ಯೋಗ್ಯವಾಗಿರಬೇಕು. ಒಂದು ಉದಾಹರಣೆಯೆಂದರೆ, ಓರ್ವ ದಂಪತಿಗಳಿದ್ದರು ಅವರು ಸುಖವಾಗಿದ್ದರು. ಅವರಿಗೆ ಒಂದು ಮಗು ಹುಟ್ಟಿತು. ಅವರ ಆನಂದವು ದ್ವಿಗುಣವಾಯಿತು. ಅನಂತರ ಒಂದು ವರ್ಷದಲ್ಲಿ ಅವರಿಗೆ ಆ ಮಗು ಕಿವುಡು ಎಂದು ಗಮನಕ್ಕೆ ಬಂದಿತು. ಇದರಿಂದ ಅವರು ದುಃಖಿತರಾದರು. ಅವರು ಎಲ್ಲ ರೀತಿಯಿಂದ ಪ್ರಯತ್ನಿಸಿದರು. ಆದರೆ ಏನು ಮಾಡಿದರೂ ಕಿವುಡುತನವನ್ನು ಸರಿ ಪಡಿಸಲು ಆಗುವುದಿಲ್ಲ ಎಂಬುದು ಅವರ ಗಮನಕ್ಕೆ ಬಂದಿತು. ಆಗ ಅವರು ಈ ಮಗುವನ್ನು ಆನಂದದಲ್ಲಿರಿಸುವುದು ಹೇಗೆ ಎಂಬ ವಿಚಾರ ಮಾಡಿದರು. ಈ ವಿಚಾರದಿಂದ ಅವರ ಜೀವನವೇ ಬದಲಾಯಿತು. ಅನಂತರ ಅವರು ಆನಂದದಿಂದ ಇರತೊಡಗಿದರು. ಈ ಉದಾಹರಣೆಯಲ್ಲಿ ಪರಿಸ್ಥಿತಿಯು ಪ್ರತಿಕೂಲವೇ ಇತ್ತು. ಆದರೆ ಪರಿಸ್ಥಿತಿಯನ್ನು ಸ್ವೀಕರಿಸಿದುದರಿಂದ ಅವರೆಲ್ಲರೂ ಆನಂದಿತರಾದರು. ಈಶ್ವರನಿಗೆ ನಾವು ಅಡಚಣೆಯಲ್ಲಿದ್ದೇವೆ ಎಂದು ಎಲ್ಲವೂ ಗೊತ್ತಿರುತ್ತದೆ. ಆದರೂ ಯಾವಾಗ ನಾವು ಸಾಧನೆಯನ್ನು ಮಾಡಲು ಪ್ರಯತ್ನಿಸುತ್ತೇವೆಯೋ ಆಗ ಅವರ ಕೃಪೆಯು ಅಧಿಕವಾಗುತ್ತದೆ. ಮೂಲತಃ ಸಾಧಕರಲ್ಲಿ ಈಶ್ವರಪ್ರಾಪ್ತಿಯ ತಳಮಳವೇ ಅತ್ಯಲ್ಪವಾಗಿರುವುದರಿಂದ ಅವರ ಸಾಧನೆಯಲ್ಲಿ ಏರಿಳಿತಗಳಾಗುತ್ತವೆ.

ಸಾಧನೆಯ ತಖ್ತೆಯನ್ನು ತುಂಬಿಸುವ ಬಗ್ಗೆ ಸಾಧಕರು ಮತ್ತು ಜವಾಬ್ದಾರ ಸಾಧಕರ ದೃಷ್ಟಿಕೋನ ಹೇಗಿರಬೇಕು?
ಪ್ರಶ್ನೆ: ಒಂದು ದೇಶದ ಸಾಧಕರು ಸಾಧನೆಯ ತಖ್ತೆಯನ್ನು ಸರಿಯಾಗಿ ತುಂಬಿಸುತ್ತಿರಲಿಲ್ಲ. ಅಲ್ಲಿನ ೧೮ ಮಂದಿ ಯಲ್ಲಿ ಕೇವಲ ಇಬ್ಬರು ಮಾತ್ರ ತಖ್ತೆಯನ್ನು ತುಂಬಿಸುತ್ತಿದ್ದರು. ಜವಾಬ್ದಾರ ಸಾಧಕರು ಅವರಿಗೆ ತಖ್ತೆ ತುಂಬಿಸಲು ಪ್ರೋತ್ಸಾಹ ಮತ್ತು ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ ಅಲ್ಲಿನ ಪರಿಸ್ಥಿತಿಯು ಇಂದಿಗೂ ಬದಲಾಗಲಿಲ್ಲ.
ಉತ್ತರ: ಅ. ಜವಾಬ್ದಾರ ಸಾಧಕರು ಏನು ಮಾಡಬೇಕು?: ಮೊದಲಿಗೆ ತಖ್ತೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಾಧಕರಿಗೆ ಹೇಳಬೇಕು. ಹಾಗೆಯೇ ತಖ್ತೆಯನ್ನು ತುಂಬಿಸುವ ಬಗ್ಗೆ ಅವರಿಗಿರುವ ಸಂದೇಹಗಳ ನಿವಾರಣೆ ಮಾಡಬೇಕು.
ಆ.ಸಾಧಕರ ದೃಷ್ಟಿಕೋನ ಹೇಗಿರಬೇಕು? : ಸಾಧಕರು ತಮ್ಮ ತಖ್ತೆಯನ್ನು ತುಂಬಿಸುವ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳಬೇಕು. ಯಾರಾದರೂ ನಮಗೆ ಅದನ್ನು ನೆನಪಿಸಬೇಕು ಎಂಬ ಅಪೇಕ್ಷೆಯನ್ನು ಇಟ್ಟುಕೊಳ್ಳಬಾರದು. ಹಾಗೆಯೇ ಸಾಧಕರು ನನ್ನ ಉನ್ನತಿಗಾಗಿಯೇ ಸಾಧನೆಯ ತಖ್ತೆಯನ್ನು ತುಂಬಿಸುತ್ತಿದ್ದೇನೆ ಎಂಬ ಅರಿವನ್ನು ಇಟ್ಟುಕೊಂಡಿರಬೇಕು. ಒಂದು ವೇಳೆ ಅವರಿಗೆ ತನ್ನ ಬಗ್ಗೆಯೇ ಗಾಂಭೀರ್ಯ ಇಲ್ಲವೆಂದಾದರೆ ಇತರ ಸಾಧಕರು ಅದಕ್ಕೆ ಜವಾಬ್ದಾರರಾಗಲು ಸಾಧ್ಯವಿದೆಯೇ? ವಾಸ್ತವದಲ್ಲಿ ಸಾಧನೆಯಲ್ಲಿ ಬರುವಂತಹ ಅಡಚಣೆಗಳನ್ನು ಜವಾಬ್ದಾರ ಸಾಧಕರಿಂದ ಪರಿಹರಿಸಿಕೊಳ್ಳುವುದು ಸಾಧಕರ ಸ್ವಂತದ ಕರ್ತವ್ಯವೇ ಆಗಿದೆ. ಜವಾಬ್ದಾರ ಸಾಧಕರು ಸಹ ಯಾವುದೇ ಸಾಧಕರಿಗೆ ತಖ್ತೆಯನ್ನು ತುಂಬಿಸುವ ಬಗ್ಗೆ ಒತ್ತಾಯ ಮಾಡಬಾರದು. ಒಂದು ವೇಳೆ ತಖ್ತೆ ತುಂಬಿಸುವುದು ಹೊರೆ ಅನಿಸುತ್ತಿದ್ದಲ್ಲಿ ಸಾಧಕರು ಅದನ್ನು ತುಂಬಿಸಬಾರದು. ಆದರೆ ಸಾಧನೆಯಲ್ಲಿ ಪ್ರಗತಿ ಮಾಡಲು ಯಾವುದೇ ಸುಲಭ ಮಾರ್ಗವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಇ.ಜವಾಬ್ದಾರ ಸಾಧಕರು ಕಾರ್ಯಕರ್ತರು ಮತ್ತು ಸಾಧಕರ ಪಟ್ಟಿಯನ್ನು ತಯಾರಿಸುವುದು ಅವಶ್ಯಕ : ಜವಾಬ್ದಾರ ಸಾಧಕರು ತಮ್ಮ ದೇಶದಲ್ಲಿನ ಕಾರ್ಯಕರ್ತರ ಮತ್ತು ಸಾಧಕರ ಪಟ್ಟಿಯನ್ನು ಮಾಡಿಡಬೇಕು. ಅವರು ಸೇವೆಯನ್ನು ಹೇಗೆ ಪರಿಪೂರ್ಣಗೊಳಿಸಬಹುದು, ಸೇವೆಯ ಫಲನಿಷ್ಪತ್ತಿಯನ್ನು ಹೇಗೆ ಹೆಚ್ಚಿಸಬೇಕು, ತಪ್ಪುಗಳನ್ನು ಹೇಗೆ ತಡೆಗಟ್ಟಬಹುದು, ಸೇವೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದರ ಮಹತ್ವವೇನು ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ಮಾಡಬೇಕು. ಒಂದು ವೇಳೆ ಕಾರ್ಯಕರ್ತರು ತಮಗೆ ಸಾಧನೆಯಲ್ಲಿ ಆಸಕ್ತಿ ಉತ್ಪನ್ನವಾಗಿದೆ ಎಂದು ಹೇಳುತ್ತಿದ್ದಲ್ಲಿ ಮತ್ತು ಅವರು ನಿಯಮಿತವಾಗಿ ಸ್ವಭಾವದೋಷ- ನಿರ್ಮೂಲನ ತಖ್ತೆಯನ್ನು ತುಂಬಿಸಲು ತೊಡಗಿದ್ದಲ್ಲಿ ಅವರು ತುಂಬಿಸುವ ದಿನದ ತನಕ ಅವರ ವರದಿಯನ್ನು ತೆಗೆದುಕೊಳ್ಳಬಹುದು. ಅವರಿಗೆ ಸತತವಾಗಿ ಹೇಳುವುದು ಯೋಗ್ಯವಾಗಿದೆ. ಆದರೆ ಅವರಿಂದ ತೀವ್ರ ಅಪೇಕ್ಷೆಯನ್ನಿಡಬಾರದು. ಹೀಗಾದರೆ ಇದು ಜವಾಬ್ದಾರ ಸಾಧಕರ ತಪ್ಪಾಗುತ್ತದೆ.
ಪೂ. ರಾಜೇಂದ್ರದಾದಾರವರು ಸಂದೇಹನಿವಾರಣೆಯ ಸತ್ರದ ಬಗ್ಗೆ ಗಮನಕ್ಕೆ ತಂದುಕೊಟ್ಟಂತಹ ಅಂಶಗಳು
ಅ.ಸಂದೇಹನಿವಾರಣೆಗಾಗಿ ಪ್ರಶ್ನೆಗಳನ್ನು ಪ್ರಾಧಾನ್ಯತೆಗನುಸಾರವಾಗಿ ಆರಿಸುವುದು ಮಹತ್ವದ್ದಾಗಿದೆ. ತಾಂತ್ರಿಕ ಪ್ರಶ್ನೆ ಮತ್ತಿತರ ಪ್ರಶ್ನೆಗಳನ್ನು ಇತರ ಸಾಧಕರೊಂದಿಗೆ ಕುಳಿತು ಪರಿಹರಿಸಬಹುದಾದರೆ ಅದನ್ನು ಇಲ್ಲಿ ವಿಚಾರಿಸುವುದು ಯೋಗ್ಯವಲ್ಲ. ಜವಾಬ್ದಾರ ಸಾಧಕರು ಜಾಗೃತರಾಗಿದ್ದುಕೊಂಡು ಸಾಧಕರು ಯಾವ ಪ್ರಶ್ನೆಗಳನ್ನು ವಿಚಾರಿಸುವುದು ಯೋಗ್ಯವಾಗಿದೆ ಎಂಬ ವಿಷಯದಲ್ಲಿ ಅವರಿಗೆ ತಿಳಿಸಿ ಹೇಳಬೇಕು.
ಆ. ಸಂದೇಹ ನಿವಾರಣೆಯಾಗುತ್ತಿರುವಾಗ ಸಾಧಕರು ನಿರುತ್ಸಾಹದಿಂದಿರುವಂತೆ (ಜಡತ್ವ ಬಂದವರಂತೆ) ಅನಿಸಿತು ಅದರ ಕಾರಣವನ್ನು ಪೂಜ್ಯ ದಾದಾರವರು ಮುಂದಿನಂತೆ ತಿಳಿಸಿದರು.
ಪ್ರಶ್ನೆಗಳನ್ನು ಹೆಚ್ಚಾಗಿ ವಿಚಾರಿಸಲಾಯಿತು. ಹಾಗೆಯೇ ಸಾಧಕರಲ್ಲಿ ಕಲಿಯುವ ವೃತ್ತಿಯು ಕಡಿಮೆಯಿದೆ. ಅನೇಕ ಸಾಧಕರಿಗೆ ಯಾವುದಾದರೊಂದು ಪ್ರಶ್ನೆ ವಿಚಾರಿಸಿದಾಗ ಈ ಸಮಸ್ಯೆಯು ನನಗೆ ಸಂಬಂಧಿಸಿದ್ದಲ್ಲ ಎಂದು ಅನಿಸುತ್ತಿತ್ತು. ಹಾಗೆಯೇ ಈ ಭಾಗವು ಮುಖ್ಯವಾಗಿ ಸಾಧಕರ ಸಂದೇಹ ನಿವಾರಣೆಗಾಗಿಯೇ ಇತ್ತು. ಆದುದರಿಂದ ಕೆಟ್ಟ ಶಕ್ತಿಗಳೂ ಸಾಧಕರ ಮೇಲೆ ಆಕ್ರಮಣ ಮಾಡಿ ಅವರಲ್ಲಿ ನಿರುತ್ಸಾಹ (ಜಡತ್ವ) ನಿರ್ಮಿಸಿ ಅಡಚಣೆಗಳನ್ನು ನಿರ್ಮಾಣ ಮಾಡುತ್ತಿದ್ದವು. - ಸೌ.ಸಂಪದಾ
ಪೂಜ್ಯ ರಾಜೇಂದ್ರ ದಾದಾರವರು ಸಾಧಕರ ವಿಷಯದಲ್ಲಿ ಹೇಳಿದ ಕೆಲವು ಅಂಶಗಳು
ಅ೧.ಹೊಸ ಸಾಧಕರು ಸಂಪೂರ್ಣ ಮಾಹಿತಿ ಹೇಳಿ ಜವಾಬ್ದಾರ ಸಾಧಕರಲ್ಲಿ ಅವರಿಗೆ ಸೇವೆಯನ್ನು ಕೊಡಲು ಹೇಳುವುದು : ಯಾರಾದರೊಬ್ಬ ಹೊಸ ಸಾಧಕರಿಗೆ ಸೇವೆಯನ್ನು ಕೊಡುವುದಾದರೆ ಆ ಸಾಧಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜವಾಬ್ದಾರ ಸಾಧಕರಿಗೆ ತಿಳಿಸಿ ಹೇಳಿ ಅವರ ಸಹಾಯದಿಂದ ಆ ಹೊಸ ಸಾಧಕರಿಗೆ ಸೇವೆಯನ್ನು ನೀಡಬೇಕು. ಇಂತಹ ಪರಿಸ್ಥಿತಿಯಲ್ಲಿ ಯೋಗ್ಯ ಸೇವೆಯನ್ನು ಆರಿಸಿ ಕೊಡುವ ಜವಾಬ್ದಾರಿಯನ್ನು ಜವಾಬ್ದಾರ ಸಾಧಕರಿಗೆ ಕೊಡಬೇಕು.
ಅ೨.ಸಾಧಕರ ಅಧ್ಯಯನ ಮಾಡುವುದು: ನಮಗೆ ಸಾಧಕರ ಅಧ್ಯಯನ ಮಾಡಲು ಗೊತ್ತಾಗಬೇಕು. ಯಾರಾದರೊಬ್ಬ ಸಾಧಕರು ಒಳ್ಳೆಯವರಿದ್ದಾರೆ ಮತ್ತು ತಳಮಳವಿದೆ ಎಂದಾದರೆ ಅವರಿಗೆ ಮಾರ್ಗದರ್ಶನ ಮಾಡಲು ನಮಗೆ ಕಷ್ಟವಾಗುವುದಿಲ್ಲ. ಏಕೆಂದರೆ ಅವರ ಕೃತಿಯು ಸ್ವಯಂಪ್ರೇರಿತವಾಗಿರುತ್ತದೆ.
ಅ೩.ಮಾರ್ಗದರ್ಶನ ಪಡೆದು ಕೊಳ್ಳುವ ಸಾಧಕರ ಪಟ್ಟಿಯನ್ನು ತಯಾರಿಸುವುದು : ಮಾರ್ಗದರ್ಶನದ ಅವಶ್ಯಕತೆಗನುಸಾರವಾಗಿ ನಾವು ಸಾಧಕರ ಪಟ್ಟಿಯನ್ನು ತಯಾರಿಸಿಕೊಂಡಿದ್ದು ನಂತರ ಅವರ ಹೆಸರನ್ನು ಪಟ್ಟಿಯಿಂದ ತೆಗೆದಿದ್ದರೆ ಅವರಿಗೆ ಅದನ್ನು ತಿಳಿಸಬೇಕು. ಇಲ್ಲವಾದರೆ ಅನಗತ್ಯವಾಗಿ ಅವರ ಮನಸ್ಸಿನಲ್ಲಿ ಅದರ ಬಗ್ಗೆ ಪ್ರತಿಕ್ರಿಯೆ ಬರುವ ಸಾಧ್ಯತೆಯಿರುತ್ತದೆ.
ಅ೪.ತಪ್ಪು ವ್ಯಷ್ಟಿ ಸ್ತರದ್ದಾಗಿದೆಯೇ ಅಥವಾ ಸಮಷ್ಟಿ ಸ್ತರದ್ದೇ ಎಂದು ನೋಡಬೇಕು: ಸಾಧಕರು ತಪ್ಪು ಸ್ವೀಕರಿಸುವ ಮನಃಸ್ಥಿತಿಯಲ್ಲಿ ಇಲ್ಲದಿದ್ದರೆ ಮತ್ತು ಅವರಿಂದಾದ ತಪ್ಪು ವ್ಯಷ್ಟಿ ಸ್ತರದ್ದಾಗಿದ್ದರೆ ಅವರಿಗೆ ಅದರ ಬಗ್ಗೆ ಪದೇಪದೇ ಹೇಳುವ ಅವಶ್ಯಕತೆಯಿಲ್ಲ. ಅವರಿಗೆ ಸುಧಾರಿಸಿ ಕೊಳ್ಳುವ ಇಚ್ಛೆಯಿಲ್ಲದಿದ್ದರೆ ಆ ಬಗ್ಗೆ ನಮಗೆ ದುಃಖ ಅನಿಸಬಾರದು. ಆದರೆ ಅವರ ತಪ್ಪುಗಳಿಂದ ಸಮಷ್ಟಿಯ ಮೇಲೆ ಪರಿಣಾಮ ವಾಗುತ್ತಿದ್ದಲ್ಲಿ ಅದರ ಬಗ್ಗೆ ಪದೇಪದೇ ಹೇಳುವ ಅವಶ್ಯಕತೆಯಿದೆ. ಆ ಸಾಧಕರು ಸುಧಾರಣೆಯಾಗಬೇಕೆಂಬುದು ಅಪೇಕ್ಷಿತವಿದ್ದಲ್ಲಿ ನಾವು ಅವರಿಗೆ ಹೇಳಬಹುದು.
ಅ೫.ಸ್ವಂತದ ದೃಷ್ಟಿಕೋನ ಯೋಗ್ಯವಾಗಿರುವುದು ಅವಶ್ಯಕವಾಗಿದೆ: ಕೆಲವೊಮ್ಮೆ ತಪ್ಪು ದೃಷ್ಟಿಕೋನದಿಂದಾಗಿ ನಮ್ಮಿಂದ ಹೆಚ್ಚು ತಪ್ಪುಗಳಾಗುತ್ತವೆ. ಇಂತಹ ಸಮಯದಲ್ಲಿ ದೃಷ್ಟಿಕೋನದಲ್ಲಿ ಬದಲಾವಣೆ ಯನ್ನು ಮಾಡಿಕೊಳ್ಳುವ ಅವಶ್ಯಕತೆಯಿರುತ್ತದೆ. ಉದಾ.ಆಯೋಜನೆಯ ಅಭಾವ ಎಂಬ ಸ್ವಭಾವದೋಷದಿಂದ ತಪ್ಪಾಗುತ್ತಿದ್ದಲ್ಲಿ ಅವರು ಆ ದೋಷವನ್ನು ದೂರಗೊಳಿಸಲು ದೃಷ್ಟಿಕೋನದ ಸ್ತರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ.
ಅ೬.ಸಾಧಕರ ಅಡಚಣೆಗಳನ್ನು ಪರಿಹರಿಸಲು ಪ್ರಾಧಾನ್ಯತೆಯನ್ನು ನೀಡುವುದು: ಯಾವುದೇ ಸಾಧಕರಿಗೆ ಬರುವ ಅಡಚಣೆಗಳನ್ನು ಪರಿಹರಿಸಲು ಪ್ರಾಧಾನ್ಯತೆ ನೀಡುವುದು ಅವಶ್ಯಕವಾಗಿದೆ. ಆ ಅಡಚಣೆಯು ಆ ಸಾಧಕರ ಸ್ವಭಾವದೋಷದಿಂದ ಬಂದಿದೆಯೋ ಅಥವಾ ತೊಂದರೆಯಿಂದಾಗಿಯೋ ಎಂದು ಅವರಿಗೆ ಗೊತ್ತಾಗದ ಕಾರಣ ನಾವು ಪ್ರಾಧಾನ್ಯತೆಯಿಂದ ಅವರಿಗೆ ಮಾರ್ಗದರ್ಶನ ಮಾಡಿ ಅವರ ಅಡಚಣೆಗಳನ್ನು ಪರಿಹರಿಸಬೇಕು.
ಅ೭.ಯಾವುದಾದರೊಂದು ಅಡಚಣೆಯು ನಮ್ಮಿಂದ ಪರಿಹಾರವಾಗುವುದಿಲ್ಲ ಎಂದಾದರೆ ಅದನ್ನು ಮುಂದೆ ಮುಂದೆ ಹೋಗಿ ಹೇಳಿ ಪರಿಹರಿಸಲು ಪ್ರಯತ್ನಿ ಸಬೇಕು.
ಅ೮.ಯಾವುದಾದರೊಂದು ಸ್ತರದಲ್ಲಿ ಪರಿಹಾರವಾಗದ ಅಡಚಣೆಯನ್ನು ಸಾಧಕರು ಮುಂದೆ ಹೋಗಿ ನಮ್ಮ ಬಳಿ ಮಂಡಿಸಿದರೆ ಆ ಅಡಚಣೆ ಪರಿಹರಿಸಲು ಮೊದಲ ಆದ್ಯತೆ ನೀಡಬೇಕು ಮತ್ತು ಅದನ್ನು ಗಾಂಭೀರ್ಯದಿಂದ ಪರಿಹರಿಸಲು ಪ್ರಯತ್ನಿಸಬೇಕು.
ಅ೯.ಸಾಧಕ ದಂಪತಿಗಳಲ್ಲಿ ಹೊಂದಾಣಿಕೆಯಿಲ್ಲದಿದ್ದರೆ ಅಥವಾ ಅವರಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಅವರಿಗೆ ಯೋಗ್ಯ ನಿರ್ಣಯ ನೀಡಲು ಆಧ್ಯಾತ್ಮಿಕ ದೃಷ್ಟಿಕೋನ ನೀಡಬೇಕು ಮತ್ತು ನಿರ್ಣಯವನ್ನು ಅವರಿಗೆ ಬಿಟ್ಟುಬಿಡಬೇಕು. ಅವರ ವೈಯಕ್ತಿಕ ವಿಷಯದಲ್ಲಿ ಸಿಲುಕಿಕೊಳ್ಳಬಾರದು.
ಅ೧೦.ಸೇವೆಯನ್ನು ಹೊರತು ಪಡಿಸಿ ಮನಸ್ಸಿನಲ್ಲಿ ಇತರ ವಿಚಾರಗಳು ಬಹಳ ಬರುತ್ತಿದ್ದಲ್ಲಿ ಹೆಚ್ಚು ಸೇವೆಯನ್ನು ಸ್ವೀಕರಿಸಿ ನಮ್ಮನ್ನು ವ್ಯಸ್ತರನ್ನಾಗಿಸಬೇಕು.
ಅ೧೧.ಮಾಯೆಯ ಆಸಕ್ತಿಯನ್ನು ಕಡಿಮೆಗೊಳಿಸಲು ಪ್ರಯತ್ನಿಸದೇ ಮಾಯೆಯಲ್ಲಿಯೇ ಬ್ರಹ್ಮನನ್ನು ನೋಡಲು ಪ್ರಯತ್ನಿಸಬೇಕು.
ಅ೧೨. ಸಾಧಕರಲ್ಲಿ ಪ್ರಗತಿ ಮಾಡಿ ಕೊಳ್ಳಬೇಕೆಂಬ ಅಥವಾ ಈಶ್ವರಪ್ರಾಪ್ತಿಯ ಇಚ್ಛೆಯಿಲ್ಲದಿದ್ದರೆ ಅವರ ಪ್ರಗತಿಯಾಗಲು ಸಾಧ್ಯವಿಲ್ಲ. (ಮುಕ್ತಾಯ)

No comments:

Post a Comment